ಪ್ಲೇಆಫ್ಸ್ ಗೆ ಕೈಕೊಟ್ಟ RCB ಸ್ಟಾರ್ಸ್ – ಸಾಲ್ಟ್, ಶೆಫರ್ಡ್, ಜೋಶ್ ಆಡಲ್ವಾ?
ಇಂಜುರಿ ಭೂತ.. ಕಪ್ ಕನಸಿಗೆ ಕೊಳ್ಳಿ?

ಈ ಸೀಸನ್ನಲ್ಲಿ ಆರ್‌ಸಿಬಿ ಆಟಗಾರರೆಲ್ಲಾ ಸಾಲಿಡ್ ಫಾರ್ಮ್ನಲ್ಲಿದ್ದಾರೆ. ಪ್ಲೇಯಿಂಗ್ 11ನಲ್ಲಿ ಆಡಿದೋವ್ರೆಲ್ಲಾ ಪವರ್ಫುಲ್ ಪರ್ಫಾಮೆನ್ಸ್ ಕೊಟ್ಟಿದ್ದಾರೆ. ಇವ್ರ ಈ ಪ್ರದರ್ಶನದಿಂದಲೇ ಆರ್‌ಸಿಬಿ ಈ ಸೀಸನ್ನಲ್ಲಿ ಟ್ರೋಫಿ ಗೆಲ್ಲೋ ಫೇವರೆಟ್ ಟೀಂ ಎನಿಸಿಕೊಂಡಿದೆ. ಬಟ್ ಅಂತಿಮ ನಾಲ್ಕರ ಘಟ್ಟದಲ್ಲಿರೋ ಆರ್ಸಿಬಿಗೆ ಮುಂದಿನ ಪಂದ್ಯಗಳಲ್ಲಿ ಸ್ಟಾರ್ ಆಟಗಾರರೇ ಹೊರಗುಳಿಯೋ ಆತಂಕ ಎದುರಾಗಿದೆ.
ಇದನ್ನೂ ಓದಿ : ಪಾಕ್ ಭಾರತದ ನಡುವೆ ಯುದ್ಧದ ಕಾರ್ಮೋಡ – ಸರ್ವಪಕ್ಷ ಸಭೆಯಲ್ಲಿ ಮಹತ್ವದ ನಿರ್ಧಾರ ತೆಗೆದುಕೊಳ್ತಾರಾ?
ಈ ಸೀಸನ್ನಲ್ಲಿ ಯಶಸ್ವಿಯಾಗಿ ಮುನ್ನುಗ್ಗುತ್ತಿರೋ ರೆಡ್ ಆರ್ಮಿ ಇಲ್ಲೀವರೆಗೆ ಅದ್ಭುತ ಪ್ರದರ್ಶನ ನೀಡಿದೆ. ಆಡಿರುವ 11 ಪಂದ್ಯಗಳಲ್ಲಿ 8 ರಲ್ಲಿ ಜಯ ಗಳಿಸಿದ್ದು ಮೂರರಲ್ಲಿ ಸೋಲನ್ನು ಕಂಡಿದೆ. ಈ ಮೂರೂ ಸೋಲುಗಳು ಹೋಂ ಗ್ರೌಂಡ್ನಲ್ಲಿ. ಸೋ 16 ಅಂಕಗಳೊಂದಿಗೆ ಪಾಯಿಂಟ್ಸ್ ಟೇಬಲ್ನಲ್ಲಿ 2ನೇ ಸ್ಥಾನದಲ್ಲಿರೋ ಬೆಂಗಳೂರು ಬಾಯ್ಸ್ ಪ್ಲೇಆಫ್‌ಗೆ ಬಹುತೇಕ ತನ್ನ ಸ್ಥಾನವನ್ನು ಫಿಕ್ಸ್ ಮಾಡಿಕೊಂಡಿದ.ಎ ಬಟ್ ಇಂಥಾ ಟೈಮಲ್ಲೇ ನಾಲ್ವರು ಆಟಗಾರರು ಮುಂದಿನ ಪಂದ್ಯಗಳಿಗೆ ಆಡ್ತಾರೋ ಇಲ್ಬೋ ಅನ್ನೋ ಚರ್ಚೆ ಶುರುವಾಗಿದೆ. ನಾಯಕ ರಜತ್ ಪಾಟಿದಾರ್, ಆರಂಭಿಕ ಆಟಗಾರ ಫಿಲ್ ಸಾಲ್ಟ್, ವೇಗದ ಬೌಲರ್ ಜೋಶ್ ಹೇಜಲ್‌ವುಡ್ ಮತ್ತು ಆಲ್‌ರೌಂಡರ್ ರೊಮಾರಿಯೊ ಶೆಫರ್ಡ್ ಕಣಕ್ಕಿಳಿಯೋದು ಡೌಟ್ ಎನ್ನಲಾಗ್ತಿದೆ. ಈ ಎಲ್ಲಾ ಆಟಗಾರರು ಅದ್ಭುತ ಫಾರ್ಮ್‌ನಲ್ಲಿದ್ದು ಮ್ಯಾಚ್ ವಿನ್ನಿಂಗ್ ಪರ್ಫಾಮೆನ್ಸ್ ಕೊಟ್ಟಿದ್ದಾರೆ.
ಚೆನ್ನೈ ಸೂಪರ್ ಕಿಂಗ್ಸ್ ವಿರುದ್ಧದ ಪಂದ್ಯದ ವೇಳೆ ನಾಯಕ ರಜತ್ ಪಟಿದಾರ್ ಬೆರಳಿಗೆ ಗಾಯವಾಗಿತ್ತು. ಸೋ ಲಕ್ನೋ ವಿರುದ್ಧ ಆಡ್ತಾರೋ ಇಲ್ವೋ ಅನುಮಾನ ಇದೆ. ಹಾಗೇ ಫಿಲ್ ಸಾಲ್ಟ್ ವೈರಲ್ ಫೀವರ್ನಿಂದ ಬಳಲ್ತಿದ್ದಾರೆ. ಇದೇ ಕಾರಣಕ್ಕೆ ಕಳೆದ ಎರಡು ಪಂದ್ಯಗಳಲ್ಲಿ ಜಾಕೋಬ್ ಬೆಥೆಲ್ ಅವರನ್ನು ಆಡಿಸಲಾಗಿತ್ತು. ಮತ್ತೊಂದೆಡೆ ಆರ್‌ಸಿಬಿ ತಂಡದ ಮಾರಕ ವೇಗಿ ಜೋಶ್ ಹೇಜಲ್‌ವುಡ್ ಭುಜದ ಗಾಯದಿಂದಾಗಿ ಚೆನ್ನೈ ಸೂಪರ್ ಕಿಂಗ್ಸ್ ವಿರುದ್ಧದ ಪಂದ್ಯದಲ್ಲಿ ಆಡಲು ಸಾಧ್ಯವಾಗಲಿಲ್ಲ. ನೆಕ್ಸ್ಟ್ ಮ್ಯಾಚ್ಗೂ ಕಮ್ ಬ್ಯಾಕ್ ಮಾಡೋದು ಡೌಟ್ ಇದೆ. ಇತ್ತ ಸಿಎಸ್‌ಕೆ ವಿರುದ್ಧ ಬೆಂಕಿ ಪರ್ಫಾಮೆನ್ಸ್ ನೀಡಿ ಅರ್ಧಶತಕ ಗಳಿಸಿದ್ದ ಆಲ್‌ರೌಂಡರ್ ರೊಮಾರಿಯೊ ಶೆಫರ್ಡ್ ಕೂಡ ರಾಷ್ಟ್ರೀಯ ಕರ್ತವ್ಯದ ಕಾರಣದಿಂದಾಗಿ ಈ ಸೀಸನ್ನಿಂದ ಹೊರಗುಳಿಯುವ ಸಾಧ್ಯತೆ ಇದೆ.
ಸಿಎಸ್ ಕೆ ವಿರುದ್ಧದ ಪಂದ್ಯದಲ್ಲಿ ರೊಮಾರಿಯೋ ಶೆಫರ್ಡ್ ಬ್ಯಾಟಿಂಗ್ನ ಯಾರೂ ಮರೆಯೋಕೆ ಸಾಧ್ಯನೇ ಇಲ್ಲ. ಕೇವಲ 14 ಎಸೆತಗಳಲ್ಲಿ ಸ್ಪೋಟಕ ಅರ್ಧಶತಕ ಸಿಡಿಸಿ ಆರ್‌ಸಿಬಿ ತಂಡದ ಗೆಲುವಿನ ರೂವಾರಿಯಾಗಿ ಹೊರಹೊಮ್ಮಿದ್ದರು. ಆದ್ರೆ ಶೆಫರ್ಡ್ ಮುಂದಿನ ವಾರ ವೆಸ್ಟ್ ಇಂಡೀಸ್ಗೆ ಹಿಂತಿರುಗುವ ಸಾಧ್ಯತೆಯಿದೆ. ಏಕೆಂದರೆ ಮೇ 21 ರಿಂದ ವೆಸ್ಟ್ ಇಂಡೀಸ್ ತಂಡವು ಐರ್ಲೆಂಡ್ ವಿರುದ್ಧ ಸರಣಿ ಆಡಲಿದ್ದು. ಇದರ ಬೆನ್ನಲ್ಲೇ ಇಂಗ್ಲೆಂಡ್ ವಿರುದ್ಧ ಏಕದಿನ ಸರಣಿ ನಡೆಯಲಿದೆ. ಈ ಸರಣಿಗಾಗಿ ಆಯ್ಕೆ ಮಾಡಲಾದ ವೆಸ್ಟ್ ಇಂಡೀಸ್ ತಂಡದಲ್ಲಿ ರೊಮಾರಿಯೊ ಶೆಫರ್ಡ್ ಕೂಡ ಇದ್ದಾರೆ. ಹೀಗಾಗಿ ಮೇ 17ರ ಬಳಿಕ ತವರಿಗೆ ಹಿಂತಿರುವ ಸಾಧ್ಯತೆ ಹೆಚ್ಚಿದೆ. ಆರ್‌ಸಿಬಿ ತಂಡವು ತನ್ನ ಕೊನೆಯ ಲೀಗ್ ಪಂದ್ಯವನ್ನು ಮೇ 17 ರಂದು ಕೊಲ್ಕತ್ತಾ ವಿರುದ್ಧ ಆಡಲಿದ್ದು, ಈ ಪಂದ್ಯದ ಬಳಿಕ ಶೆಫರ್ಡ್ ರಾಷ್ಟ್ರೀಯ ತಂಡವನ್ನು ಸೇರಿಕೊಳ್ಳಲು ಕೆರಿಬಿಯನ್ ದ್ವೀಪಕ್ಕೆ ವಾಪಸ್ ಆಗಬಹುದು. ಹೀಗಾಗಿ ಆರ್ ಸಿಬಿಯ ಪ್ಲೇಆಫ್ ಮ್ಯಾಚ್ಗಳಲ್ಲಿ ಶೆಫರ್ಡ್ ಆಡೋದು ಡೌಟ್ ಇದೆ.
ಇನ್ನು ಇದೆಲ್ಲದ್ರ ನಡುವೆ ನಂಬರ್ 3 ಸ್ಲಾಟ್ನಲ್ಲಿ ಕನ್ಸಿಸ್ಟೆನ್ಸಿ ಪರ್ಫಾಮೆನ್ಸ್ ಕೊಡ್ತಿದ್ದ ಕನ್ನಡಿಗ ದೇವದತ್ ಪಡಿಕ್ಕಲ್ ಈ ಸೀಸನ್ನಿಂದ ರೂಲ್ಡ್ ಔಟ್ ಆಗಿದ್ದಾರೆ. ರೈಟ್ ಹಾರ್ಮ್ ಸ್ಟ್ರಿಂಗ್ ಗಾಯಕ್ಕೆ ಒಳಗಾಗಿರುವ ಪಡಿಕ್ಕಲ್ ಆರ್ಸಿಬಿಯ ಉಳಿದ ಎಲ್ಲಾ ಪಂದ್ಯಗಳಿಂದ ಹೊರಗುಳಿಯಲಿದ್ದಾರೆ. ಪಡಿಕ್ಕಲ್ ಬದಲಿಗೆ ಮತ್ತೊಬ್ಬ ಕನ್ನಡಿಗ ಮಯಾಂಕ್ ಅಗರ್ವಾಲ್ ಆಯ್ಕೆಯಾಗಿದ್ದಾರೆ. ಅದು ಕೂಡ 12 ವರ್ಷಗಳ ಬಳಿಕ ಎಂಬುದು ವಿಶೇಷ. 2011 ರಲ್ಲಿ ಆರ್ ಸಿಬಿ ಪರ ಕಣಕ್ಕಿಳಿಯೋ ಮೂಲಕವೇ ಮಯಾಂಕ್ ಐಪಿಎಲ್ ಕರಿಯರ್ ಆರಂಭಿಸಿದ್ದರು. 2023 ಮತ್ತು 24ರಲ್ಲಿ ಹೈದ್ರಾಬಾದ್ ಪರ ಆಡಿದ್ದ ಮಯಾಂಕ್ರನ್ನ ಈ ಬಾರಿಯ ಮೆಗಾ ಹರಾಜಿನಲ್ಲಿ ಯಾವುದೇ ಫ್ರಾಂಚೈಸಿ ಖರೀದಿಸಿರಲಿಲ್ಲ. ಇದೀಗ ಬದಲಿ ಆಟಗಾರನಾಗಿ ಆರ್‌ಸಿಬಿ ತಂಡಕ್ಕೆ ರಿ ಎಂಟ್ರಿ ಕೊಟ್ಟಿದ್ದಾರೆ. ಮಯಾಂಕ್ ಅಗರ್ವಾಲ್ ಅವರನ್ನು 1 ಕೋಟಿ ರೂಪಾಯಿಗೆ ಆರ್‌ಸಿಬಿ ತಂಡಕ್ಕೆ ಸೇರಿಸಿಕೊಳ್ಳಲಾಗಿದೆ.
ಇನ್ನು ಲಕ್ನೋ ವಿರುದ್ಧದ ಪಂದ್ಯದಲ್ಲಿ ಸಾಲ್ಟ್ ಮತ್ತು ಜೋಶ್ ಹೇಜಲ್ ವುಡ್ ಕಮ್ ಬ್ಯಾಕ್ ಬಗ್ಗೆ ಆರ್ ಸಿಬಿ ಮೆಂಟರ್ ದಿನೇಶ್ ಕಾರ್ತಿಕ್ ಮಾಹಿತಿ ನೀಡಿದ್ದಾರೆ. ಶುಕ್ರವಾರದ ಪಂದ್ಯಕ್ಕೆ ಸಾಲ್ಟ್ ಮತ್ತು ಜೋಶ್ ಕಮ್ ಬ್ಯಾಕ್ ಮಾಡಬಹುದು ಎಂದಿದ್ದಾರೆ. ಬಟ್ ಕನ್ಫರ್ಮ್ ಆಗಿ ಯಾವುದನ್ನೂ ಹೇಳಿಲ್ಲ.