CSk ವಿರುದ್ಧದ ಮ್ಯಾಚ್‌ಗೂ ಮುನ್ನವೇ RCBಗೆ ಶಾಕ್‌ – ಸ್ಪೋಟಕ ಬ್ಯಾಟರ್‌ ಇಂದಿನ ಪಂದ್ಯಕ್ಕೂ ಗೈರು!

CSk ವಿರುದ್ಧದ ಮ್ಯಾಚ್‌ಗೂ ಮುನ್ನವೇ RCBಗೆ ಶಾಕ್‌ – ಸ್ಪೋಟಕ ಬ್ಯಾಟರ್‌ ಇಂದಿನ ಪಂದ್ಯಕ್ಕೂ ಗೈರು!

ಎಂ ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ಇಂದು ಆರ್‌ಸಿಬಿ ಹಾಗೂ ಸಿಎಸ್‌ಕೆ ಮ್ಯಾಚ್‌ ನಡಿತಾ ಇದೆ. ಮ್ಯಾಚ್‌ಗೆ ಕೆಲವೇ ಗಂಟೆಗಳು ಬಾಕಿ ಇರುವಾಗಲೇ ಆರ್‌ಸಿಬಿಗೆ ಶಾಕ್‌ ಎದುರಾಗಿದೆ. ತಂಡದ ಸ್ಫೋಟಕ ಬ್ಯಾಟ್ಸ್​ಮನ್​ ಓಪನರ್ ಫಿಲ್ ಸಾಲ್ಟ್ ಅವರು ಚೆನ್ನೈ ಸೂಪರ್​ ಕಿಂಗ್ಸ್​ ವಿರುದ್ಧ ಕಣಕ್ಕೆ ಇಳಿಯುವುದು ಅನುಮಾನ ಇದೆ.

ಇದನ್ನೂ ಓದಿ: ಭಾರತ ಪಾಕ್ ಮೇಲೆ ದಾಳಿ ಮಾಡಿದ್ರೆ ಚೀನಾದ ಜೊತೆ ಕೈ ಜೋಡಿಸಿ- ಬಾಂಗ್ಲಾ ಮಾಜಿ ಜನರಲ್ ಫಜ್ಲುರ್ ರೆಹಮಾನ್

ಐಪಿಎಲ್‌ 2025ರಲ್ಲಿ ಯಶಸ್ವಿ ಓಟ ಆರಂಭಿಸಿರುವ ಆರ್​ಸಿಬಿ ಈಗಾಗಲೇ ಆಡಿರುವ ಪಂದ್ಯಗಳಲ್ಲಿ 3 ಸೋತು, 7 ರಲ್ಲಿ ಗೆಲವು ಸಾಧಿಸಿದೆ. ಇದೇ ಗೆಲುವನ್ನು ಮುಂದುವರೆಸಲು ರ್​ಸಿಬಿಗೆ ದೊಡ್ಡ ಸಂಕಷ್ಟ ಈಗ ಎದುರಾಗಿದೆ. ಬ್ಯಾಟರ್‌ ಫಿಲ್ ಸಾಲ್ಟ್ ಅವರು ಚೆನ್ನೈ ಸೂಪರ್​ ಕಿಂಗ್ಸ್​ ವಿರುದ್ಧ ಕಣಕ್ಕೆ ಇಳಿಯುವುದು ಅನುಮಾನ ಇದೆ. ಡೆಲ್ಲಿ ಪಂದ್ಯದ ವೇಳೆಯೇ ಅವರು ಅನಾರೋಗ್ಯಕ್ಕೆ ತುತ್ತಾಗಿದ್ದರು. ಜ್ವರದಿಂದ ಬಳಲುತ್ತಿರುವ ಸಾಲ್ಟ್​ ಇನ್ನು ಆರ್​ಸಿಬಿಯ ವೈದ್ಯಕೀಯ ತಂಡದೊಂದಿಗೆ ಇದ್ದಾರೆ. ಶೀಘ್ರದಲ್ಲೇ ಹಿಂದಿರುಗುವ ವಿಶ್ವಾಸವಿದೆ ಎಂದು ಸ್ವತಹ ಕನ್ನಡಿಗ ದೇವದತ್ ಪಡಿಕ್ಕಲ್ ಅವರು ಹೇಳಿದ್ದಾರೆ.

ಫಿಲ್ ಸಾಲ್ಟ್​ ಚೆನ್ನೈ ವಿರುದ್ಧದ ಪಂದ್ಯದಲ್ಲಿ ಆಡುತ್ತಾರೋ, ಇಲ್ವೋ ಎಂದು ಸರಿಯಾಗಿ ಮಾಹಿತಿ ಇಲ್ಲ. ಆದ್ರೆ ಸಾಲ್ಟ್ ಇನ್ನು ವೈದ್ಯಕೀಯ ತಂಡದ ಜೊತೆಗಿದ್ದಾರೆ ಎಂದು ಕನ್ನಡಿಗ ದೇವದತ್ ಪಡಿಕ್ಕಲ್ ಹೇಳಿದ್ದಾರೆ. ಒಂದು ವೇಳೆ ಸಾಲ್ಟ್​ ಕ್ರೀಸ್​ಗೆ ಆಗಮಿಸದಿದ್ದರೇ, ವಿರಾಟ್ ಕೊಹ್ಲಿ ಜೊತೆ ವಿದೇಶಿಯ ಯುವ ಪ್ಲೇಯರ್ ಜಾಕೋಬ್ ಬೆಥೆಲ್​ ಓಪನರ್​ ಆಗಿ ಮೈದಾನಕ್ಕೆ ಎಂಟ್ರಿ ಕೊಡಲಿದ್ದಾರೆ. ​

Shwetha M

Leave a Reply

Your email address will not be published. Required fields are marked *