ಡೆಡ್ ಲೈನ್ ಫಿಕ್ಸ್ ಮಾಡಿದ್ದು ಯತ್ನಾಳ್‌! – ರಾಜೀನಾಮೆ ಬಳಿಕ ಶಿವಾನಂದ ಪಾಟೀಲ್ ಹೇಳಿಕೆ

ಡೆಡ್ ಲೈನ್ ಫಿಕ್ಸ್ ಮಾಡಿದ್ದು ಯತ್ನಾಳ್‌! – ರಾಜೀನಾಮೆ ಬಳಿಕ ಶಿವಾನಂದ ಪಾಟೀಲ್ ಹೇಳಿಕೆ

ಜವಳಿ, ಕಬ್ಬು ಅಭಿವೃದ್ಧಿ, ಸಕ್ಕರೆ ಹಾಗೂ ಕೃಷಿ ಮಾರುಕಟ್ಟೆ ಸಚಿವ ಶಿವಾನಂದ ಎಸ್ ಪಾಟೀಲ್ ತಮ್ಮ ಶಾಸಕ ಸ್ಥಾನಕ್ಕೆ ರಾಜೀನಾಮೆ ಸಲ್ಲಿಸಿದ್ದಾರೆ. ಬಿಜೆಪಿಯ ಉಚ್ಚಾಟಿತ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಸವಾಲನ್ನು ಸ್ವೀಕರಿಸಿ ಈ ಕ್ರಮ ಕೈಗೊಂಡಿರುವುದಾಗಿ ಸ್ಪೀಕರ್ ಯುಟಿ ಖಾದರ್ ಅವರಿಗೆ ಬರೆದ ರಾಜೀನಾಮೆ ಪತ್ರದಲ್ಲಿ ಅವರು ಉಲ್ಲೇಖಿಸಿದ್ದಾರೆ.

ಇದನ್ನೂ ಓದಿ: ತನ್ನ ಪ್ರಜೆಗಳಿಗೆ ಗೇಟ್ ಓಪನ್ ಮಾಡಿದ ಪಾಕ್ – ವಾಘಾ ಗಡಿ ಮೂಲಕ ಮರಳಲು ಪಾಕ್ ಅವಕಾಶ

ಶಾಸಕ ಸ್ಥಾನಕ್ಕೆ ರಾಜೀನಾಮೆ ಸಲ್ಲಿಕೆ ಬಳಿಕ‌ ಮಾತನಾಡಿದ ಸಚಿವ ಶಿವಾನಂದ ಪಾಟೀಲ್‌, ಯತ್ನಾಳ್ ಅವರ ಸವಾಲು ಸ್ವೀಕಾರ ಮಾಡಿ ಸ್ಪೀಕರ್ ಅವರಿಗೆ ರಾಜೀನಾಮೆ ನೀಡಿದ್ದೇನೆ. ಪಕ್ಷಕ್ಕೂ, ಸಿಎಂಗೂ ಇದು ಸಂಬಂಧಿಸಿಲ್ಲ ಎಂದು ಹೇಳಿದರು.

ಡೆಡ್ ಲೈನ್ ಫಿಕ್ಸ್ ಮಾಡಿದ್ದು ಯತ್ನಾಳ್‌.  ಶುಕ್ರವಾರದೊಳಗೆ ರಾಜೀನಾಮೆ ಕೊಡದಿದ್ದರೆ ಅವರಪ್ಪನಿಗೆ ಹುಟ್ಟಿಲ್ಲ ಎಂದಿದ್ದರು. ಅದಕ್ಕೆ ಈಗ ನಾನು ರಾಜೀನಾಮೆ ನೀಡಿದ್ದೇನೆ. ಹೀಗಾಗಿ ಯತ್ನಾಳ್ ಕೂಡ ರಾಜೀನಾಮೆ ಕೊಡಲಿ. ವಿಜಯಪುರದಲ್ಲಾದ್ರೂ ಸರಿ, ಬಸವನಬಾಗೇವಾಡಿಯಲ್ಲಾದ್ರೂ ಸರಿ ಅವರ ಎದುರು ಸ್ಪರ್ಧೆ ಮಾಡುತ್ತೇನೆ ಎಂದು ಘೋಷಣೆ ಮಾಡಿದರು.

ಯತ್ನಾಳ್ ಅವರ ತಂದೆ ತಾಯಿಗಳಿಗೆ ಹುಟ್ಟಿದ್ದಾರೆ. ನಾನು ಆ ಮಾತುಗಳನ್ನ ಆಡಲ್ಲ. ಆದರೆ ನನ್ನ ಪೂರ್ವಜರ ಬಗ್ಗೆ ಪಾಟೀಲ್ ಹೆಸರಿನ ಬಗ್ಗೆ ಮಾತನಾಡಿದ್ದಕ್ಕೆ ನೋವಾಗಿದೆ ಎಂದು ಬೇಸರ ಹೊರ ಹಾಕಿದರು.

ನನ್ನ ಪೂರ್ವಜರು ಹಿಂದೆ ಬೇರೆ ಅಡ್ಡ ಹೆಸರು ಇಟ್ಟುಕೊಂಡಿರಬಹುದು ಗೊತ್ತಿಲ್ಲ. ನನಗೆ ಹುಟ್ಟಿನಿಂದ ಪಾಟೀಲ್ ಅಂತಾ ಹೆಸರು ಇಟ್ಟಿದ್ದಾರೆ. ವೈಯುಕ್ತಿಕವಾಗಿ ತೇಜೋವಧೆ ಮಾಡಿದ್ದಾರೆ. ಮಾತುಗಳನ್ನು ಸಹಿಸಲು ಆಗಲ್ಲ ಎಂದು ಸಿಟ್ಟು ಹೊರಹಾಕಿದರು.

Shwetha M

Leave a Reply

Your email address will not be published. Required fields are marked *