126 ಬಾಲ್​​ನಲ್ಲಿ 200 ರನ್! ಇಶಾನ್ ಕಿಶನ್ ವಿಶ್ವದಾಖಲೆ!
ಸಚಿನ್ ಸೆಂಚೂರಿ ರೆಕಾರ್ಡ್ ಪುಡಿಗಟ್ಟುತ್ತಾರಾ ವಿರಾಟ್?

126 ಬಾಲ್​​ನಲ್ಲಿ 200 ರನ್! ಇಶಾನ್ ಕಿಶನ್ ವಿಶ್ವದಾಖಲೆ!ಸಚಿನ್ ಸೆಂಚೂರಿ ರೆಕಾರ್ಡ್ ಪುಡಿಗಟ್ಟುತ್ತಾರಾ ವಿರಾಟ್?

ಟೀಂ ಇಂಡಿಯಾದ ಯುವ ಕ್ರಿಕೆಟರ್ ಇಶಾನ್ ಕಿಶನ್ ಇಂದು ಹೊಸ ವಿಶ್ವ ದಾಖಲೆಯನ್ನೇ ಬರೆದಿದ್ದಾರೆ. ಬಾಂಗ್ಲಾದೇಶ ಜೊತೆಗಿನ ಮೂರನೇ ಏಕದಿನ ಕ್ರಿಕೆಟ್ ಪಂದ್ಯಾವಳಿಯಲ್ಲಿ ಇಶಾನ್ ಕಿಶನ್ ಕೇವಲ 126 ಎಸೆತಗಳಲ್ಲೇ ದ್ವಿಶತಕ ಬಾರಿಸಿದ್ದಾರೆ. ಈ ಮೂಲಕ ವೆಸ್ಟ್​​ಇಂಡೀಸ್​ನ ಕ್ರೀಸ್​ ಗೈಲ್​​ ಹೆಸರಲ್ಲಿದ್ದ ದಾಖಲೆಯನ್ನು ಮುರಿದಿದ್ದಾರೆ. 2015ರಲ್ಲಿ ಆಸ್ಟ್ರೇಲಿಯಾದಲ್ಲಿ ನಡೆದ ವಿಶ್ವಕಪ್ ಟೂರ್ನಿ ವೇಳೆ ಜಿಂಬಾಬ್ವೆ ವಿರುದ್ಧ ಕ್ರೀಸ್​ ಗೈಲ್ 136 ಎಸೆತಗಳಲ್ಲಿ ದ್ವಿಶತಕ ಬಾರಿಸಿದ್ದರು. ಆದರೆ ಇಂದು ಇಶಾನ್ ಕಿಶನ್ ಏಕದಿನ ಕ್ರಿಕೆಟ್​ನಲ್ಲಿ ಹೊಸ ಇತಿಹಾಸ ಸೃಷ್ಟಿಸಿದ್ದಾರೆ. ಆರಂಭಿಕ ಆಟಗಾರನಾಗಿ ಕಣಕ್ಕಿಳಿದಿದ್ದ ಇಶಾನ್ ಕಿಶನ್ ಅಂತಿಮವಾಗಿ 131 ಎಸೆತಗಳಲ್ಲಿ 210 ರನ್ ಬಾರಿಸಿ ಔಟಾದರು. ಇಶಾನ್​ ಒಟ್ಟು 24 ಬೌಂಡರಿ ಮತ್ತು 10 ಫೋರ್​ಗಳನ್ನು ಬಾರಿಸಿದ್ದರು.

ಕೊಹ್ಲಿ ವಿರಾಟ ಪ್ರದರ್ಶನ:

ಒಂದೆಡೆ ಇಶಾನ್ ಕಿಶನ್ ಅಬ್ಬರದ ದ್ವಿಶತಕ ಬಾರಿಸಿದ್ರೆ, ಮತ್ತೊಂದೆಡೆ ವಿರಾಟ್​ ಕೊಹ್ಲಿ ಕೂಡ ಭರ್ಜರಿ ಶತಕ ಬಾರಿಸಿದ್ದಾರೆ. 91 ಎಸೆತಗಳಲ್ಲಿ 113 ರನ್​ ಗಳಿಸುವ ಮೂಲಕ ಏಕದಿನ ಕ್ರಿಕೆಟ್​ನಲ್ಲಿ 44ನೇ ಶತಕದಾಟವಾಡಿದ್ದಾರೆ. ಸಚಿನ್​ ತೆಂಡೂಲ್ಕರ್ ದಾಖಲೆ ಪುಡಿಗಟ್ಟಲು ವಿರಾಟ್ ಕೊಹ್ಲಿಗೆ ಇನ್ನು ಕೇವಲ 6 ಶತಕಗಳ ಅಗತ್ಯವಿದೆ. ಏಕದಿನ ಕ್ರಿಕೆಟ್​ನಲ್ಲಿ 49 ಶತಗಳನ್ನು ಬಾರಿಸಿರುವ ಸಚಿನ್ ಅತೀ ಹೆಚ್ಚು ಸೆಂಚೂರಿ ಬಾರಿಸಿದ ಹೆಗ್ಗಳಿಕೆ ಹೊಂದಿದ್ದಾರೆ.

suddiyaana