ಸೈಕೋ ಕಾಟ.. ವಿಶ್ವನಿಂದ ಜಾನು ದೂರ – ಶ್ರೀಲಂಕಾಕ್ಕೆ ಹೊರಟ ಚಿನ್ನುಮರಿ?
ಜಾಹ್ವವಿಗಾಗಿ ಜಯಂತ್ ಹೊಸ ಪ್ಲ್ಯಾನ್?

ಜಾಹ್ನವಿ ಇಲ್ಲದೇ ಜಯಂತ್ ಹುಚ್ಚ ಆಗಿದ್ದಾನೆ.. ತನ್ನ ಚಿನ್ನುಮರಿ ಬದುಕಿದ್ದಾಳೆ ಅಂತಾ ಹೇಳ್ತಾನೆ ಇದ್ದಾನೆ. ಆದ್ರೆ ಆತನ ಮಾತನ್ನ ಯಾರು ನಂಬ್ತಿಲ್ಲ.. ಇದೀಗ ಹೆಂಡ್ತಿಯನ್ನ ಹುಡುಕಿಸಲು ಜಯಂತ್ ಹೊಸ ಟೀಮ್ ಅನ್ನ ಬೇರೆ ರೆಡಿ ಮಾಡಿದ್ದಾನೆ. ಆದ್ರೀಗ ವಿಶ್ವನ ಮನೆಯಲ್ಲಿರೋ ಚಿನ್ನುಮರಿಗೆ ಕ್ಷಣ ಕ್ಷಣಕ್ಕೂ ಜಯಂತ್ ಭಯ ಕಾಡ್ತಿದೆ. ಇದೀಗ ಜಯಂತ್‌ನಿಂದಾಗಿ ಜಾನು ವಿಶ್ವನಿಂದಲೂ ದೂರ ಆಗ್ತಿದ್ದಾನೆ. ಜಾನು ಮನೆ ಬಿಟ್ಟು ಹೋಗಿದ್ದಾಳೆ.
ಇದನ್ನೂ ಓದಿ: ಪಂಜಾಬ್ ವಿರುದ್ಧ ಸೋತ ಸಿಎಸ್‌ಕೆ – ಅಧಿಕೃತವಾಗಿ ಪ್ಲೇಆಫ್ ರೇಸ್‌ನಿಂದ ಹೊರ ಬಿದ್ದ ಧೋನಿ ತಂಡ
ಲಕ್ಷ್ಮೀ ನಿವಾಸ ಸೀರಿಯಲ್ ಸದ್ಯ ಟ್ವಿಸ್ಟ್ ಆಂಡ್ ಟರ್ನ್‌ನಿಂದ ಕೂಡಿದೆ. ಶೀಲಂಕಾದ ಬೀಚ್ ನಲ್ಲಿ ಬಿದ್ದ ಜಾನು ವಿಶ್ವನ ತಂದೆ ಕೈಗೆ ಸಿಕ್ಕಿದ್ಲು. ಅದಾದ್ಮೆಲೆ ಅವ್ರ ಜೊತೆಗೆ ವಿಶ್ವನ ಮನೆಗೆ ಬಂದು ಮನೆ ಕೆಲ್ಸ ಮಾಡ್ಕೊಂಡು ಇದ್ಲು.. ಜಾಹ್ನವಿ ವಿಶ್ವನ ಮನೆಗೆ ಬಂದಿರೋದನ್ನು ನೋಡಿದ ವೀಕ್ಷಕರು ಇವರಿಬ್ಬರು ಮದುವೆ ಆಗ್ಬೋದು ಅಂತ ಹೇಳಿದ್ರು.. ಆದ್ರೀಗ ಸೀರಿಯಲ್ ಡೈರೆಕ್ಟರ್ ಸ್ಟೋರಿಯಲ್ಲಿ ಟ್ವಿಸ್ಟ್ ಕೊಟ್ಟಿದ್ದಾರೆ. ಈಗ ವಿಶ್ವ ಮನೆಯಿಂದ ಜಾನು ಹೊರಗಡೆ ಬಂದಿದ್ದಾಳೆ.
ಹೌದು, ತನ್ನ ಮನೆಯಲ್ಲಿ ಜಾನು ಇರೋದು ವಿಶ್ವನಿಗೆ ಗೊತ್ತಿಲ್ಲ. ಜಾನು ಸತ್ತು ಹೋಗಿದ್ದಾಳೆ ಅಂತ ಅವನು ಭಾವಿಸಿದ್ದಾನೆ, ನನ್ನ ಮನೆಯಲ್ಲಿ ಜಾನು ಹಾಡೋದನ್ನು ಕೇಳಿದ್ದ ಅವನಿಗೆ ಇದೆಲ್ಲ ಭ್ರಮೆ, ಕನಸು.. ಜಾನು ಬದುಕಿಲ್ಲ ಅಂತ ಅವನು ಕಣ್ಣೀರಿಡುತ್ತಿದ್ದಾನೆ. ಆದ್ರೀಗ ವಿಶ್ವನ ಮನೆಯಲ್ಲಿರೋ ಜಾನುಗೆ ಜಯಂತ್ ಭಯ ಕಾಡೋದಿಕ್ಕೆ ಶುರುವಾಗಿದೆ. ಇಲ್ಲಿ ತಾನಿರೋದು ಸೇಫ್ ಅಲ್ಲ ಅಂತಾ ಅನ್ನಿಸಿದೆ. ಹೌದು, ವಿಶ್ವನ ಮನೆಯವರು ಹಾಗೂ ಜಯಂತ್ ತುಂಬ ಕ್ಲೋಸ್.. ಅವ್ನು ಆಗಾಗ ಇಲ್ಲಿಗೆ ಬರ್ತಾನೆ, ಅವನ ಕಣ್ಣಿಗೆ ನಾನು ಕಂಡ್ರೆ ಅಷ್ಟೇ ನನ್ ಕಥೆ.. ಅದಲ್ಲದೇ ಈ ಮನೆಯವರಿಗೂ ಆತ ಕೆಡುಕು ಮಾಡೋ ಸಾಧ್ಯತೆ ಇದೆ ಎಂದು ಅವಳು ಭಯಪಟ್ಟಿದ್ದಾಳೆ. ಹೀಗಾಗಿ ಆಕೆ ವಿಶ್ವನ ಮನೆಯಿಂದ ಹೊರಗಡೆ ಹೋಗಲು ರೆಡಿಯಾಗಿದ್ದಾಳೆ.
ಮನೆ ಬಿಟ್ಟು ಹೋಗೋ ಮುನ್ನ ವಿಶ್ವ ತಂದೆ-ತಾಯಿಗೆ ನಮಸ್ಕಾರ ಮಾಡಿದ್ದಾಳೆ. ಬಳಿಕ ಜಾನು ಮನೆಯಿಂದ ಹೊರಡಲು ರೆಡಿಯಾಗಿದ್ದಾಳೆ. ಇದೀಗ ಜಾನು ನಿಜಕ್ಕೂ ಮನೆಯಿಂದ ಹೊರಗಡೆ ಬರ್ತಾಳಾ? ವಿಶ್ವನ ಮನೆಯಿಂದ ಹೊರ ಬಂದ ಜಾನು ಶ್ರೀಲಂಕಾಗೆ ಮತ್ತೆ ಹೋಗ್ತಾಳಾ? ಅಲ್ಲಿ ಜಯಂತ್ ಟೀಮ್ ಕೈಗೆ ಸಿಕ್ಕಿ ಬೀಳ್ತಾಳಾ ಅನ್ನೋ ಕ್ಯೂರಿಯಾಸಿಟಿ ಅನೇಕರನ್ನ ಕಾಡಿದೆ.
ಇದೀಗ ಜಯಂತ್‌ಗೆ ಜಾನು ಬದುಕಿದ್ದಾಳೆ ಅನ್ನೋದು ಬಲವಾಗಿ ಕಾಡ್ತಿದೆ. ಆಕೆ ಜಾನು ಬದುಕಿದ್ದಾಳೆ ಅಂತ ಗೊತ್ತಾದ್ರೆ ಮಾತ್ರ ಅವನು ಸುಮ್ಮನೆ ಇರೋದಿಲ್ಲ. ಹೇಗಾದರೂ ಮಾಡಿ ಅವನು ಪತ್ನಿಯನ್ನು ಮನೆಗೆ ಕರೆದುಕೊಂಡು ಬರುತ್ತಾನೆ. ಒಟ್ಟಿನಲ್ಲಿ ಮುಂದಿನ ಸಂಚಿಕೆಯಲ್ಲಿ ಏನಾಗಲಿದೆ ಎಂದು ಕಾದು ನೋಡಬೇಕಾಗಿದೆ.