RCBಗೆ ಬ್ಯಾಡ್ ಲಕ್ – ಕಪ್ ಅಲ್ಲ ಲಾಲಿಪಾಪ್ ಟ್ರೋಲ್

RCBಗೆ ಬ್ಯಾಡ್ ಲಕ್ – ಕಪ್ ಅಲ್ಲ ಲಾಲಿಪಾಪ್ ಟ್ರೋಲ್

18ನೇ ಸೀಸನ್ ಐಪಿಎಲ್ ರಾಯಲ್ ಚಾಲೆಂಜರ್ಸ್ ಬೆಂಗಳೂರು ಪಾಲಿಗೆ ತುಂಬಾನೇ ಸ್ಪೆಷಲ್. ಅದು ಟೀಮ್​ಗೂ ಅಷ್ಟೇ ಅಭಿಮಾನಿಗಳಿಗೂ ಅಷ್ಟೇ. ಬ್ಯಾಟಿಂಗ್ ಡೆಪ್ತ್, ಬೌಲಿಂಗ್ ಸ್ಕಿಲ್​, ಆಲ್​ರೌಂಡರ್ಸ್ ಪರ್ಫಾಮೆನ್ಸ್ ಕಂಪ್ಲೀಟ್ ಪ್ಯಾಕೇಜ್​ನಂತಿದೆ. ಆಟಗಾರರಂತೂ ಸಾಲಿಡ್ ಫಾರ್ಮ್​ನಲ್ಲಿದ್ರು. ಬಟ್ ಇಂಥಾ ಟೈಮಲ್ಲೇ ಟೂರ್ನಿಯನ್ನ ಪೋಸ್ಟ್​ಪೋನ್ ಮಾಡಿರೋದು ಅಭಿಮಾನಿಗಳಿಗೆ ತುಂಬಾನೇ ನಿರಾಸೆ ಉಂಟು ಮಾಡಿದೆ. ಸೋಶಿಯಲ್ ಮೀಡಿಯಾದಲ್ಲಿ ಪೋಸ್ಟ್ ಮೂಲಕ ಬೇಸರ ವ್ಯಕ್ತಪಡಿಸಿದ್ದಾರೆ.

ಇದನ್ನೂ ಓದಿ : ಭಾರತದ ದಾಳಿಗೆ ಪತರುಗುಟ್ಟಿದ ಪಾಕ್ – ಮತ್ತೆ ಪಾಕಿಸ್ತಾನದ ನಾಲ್ಕು ಕಡೆ ಭಾರತದ ದಾಳಿ

ಎಸ್ ಅನ್ನೋ ಅಕೌಂಟ್​ ನೇಮ್​ನಿಂದ ಒಂದು ಪೋಸ್ಟ್ ಹಾಕಿದ್ದಾರೆ ನೋಡಿ. 18 ವರ್ಷಗಳ ಐಪಿಎಲ್ ಇತಿಹಾಸದಲ್ಲಿ ಫಾರ್​ ದಿ ಫಸ್ಟ್ ಟೈಂ ಆರ್​ಸಿಬಿಯಲ್ಲಿ ಬ್ಯಾಟಿಂಗ್, ಬೌಲಿಂಗ್ ಮತ್ತು ಫಿನಿಶರ್ಸ್ ಎಲ್ರೂ ಫಾರ್ಮ್​ನಲ್ಲಿದ್ರು. ಬಟ್ ದೇವರ ಯೋಜನೆಯೇ ಬೇರೆ ಇತ್ತು. ಐಪಿಎಲ್ ಸಸ್ಪೆಂಡ್ ಆಯ್ತು. ಬ್ಯಾಡ್ ಲಕ್ ಆರ್​ಸಿಬಿ ಅಂತಾ ಪೋಸ್ಟ್ ಹಾಕಿದ್ದಾರೆ. ದೊಗೇಶ್ ಅನ್ನೋ ಪ್ರೊಫೈಲ್​ನಿಂದ ಇಮೇಜ್ ವೊಂದನ್ನ ಹಾಕಿದ್ದಾರೆ ನೋಡಿ. ಐಪಿಎಲ್ ಸಸ್ಪೆಂಡ್ ಆಗಿದ್ದಕ್ಕೆ ಒಂದ್ಕಡೆ ಸಿಎಸ್​ಕೆ ಫ್ಯಾನ್ಸ್ ಫುಲ್ ಹ್ಯಾಪಿ ಮೂಡ್​ನಲ್ಲಿದ್ರೆ ಆರ್​ಸಿಬಿ ಫ್ಯಾನ್ಸ್ ಶಾಕ್ ಆಗಿರೋ ರೀತಿಯ ಇಮೇಜ್ ಪೋಸ್ಟ್ ಮಾಡಿದ್ದಾರೆ.

ಇದೆಲ್ಲಾ ಒಂದ್ಕಡೆಯಾದ್ರೆ ಮತ್ತೊಂದೆಡೆ ಆರ್​ಸಿಬಿ ಹೇಟರ್ಸ್​ಗಂತೂ ಐಪಿಎಲ್ ಸಸ್ಪೆಂಡ್ ಮಾಡಿರೋದು ಹಾಲು ಕುಡ್ದಷ್ಟೇ ಸಂತೋಷವಾಗಿದೆ. ಟೇಬಲ್ ಟಾಪರ್ ಆಗಿರೋದಕ್ಕೆ ಮೊದ್ಲೆ ಉರ್ಕೊಂಡು ಸಾಯ್ತಿದ್ರು. ಎಲ್ಲಿ ಕಪ್ ಗೆದ್ದೇ ಬಿಡ್ತಾರೆ ಅಂತಾ ಟೆನ್ಷನ್​ನಲ್ಲಿದ್ರು. ಈಗ ಟೂರ್ನಿ ಅಮಾನತು ಮಾಡಿದ್ದಕ್ಕೆ ಆರ್​ಸಿಬಿಗೆ ಈ ವರ್ಷನೂ ಲಾಲಿಪಾಪ್ ಅಂತಾ ಟ್ರೋಲ್ ಮಾಡಿದ್ದಾರೆ. ವಿರಾಟ್ ಕೊಹ್ಲಿ ಲಾಲಿಪಾಪ್ ತಿನ್ನೋ ಇಮೇಜ್​ಗಳನ್ನ ಶೇರ್ ಮಾಡಿದ್ದಾರೆ. ಈ ಸಲ ಕಪ್ ಅಲ್ಲ ಲಾಲಿ ಪಾಪ್ ಅಂತಾ ಕಾಲೆಳೆದಿದ್ದಾರೆ.

ಸದ್ಯಕ್ಕೆ ಯುದ್ಧದ ಕಾರಣದಿಂದ 1 ವಾರ ಐಪಿಎಲ್ ಮುಂದೂಡಿಕೆ ಮಾಡಿದ್ದಾರೆ. ಸೋ ಮುಂದಿನ ದಿನಗಳಲ್ಲಿ ಟೂರ್ನಿ ಹೇಗೆ ರೀ ಶೆಡ್ಯೂಲ್ ಆಗುತ್ತೋ ಗೊತ್ತಿಲ್ಲ. ನಿಜ ಹೇಳ್ಬೇಕಂದ್ರೆ ಈ ಸಲ ಐಪಿಎಲ್ ನಲ್ಲಿ ಆರ್​ಸಿಬಿ ಸಿಕ್ಕಾಪಟ್ಟೆ ಸಾಲಿಡ್ ಫಾರ್ಮ್​ನಲ್ಲಿತ್ತು. ಕ್ರಿಕೆಟ್ ಎಕ್ಸ್​ಪರ್ಟ್ಸ್ ಕೂಡ ಆರ್​ಸಿಬಿಯೇ ಮ್ಯಾಚ್ ವಿನ್ನಿಂಗ್ ಫೇವರೆಟ್ ಟೀಂ ಅಂತಿದ್ರು. 11 ಪಂದ್ಯಗಳ ಪೈಕಿ 8 ಮ್ಯಾಚ್ ಗೆದ್ದು ಸೆಕೆಂಡ್ ಪ್ಲೇಸ್​ನಲ್ಲಿದ್ದಾರೆ.

Shantha Kumari

Leave a Reply

Your email address will not be published. Required fields are marked *