ಈ ಬಾರಿ ಮುಂಬೈನೇ ಚಾಂಪಿಯನ್ಸ್? ಕರುಣ್ ಡಕ್ಔಟ್ ಆದ್ರೆ MI ಗೆ ಕಪ್!?
ಏನಿದು ನಾಯರ್ ಡಕ್ಔಟ್ ಲೆಕ್ಕಾಚಾರ?

ಇಂಡಿಯನ್ ಪ್ರೀಮಿಯರ್ ಲೀಗ್ನ ಪಂದ್ಯಗಳು ಬುಹುತೇಕ ಮುಗಯುತ್ತಾ ಬಂದಿದ್ದು, ಪ್ಲೇ ಆಫ್ ಪೈಪೋಟಿ ನಡೆಯುತ್ತಿದೆ. ರಾಯಲ್ ಚಾಲೆಂಜರ್ಸ್ ಬೆಂಗಳೂರು ಅಂಕ ಪಟ್ಟಿಯಲ್ಲಿ ಮೊದಲ ಸ್ಥಾನದಲ್ಲಿದ್ದರೆ, ತದನಂತ್ರದ ಸ್ಥಾನದಲ್ಲಿದೆ. ವಿಶೇಷ ಅಂದ್ರೆ ಆರಂಭಿಕ ಪಂದ್ಯಗಳಲ್ಲಿ ಸೋತು ಸುಣ್ಣುವಾಗಿದ್ದ ಮುಂಬೈ ಇಂಡಿಯನ್ಸ್ ಬ್ಯಾಕ್ ಟು ಬ್ಯಾಕ್ 5 ಮ್ಯಾಚ್ಗಳಲ್ಲಿ ಗೆಲುವು ಸಾಧಿಸಿ ಇದೀಗ ಪ್ಲೇಆಫ್ನತ್ತ ದಾಪುಗಾಲಿಟ್ಟಿದೆ. ಇದರ ಬೆನ್ನಲ್ಲೇ ಮುಂಬೈ ಇಂಡಿಯನ್ಸ್ ಅಭಿಮಾನಿಗಳ ‘ಕರುಣ್ ನಾಯರ್ ಡಕ್ ಔಟ್’ ಲೆಕ್ಕಾಚಾರವೊಂದು ಮುನ್ನಲೆಗೆ ಬಂದಿದೆ.
ಈ ಬಾರಿಯ ಐಪಿಎಲ್ನಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ತಂಡದ ಆಟಗಾರ ಕರುಣ್ ನಾಯರ್ ಶೂನ್ಯಕ್ಕೆ ಔಟಾಗಿದ್ದರು. ಏಪ್ರಿಲ್ 16 ರಂದು ನಡೆದ ರಾಜಸ್ಥಾನ್ ರಾಯಲ್ ವಿರುದ್ಧದ ಪಂದ್ಯದಲ್ಲಿ ಕರುಣ್ ನಾಯರ್ ಡಕ್ ಔಟಾಗಿ ನಿರಾಸೆ ಮೂಡಿಸಿದ್ದರು. ಕರುಣ್ ಶೂನ್ಯಕ್ಕೆ ಔಟಾಗಿರುವುದೇ ಇದೀಗ ಮುಂಬೈ ಇಂಡಿಯನ್ಸ್ ಅಭಿಮಾನಿಗಳ ನಿರೀಕ್ಷೆಯನ್ನು ಹೆಚ್ಚಿಸಿದೆ. ಡೆಲ್ಲಿ ಆಟಗಾರ ಕರುಣ್ ಡಕೌಟ್ ಆದ್ರೆ ಮುಂಬೈಗೆ ಲಕ್ ಅಂತೆ. ಅದು ಹೇಗೆ ಅಂತಾ ಹೇಳ್ತಿನಿ ಕೇಳಿ..
ಕರುಣ್ ನಾಯರ್ ಡಕ್ ಔಟ್ ಆದ ಸೀಸನ್ಗಳಲ್ಲಿ ಮುಂಬೈ ಇಂಡಿಯನ್ಸ್ ತಂಡ ಚಾಂಪಿಯನ್ ಪಟ್ಟ ಅಲಂಕರಿಸಿದೆ. ಇದೀಗ 4ನೇ ಬಾರಿ ಕರುಣ್ ನಾಯರ್ ಶೂನ್ಯಕ್ಕೆ ವಿಕೆಟ್ ಒಪ್ಪಿಸಿದ್ದು, ಇದರ ಬೆನ್ನಲ್ಲೇ ಈ ಸಲ ಕಪ್ ನಮ್ದೆ ಎಂಬ ಲೆಕ್ಕಾಚಾರದಲ್ಲಿದ್ದಾರೆ ಮುಂಬೈ ಇಂಡಿಯನ್ಸ್ ತಂಡಗಳು ಅಭಿಮಾನಿಗಳಿದ್ದಾರೆ.
ಕರುಣ್ ಡಕ್‌ಔಟ್, ಮುಂಬೈಗೆ ಲಕ್
ಕರುಣ್ ನಾಯರ್ ಐಪಿಎಲ್ನಲ್ಲಿ ಮೊದಲ ಬಾರಿಗೆ ಡಕ್ ಔಟ್ ಆಗಿದ್ದು 2013 ರಲ್ಲಿ. ಆ ವರ್ಷ ಐಪಿಎಲ್ ಟ್ರೋಫಿ ಎತ್ತಿ ಹಿಡಿಯುವಲ್ಲಿ ಮುಂಬೈ ಇಂಡಿಯನ್ಸ್ ತಂಡ ಯಶಸ್ವಿಯಾಗಿತ್ತು. ಇದಾದ ಬಳಿಕ ಅವರು 2ನೇ ಬಾರಿ 2017 ರಲ್ಲಿ ಶೂನ್ಯಕ್ಕೆ ವಿಕೆಟ್ ಒಪ್ಪಿಸಿದ್ದರು. ಆ ವರ್ಷ ಕೂಡ ಮುಂಬೈ ಇಂಡಿಯನ್ಸ್ ತಂಡವೇ ಚಾಂಪಿಯನ್ ಆಗಿ ಹೊರಹೊಮ್ಮಿತ್ತು. ಇದಾದ ಬಳಿಕ ಕರುಣ್ ನಾಯರ್ 2020 ರಲ್ಲಿ ಡಕ್ ಔಟ್ ಆಗಿದ್ದರು. ಕಾಕತಾಳೀಯ ಎಂಬಂತೆ ಆ ವರ್ಷ ಕೂಡ ಮುಂಬೈ ಇಂಡಿಯನ್ಸ್ ತಂಡವೇ ಟ್ರೋಫಿಯನ್ನು ಎತ್ತಿ ಹಿಡಿದಿತ್ತು. ಇದೀಗ ಈ ಬಾರಿಯ ಟೂರ್ನಿಯಲ್ಲೂ ಕರುಣ್ ನಾಯರ್ ಶೂನ್ಯಕ್ಕೆ ವಿಕೆಟ್ ಒಪ್ಪಿಸಿದ್ದಾರೆ. ಹೀಗಾಗಿ ಈ ಬಾರಿ ಕೂಡ ಮುಂಬೈ ಇಂಡಿಯನ್ಸ್ ತಂಡವೇ ಚಾಂಪಿಯನ್ ಪಟ್ಟ ಅಲಂಕರಿಸಲಿದೆ ಎಂಬ ವಿಶ್ವಾಸದಲ್ಲಿದ್ದಾರೆ ಮುಂಬೈ ಇಂಡಿಯನ್ಸ್ ಅಭಿಮಾನಿಗಳಿದ್ದಾರೆ. ಈ ಸಲ ಕಪ್ ಗೆದ್ದೇ ಗೆಲ್ಲುತ್ತೇವೆ ಅಂತ ಆರ್‌ಸಿಬಿಯಿದ್ರೆ, ಮುಂಬೈ ಕರುಣ್ ನಾಯರ್ ಡಕ್ ಔಟ್ ಲೆಕ್ಕಾಚಾರದಲ್ಲಿ ಗೆಲುವಿನ ನಿರೀಕ್ಷೆಯಲ್ಲಿದೆ. ಈ ಸಲವು ಡಕ್‌ಔಟ್ ಭವಿಷ್ಯ ನಿಜವಾಗುತ್ತಾ? ಮುಂಬೈ ನಾಲ್ಕನೇ ಬಾರಿಗೆ ಕಪ್ ಗೆಲ್ಲುತ್ತಾ ಅನ್ನೋದನ್ನ ಕಾದು ನೋಡಬೇಕಿದೆ.