ಪಾಕ್ಗೆ ಕೈ ಕೊಟ್ಟ ದುಬೈ ಭಾರತದ ಕೈ ಹಿಡಿಯುತ್ತಾ? – PSL ನಡೆಸಲು ಒಪ್ಪದ UAE
‘ಪಾಪಿ’ಸ್ತಾನ ಕ್ರಿಕೆಟ್ ಅಂತ್ಯ ಆರಂಭ

ಪಾಕ್ಗೆ ಕೈ ಕೊಟ್ಟ ದುಬೈ ಭಾರತದ ಕೈ ಹಿಡಿಯುತ್ತಾ? –   PSL ನಡೆಸಲು ಒಪ್ಪದ UAE‘ಪಾಪಿ’ಸ್ತಾನ ಕ್ರಿಕೆಟ್ ಅಂತ್ಯ ಆರಂಭ

ಭಾರತ- ಪಾಕ್ ಸಂಘರ್ಷ ಹೆಚ್ಚುತ್ತಿರೋದ್ರಿಂದ ಪಾಕಿಸ್ತಾನ ಸೂಪರ್ ಲೀಗ್ ಅನ್ನು ದುಬೈಗೆ ಸ್ಥಳಾಂತರಿಸಲು ಪಾಕ್ ಕ್ರಿಕೆಟ್ ಮಂಡಳಿ ಪ್ಲ್ಯಾನ್ ಮಾಡಿತ್ತು. ಆದ್ರೆ ಪಾಕ್ ಕನಸು ನುಚ್ಚು ನೂರಾಗಿದ್ದು, ತನ್ನ ಮಾನವನ್ನ ತಾನೇ ಕಳೆದುಕೊಂಡಿದೆ. ಪಿಎಸ್ಎಲ್‌ನ ಬಾಕಿ ಉಳಿದಿರುವ ಪಂದ್ಯಗಳನ್ನು ನಡೆಸಲು ಯುಎಇ ಅನುಮತಿ ನೀಡಿಲ್ಲ.  ಭಾರತ-ಪಾಕಿಸ್ತಾನ ನಡುವಿನ ಸಂಬಂಧ ಹದಗೆಟ್ಟಿರುವ ಕಾರಣಕ್ಕೆ ಈ ನಿರ್ಧಾರ ತೆಗೆದುಕೊಳ್ಳಲಾಗಿದೆ. ಪಂದ್ಯಗಳನ್ನು ಆಯೋಜಿಸಿದರೆ ಭಾರತದೊಂದಿಗೆ ಸಂಬಂಧ ಹಾಳಾಗುವ ಸಾಧ್ಯತೆ ಇದೆ ಎಂದು ಯುಎಇ ಕ್ರಿಕೆಟ್ ಮಂಡಳಿ ಹೇಳಿದೆ. ಹೀಗಾಗಿ ದಾರಿ ತೋಚದ ಪಾಕಿಸ್ತಾನ ಇದೀಗ ಪಿಎಸ್ಎಲ್ ಪಂದ್ಯಾವಳಿಯನ್ನು ಮುಂದೂಡುವುದಾಗಿ ಘೋಷಿಸಿದೆ.

ಈ ಬಗ್ಗೆ ಯುಎಇ ಕ್ರಿಕೆಟ್ ಮಂಡಳಿಯ ಅಧಿಕಾರಿಯೊಬ್ಬರು ಮಾತನಾಡಿದ್ದು “ಈ ಸಮಯದಲ್ಲಿ PSL ಆಯೋಜನೆ ಮಾಡಿದರೆ, ಯುಎಇ ಪಾಕಿಸ್ತಾನದ ಪರವಾಗಿದೆ ಎಂದು ಬಿಂಬಿತವಾಗುವ ಸಾಧ್ಯತೆ ಇದೆ. ಇದು ಭಾರತ ಮತ್ತು ಬಿಸಿಸಿಐ ಜೊತೆಗಿನ ಸಂಬಂಧಕ್ಕೆ ಧಕ್ಕೆ ತರುತ್ತದೆ. ಅಲ್ಲದೆ, ಯುಎಇಯಲ್ಲಿ ಭಾರತೀಯರು ಮತ್ತು ಪಾಕಿಸ್ತಾನಿಯರು ಇದ್ದಾರೆ. PSL ಆಯೋಜನೆಯಿಂದ ಸಮುದಾಯಗಳ ನಡುವೆ ಅನಗತ್ಯ ಗಲಾಟೆಗಳು ಉಂಟಾಗಬಹುದು” ಎಂದು ಅವರು ಹೇಳಿದ್ದಾರೆ

ಭಾರತದೊಂದಿಗೆ ಯುಎಇ ಉತ್ತಮ ಬಾಂಧವ್ಯ

ಯುಎಇ ಈ ನಿರ್ಧಾರದಿಂದ ಪಾಕಿಸ್ತಾನಕ್ಕೆ ದೊಡ್ಡ ಹೊಡೆತ ಬಿದ್ದಿದೆ. ಪಂದ್ಯಗಳನ್ನು ಎಲ್ಲಿ ಆಯೋಜಿಸುವುದು ಎಂದು PCB ಚಿಂತಿಸುವಂತಾಗಿದೆ. ಯುಎಇ ನಿರ್ಧಾರವು ಭಾರತದೊಂದಿಗಿನ ಬಾಂಧವ್ಯವನ್ನು ಕಾಪಾಡಿಕೊಳ್ಳುವ ಉದ್ದೇಶವನ್ನು ಹೊಂದಿದೆ. ಅಲ್ಲದೆ, ತನ್ನ ನೆಲದಲ್ಲಿ ಶಾಂತಿ ಕಾಪಾಡಲು ಯುಎಇ ಮುಂದಾಗಿದೆ.

ಪಾಕಿಸ್ತಾನ ಕ್ರಿಕೆಟ್ ಮಂಡಳಿಯ ಎಮಿರೇಟ್ಸ್ ಕ್ರಿಕೆಟ್ ಮಂಡಳಿಯೊಂದಿಗೆ ಒಪ್ಪಂದಕ್ಕೆ ಬರಲು ಸಾಧ್ಯವಾಗದ ಕಾರಣ ಬೇರೇ ದಾರಿ ಕಾಣದೆ ಪಿಎಸ್ಎಲ್ ಅನ್ನು ಮುಂದೂಡಲಾಗಿದೆ. ಮೇ 18 ರಂದು ಪಂದ್ಯಾವಳಿ ಮುಕ್ತಾಯವಾಗಬೇಕಿತ್ತು. ಇನ್ನು 8 ಪಂದ್ಯಗಳಷ್ಟೇ ಬಾಕಿ ಇದ್ದವು. ಆಪರೇಶನ್ ಸಿಂದೂರ್ ಬೆನ್ನಲ್ಲೇ ಪಾಕಿಸ್ತಾನ ಸೂಪರ್ ಲೀಗ್ ನಡೆಯುವ ಬಗ್ಗೆ ಅನುಮಾನಗಳಿದ್ದವು. ಇದೀಗ ಮುಂದೂಡಲಾಗಿದ್ದು, ಪಾಕ್ ಕ್ರಿಕೆಟ್‌ ಮಂಡಲಳಿಗೆ ಇದು ದೊಡ್ಡ ಹೊಡೆತ ಬಿದ್ದಂತೆ ಆಗಿದೆ.

ಪಾಕ್‌ ಪ್ರಧಾನಿ ಸಲಹೆ ಮೇಲೆ ನಿರ್ಧಾರ  

ಈ ಬಗ್ಗೆ ಹೇಳಿಕೆ ನೀಡಿರುವ ಪಿಸಿಬಿ, ಪ್ರಧಾನ ಮಂತ್ರಿ ಮುಹಮ್ಮದ್ ಶಹಬಾಜ್ ಷರೀಫ್ ಅವರ ಸಲಹೆಯ ಮೇರೆಗೆ ಈ ನಿರ್ಧಾರ ತೆಗೆದುಕೊಳ್ಳಲಾಗಿದೆ. ಮೇ 18 ರಂದು ಮುಕ್ತಾಯವಾಗಬೇಕಿದ್ದ ಪಂದ್ಯಾವಳಿಯಲ್ಲಿ ಎಂಟು ಪಂದ್ಯಗಳು ಬಾಕಿ ಇವೆ.” ಎಂದು PCB ಹೇಳಿದೆ. ಈ ನಿರ್ಧಾರವು ಅಭಿಮಾನಿಗಳಿಗೆ ನಿರಾಶೆಯನ್ನುಂಟು ಮಾಡಿದ್ದರೂ ಆಟಗಾರರು ಮತ್ತು ಅಧಿಕಾರಿಗಳ ಸುರಕ್ಷತೆ ಮುಖ್ಯ ಎಂದು PCB ಹೇಳಿದೆ.   ಪರಿಸ್ಥಿತಿಯ ಗಂಭೀರತೆಯನ್ನು ಗಮನದಲ್ಲಿಟ್ಟುಕೊಂಡು ಈ ನಿರ್ಧಾರ ತೆಗೆದುಕೊಳ್ಳಲಾಗಿದೆ. ಕೊನೆಯದಾಗಿ, PCBಯು ಪರಿಸ್ಥಿತಿಯನ್ನು ಸೂಕ್ಷ್ಮವಾಗಿ ಗಮನಿಸುತ್ತಿದೆ. ಶೀಘ್ರದಲ್ಲೇ ಹೊಸ ದಿನಾಂಕಗಳನ್ನು ಪ್ರಕಟಿಸಲಾಗುವುದು ಎಂದು ಹೇಳಿದೆ.

ಐಪಿಎಲ್ ಆಯೋಜನೆಗೆ ಒಪ್ಪುತ್ತಾ ಯುಎಇ?

ಪಾಕಿಸ್ತಾನ್ ಸೂಪರ್ ಲೀಗ್​ಗೆ ನಕಾರ ಎಂದಿರುವ ಯುಎಇ ಇದೀಗ ಭಾರತೀಯ ಕ್ರಿಕೆಟ್ ಮಂಡಳಿ ಜೊತೆ ಐಪಿಎಲ್ ಆಯೋಜನೆ ಬಗ್ಗೆ ಚರ್ಚಿಸಿದೆ ಎಂದು ವರದಿಯಾಗಿದೆ. ಅಂದರೆ ಇಂಡಿಯನ್ ಪ್ರೀಮಿಯರ್ ಲೀಗ್ ಆಯೋಜಿಸಲು ಯುಎಇ ಕ್ರಿಕೆಟ್ ಸಿದ್ಧವಾಗಿದೆ ಎಂಬ ಮಾಹಿತಿಗಳು ಹೊರಬಿದ್ದಿವೆ. ಭಾರತ ಮತ್ತು ಪಾಕಿಸ್ತಾನ್ ನಡುವಣ ಅಪ್ರಸನ್ನ ಪರಿಸ್ಥಿತಿಯ ಕಾರಣ ಪಾಕಿಸ್ತಾನ್ ಸೂಪರ್ ಲೀಗ್ ಅನ್ನು ಯುಎಇನಲ್ಲಿ ಆಯೋಜಿಸಲು ನಿರಾಕರಿಸಿದೆ. ಹೀಗಾಗಿ 10ನೇ ಸೀಸನ್​ ಪಿಎಸ್​ಎಲ್ ಟೂರ್ನಿ ಅರ್ಧದಲ್ಲೇ ಮೊಟಕುಗೊಳ್ಳುವುದು ಖಚಿತವಾಗಿದೆ. ಪಾಕಿಸ್ತಾನ್ ಸೂಪರ್ ಲೀಗ್​ಗೆ ನಕಾರ ಎಂದಿರುವ ಯುಎಇ ಇದೀಗ ಭಾರತೀಯ ಕ್ರಿಕೆಟ್ ಮಂಡಳಿ ಜೊತೆ ಐಪಿಎಲ್ ಆಯೋಜನೆ ಬಗ್ಗೆ ಚರ್ಚಿಸಿದೆ ಎಂದು ವರದಿಯಾಗಿದೆ. ಅಂದರೆ ಇಂಡಿಯನ್ ಪ್ರೀಮಿಯರ್ ಲೀಗ್ ಆಯೋಜಿಸಲು ಯುಎಇ ಕ್ರಿಕೆಟ್ ಸಿದ್ಧವಾಗಿದೆ ಎಂಬ ಮಾಹಿತಿಗಳು ಹೊರಬಿದ್ದಿವೆ.

ಭಾರತದಿಂದ ಯುಎಇ ಕ್ರಿಕೆಟ್ ಬೋರ್ಡ್‌ಗೆ ಒಳ್ಳೆಯ ಆದಾಯ

ಈ ಹಿಂದೆ ಕೊರೋನಾ ಭೀತಿ ಹಿನ್ನಲೆಯಲ್ಲಿ ಐಪಿಎಲ್ 2020 ಹಾಗೂ 2021 ಅನ್ನು ಯುಎಇನಲ್ಲಿ ಆಯೋಜಿಸಲಾಗಿತ್ತು. ಹಾಗೆಯೇ 2021ರ ಟಿ20 ವಿಶ್ವಕಪ್ ಅನ್ನು ಸಹ ಭಾರತ ಯುಎಇನಲ್ಲಿ ಆಯೋಜಿಸಿತ್ತು. ಇದರಿಂದ ಯುಎಇ ಕ್ರಿಕೆಟ್ ಬೋರ್ಡ್​ಗೆ ಉತ್ತಮ ಆದಾಯ ಲಭಿಸಿದೆ. ಇದೇ ಕಾರಣದಿಂದಾಗಿ ಯುಎಇ ಕ್ರಿಕೆಟ್ ಬೋರ್ಡ್, ಇಂಡಿಯನ್ ಪ್ರೀಮಿಯರ್ ಲೀಗ್​ನ ಉಳಿದ 16 ಪಂದ್ಯಗಳಿಗೆ ಆತಿಥ್ಯವಹಿಸಲು ಆಸಕ್ತಿ ತೋರಿದೆ. ಸದ್ಯ ಉಭಯ ದೇಶಗಳ ಕ್ರಿಕೆಟ್ ಬೋರ್ಡ್ ನಡುವೆ ಮಾತುಕತೆ ಮಾತ್ರ ನಡೆದಿದ್ದು, ಇದಾಗ್ಯೂ ಬಿಸಿಸಿಐ ಯಾವುದೇ ಸ್ಪಷ್ಟ ನಿರ್ಧಾರ ತೆಗೆದುಕೊಂಡಿಲ್ಲ ಎಂದು ತಿಳಿದು ಬಂದಿದೆ.

ಯಾಕೆಂದರೆ ಬಿಸಿಸಿಐ ಇಂಡಿಯನ್ ಪ್ರೀಮಿಯರ್ ಲೀಗ್ ಅನ್ನು ಒಂದು ವಾರದವರೆಗೆ ಮಾತ್ರ ಸ್ಥಗಿತಗೊಳಿಸಿದೆ. ಅಂದರೆ ವಾರದ ಬಳಿಕ ಯುದ್ಧ ಭೀತಿ ಕೊನೆಗೊಂಡರೆ, ಟೂರ್ನಿಯನ್ನು ಭಾರತದಲ್ಲೇ ಆಯೋಜಿಸಲಿದ್ದಾರೆ. ಇಲ್ಲದಿದ್ದರೆ ಮಾತ್ರ ಬಿಸಿಸಿಐ ಪರ್ಯಾಯ ಆಯ್ಕೆಗಳತ್ತ ಗಮನಹರಿಸಲಿದೆ.

 ನಮ್ಮ ನೆಲದಲ್ಲಿ ಐಪಿಎಲ್ ಆಡಿಸಿ ಎಂದ ಇಂಗ್ಲೆಂಡ್ 

ಈ ನಡುವೆ ಇಂಗ್ಲೆಂಡ್ ತಂಡದ ಮಾಜಿ ನಾಯಕ ಮೈಕಲ್ ವಾನ್ ತಮ್ಮ ದೇಶದಲ್ಲಿ ಉಳಿದಿರುವ ಐಪಿಎಲ್ ಆಯೋಜಿಸುವಂತೆ ಕೇಳಿಕೊಂಡಿದ್ದಾರೆ.  ಐಪಿಎಲ್ 2025 ಮುಂದೂಡಲ್ಪಟ್ಟ ನಂತರ, ಇಂಗ್ಲೆಂಡ್ ಕ್ರಿಕೆಟ್ ತಂಡದ ಮಾಜಿ ನಾಯಕ ಮೈಕೆಲ್ ವಾನ್ ‘ಎಕ್ಸ್’ ನಲ್ಲಿ ಪೋಸ್ಟ್ ಬರೆದಿದ್ದಾರೆ. ಈ ಪೋಸ್ಟ್‌ನಲ್ಲಿ, ಅವರು ಭಾರತಕ್ಕೆ ಇಂಗ್ಲೆಂಡ್‌ನಲ್ಲಿ ಐಪಿಎಲ್ ಆಯೋಜಿಸಲು ಸಲಹೆ ನೀಡಿದ್ದಾರೆ. ಬ್ರಿಟನ್‌ನಲ್ಲಿ ಐಪಿಎಲ್ ಪೂರ್ಣಗೊಳಿಸಲು ಸಾಧ್ಯವೇ ಎಂದು ನಾನು ಆಶ್ಚರ್ಯಪಡುತ್ತೇನೆ ಎಂದು ಮೈಕೆಲ್ ವಾನ್ ಬರೆದುಕೊಂಡಿದ್ದಾರೆ. ನಮ್ಮಲ್ಲಿ ಮೈದಾನಗಳೂ ಇವೆ ಮತ್ತು ಈ ಲೀಗ್ ಮುಗಿದ ನಂತರ, ಭಾರತೀಯ ಆಟಗಾರರು ಟೆಸ್ಟ್ ಸರಣಿಗಾಗಿ ಅಲ್ಲಿಯೇ ಉಳಿಯಬಹುದು ಎಂದಿದ್ದಾರೆ. ಆದ್ರೆ, ಇದು ಕೇವಲ ತಮ್ಮ ಕಲ್ಪನೆ ಎಂದು ಕೂಡ ಅವರು ಹೇಳಿದ್ದಾರೆ. ವಾಸ್ತವವಾಗಿ, ಐಪಿಎಲ್ ಮುಗಿದ ತಕ್ಷಣ ಭಾರತ ತಂಡ ಇಂಗ್ಲೆಂಡ್ ಪ್ರವಾಸ ಕೈಗೊಳ್ಳಲಿದೆ. ಜೂನ್ 20 ರಿಂದ ಉಭಯ ದೇಶಗಳ ನಡುವೆ 5 ಪಂದ್ಯಗಳ ಟೆಸ್ಟ್ ಸರಣಿ ನಡೆಯಲಿದೆ. ಆದ್ದರಿಂದ, ಐಪಿಎಲ್‌ನ ಉಳಿದ ಪಂದ್ಯಗಳನ್ನು ಇಂಗ್ಲೆಂಡ್‌ನಲ್ಲಿ ನಡೆಸಿದರೆ ಭಾರತೀಯ ಟೆಸ್ಟ್ ತಂಡಕ್ಕೆ ಸ್ಥಾನ ಪಡೆಯುವ ಆಟಗಾರರು ಟೆಸ್ಟ್ ಸರಣಿಗಾಗಿ ಇಂಗ್ಲೆಂಡ್‌ನಲ್ಲಿಯೇ ಉಳಿಯಬಹುದು. ಹೀಗಾಗಿ  ಐಪಿಎಲ್​ ಪಂದ್ಯಗಳನ್ನು ಇಂಗ್ಲೆಂಡ್​ನಲ್ಲಿ ನಡುವಂತೆ ಇಸಿಬಿ, ಭಾರತೀಯ ಕ್ರಿಕೆಟ್ ಮಂಡಳಿಗೆ ಮನವಿ ಮಾಡಿದೆ ಎಂದು ವರದಿಯಾಗಿದೆ.

ನೋಡಿ ನಮ್ಮ ದೇಶದಲ್ಲಿ ಒಂದು ಕ್ರಿಕೆಟ್ ಆಡಿ ಅಂತ ಭಾರತವನ್ನೇ ಯಾವ ದೇಶ ಬೇಕಾದ್ರೂ ಕರೆಯುತ್ತೆ.. ಆದ್ರೆ ಪಾಕ್‌ನ ಯಾವ ದೇಶ ಕೂಡ ಕರೆಯಲ್ಲ. ಅದೇ ಅಲ್ವಾ ಭಾರತದ ಶಕ್ತಿ. ಅದೇ ಅಲ್ವಾ ಭಾರತದ ತಾಕತ್ತು. ಪಾಕ್ ಮತ್ತು ಭಾರತ ಎರಡು ಒಟ್ಟಿಗೆ ದುಬೈನಲ್ಲಿ ಪರ್ಮಿಷನ್ ಕೇಳಿದ್ರೆ, ಪರ್ಮಿಷನ್ ಸಿಗೋದು ಭಾರತಕ್ಕೆ ಮಾತ್ರ. ಅವರಿಗೂ ಗೊತ್ತು ಭಾರತದ ಶಕ್ತಿ ಏನು ಅನ್ನೋದು. ಅಲ್ಲದೇ ಭಾರತದ ತಂಟೆಗೆ ಬಂದ ಪಾಕ್ ಪಿಎಸ್‌ಎಲ್ ಮಾತ್ರ ಅಲ್ಲೇ ತನ್ನ ಕ್ರಿಕೆಟ್ ಮಂಡಳಿಗೆ ಸಾಕಷ್ಟು ಹೊಡೆತ ಬಿದ್ದಿದೆ.

 

Kishor KV

Leave a Reply

Your email address will not be published. Required fields are marked *