ಈ ಸೀಸನ್ ನಲ್ಲಿ 12 + 04 = 16 ಪಂದ್ಯಗಳು ಬಾಕಿ – ಬಿಸಿಸಿಐ ಮುಂದೆ ಹಲವು ಸವಾಲು

ಆರಂಭದಲ್ಲಿ ಇಡೀ ಐಪಿಎಲ್ ಟೂರ್ನಿಯೇ ರದ್ದಾಗುತ್ತೆ ಎಂದು ವರದಿಗಳು ಆಗಿದ್ರೂ ಕೂಡ ಬಿಸಿಸಿಐ ಈ ಬಗ್ಗೆ ಸ್ಪಷ್ಟ ಪಡಿಸಿದೆ. ಅಂದ್ರೆ ಇಡೀ ಟೂರ್ನಿಯನ್ನ ಮುಂದೂಡಿಕೆ ಮಾಡ್ಲಾಗಿದೆ. ಹಾಗಂತ ಅನಿರ್ಧಿಷ್ಟಾವಧಿ ಅಲ್ಲ. ಒನ್ ವೀಕ್ ಅಂತಾ ಹೇಳಿದ್ದಾರೆ. ಸೋ ಒಂದು ವಾರದ ಬಳಿಕ ಎರಡೂ ರಾಷ್ಟ್ರಗಳ ನಡುವಿನ ಸ್ಥಿತಿಗತಿಗಳನ್ನ ನೋಡ್ಕೊಂಡು ನೆಕ್ಸ್ಟ್ ಡಿಸಿಷನ್ ತಗೊಳ್ತಾರೆ.
ಬಿಸಿಸಿಐ ಮುಂದೆ ಹಲವು ಆಯ್ಕೆ!
ಭಾರತ ಮತ್ತು ಪಾಕಿಸ್ತಾನ ನಡುವೆ ದಾಳಿ ಪ್ರತಿದಾಳಿ ನಡೆಯುತ್ತಲೇ ಇದೆ
ಟೂರ್ನಿ ಬಗ್ಗೆ ಬಿಸಿಸಿಐ ಈಗಾಗಲೇ ಹಲವು ಆಯ್ಕೆಗಳ ಬಗ್ಗೆ ಚಿಂತನೆ
ಇನ್ನುಳಿದ ಪಂದ್ಯಗಳನ್ನು ಯುಎಇ ಅಥವಾ ಆಫ್ರಿಕನ್ ದೇಶಗಳಿಗೆ ಸ್ಥಳಾಂತರ
ಕೊರೊನಾ & ಲೋಕಸಭಾ ಚುನಾವಣೆ ಸಂದರ್ಭದಲ್ಲಿ ಐಪಿಎಲ್ ಶಿಫ್ಟ್
2009 ರಲ್ಲಿ ಸಾರ್ವತ್ರಿಕ ಚುನಾವಣೆಯಿಂದಾಗಿ ಐಪಿಎಲ್ ಸ್ಥಳಾಂತರ
2021 ರಲ್ಲಿ ಇತಿಹಾಸದಲ್ಲಿಯೇ ಮೊದಲ ಬಾರಿಗೆ ಅರ್ಧಕ್ಕೆ ನಿಲ್ಲಿಸಲಾಗಿತ್ತು
2021ರ ಸೆಪ್ಟೆಂಬರ್ನಲ್ಲಿ ಯುನೈಟೆಡ್ ಅರಬ್ ಎಮಿರೇಟ್ಸ್ ನಲ್ಲಿ ಆರಂಭ
ಭಾರತ-ಪಾಕಿಸ್ತಾನ ನಡುವಿನ ಉದ್ವಿಗ್ನತೆ ಕಡಿಮೆಯಾಗುವವರೆಗೆ ಕಾದು ಟೂರ್ನಿ
2025ರ ವರ್ಷಾಂತ್ಯದಲ್ಲಿ ಟೂರ್ನಿಯನ್ನು ಮರು ಆಯೋಜಿಸುವ ಸಾಧ್ಯತೆ
ಶೀಘ್ರದಲ್ಲಿಯೇ ಸಭೆ ನಡೆಸಿ ತನ್ನ ಮುಂದಿರುವ ಆಯ್ಕೆಗಳ ಕುರಿತು ಚರ್ಚೆ
ಐಪಿಎಲ್ ವಿಶ್ವದ ಶ್ರೀಮಂತ ಲೀಗ್ ಆಗೋದಕ್ಕೆ ಕಾರಣವೇ ಇದು. ಇದು ಭಾರತದ ಟೂರ್ನಿ ಆಗಿದ್ರೂ ವಿದೇಶಗಳ ಸೂಪರ್ ಸ್ಟಾರ್ ಪ್ಲೇಯರ್ಸ್ ಕೂಡ ಇಲ್ಲಿ ಆಡ್ತಾರೆ. ಕಳೆದ ವರ್ಷ ನಡೆದ ಮೆಗಾ-ಹರಾಜಿನಲ್ಲಿ 10 ಫ್ರಾಂಚೈಸಿಗಳು ಅರವತ್ತೆರಡು ವಿದೇಶಿ ಆಟಗಾರರನ್ನು ಖರೀದಿಸಿದ್ದವು. ಅಲ್ದೇ ಮಾಜಿ ಕ್ರಿಕೆಟಿಗರು ಕೋಚ್, ಮತ್ತು ಸ್ಟಾಫ್ಸ್ ಆಗಿ ಕೆಲಸ ಮಾಡ್ತಿದ್ದಾರೆ. ಆದ್ರೀಗ ಭಾರತ ಮತ್ತು ಪಾಕಿಸ್ತಾನ ನಡುವೆ ಯುದ್ಧ ಕಾರ್ಮೋಡ ಆವರಿಸುತ್ತಿದ್ದಂತೆ ವಿದೇಶಿ ಆಟಗಾರರು ಆತಂಕಗೊಂಡಿದ್ದಾರೆ. ಪಂದ್ಯಾವಳಿಯಲ್ಲಿ ಆಡುತ್ತಿರುವ ಫಾರಿನ್ ಪ್ಲೇಯರ್ಸ್ ತಮ್ಮ ದೇಶಕ್ಕೆ ಮರಳಬೇಕು ಎನ್ನುತ್ತಿದ್ದಾರೆ. ಸೋ ಇಂಥಾ ಟೈಮಲ್ಲಿ ಬಿಸಿಸಿಐ ವಿದೇಶಿ ಆಟಗಾರರನ್ನು ರಕ್ಷಿಸಬೇಕಾದ ಜವಾಬ್ದಾರಿ ಹೊತ್ತಿದೆ. ಹೀಗಾಗಿ ಆದಷ್ಟು ಬೇಗ ಅವ್ರವ್ರ ದೇಶಕ್ಕೆ ಆಟಗಾರರನ್ನ ಕಳುಹಿಸಲಿದೆ. ಇಲ್ಲಿ ಇನ್ನೊಂದು ಇಂಪಾರ್ಟೆಂಟ್ ವಿಷ್ಯ ಅಂದ್ರೆ ವಿದೇಶಿ ಆಟಗಾರರ ಜೊತೆಗೆ ಅವರ ಕುಟುಂಬ ಸದಸ್ಯರು, ಪುಟ್ಟ ಪುಟ್ಟ ಮಕ್ಕಳೂ ಸಹ ಪ್ರಸ್ತುತ ಭಾರತದಲ್ಲಿದ್ದಾರೆ. ಅಂತಹ ಪರಿಸ್ಥಿತಿಯಲ್ಲಿ, ಬಿಸಿಸಿಐ ಯಾವುದೇ ರಿಸ್ಕ್ ತೆಗೆದುಕೊಳ್ಳೋಕೆ ರೆಡಿ ಇಲ್ಲ. ಲೀಗ್ ಸಸ್ಪೆಂಡ್ ಅನ್ನು ದೃಢಪಡಿಸಿದ ಬಿಸಿಸಿಐ ಅಧಿಕಾರಿಯೊಬ್ಬರು ಪಿಟಿಐ ಜೊತೆ ಈ ಬಗ್ಗೆ ಮಾತ್ನಾಡಿದ್ದಾರೆ. ದೇಶವು ಯುದ್ಧದಲ್ಲಿರುವಾಗ ಕ್ರಿಕೆಟ್ ಮುಂದುವರಿದರೆ ಅದು ಒಳ್ಳೆಯದಲ್ಲ ಎಂದಿದ್ದಾರೆ.
ಈ ಐಪಿಎಲ್ ಸೀಸನ್ನಲ್ಲಿ ಒಟ್ಟು 57 ಪಂದ್ಯಗಳು ನಡೆದಿವೆ. ಗುರುವಾರ ನಡೆಯುತ್ತಿದ್ದ ಪಂಜಾಬ್ ಮತ್ತು ಡೆಲ್ಲಿ ನಡುವಿನ 58 ನೇ ಪಂದ್ಯವನ್ನು ಅರ್ಧಕ್ಕೆ ನಿಲ್ಲಿಸಲಾಗಿದೆ. ಒಟ್ಟಾರೆಯಾಗಿ ಈ ಸೀಸನ್ನಲ್ಲಿ 74 ಪಂದ್ಯಗಳನ್ನು ಆಡಬೇಕಾಗಿತ್ತು,. ಮೇ 25 ರಂದು ಕೋಲ್ಕತ್ತಾದಲ್ಲಿ ಫೈನಲ್ ಮ್ಯಾಚ್ಗೆ ಮುಹೂರ್ತ ಕೂಡ ಫಿಕ್ಸ್ ಆಗಿದೆ. ಮುಕ್ತಾಯಗೊಳ್ಳಬೇಕಿತ್ತು. ಲೀಗ್ ಹಂತದಲ್ಲಿ ಇನ್ನು 12 ಪಂದ್ಯಗಳು ಬಾಕಿ ಇದ್ರೆ ಪ್ಲೇಆಫ್ಸ್ & ಫೈನಲ್ ಸೇರಿ ನಾಲ್ಕು ಪಂದ್ಯಗಳಿದ್ವು. ಒಟ್ಟಾರೆಯಾಗಿ ಈ ಸೀಸನ್ನಲ್ಲಿ ಇನ್ನು 16 ಪಂದ್ಯಗಳಷ್ಟೇ ಬಾಕಿ ಇದ್ವು. ಆದ್ರೀಗ ಟೂರ್ನಿ ಪೋಸ್ಟ್ ಪೋನ್ ಆಗಿರೋದ್ರಿಂದ ಉಳಿದ ಪಂದ್ಯಗಳಿಗೆ ಹೊಸ ವೇಳಾಪಟ್ಟಿಯನ್ನು ರೂಪಿಸಬೇಕಾಗುತ್ತೆ.
ನಿಜ ಹೇಳ್ಬೇಕಂದ್ರೆ ಸದ್ಯಕ್ಕೇನೋ ಐಪಿಎಲ್ನ ಮುಂದೂಡಿಕೆ ಮಾಡಿದ್ದಾರೆ ನಿಜ. ಬಟ್ ಆ ನಂತ್ರ ಮತ್ತೆ ಶೆಡ್ಯೂಲ್ ಹಾಕಿ ಮ್ಯಾಚ್ ಆಡಿಸೋದು ಬಿಸಿಸಿಐಗೆ ದೊಡ್ಡ ಸವಾಲೇ ಆಗಲಿದೆ. ಯಾಕಂದ್ರೆ ಇನ್ನೂ 16 ಪಂದ್ಯಗಳು ಬಾಕಿ ಉಳಿದಿವೆ. ಈ ಪಂದ್ಯಗಳನ್ನು ಬೇರೆ ಯಾವುದಾದರೂ ದಿನಾಂಕದಂದು ಆಡಿಸಬೇಕಾಗುತ್ತೆ. ಇದಕ್ಕಾಗಿ ಮಿನಿಮಮ್ ಅಂದ್ರೂ ಎರಡು ವಾರಗಳ ಟೈಂ ಬೇಕೇಬೇಕು. ಬಟ್ ಐಪಿಎಲ್ ನಂತರ ಭಾರತ ತಂಡ ಅಂತಾರಾಷ್ಟ್ರೀಯ ಪಂದ್ಯಗಳಿಗೆ ಡೇಟ್ಗಳನ್ನ ಫಿಕ್ಸ್ ಮಾಡಿದೆ. ಜೂನ್ನಲ್ಲಿ ಟೀಂ ಇಂಡಿಯಾ ಇಂಗ್ಲೆಂಡ್ ಪ್ರವಾಸ ಕೈಗೊಳ್ಳಲಿದ್ದು ಅಲ್ಲಿ ಐದು ಪಂದ್ಯಗಳ ಟೆಸ್ಟ್ ಸರಣಿಯನ್ನು ಆಡಲಿದೆ. ಈ ಸರಣಿ ಆಗಸ್ಟ್ ವರೆಗೆ ನಡೆಯಲಿದೆ. ಇದಾದ ನಂತರ ಟೀಂ ಇಂಡಿಯಾ ಬಾಂಗ್ಲಾದೇಶ ವಿರುದ್ಧ ಆಡಬೇಕಾಗುತ್ತದೆ. ಬಟ್ ಬಾಂಗ್ಲಾದೇಶ ವಿರುದ್ಧದ ಸರಣಿ ನಡೆಯುತ್ತೋ ಇಲ್ಲವೋ ಅನ್ನೋದು ಇನ್ನೂ ಕೂಡ ಸಸ್ಪೆನ್ಸ್. ಯಾಕಂದ್ರೆ ಭಾರತ ಮತ್ತು ಬಾಂಗ್ಲಾದೇಶ ನಡುವಿನ ಸಂಬಂಧ ಹದಗೆಟ್ಟಿರುವ ಕಾರಣ ಬಿಸಿಸಿಐ ಈ ಸರಣಿಯಿಂದ ಹಿಂದೆ ಸರಿಯಬಹುದು. ಅಲ್ಲದೆ ಮುಂಬರುವ ಏಷ್ಯಾಕಪ್ನಲ್ಲೂ ಭಾರತ ಆಡುವ ಸಾಧ್ಯತೆಗಳಿಲ್ಲ. ಒಂದು ವೇಳೆ ಈ ಎರಡೂ ಮ್ಯಾಚ್ಗಳಿಂದ ಹಿಂದೆ ಸರಿದ್ರೆ ಈ ಟೈಮಲ್ಲಿ ಐಪಿಎಲ್ನ ಉಳಿದ ಪಂದ್ಯಗಳನ್ನು ನಡೆಸಬಹುದು.

ನೋಡಿರಿ

