ಪಾಕಿಸ್ತಾನದಿಂದ PSL ಎತ್ತಂಗಡಿ! ಪಾಕ್ ಕ್ರಿಕೆಟ್ ಅಂತ್ಯಕ್ಕೆ ಕೌಂಟ್ಡೌನ್!
ತಾನೇ ತೋಡಿದ ಹಳ್ಳಕ್ಕೆ ಬಿದ್ದ ಪಾಪಿಗಳು

ಪಾಕಿಸ್ತಾನದಿಂದ PSL ಎತ್ತಂಗಡಿ! ಪಾಕ್ ಕ್ರಿಕೆಟ್ ಅಂತ್ಯಕ್ಕೆ ಕೌಂಟ್ಡೌನ್!ತಾನೇ ತೋಡಿದ ಹಳ್ಳಕ್ಕೆ ಬಿದ್ದ ಪಾಪಿಗಳು

ಕಂಡವರ ಬಳಿ ಬಿಕ್ಷೆ ಎತ್ತುವ ಪಾಕ್‌ಗೆ ಮುಟ್ಟಿದ್ದೆಲ್ಲಾ ಬೂದಿ ಎನ್ನುವಂತೆ ಆಗಿದೆ. ಭಾರತವನ್ನು ಕೆಣಕಿ ತನ್ನ ಗುಂಡಿಯನ್ನ ತಾನೇ ತೋಡಿಕೊಳ್ಳುತ್ತಿದೆ. ಪಾಕಿಸ್ತಾನ ಈಗಾಗಲೇ ಐಸಿಸಿ ಚಾಂಪಿಯನ್ ಟ್ರೋಫಿ ಮಾಡಿ ಕೈ ಸುಟ್ಟುಕೊಂಡಿತ್ತು. ಯಾವುದೇ ಕಾರಣಕ್ಕೂ ಪಾಕಿಸ್ತಾನಕ್ಕೆ ಭಾರತ ಹೋಗಲ್ಲ ಅಂದಿದ್ದಕ್ಕೆ ಭಾರತಕ್ಕಾಗಿ ಪಾಕ್ ದುಬೈ ಚಾಂಪಿಯನ್ ಟ್ರೋಫಿ ಆಯೋಜನೆ ಮಾಡಿತ್ತು. ತಾನೇ ಅತಿಥ್ಯ ವಹಿಸಿದ್ರೂ ಪಾಕ್ ಗೆದ್ದಿದ್ದು ಒಂದೇ ಒಂದು ಪಂದ್ಯ ಮಾತ್ರ. ಅಲ್ಲದೇ ಚಾಂಪಿಯನ್ ಟ್ರೋಫಿ ನಡೆಸಲು ಪಾಕ್ ತನ್ನ ಕ್ರೀಡಾಂಗಣಕ್ಕೆ ಕೋಟಿ ಕೋಟಿ ಸುರಿದಿತ್ತು. ಹಾಗ್ರೆ ಹಾಕಿದ್ದ ದುಡ್ಡು ಕೂಡ ಪಾಕ್‌ಗೆ ಬಂದಿರಲಿಲ್ಲ. ದುಬೈ t0 ಪಾಕಿಸ್ತಾನಕ್ಕೆ ವಿಮಾನದ ವೆಚ್ಚ ಹೆಚ್ಚಾಗಿತ್ತು. ಅಲ್ಲದೇ ಪಾಕ್‌ನಲ್ಲಿರೋ ಸ್ಟೇಡಿಯಂಗೆ ಜನ ಹೋಗೇ ಇರಲಿಲ್ಲ.. ಎಲ್ಲಾ ಪಂದ್ಯಗಳು ಖಾಲಿ ಖಾಲಿಯಾಗಿತ್ತು ಜನರಿಲ್ಲದೇ.. ಇದ್ರಿಂದ ಪಾಕಿಸ್ತಾನ ಕ್ರಿಕೆಟ್ ಮಂಡಳಿಗೆ ಭಾರಿ ಹೊಡೆತ ಬಿದ್ದಿತ್ತು. ಈಗ ಪಿಎಸ್‌ಎಲ್ ನಡೆಸುತ್ತಿರೋ ಪಾಕ್‌ಗೆ ಮತ್ತೊಂದು ಹೊಡೆತ ಬಿದ್ದಿದೆ.

ಪಾಕಿಸ್ತಾನ ಸೂಪರ್ ಲೀಗ್ ದುಬೈಗೆ ಶಿಫ್ಟ್

 ಪಹಲ್ಗಾಮ್ ಭಯೋತ್ಪಾದಕ ದಾಳಿಯ ನಂತರ ಭಾರತವು ಪ್ರತೀಕಾರದ ಕ್ರಮ ಕೈಗೊಂಡಿರುವುದರಿಂದ ಪಾಕಿಸ್ತಾನದಲ್ಲಿ ಭಯದ ವಾತಾವರಣವಿದೆ. ಭಯ ಎಷ್ಟರ ಮಟ್ಟಿಗೆ ಹೆಚ್ಚಿದೆ ಎಂದರೆ ಈಗ ಪಾಕಿಸ್ತಾನ ಸೂಪರ್ ಲೀಗ್  ಪಂದ್ಯಾವಳಿಯನ್ನು ದೇಶದ ಹೊರಗೆ ಸ್ಥಳಾಂತರಿಸಲು ನಿರ್ಧರಿಸಲಾಗಿದ್ದು, ಪಿಎಸ್‌ಎಲ್‌ನ ಉಳಿದ ಪಂದ್ಯಗಳನ್ನು ದುಬೈಗೆ ಶಿಫ್ಟ್ ಮಾಡಲಾಗಿದೆ. ಭಾರತದ ದಾಳಿಗೆ ಬೆದರಿರುವ ವಿದೇಶಿ ಆಟಗಾರರು ಈಗಾಗಲೇ ಪಾಕಿಸ್ತಾನವನ್ನು ತೊರೆಯಲು ಮುಂದಾಗಿದ್ದಾರೆ. ಹೀಗಾಗಿ ಅವಮಾನವನ್ನು ತಪ್ಪಿಸಲು ಪಾಕ್ ಕ್ರಿಕೆಟ್ ಮಂಡಳಿ ಲೀಗ್ ಅನ್ನು ಸ್ಥಳಾಂತರಿಸಲು ಮುಂದಾಗಿದೆ.

 ಪಾಕಿಸ್ತಾನದ ಮೇಲೆ ಭಾರೀ ಒತ್ತಡ

ಈಗಾಗಲೇ ಹೇಳಿದಂತೆ ಪಿಎಸ್ಎಲ್‌ನ ಉಳಿದ ಪಂದ್ಯಗಳನ್ನು ವಿದೇಶದಲ್ಲಿ ಆಯೋಜಿಸಲು ಪಾಕ್ ಕ್ರಿಕೆಟ್ ಮಂಡಳಿ ನಿರ್ಧರಿಸಿದೆ. ಯಾಕೆಂದರೆ ಈ ಲೀಗ್​ನಲ್ಲಿ ಬಹಳಷ್ಟು ವಿದೇಶಿ ಆಟಗಾರರು ಆಡುತ್ತಿದ್ದಾರೆ. ಆಸ್ಟ್ರೇಲಿಯಾ, ಇಂಗ್ಲೆಂಡ್, ನ್ಯೂಜಿಲೆಂಡ್‌ನ ಅನೇಕ ಆಟಗಾರರು ಪಾಕಿಸ್ತಾನ ಸೂಪರ್ ಲೀಗ್‌ನ ಭಾಗವಾಗಿದ್ದಾರೆ. ಪಾಕಿಸ್ತಾನದ ಮೇಲೆ ಭಾರತದ ದಾಳಿಗೆ ಬೆದರಿರುವ ಇಂಗ್ಲೆಂಡ್ ಆಟಗಾರರು ಭಯಭೀತರಾಗಿದ್ದು, ಈಗಾಗಲೇ ಇಸಿಬಿಯಿಂದ ಸಹಾಯವನ್ನು ಕೋರಿದ್ದಾರೆ ಎಂಬ ವರದಿಗಳಿವೆ. ಆದರೆ ಪಾಕಿಸ್ತಾನ ಸೂಪರ್ ಲೀಗ್ ಪಂದ್ಯಗಳನ್ನು ದೋಹಾ ಅಥವಾ ದುಬೈಗೆ ಸ್ಥಳಾಂತರಿಸಿದರೆ, ಪಿಸಿಬಿಗೆ ಭಾರಿ ಆರ್ಥಿಕ ನಷ್ಟವಾಗುತ್ತದೆ. ಯಾಕಂದ್ರೆ ಅಲ್ಲಿನ ಕ್ರೀಡಾಂಗಣಕ್ಕೆ ಬಾಡಗೆ ಕಟ್ಟಬೇಕು. ಅಲ್ಲಿ ಎಲ್ಲಾ ತಂಡದ ಆಟಗಾರರು ಉಳಿಯೋಕೆ ವ್ಯವಸ್ಥೆ ಮಾಡಬೇಕು. ಜೊತೆ ಅಲ್ಲಿರೋರು ಆಟ ನೋಡೋಕೆ ಬರ್ತಾರೆ ಅನ್ನೋ ಗ್ಯಾರಂಟಿ ಇರಲ್ಲ. ಅದ್ರಿಂದ ಕ್ರಿಡಾಂಗಣ ಖಾಲಿ ಖಾಲಿಯಾಗಿರುತ್ತೆ. ಹೀಗಾಗಿ ಇದು ಪಾಕ್‌ಗೆ ಎಫೆಕ್ಟ್ ಆಗಲಿದೆ.

ರಾವಲ್ಪಿಂಡಿ ಸ್ಟೇಡಿಯಂನಲ್ಲಿ ಕರಾಚಿ ಕಿಂಗ್ಸ್ ಹಾಗೂ ಪೇಶಾವರ್ ಜಲ್ಮಿ ಪಂದ್ಯ ಗುರುವಾರ  ನಡೆಯಬೇಕಿತ್ತು. ಆದರೆ, ಸ್ಟೇಡಿಯಂ ಕಾಂಪ್ಲೆಕ್ಸ್ ಮೇಲೆ ಡ್ರೋನ್ ಉರುಳಿ ಬಿದ್ದಿದ್ದರಿಂದ ಈ ಪಂದ್ಯವನ್ನು ಮರು ನಿಗದಿ ಮಾಡಲಾಗಿದೆ.   ಪಾಕಿಸ್ತಾನದ ಪುಂಡಾಟಿಕೆಗೆ ಭಾರತ ತಕ್ಕ ಉತ್ತರ ನೀಡುತ್ತಿದೆ. ಭಾರತದವರ ಡ್ರೋನ್ ದಾಳಿಗೆ ಪಾಕ್ ತತ್ತರಿಸಿದೆ. ಇನ್ನು, ಪಾಕಿಸ್ತಾನದ ಕರಾಚಿ ಬಂದರಿನ ಮೇಲೆ ಭಾರತದವರು ದಾಳಿ ನಡೆಸಿ, ಬಂದರನ್ನು ಧ್ವಂಸ ಮಾಡಿದ್ದಾರೆ. ಇದನ್ನು ನೋಡಿ ಅಲ್ಲಿ ಉಳಿದುಕೊಂಡಿದ್ದ ವಿದೇಶಿ ಆಟಗಾರರು ಪಂದ್ಯವನ್ನು ತೊರೆಯುವ ನಿರ್ಧಾರಕ್ಕೆ ಬಂದರು. ಈ ಕಾರಣಕ್ಕೆ ಪಂದ್ಯಗಳನ್ನು ಯುಎಇಗೆ ಸ್ಥಳಾಂತರ ಮಾಡುವ ನಿರ್ಧಾರ ಮಾಡಲಾಗಿದೆ.

ಪಾಕಿಸ್ತಾನದವರು ಮಿಲಿಟರಿ ಬೇಸ್​ಗಳನ್ನು ಟಾರ್ಗೆಟ್ ಮಾಡಿ ದಾಳಿ ಮಾಡಲು ಮುಂದಾಗಿದ್ದರು. ಇದಕ್ಕೆ ಪ್ರತುತ್ತರವಾಗಿ ಭಾರತದವರು ಡ್ರೋನ್ ದಾಳಿ ಮಾಡಿದ್ದಾರೆ. ಈ ಡ್ರೋನ್​ಗಳು ಪಾಕ್​ನ ಹಲವು ಕಡೆಗಳಲ್ಲಿ ದಾಳಿ ನಡೆಸಿದೆ. ಈ ವಿಚಾರಗಳನ್ನು ಗಮನದಲ್ಲಿ ಇರಿಸಿಕೊಂಡು ಈ ನಿರ್ಧಾರ ತೆಗೆದುಕೊಳ್ಳಲಾಗಿದೆ.

ಪಾಕಿಸ್ತಾನ ಸೂಪರ್ ಲೀಗ್​ನಲ್ಲಿ ಹೆಚ್ಚು ವ್ಯತ್ಯಾಸ ಮಾಡುವಂತಿಲ್ಲ. ಏಕೆಂದರೆ, ಇದು ಅಂತಾರಾಷ್ಟ್ರೀಯ ಕ್ರಿಕೆಟ್ ಸರಣಿಗಳ ಮೇಲೆ ಪರಿಣಾಮ ಬೀರುತ್ತದೆ. ಪಿಎಸ್​ಎಲ್​ ಫೈನಲ್ ಮೇ 18ರಂದು ಕೊನೆಗೊಳ್ಳಬೇಕಿತ್ತು. ಆದರೆ, ಫೈನಲ್ ವಿಳಂಬ ಆಗಲಿದೆ. ಆ ಬಳಿಕ ಬಾಂಗ್ಲಾದೇಶ ತಂಡದವರು ಪಾಕಿಸ್ತಾನಕ್ಕೆ ಸರಣಿ ಆಡಲು ಬರಲಿದೆ. ಈ ಸರಣಿ ಬಗ್ಗೆ ಇನ್ನೂ ಪಾಕ್ ಯಾವುದೇ ನಿರ್ಧಾರ ತೆಗೆದುಕೊಂಡಿಲ್ಲ. ಪರಿಸ್ಥಿತಿ ಹೀಗೆ ಮುಂದುವರಿದರೆ ಸರಣಿ ರದ್ದಾಗಲೂಬಹುದು.  ಒಟ್ನಲ್ಲಿ ಪಾಕ್‌ಗೆ ಮುಟ್ಟಿದ್ದೆಲ್ಲಾ ಬೂದಿ ಆಗುತ್ತಿದ್ದು, ಭಾರತವನ್ನ ಯಾಕಾದ್ರೂ ಎದುರು ಹಾಕಿಕೊಂಡೇ ಅನ್ನೋ ಸ್ಥಿತಿಯಲ್ಲಿ ಪಾಕಿಸ್ತಾನವಿದೆ.

 

Kishor KV