RCB, ಮುಂಬೈಗೆ ಒಂದೇ ಹೆಜ್ಜೆ – 8 ತಂಡದ ಪ್ಲೇ ಆಫ್ ಲೆಕ್ಕಾಚಾರ
GT, DC ಫೈಟ್, ಯಾರಿಗೆ ಚಾನ್ಸ್?

RCB, ಮುಂಬೈಗೆ ಒಂದೇ ಹೆಜ್ಜೆ –  8 ತಂಡದ ಪ್ಲೇ ಆಫ್ ಲೆಕ್ಕಾಚಾರGT, DC ಫೈಟ್, ಯಾರಿಗೆ ಚಾನ್ಸ್?

ಮುಂಬೈ ಮೊದಲ 5 ಪಂದ್ಯದಲ್ಲಿ ಗೆದ್ದಿದ್ದು ಕೇವಲ ಒಂದೇ ಒಂದು ಪಂದ್ಯ. ಮುಂಬೈ ಆಟ ನೋಡಿ ಈ ಸಲ ಪ್ಲೇ ಆಫ್‌ನಿಂದ ಮೊದಲು ಔಟ್ ಆಗೋದು ಮುಂಬೈನೇ ಅಂತ ಅನ್ಸಿತ್ತು. ಆದ್ರೆ 6 ನೇ ಪಂದ್ಯದಿಂದ ಒಂದೇ ಒಂದು ಪಂದ್ಯ ಸೋಲದೇ ಗೆಲುವಿನ ನಾಟಲೋಟ ಮುಂದುವರಿಸಿದೆ. ಟೇಬಲ್ ಬಾಟಂಮ್‌ನಲ್ಲಿದ್ದ ಟೀಂ ಈಗ ಟಾಪ್‌ನಲ್ಲಿದೆ.  ಮುಂಬೈ ಪ್ಲೇಆಪ್‌ ಸ್ಥಾನವನ್ನು ಬಹುತೇಕ ಖಾತ್ರಿ ಪಡೆಸಿಕೊಂಡಿದೆ.

ಮುಂಬೈ ವಿರುದ್ಧ ಸೋತ ರಾಜಸ್ಥಾನ್‌ ರಾಯಲ್ಸ್‌ ಟೂರ್ನಿಯ ನಾಕ್‌ಔಟ್‌ ರೇಸ್‌ನಿಂದ ಹೊರ ಬಿದ್ದ ಎರಡನೇ ತಂಡವಾಗಿದೆ. ಇದಕ್ಕೂ ಮುನ್ನ ಚೆನ್ನೈ ಸೂಪರ್‌ ಕಿಂಗ್ಸ್‌ ಹೊರ ನಡೆದಿತ್ತು. ಆರ್‌ಆರ್‌ ವಿರುದ್ದ ಮುಂಬೈ ತಂಡ ಗೆಲುವು ಪಡೆದ ಬಳಿಕ ಟೂರ್ನಿಯ ಪ್ಲೇಆಫ್ಸ್‌ ಚಿತ್ರಣ ಸಂಪೂರ್ಣ ಬದಲಾಗಿದೆ. ಇದೀಗ ಒಟ್ಟು 8 ತಂಡಗಳು ಪ್ಲೇಆಫ್ಸ್‌ ರೇಸ್‌ನಲ್ಲಿ ಉಳಿದಿವೆ. ಹಾರ್ದಿಕ್‌ ಪಾಂಡ್ಯ ನಾಯಕತ್ವದ ಮುಂಬೈ ಇಂಡಿಯನ್ಸ್‌ ಈ ಋತುವಿನಲ್ಲಿ ಏಳನೇ ಪಂದ್ಯವನ್ನು ಗೆಲ್ಲುವ ಮೂಲಕ 14 ಅಂಕಗಳನ್ನು ಕಲೆ ಹಾಕಿದೆ ಹಾಗೂ ಅತ್ಯುತ್ತಮ ರನ್‌ರೇಟ್‌ನಿಂದ ಟೂರ್ನಿಯ ಅಂಕಪಟ್ಟಿಯಲ್ಲಿ ಅಗ್ರ ಸ್ಥಾನಕ್ಕೇರಿದೆ. ಟೂರ್ನಿಯ ಪ್ಲೇಆಫ್ಸ್‌ಗೆ ಅಧಿಕೃತವಾಗಿ ಅರ್ಹತೆ ಪಡೆಯಲು ಮುಂಬೈ ಇಂಡಿಯನ್ಸ್‌ಗೆ ಇನ್ನು ಕೇವಲ ಒಂದು ಪಂದ್ಯವನ್ನು ಗೆಲ್ಲುವ ಅಗತ್ಯವಿದೆ. ಮತ್ತೊಂದೆಡೆ, ರಾಜಸ್ಥಾನ ರಾಯಲ್ಸ್‌ ತಂಡದ ಪ್ಲೇಆಫ್ಸ್‌ ಕನಸು ಭಗ್ನವಾಗಿದೆ. ಚೆನ್ನೈ ಸೂಪರ್ ಕಿಂಗ್ಸ್ ನಂತರ, ಐಪಿಎಲ್‌ ಟೂರ್ನಿಯ ಪ್ಲೇಆಫ್ಸ್‌ ರೇಸ್‌ನಿಂದ ಹೊರ ಬಿದ್ದ ಎರಡನೇ ತಂಡವಾಗಿ ರಾಜಸ್ಥಾನ್‌ ರಾಯಲ್ಸ್‌ ಹೊರ ಹೊಮ್ಮಿದೆ.

8 ತಂಡಗಳ ನಡುವೆ ಪ್ಲೇ ಆಫ್‌ಗೆ ಪೈಪೋಟಿ

ಈ ಆವೃತ್ತಿಯಲ್ಲಿ ರಾಜಸ್ಥಾನ್ ತನ್ನ 8ನೇ ಸೋಲನ್ನು ಅನುಭವಿಸಿದೆ. ಮುಂಬೈ ಇಂಡಿಯನ್ಸ್‌ ಹಾಗೂ ರಾಜಸ್ಥಾನ್‌ ರಾಯಲ್ಸ್‌ ನಡುವಣ ಪಂದ್ಯದ ಬಳಿಕ ಎಂಟು ತಂಡಗಳು ಪ್ಲೇಆಫ್ಸ್‌ ರೇಸ್‌ನಲ್ಲಿ ಉಳಿದಿವೆ. ಟೂರ್ನಿಯ ಅಂಕಪಟ್ಟಿಯಲ್ಲಿ ಕೊನೆಯ ಎರಡು ಸ್ಥಾನಳಿಗೆ ಕುಸಿದಿರುವ ಚೆನ್ನೈ ಸೂಪರ್ ಕಿಂಗ್ಸ್ ಮತ್ತು ರಾಜಸ್ಥಾನ್ ರಾಯಲ್ಸ್ ಪ್ಲೇಆಫ್ಸ್‌ ರೇಸ್‌ನಿಂದ ಹೊರಬಿದ್ದಿವೆ. ಪ್ಲೇಆಫ್ಸ್‌ಗೆ ಅರ್ಹತೆ ಪಡೆಯಲು 8 ತಂಡಗಳು ಪೈಪೋಟಿ ನಡೆಸುತ್ತಿವೆ. ಆದರೆ ಅವುಗಳ ಪೈಕಿ ಮುಂಬೈ ಇಂಡಿಯನ್ಸ್ ಮತ್ತು ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡಗಳು ನಾಕ್‌ಔಟ್‌ ಹಂತದ ಸನಿಹದಲ್ಲಿದೆ.

ಮುಂಬೈ, ಆರ್‌ಸಿಬಿ ಪ್ಲೇಆಫ್ ಲೆಕ್ಕಾಚಾರ

 ಈ ಸೀಸನ್‌ನಲ್ಲಿ ಮುಂಬೈ ಇಂಡಿಯನ್ಸ್ ಒಟ್ಟು 11 ಪಂದ್ಯಗಳನ್ನು ಆಡಿದ್ದು, ಅದರಲ್ಲಿ 7ರಲ್ಲಿ ಗೆಲುವು ಪಡದಿದೆ. ಮುಂಬೈ ಟೂರ್ನಿಯಲ್ಲಿ ಇನ್ನೂ 3 ಪಂದ್ಯಗಳನ್ನು ಆಡಬೇಕಾಗಿದೆ. ಪ್ಲೇಆಫ್ಸ್‌ಗೆ ಅರ್ಹತೆ ಪಡೆಯಲು ಮುಂಬೈ, ಉಳಿದಿರುವ 3 ಪಂದ್ಯಗಳಲ್ಲಿ ಕೇವಲ ಒಂದರಲ್ಲಿ ಗೆಲ್ಲಬೇಕು. ಇನ್ನು ಆರ್‌ಸಿಬಿಗೆ ಇನ್ನೂ ನಾಲ್ಕು ಪಂದ್ಯಗಳನ್ನು ಆಡುವುದು ಬಾಕಿ ಇದೆ. ನಾಲ್ಕು ಪಂದ್ಯಗಳ ಪೈಕಿ ಒಂದರಲ್ಲಿ ಗೆಲುವು ಪಡೆದರೆ, ಪ್ಲೇಆಫ್ಸ್‌ಗೆ ಅರ್ಹತೆ ಪಡೆಯಲಿದೆ. ಬೆಂಗಳೂರು ತಂಡ ಇಲ್ಲಿಯವರೆಗೆ ಆಡಿದ 10 ಪಂದ್ಯಗಳಲ್ಲಿ 7 ರಲ್ಲಿ ಗೆದ್ದಿದ್ದು 14 ಅಂಕಗಳನ್ನು ಕಲೆ ಹಾಕಿದೆ. ಅಂದ್ರೆ ಈ ಎರಡು ತಂಡಗಳು ಪ್ಲೇ ಆಫ್‌ಗೆ ಹೋಗುವುದು ಫಿಕ್ಸ್ ಆಗಿದೆ. ಯಾಕಂದ್ರೆ ಇನ್ನೂ ಒಂದು ಪಂದ್ಯ ಆದ್ರೂ ಗೆದ್ದ ಗೆಲ್ಲುತ್ತವೆ.

ಗುಜರಾತ್, ಡೆಲ್ಲಿ ಮತ್ತು ಪಂಜಾಬ್‌ ನಡುವೆ ಬಿಗ್‌ ಫೈಟ್‌

ಮುಂಬೈ ಮತ್ತು ಆರ್‌ಸಿಬಿ ಹೊರತುಪಡಿಸಿ, ಪಂಜಾಬ್ ಕಿಂಗ್ಸ್, ಗುಜರಾತ್ ಟೈಟನ್ಸ್ ಮತ್ತು ಡೆಲ್ಲಿ ಕ್ಯಾಪಿಟಲ್ಸ್ ತಂಡಳ ನಡುವೆ ಪ್ಲೇಆಫ್ಸ್‌ಗೆ ಅರ್ಹತೆ ಪಡೆಯಲು ಕಠಿಣ ಪೈಪೋಟಿ ನಡೆಯುತ್ತಿದೆ. ಪಂಜಾಬ್ ಕಿಂಗ್ಸ್ ಕೂಡ 4 ಪಂದ್ಯಗಳನ್ನು ಆಡಬೇಕಾಗಿದೆ ಮತ್ತು ಈ ತಂಡ ಈಗಾಗಲೇ 13 ಅಂಕಗಳನ್ನು ಹೊಂದಿದೆ. ಇದಲ್ಲದೆ, ಗುಜರಾತ್ ಟೈಟನ್ಸ್ 9 ಪಂದ್ಯಗಳಲ್ಲಿ 6 ರಲ್ಲಿ ಗೆದ್ದು, 12 ಅಂಕಗಳನ್ನು ಗಳಿಸಿದೆ. ಈ ಋತುವಿನಲ್ಲಿ ಗುಜರಾತ್‌ಗೆ 5 ಪಂದ್ಯಗಳನ್ನು ಆಡುವುದು ಬಾಕಿ ಇದೆ. ಮತ್ತೊಂದೆಡೆ, ಡೆಲ್ಲಿ ತಂಡವು ನಾಲ್ಕು ಪಂದ್ಯಗಳಲ್ಲಿ ಕನಿಷ್ಠ ಎರಡನ್ನು ಗೆಲ್ಲಬೇಕು, ಆಗ ಮಾತ್ರ ಪ್ಲೇಆಫ್ಸ್‌ಗೆ ಅರ್ಹತೆ ಪಡೆಯಲು ಸಾಧ್ಯವಾಗುತ್ತದೆ. ಜಿಟಿ, ಡೆಲ್ಲಿ ಹಾಗೂ ಪಂಜಾಬ್‌ ತಲಾ ಎರಡೆರಡು ಪಂದ್ಯಗಳನ್ನು ಗೆದ್ದರೆ ಅಂತಿಮ ನಾಲ್ಕರ ಘಟ್ಟಕ್ಕೆ ಲಗ್ಗೆ ಇಡಬಹುದು.

ಲಖನೌ, ಕೋಲ್ಕತಾ, ಹೈದರಾಬಾದ್‌ ಕಥೆ ಏನು?

ಲಖನೌ ಸೂಪರ್ ಜಯಂಟ್ಸ್‌, ಕೋಲ್ಕತಾ ನೈಟ್ ರೈಡರ್ಸ್ ಮತ್ತು ಸನ್‌ರೈಸರ್ಸ್ ಹೈದರಾಬಾದ್ ತಂಡಗಳು ಕೂಡ ಇನ್ನೂ ಪ್ಲೇಆಫ್ಸ್‌ ರೇಸ್‌ನಲ್ಲಿವೆ. ಆದರೆ ಈ ತಂಡಗಳ ಪ್ಲೇಆಫ್ಸ್‌ ಹಾದಿ ತುಂಬಾ ಕಠಿಣವಾಗಿದೆ. ವಿಶೇಷವಾಗಿ ಸನ್‌ರೈಸರ್ಸ್ ಹೈದರಾಬಾದ್‌ ತಂಡ ಒಂದೇ ಒಂದು ಪಂದ್ಯ ಸೋತರೂ ಅವರ ನಾಕ್‌ಔಟ್‌ ಹಾದಿ ಬಂದ್‌ ಆಗಲಿದೆ. ಆದರೆ, ಕೆಕೆಆರ್ ಮತ್ತು ಎಲ್‌ಎಸ್‌ಜಿ ಎಲ್ಲಾ ಪಂದ್ಯಗಳು ಮಾಡು ಇಲ್ಲವೇ ಮಡಿ ಪರಿಸ್ಥಿತಿ ಉಂಟಾಗಿದೆ. 10 ಅಂಕಗಳನ್ನು ಕಲೆ ಹಾಕಿರುವ ಲಖನೌ ಇನ್ನುಳಿದ ನಾಲ್ಕು ಪಂದ್ಯಗಳ ಪೈಕಿ ಮೂರಲ್ಲಿ ಗೆಲುವು ಪಡೆಯಬೇಕಾಗಿದೆ. ಇನ್ನು ಕೆಕೆಆರ್‌ ಇನ್ನುಳಿದ ನಾಲ್ಕೂ ಪಂದ್ಯಗಳನ್ನು ಗೆಲ್ಲಬೇಕಾಗಿದೆ. ಒಟ್ನಲ್ಲಿ ಒಂದೊಂದೇ ತಂಡಗಳು ಪ್ಲೇ ಆಫ್‌ ರೇಸ್‌ನಿಂದ ಹೊರ ಬೀಳುತ್ತಿದ್ದು, ಯಾವ ನಾಲ್ಕು ಟೀಂ ಪ್ಲೇ ಆಫ್‌ನಲ್ಲಿ ಉಳಿಯಲಿವೆ ಅನ್ನೋ ಕುತೂಹಲ ಮೂಡಿಸಿದೆ.

Kishor KV

Leave a Reply

Your email address will not be published. Required fields are marked *