CSK ಬೇಗ ಗಂಟುಮೂಟೆ ಕಟ್ಟಿದ್ಯಾಕೆ? ಫ್ಲಾಪ್ ಶೋಗೆ ಕಾರಣವೇನು ಗೊತ್ತಾ?
ಚೆನ್ನೈ ಟೀಂಗೆ ಧೋನಿನೇ ಮುಳ್ಳಾದ್ರಾ?

ಇಂಡಿಯನ್ ಪ್ರೀಮಿಯರ್ ಲೀಗ್ ಸೀಸನ್-18 ರಿಂದ ಚೆನ್ನೈ ಸೂಪರ್ ಕಿಂಗ್ಸ್ ತಂಡ ಹೊರಬಿದ್ದಿದೆ. ಅದು ಕೂಡ 10 ಪಂದ್ಯಗಳ ಮುಕ್ತಾಯದ ಬೆನ್ನಲ್ಲೇ ಎಂಬುದು ವಿಶೇಷ. ಅಂದರೆ 10 ತಂಡಗಳಲ್ಲಿ ಯಾವುದೇ ತಂಡದ ಪ್ಲೇಆಫ್ಗೆ ಪ್ರವೇಶಿಸದಿದ್ದರೂ, ಇತ್ತ ಸಿಎಸ್‌ಕೆ ತಂಡವು ಪ್ಲೇಆಫ್ ರೇಸ್ನಿಂದ ಹೊರಬಿದ್ದಿದೆ. ಗೆಲುವಿಗೆ ಹೆಸರುವಾಸಿಯಾದ ಫ್ರಾಂಚೈಸಿ ಈ ಬಾರಿ ಹೇಳಹೆಸರಿಲ್ಲದಂತೆ ಸೋತು ಸುಣ್ಣವಾಗಿದೆ.
ಹೊಡಿಬಡಿ ಆಟಕ್ಕೆ ಮುಂದಾಗದ ಚೆನ್ನೈ ಆಟಗಾರರು
T20ಯಲ್ಲಿ ಈಗ್ ಈಗ್ 250ಕ್ಕೂ ಹೆಚ್ಚು ರನ್‌ಗಳನ್ನ ಟೀಂಗಳು ಗಳಿಸುತ್ತಿವೆ.. ಎಸ್ಆರ್‌ಹೆಚ್ 280 ರನ್‌ಗಳ ಗಡಿ ಕೂಡ ದಾಟಿದೆ. ಆದರೆ CSK ಬ್ಯಾಟಿಂಗ್ ವಿಧಾನದಲ್ಲಿ ಈ ಬಾರಿ ಆಕ್ರಮಣಕಾರಿ ಹೊಡೆತಗಳಿರಲಿಲ್ಲ. ಪಂಜಾಬ್ ಪಂದ್ಯದವರೆಗೂ ಅವರು ಮೊದಲು ಬ್ಯಾಟಿಂಗ್ ಮಾಡಿದಾಗ ಒಮ್ಮೆಯೂ 200 ರನ್ ದಾಟಿರಲಿಲ್ಲ. ಪಂಜಾಬ್ ವಿರುದ್ಧದ ಪಂದ್ಯದಲ್ಲಿ ಮಾತ್ರ 200ಕ್ಕೂ ಹೆಚ್ಚು ರನ್ ಬಂದಿತ್ತು. ಉತ್ತಮ ಬ್ಯಾಟರ್ ಹಾಗೂ ಬೌಲರ್ ಗಳ ಕೊರತೆ ಮನಸ್ಥಿತಿಯಲೇ ಆಡುವಂತೆ ತೋರುತಿತ್ತು. ಶಿವಂ ದುಬೆ ಮತ್ತು 43 ವರ್ಷ ವಯಸ್ಸಿನ ಎಂಎಸ್ ಧೋನಿ ಅವರನ್ನು ಹೊರತುಪಡಿಸಿ ಹೆಚ್ಚಾಗಿ ಯಾರೂ ಕೂಡಾ ಶಾಟ್ ಹೊಡೆಯಲು ಮುಂದಾಗುತ್ತಿರಲಿಲ್ಲ. ಬೀಸಿ ಬೀಸಿ ಹೊಡೆದ್ರೆ ಎಲ್ಲಿ ಔಟ್ ಆಗ್ತಿವೋ ಅನ್ನೋ ಭಯ ಸಿಎಸ್‌ಕೆ ಆಟಗಾರನ್ನ ಕಾಡಿತ್ತು. ಸಿಎಸ್ ಕೆಯ ಈ ರೀತಿಯ ಆಟ ತಂಡಕ್ಕೆ ದುಬಾರಿಯಾಗಿದೆ.
ಹರಾಜಿನಲ್ಲಿ ಸರಿಯಾದ ಆಟಗಾರನ್ನ ಆಯ್ಕೆ ಮಾಡಿಲ್ಲ
ರುತುರಾಜ್ ಗಾಯಕ್‌ವಾಡ್, ರವೀಂದ್ರ ಜಡೇಜಾ, ಎಂಎಸ್ ಧೋನಿ, ಮಥೀಶ ಪತಿರಾನ ಮತ್ತು ಶಿವಂ ದುಬೆ ಅವರನ್ನು ಉಳಿಸಿಕೊಂಡು ರೂ. 55 ಕೋಟಿಗಳ ಭಾರಿ ಮೊತ್ತದೊಂದಿಗೆ ಮೆಗಾ ಹರಾಜು ಮಾಡಿದ್ದರೂ ಸೂಕ್ತ ಆಟಗಾರರನ್ನು ಆಯ್ಕೆ ಮಾಡುವಲ್ಲಿ CSK ಫ್ರಾಂಚೈಸಿ ಎಡವಿದೆ. ಸಂಕಷ್ಟದ ಸಂದರ್ಭದಲ್ಲಿ ಅಪತ್ಬಾಂದವರಾಗುವಂತೆ ನಿಜವಾದ ಗೇಮ್ ಚೇಂಜರ್ ಆಟಗಾರರನ್ನು ಖರೀದಿಸುವಲ್ಲಿ ವಿಫಲವಾಗಿದೆ.
ಬ್ಯಾಟಿಂಗ್‌ನಲ್ಲಿ ಸ್ಫೋಟಕ ಅಗ್ರ ಕ್ರಮಾಂಕದ ಆಟಗಾರರ ಅನುಪಸ್ಥಿತಿ ಎದ್ದು ಕಾಣುತ್ತಿತ್ತು. ಮಧ್ಯಮ ಕ್ರಮಾಂಕದಲ್ಲಿ ರಾಹುಲ್ ತ್ರಿಪಾಠಿ, ರಚಿನ್ ರವೀಂದ್ರ ಮತ್ತು ಕಾನ್ವೇಯಂತಹ ಆಟಗಾರರಿದ್ದರು. ಆದರೆ ವಿದೇಶಿ ಆಟಗಾರರಲ್ಲಿ ನೂರ್ ಅಹ್ಮದ್ ಬಿಟ್ಟರೆ ಬೇರೆ ಯಾವುದೇ ಆಟಗಾರರು ಸರಿಯಾಗಿ ಆಡಲಿಲ್ಲ.
ನಾಯಕತ್ವದಲ್ಲಿ ಅಲ್ಲೋಲ ಕಲ್ಲೋಲ
ನಾಯಕತ್ವದಲ್ಲಿ ಅಸ್ಥಿರತೆಯೂ ಚೆನ್ನೈ ಸೂಪರ್ ಕಿಂಗ್ಸ್ ವಿಫಲತೆಗೆ ಮತ್ತೊಂದು ದೊಡ್ಡ ಕಾರಣವಾಗಿದೆ. ಧೀರ್ಘಕಾಲ ತಂಡದ ನಾಯಕರಾಗಿದ್ದ ಧೋನಿ ಬದಲಿಗೆ ಈ ಬಾರಿ ರುತುರಾಜ್ ಗಾಯಕ್ವಾಡ್ ತಂಡದ ನಾಯಕರಾಗಿದ್ದರು. ಆದರೆ, ಅವರು ಗಾಯದಿಂದ ಹೊರಗುಳಿದ ನಂತರ ಮತ್ತೆ ಧೋನಿ ನಾಯಕತ್ವ ವಹಿಸಿದ್ದರು. ಕ್ರಿಕೆಟ್‌ನಲ್ಲಿ ಕೆಲವರ ಮನಸ್ಥಿತಿ ಧೋನಿಗೆ ಹೊಂದಿಕೆಯಾದರೂ ಆಧುನಿಕ T20 ಯಲ್ಲಿ ಆಕ್ರಮಣಶೀಲತೆ ಮತ್ತು ಹೊಂದಾಣಿಕೆಯ ಅಗತ್ಯವಿರುತ್ತದೆ. ಈ ಬಾರಿ ನಾಯಕತ್ವದ ಬದಲಾವಣೆಯಿಂದ ತಂಡದಲ್ಲಿ ಸ್ಥಿರತೆ, ಸಮನ್ವಯತೆ ಕೊರತೆ ಎದುರಾಯಿತು.
ಅನುಭವಿ ಆಟಗಾರರ ವೈಫಲ್ಯ
CSK ಇತಿಹಾಸ ನೋಡಿದರೆ ಪಂದ್ಯ ಹೇಗೆ ಗೆಲ್ಲಬೇಕೆಂದು ತಿಳಿದಿರುವ ಆಟಗಾರರೇ ಹೆಚ್ಚಾಗಿರುತ್ತಿದ್ದರು. ಆದರೆ ಈ ಬಾರಿ ಅದು ವರ್ಕ್ ಓಟ್ ಆಗಲಿಲ್ಲ. ಫಿಲ್ಲರ್ ಗಳು ಅನಿಸಿಕೊಂಡವರೆ ಸರಿಯಾಗಿ ಆಡಲಿಲ್ಲ. ರವಿಚಂದ್ರನ್ ಅಶ್ವಿನ್, ಮಾರ್ಕ್ಯೂಗೆ ರೂ 9.75 ಕೋಟಿಗೆ ಖರೀದಿಸಿದ್ದರೂ ಏಳು ಪಂದ್ಯಗಳಲ್ಲಿ ಕೇವಲ ಐದು ವಿಕೆಟ್‌ಗಳನ್ನು ಗಳಿಸಿದ್ದಾರೆ. ಸ್ಪೀನ್ ಸ್ನೇಹಿ ಚೆಪಾಕ್ ನಲ್ಲೂ ವಿಕೆಟ್ ಪಡೆಯುವಲ್ಲಿ ವಿಫಲರಾದರು. ಸಿಎಸ್ ಕೆ ಯಶಸ್ವಿ ಆಟಗಾರರಲ್ಲಿ ಒಬ್ಬರು ಅನಿಸಿಕೊಂಡಿದ್ದ ರವೀಂದ್ರ ಜಡೇಜಾ ಕೂಡಾ 10 ಪಂದ್ಯಗಳಲ್ಲಿ 183 ರನ್ ಗಳೊಂದಿಗೆ ಏಳು ವಿಕೆಟ್ ಪಡೆದಿದ್ದಾರೆ ಅಷ್ಟೇ. ಹಿರಿಯ ಆಟಗಾರರು ಸರಿಯಾಗಿ ಆಡದಿದ್ದಾಗ ಕಿರಿಯ ಆಟಗಾರರ ಮೇಲೆ ಹೊರೆ ಹೆಚ್ಚಾಗುತ್ತದೆ. ಸಿಎಸ್ ಕೆಯಲ್ಲಿ ಕೆಲವೇ ಕೆಲವರು ವಿಶ್ವಾಸಾರ್ಹ ಹೊಸ ಆಟಗಾರರಿದ್ದರು.
ಫೇಲ್ಯೂರ್ ಆದ ಯುವ ಆಟಗಾರರು
ಈ ಬಾರಿಯ ಐಪಿಎಲ್ ನಲ್ಲಿ ಸಾಕಷ್ಟು ಯುವ ಆಟಗಾರರು ಮಿಂಚಿದ್ದಾರೆ. 14 ವರ್ಷ ವಯಸ್ಸಿನ ವೈಭವ್ ಸೂರ್ಯವಂಶಿ, ಪ್ರಿಯಾಂಶ್ ಆರ್ಯ ಅವರಂತಹ ಆಟಗಾರರು ಅತ್ಯುತ್ತಮ ಪ್ರದರ್ಶನ ತೋರಿದ್ದಾರೆ. ಆದರೆ CSKಯಲ್ಲಿ ಅಂತಹ ಆಟಗಾರರು ಇರಲಿಲ್ಲ. ಯುವ ಆಟಗಾರರ ಕೊರತೆ ಚೆನ್ನೈ ಸೂಪರ್ ಕಿಂಗ್ಸ್ ವಿಫಲತೆಯಲ್ಲಿ ಒಂದಾಗಿದೆ. ಅಲ್ಲದೇ ಧೋನಿ ಅವರಿಗೆ ಕ್ಯಾಪ್ಟನ್ಸಿ ನೀಡುವ ಬದಲು ಬೇರೆ ಆಟಗಾರರಿಗೆ ನೀಡಬಹುದಿತ್ತು ಅನ್ನೋ ಮಾತು ಕೂಡ ಕೇಳಿ ಬರ್ತಿದೆ. ಅಲ್ಲದೇ ಧೋನಿ ಇನ್ನೂ ನಿವೃತ್ತಿ ನೀಡಿದ್ರೆ ಒಳ್ಳೆಯದ್ದು ಅನ್ನೋ ಅಭಿಪ್ರಾಯ ಕೂಡ ವ್ಯಕ್ತವಾಗಿದೆ. ಒಟ್ನಲ್ಲಿ ಉಳಿದ ತಂಡಗಳು ಫ್ಲೇ ಆಫ್ ಪ್ರವೇಶ ಮಾಡೋ ಮುನ್ನವೇ ಚೆನ್ನೈ ಫ್ಲೇ ಆಫ್‌ನಿಂದ ಹೊರ ಬಿದ್ದಿದೆ. ಇದು ಸಿಎಸ್‌ಕೆಯ ದೊಡ್ಡ ಫೇಲ್ಯೂರ್ ಅಂತಾನೇ ಹೇಳಬಹುದು.