3 ವರ್ಷ.. ಕರುಣ್‌ ಕಣ್ಣೀರು.. ವರ್ಕೌಟ್..‌ ಡಯಟ್‌.. ರೀ ಎಂಟ್ರಿ! – ಕನ್ನಡಿಗನ ಸಕ್ಸಸ್‌ ಸ್ಟ್ರೆಂಥ್‌ ಇದಾ?

3 ವರ್ಷ.. ಕರುಣ್‌ ಕಣ್ಣೀರು.. ವರ್ಕೌಟ್..‌ ಡಯಟ್‌.. ರೀ ಎಂಟ್ರಿ! – ಕನ್ನಡಿಗನ ಸಕ್ಸಸ್‌ ಸ್ಟ್ರೆಂಥ್‌ ಇದಾ?

ಕರುಣ್ ನಾಯರ್‌.. 1077 ದಿನಗಳ ಕಾಯುವಿಕೆಯ ಬಳಿಕ ಭರ್ಜರಿ ಕಮ್‌ಬ್ಯಾಕ್‌ ಮಾಡಿದ್ದಾರೆ. ಐಪಿಎಲ್‌ 2025ರಲ್ಲಿ ಡೆಲ್ಲಿ ಕ್ಯಾಪಿಟಲ್ಸ್‌ ಪರ ಆಡ್ತಿದ್ದಾರೆ. ಸಿಕ್ಕ ಅವಕಾಶವನ್ನ ಎರಡು ಕೈಗಳಿಂದ ಬಾಚಿಕೊಂಡ ಕರುಣ್‌, ಬ್ಯಾಟಿಂಗ್‌ ಮೂಲಕ ಕಮಾಲ್‌ ಮಾಡ್ತಿದ್ದಾರೆ. ಡೆಲ್ಲಿ ತಂಡದ ಪರ ಆಡಿದ ಮೊದಲ ಪಂದ್ಯದಲ್ಲೇ ಸ್ಫೋಟಕ ಅರ್ಧಶತಕ ಸಿಡಿಸಿ ತನ್ನ ಸಾಮರ್ಥ್ಯ ಏನು ಅಂತಾ ಸಾಭೀತು ಪಡಿಸಿದ್ರು.. ಇದೀಗ ಕನ್ನಡಿಗ ಕರುಣ್‌ ನಾಯರ್‌ ಭರ್ಜರಿ ಕಮ್‌ಬ್ಯಾಕ್‌ ಮಾಡ್ತಿದ್ದಂತೆ ಅವ್ರ ಫ್ಯಾನ್ಸ್‌ ಫಿಟ್‌ನೆಸ್‌ ಸೀಕ್ರೆಟ್‌ ಏನು ಅಂತಾ ತಿಳಿದುಕೊಳ್ಳಲು ಉತ್ಸುಕರಾಗಿದ್ದಾರೆ.

ಇದನ್ನೂ ಓದಿ: ಭಾರತ ಪಾಕ್ ಮೇಲೆ ದಾಳಿ ಮಾಡಿದ್ರೆ ಚೀನಾದ ಜೊತೆ ಕೈ ಜೋಡಿಸಿ- ಬಾಂಗ್ಲಾ ಮಾಜಿ ಜನರಲ್ ಫಜ್ಲುರ್ ರೆಹಮಾನ್

ಡಿಯರ್‌ ಕ್ರಿಕೆಟ್‌.. ನನಗೆ ಒಂದು ಚಾನ್ಸ್ ಕೊಡು.. ಅಂತಾ 2022 ಕನ್ನಡಿಗ ಟ್ವೀಟ್‌ ಮಾಡಿರೋದು ನಿಮ್ಗೆಲ್ಲಾ ಗೊತ್ತೇ ಇದೆ. ಒಂದೂ ಚಾನ್ಸ್‌ ಸಿಕ್ಕಿಲ್ಲ.. ಇನ್ನು ಪ್ರ್ಯಾಕ್ಟೀಸ್‌ ಯಾಕೆ ಬೇಕು.. ಅವಕಾಶ ಸಿಕ್ಕಿದ್ಮೇಲೆ ನೋಡೋಣ ಅಂತಾ ಕರುಣ್‌ ಕೈಕಟ್ಟಿ ಕುಳಿತಿಲ್ಲ.. ನಿರಂತರ ಪ್ರ್ಯಾಕ್ಟೀಸ್‌ ಮಾಡಿದ್ರು.. ಫಿಟ್‌ನೆಸ್‌ ಕಾಪಾಡಿಕೊಂಡು ಬಂದ್ರು.. ಅದಾದ್ಮೇಲೆ ದೇಶೀಯ ಕ್ರಿಕೆಟ್‌ ಗೆ ಪಾದಾರ್ಪಣೆ ಮಾಡಿ ದಾಖಲೆಗಳನ್ನು ಬರೆದರು. ಇದ್ರಿಂದಾಗೇ 2025ರಲ್ಲಿ ಐಪಿಎಲ್‌ನಲ್ಲಿ ಚಾನ್ಸ್‌ ಗಿಟ್ಟಿಸಿಕೊಂಡ್ರು..  ಮೆಗಾ ಹರಾಜಿನಲ್ಲಿ ಮೂಲ ಬೆಲೆ 50 ಲಕ್ಷ ರೂಪಾಯಿಗೆ ಡೆಲ್ಲಿ ಕ್ಯಾಪಿಟಲ್ಸ್ ತಂಡಕ್ಕೆ ಸೇರಿದ್ರು.. ಆದ್ರೆ ಐಪಿಎಲ್‌ನಲ್ಲೂ ಮೊದಲ ಮೂರು ಮ್ಯಾಚ್‌ನಲ್ಲಿ ಕನ್ನಡಿಗ ಬೆಂಚ್‌ ಕಾಯಿಸಲಷ್ಟೇ ಸೀಮಿತವಾಗಿದ್ರು.. ಕನ್ನಡಿಗ ಒಂದೇ ಒಂದು ಅವಕಾಶಕ್ಕಾಗಿ ಕಾದಿದ್ರು..  ಕೊನೆಗೂ ಅವರ ಆಸೆ ಈಡೇರಿತು. ಸಿಕ್ಕ ಆವಕಾಶವನ್ನು ಎರಡೂ ಕೈಗಳಲ್ಲಿ ಬಾಚಿಕೊಂಡರು. ಇಡೀ ಕ್ರಿಕೆಟ್‌ ಜಗತ್ತು ಅವರ ಬಗ್ಗೆ ಮಾತನಾಡುವಂತೆ ಮಾಡಿದರು. ಮುಂಬೈ ಇಂಡಿಯನ್ಸ್ ವಿರುದ್ಧದ ಪಂದ್ಯದಲ್ಲಿ ಫಾಫ್ ಡುಪ್ಲೆಸಿಸ್ ಗಾಯಗೊಂಡಿದ್ರು.. ಡುಪ್ಲೆಸಿಸ್  ಬದಲು ಇಂಪ್ಯಾಕ್ಟ್ ಪ್ಲೇಯರ್ ಆಗಿ ಕಣಕ್ಕಿಳಿದ ಕರುಣ್ ನಾಯರ್ ಹೊಡಿ ಬಡಿ ಆಟ ಆಡಿದ್ರು.. 40 ಎಸೆತಗಳಲ್ಲಿ 89 ರನ್ ಗಳಿಸಿದ ಕರುಣ್ ನಾಯರ್, ತನ್ನ ಸಾಮರ್ಥ್ಯವೇನು ಎನ್ನುವುದನ್ನು ಕ್ರಿಕೆಟ್ ಜಗತ್ತಿಗೆ ತೋರಿಸಿದ್ರು.. ಎರಡು ವರ್ಷ ಐಪಿಎಲ್‌ನಿಂದ ದೂರವಿದ್ದರೂ ಅವರು ತಮ್ಮ ಬ್ಯಾಟಿಂಗ್ ಸುಧಾರಣೆಯತ್ತ ಕೆಲಸ ಮಾಡಿದ್ದು ಮೊದಲ ಪಂದ್ಯದಲ್ಲೇ ಗೊತ್ತಾಗಿದೆ. ಇದೀಗ ಕರುಣ್‌ ಫಿಟ್‌ನೆಸ್‌ ಕಾಪಾಡಿದ್ದು ಹೇಗೆ ಅನ್ನೋ ಗುಟ್ಟು ರಿವೀಲ್‌ ಆಗಿದೆ.

ಅಂದ್ಹಾಗೆ ಕರುಣ್‌ ನಾಯರ್‌ ತಮ್ಮ ಫಿಟ್‌ನೆಸ್‌ ಕಾಪಾಡಲು ನಾನಾ ತಂತ್ರ ಉಅನುಸರಿಸ್ತಿದ್ದಾರೆ.  ಕರುಣ್‌ ನಾಯರ್‌ ತಾನು ಫುಡ್ಡೀ ಅಂತಾ ಈ ಹಿಂದೆ ಹೇಳಿಕೊಂಡಿದ್ದಾರೆ. ತಾನು ತಿನ್ನೋ ವಿಷಯದಲ್ಲಿ ಹೆಚ್ಚು ಕಂಟ್ರೋಲ್‌ ಮಾಡಲ್ಲ.. ಆದಷ್ಟು ಹೆಲ್ದೀ ಫುಡ್‌ ತಿನ್ನುತ್ತೇನೆ ಅಂತಾ ಹೇಳಿಕೊಂಡಿದ್ದಾರೆ. ಕರುಣ್‌ ಬೆಳಗ್ಗೆ ಜಿಮ್‌ ಗೆ ಹೋಗೋ ಮುನ್ನ ಕಿತ್ತಾಳೆ, ಬಾಳೆಹಣ್ಣು ಮುಂತಾದ ಫ್ರೂಟ್ಸ್‌ ನ ತಿಂತಾರೆ. ಜಿಮ್‌ ನಿಂದ ಬಂದ್ಮೇಲೆ ಲಘು ಉಪಹಾರ ಸೇವಿಸ್ತಾರೆ. ಇನ್ನು ಮಧ್ಯಾಹ್ನ ಬ್ರೌನ್‌ ರೈಸ್‌ ತಿಂತಾರೆ. ಅದ್ರ ಜೊತೆ ವೆಜಿಟೇಬಲ್‌ ಕರ್ರಿ..  ಮತ್ತು ಕೋಳಿ ಅಥವಾ ಬೇಯಿಸಿದ ಮೀನಿನ್ನ ತಿಂತಾರೆ.. ಇನ್ನು ನಿಯಮಿತವಾಗಿ ಹುರಿದ ಮಖಾನಾ, ವಾಲ್ನಟ್ ಮತ್ತು ಒಣದ್ರಾಕ್ಷಿ ಮುಂತಾದ ಡ್ರೈಫ್ಯೂಟ್ಸ್‌ ಸೇವಿಸ್ತಾರೆ.

ಇನ್ನು ಕರುಣ್‌ ನಾಯರ್‌ ತಮ್ಮ ಫಿಟ್‌ನೆಸ್‌ಗಾಗಿ ತರಬೇತುದಾರರ ಮಾರ್ಗದರ್ಶನವನ್ನು ಅನುಸರಿಸುತ್ತಾರೆ.. ಟೈಮ್‌ ಸಿಕ್ಕಾಗಲೆಲ್ಲಾ ಫಿಟ್‌ ಆಗಿರಲು ಜಿಮ್‌ ನಲ್ಲಿ ದೇಹವನ್ನ ದಂಡಿಸ್ತಾರೆ.. ಅಲ್ಲದೇ ಓಡುವುದು ಕೂಡ ಕರುಣ್‌ ಫಿಟ್‌ನೆಸ್ ದಿನಚರಿಯ ಒಂದು ಭಾಗವಾಗಿದೆ. ಇನ್ನು ಕನ್ನಡಿಗ ಫುಟ್‌ಬಾಲ್ ಮತ್ತು ಟೇಬಲ್ ಟೆನಿಸ್ ಆಟ ಆಡ್ತಾರೆ. ಕರುಣ್‌ ಕರ್ನಾಟಕ ರಣಜಿ ತಂಡದ ಸದಸ್ಯರೊಂದಿಗೆ ಫುಟ್‌ಬಾಲ್ ಆಡುತ್ತಾರೆ.. ಫ್ರೀ ಅದಾಗ  ಟೇಬಲ್ ಟೆನಿಸ್ ಆಡುತ್ತಾರೆ. ಅದ್ರೊಂದಿಗೆ ಗಾಲ್ಫ್  ಕೂಡ ಆಡಲು ಪ್ರಾರಂಭಿಸಿದ್ದಾರೆ, ಇದು ಮೈಂಡ್‌ ಫ್ರೀ ಆಗಿರಲು ಹಾಗೇ ಏಕಾಗ್ರತೆ ಹೆಚ್ಚಿಸಲು  ಸಹಾಯಕವಾಗಿದೆ. ಅಷ್ಟೇ ಅಲ್ಲದೇ ಫಿಟ್ ಆಗಿರಲು ಹೆಲ್ಪ್‌ ಆಗುತ್ತೆ ಎಂದು ಅವರು ಹೇಳಿದ್ದಾರೆ. ಹೀಗೆ ಕರುಣ್‌ ಡಯಟ್‌ ಮಾಡೋದ್ರ ಮೂಲಕ ತಮ್ಮ ಫಿಟ್‌ನೆಸ್‌ ಕಾಪಾಡಿಕೊಂಡಿದ್ದಾರೆ. ಇದ್ರಿಂದಾಗೇ ಕರುಣ್‌ ಮೈದಾನದಲ್ಲಿ ಮಿಂಚಲು ಸಾಧ್ಯವಾಗಿದ್ದು.

Shwetha M

Leave a Reply

Your email address will not be published. Required fields are marked *