43 ಎಕರೆ ಧೋನಿ ಫಾರ್ಮ್.. IPL ಬಳಿಕ MS ಕೃಷಿ ಬದುಕು – ನಿವೃತ್ತಿಗೆ ಕೂಲ್ ಕ್ಯಾಪ್ಟನ್ ರೆಡಿ

ಮಹೇಂದ್ರ ಸಿಂಗ್ ಧೋನಿ ಭಾರತ ಕಂಡ ಶ್ರೇಷ್ಠ ನಾಯಕರಲ್ಲಿ ಒಬ್ಬರು. ವಿಶ್ವದಲ್ಲಿ ಐಸಿಸಿಯ ಎಲ್ಲಾ ಮಾದರಿಯ ಕಪ್ ಗೆದ್ದ ಏಕೈಕ ನಾಯಕ. ಸದ್ಯ ಧೋನಿ ಈಗ ಐಪಿಎಲ್‌ನಲ್ಲಿ ಬ್ಯೂಸಿಯಾಗಿದ್ದಾರೆ. ಚೆನ್ನೈ ತಂಡದ ನಾಯಕನಾಗಿ ತಂಡವನ್ನ ಮುನ್ನಡಿಸ್ತಿದ್ದಾರೆ. ಆದ್ರೆ ಬಾರಿ ಈ ಕೂಲ್ ಕ್ಯಾಪ್ಟನ್ ಬ್ಯಾಟ್ ಯಾಕೋ ಸೈಲೆಂಟ್ ಆಗಿದೆ. ಧೋನಿ ಬ್ಯಾಟಿಂಗ್ ಖದರ್ ನೋಡದೇ ಫ್ಯಾನ್ಸ್ ಬೇಜಾರು ಆಗಿದ್ದಾರೆ. ಇತ್ತೀಚೆಗಷ್ಟೇ ತಲಾ ನಿವೃತ್ತಿ ತೆಗೆದು ಕೊಳ್ತಾರಾ ಅನ್ನೋ ಪ್ರಶ್ನೆ ಫ್ಯಾನ್ಸ್ ನ ಕಾಡಿತ್ತು. ಆದ್ರೆ ಕೂಲ್ ಕ್ಯಾಪ್ಟನ್ IPL ನಿವೃತ್ತಿ ಬಗ್ಗೆ ಸ್ಪಷ್ಟನೆ ನೀಡಿದ್ರು. ತಲಾ ಸದ್ಯಕ್ಕಂತೂ ಐಪಿಎಲ್ ಗೆ ನಿವೃತ್ತಿ ಕೊಡಲ್ಲ ಅನ್ನೋದು ಕನ್ಫರ್ಮ್ ಆಯ್ತು.. ಆದ್ರೆ ತಲಾ ನಿವೃತ್ತಿ ಬಳಿಕ ಏನ್ ಮಾಡ್ತಾರೆ ಅನ್ನೋ ಕ್ಯೂರಿಯಾಸಿಟಿ ಫ್ಯಾನ್ಸ್ ಗೆ ಇದ್ದೇ ಇದೆ.
ಇದನ್ನೂ ಓದಿ: CSk ವಿರುದ್ಧದ ಮ್ಯಾಚ್‌ಗೂ ಮುನ್ನವೇ RCBಗೆ ಶಾಕ್ – ಸ್ಪೋಟಕ ಬ್ಯಾಟರ್ ಇಂದಿನ ಪಂದ್ಯಕ್ಕೂ ಗೈರು!
ಎಂ ಎಸ್ ಧೋನಿ.. ಅದ್ಭುತ ವಿಕೆಟ್ ಕೀಪರ್.. ಅದ್ಭುತ ಬ್ಯಾಟರ್.. ಅದ್ಭುತ ಫಿನಿಶರ್.. ಅದ್ಭುತ ಕ್ಯಾಪ್ಟನ್.. ಹೀಗೆ ಅದ್ಭುತಗಳೇ ಮಾಹಿ ಹೆಸರಿನೊಂದಿಗೆ ಅಂಟಿಕೊಂಡಿದೆ. ಅಂತರಾಷ್ಟ್ರೀಯ ಪಂದ್ಯಗಳಿಗೆ ನಿವೃತ್ತಿ ಘೋಷಿಸಿರುವ ಧೋನಿ ಈಗ ಐಪಿಎಲ್ ನಲ್ಲಿ ಆಡ್ತಿದ್ದಾರೆ. ಐಪಿಎಲ್ ನಿವೃತ್ತಿಯ ನಂತ್ರ ತಲಾ ಏನ್ ಮಾಡ್ತಾರೆ ಅನ್ನೋ ಕ್ಯೂರಿಯಾಸಿಟಿ ಅಭಿಮಾನಿಗಳಲ್ಲಿ ಮನೆ ಮಾಡಿದೆ. ಕೂಲ್ ಕ್ಯಾಪ್ಟನ್ ಕ್ರಿಕೆಟ್ ಜೊತೆಗೆ ಬೇರೆ ಬೇರೆ ಕ್ಷೇತ್ರಗಳಲ್ಲೂ ಗುರುತಿಸಿಕೊಂಡಿದ್ದಾರೆ. ಕ್ರಿಕೆಟ್, ಜಾಹಿರಾತು, ಉದ್ಯಮ ಕ್ಷೇತ್ರಗಳಲ್ಲಿ ಸಕ್ಸಸ್ ಕಂಡಿರುವ ಮಾಹಿ ಕೃಷಿ ಕ್ಷೇತ್ರದಲ್ಲೂ ಗುರುತಿಸಿಕೊಂಡಿದ್ದಾರೆ.
ಕೂಲ್ ಕ್ಯಾಪ್ಟನ್ ಸಾವಯವ ಕೃಷಿಯನ್ನು ಉತ್ತೇಜಿಸುತ್ತಾರೆ. ಹೀಗಾಗಿ ಅವ್ರು ರಾಂಚಿಯ ಸೆಂಬೋ ಗ್ರಾಮದಲ್ಲಿ 43 ಎಕರೆ ಪ್ರದೇಶದಲ್ಲಿ ಈಜಾ ಫಾರ್ಮ್ಅನ್ನ ನಡೆಸ್ತಿದ್ದಾರೆ. ಈ ಫಾರ್ಮ್‌ನಲ್ಲಿ ಸಾವಯವ ಕೃಷಿಯನ್ನು ಪ್ರಾರಂಭಿಸಿದ್ದಾರೆ. ಸ್ಟ್ರಾಬೆರಿ, ಕ್ಯಾಪ್ಸಿಕಂ, ಡ್ರ್ಯಾಗನ್ ಫ್ರೂಟ್, ಕಲ್ಲಂಗಡಿ, ಸೋರೆಕಾಯಿ, ಬೆಂಡೆಕಾಯಿ, ಬ್ರೊಕೊಲಿ, ಟೊಮೇಟೊ ಸೇರಿದಂತೆ ಹಲವು ಬಗೆಯ ತರಕಾರಿಗಳನ್ನು ಮಾಹಿ ಅವರ ಜಮೀನಿನಲ್ಲಿ ಬೆಳಿತಿದ್ದಾರೆ.
ಇನ್ನು ಮಾಹಿ ಕೋಳಿಗಳನ್ನ ಕೂಡ ಸಾಕ್ತಿದ್ದಾರೆ. ಧೋನಿ ಫಾರ್ಮ್‌ನಲ್ಲಿ ಕಡಕ್ನಾಥ್ ಜಾತಿಯ ಕೋಳಿಗಳನ್ನು ದೊಡ್ಡ ಪ್ರಮಾಣದಲ್ಲಿ ಸಾಕಲಾಗುತ್ತಿದೆ. ಈದ್ರ ಜೊತೆ ಕೋಳಿ ಮೊಟ್ಟೆ, ಹಾಗೂ ಕೋಳಿ ಮಾಂಸವನ್ನ ದೊಡ್ಡ ಪ್ರಮಾಣದಲ್ಲಿ ಸೇಲ್ ಮಾಡ್ತಿದ್ದಾರೆ. ಈಜಾ ಫಾರ್ಮ್ನ ವಾಟ್ಸಾಪ್ ಗ್ರೂಪ್ ಮೂಲಕ ಆರ್ಡರ್ ಮಾಡಿದರೆ, ಮನೆಗೆ ಡೆಲಿವರಿ ಮಾಡ್ತಾರೆ. ಅಷ್ಟೇ ಅಲ್ಲದೇ ಈಜಾ ಫಾರ್ಮ್‌ನ ಔಟ್‌ಲೆಟ್‌ನಲ್ಲಿಯೂ ಮಾರಾಟ ಮಾಡಲಾಗುತ್ತದೆ.
ಮಹೇಂದ್ರ ಸಿಂಗ್ ಧೋನಿ ಫಾರ್ಮ್‌ನಲ್ಲಿ ಭಾರತೀಯ ತಳಿಯ ದೇಸಿಗಿರ್ ಹಸು, ಸೆಹ್ವಾಲ್ ಮತ್ತು ಫ್ರೈಸೆನ್ ತಳಿಯ ಸುಮಾರು 300 ಹಸುಗಳನ್ನು ಸಾಕಲಾಗ್ತಿದೆ. ಇದ್ರ ಹಾಲನ್ನ ಮಾರಾಟ ಮಾಡಲಾಗ್ತಿದೆ. ಪ್ರತಿನಿತ್ಯ ಈಜಾ ಫಾರ್ಮ್‌ನ ಅಂಗಡಿಯಲ್ಲಿ ಹಾಲನ್ನು ಮಾರಾಟ ಮಾಡಲಾಗುತ್ತಿದೆ.
ತರಕಾರಿ, ಹಣ್ಣು, ಕೋಳಿ ಸಾಕಿರುವ ಧೋನಿ ಈಗ ತಮ್ಮ ಜಮೀನಿನಲ್ಲಿ ಮೀನುಗಳನ್ನು ಸಾಕುತ್ತಿದ್ದಾರೆ. ಮೀನು ಸಾಕಣೆಗಾಗಿಯೇ ಎರಡು ದೊಡ್ಡ ಕೊಳಗಳನ್ನು ನಿರ್ಮಿಸಲಾಗಿದೆ, ಅದರಲ್ಲಿ ರೆಹು, ಕಾಟ್ಲಾ ಮತ್ತು ಟೆಲ್ಪಿಯಾ ಎಂಬ ಜಾತಿಯ ಮೀನುಗಳನ್ನು ಸಾಕಲಾಗುತ್ತಿದೆ. ಈ ಮೀನುಗಳನ್ನ ಕೂಡ ಧೋನಿ ಮಾರಾಟ ಮಾಡ್ತಿದ್ದಾರೆ.
ಇದರೊಂದಿಗೆ ಆಲ್ ಸೀಸನ್ ಫಾರ್ಮ್ ಫ್ರೆಶ್ ಏಜೆನ್ಸಿ ಮೂಲಕ ಧೋನಿ ಅವರ ಫಾರ್ಮ್‌ನಲ್ಲಿ ಬೆಳೆದ ಹಣ್ಣುಗಳು ಮತ್ತು ತರಕಾರಿಗಳನ್ನು ದುಬೈ ಮತ್ತು ಗಲ್ಫ್ ದೇಶಗಳಿಗೆ ಕಳುಹಿಸಲಾಗುತ್ತದೆ. ಸದ್ಯ ಧೋನಿಯ ಇಜಾ ಫಾರ್ಮ್‌ನಲ್ಲಿ ಸುಮಾರು 150 ಕ್ಕೂ ಅಧಿಕ ಮಂದಿ ಕೆಲಸ ಮಾಡುತ್ತಿದ್ದಾರೆ. ಧೋನಿ ಅವರ ಹಿರಿಯ ಸಹೋದರ ನರೇಂದ್ರ ಸಿಂಗ್ ಧೋನಿ ಮತ್ತು ಅವರ ಆಪ್ತರು ಫಾರ್ಮ್ ಹೌಸ್ ಜವಾಬ್ದಾರಿಯನ್ನು ನಿಭಾಯಿಸುತ್ತಿದ್ದಾರೆ.
ಇನ್ನು ನೇಮ್ ಫೇಮ್, ಹಣ-ಆಸ್ತಿ, ಅಭಿಮಾನ ಎಲ್ಲವನ್ನೂ ಸಂಪಾದಿಸಿರುವ ಧೋನಿ, ಕೃಷಿಗೆ ಹೆಚ್ಚು ಮಹತ್ವ ಕೊಟ್ಟಿದ್ಯಾಕೆ ಅನ್ನೋ ಪ್ರಶ್ನೆ ನಿಮ್ಮನ್ನ ಕಾಡ್ಬೋದು. ಕೃಷಿಯ ಕಡೆಗೆ ಹೆಜ್ಜೆ ಹಾಕಲು ಏನ್ ಕಾರಣ ಅಂತಾ ಧೋನಿಯೇ ಹೇಳಿದ್ದಾರೆ. ನಾನು ಹುಟ್ಟಿದ್ದು ಪುಟ್ಟ ಊರಿನಲ್ಲಿ. ಬಾಲ್ಯದಿಂದಲೂ ರಾಂಚಿಯಲ್ಲಿ ಕೃಷಿಯನ್ನು ನೋಡುತ್ತಾ ಬೆಳೆದವನು. ಮರ, ಗಿಡಗಳು ಎಂದರೆ ಬಲು ಪ್ರೀತಿ. ಹಣ್ಣುಗಳು ಹೇಗೆ ಬೆಳೆಯುತ್ತವೆ? ಹೂಗಳು ಹೇಗೆ ಅರಳುತ್ತವೆ ಎಂಬುದನ್ನು ತಿಳಿಯುವುದು ನನಗೆ ಕುತೂಹಲ. ನಾನು ಕೂಡ ಕೃಷಿ ಮಾಡಬೇಕೆಂಬ ಆಸೆ ಆಗಲಿಂದಲೂ ಇತ್ತು. ಆದರೆ ಅದಕ್ಕೆ ಸಮಯ ಕೂಡಿ ಬಂದಿರಲಿಲ್ಲ. ಆದರೆ, ಕೋವಿಡ್ ವಿರಾಮದಿಂದ ನನಗೆ ಬೇಕಾದ ಸಮಯ ಸಿಕ್ಕಿತು. ಹಂತಹಂತವಾಗಿ ಬೆಳೆ ಬೆಳೆಯುತ್ತಿದ್ದೇನೆ. ನನ್ನ ಕನಸು ಕೂಡ ಈಡೇರಿದೆ. ಈ ಕ್ಷೇತ್ರದಲ್ಲಿ ನನಗೆ ಸಂತೃಪ್ತಿದೆ ಇದೆ ಎಂದು ಧೋನಿ ಹೇಳ್ಕೊಂಡಿದ್ದಾರೆ.