2008 ರಲ್ಲಿ ಡೆಲ್ಲಿ ಮಿಸ್ಟೇಕ್ ಮಾಡಿದ್ದೆಲ್ಲಿ? ಕೊಹ್ಲಿ ಕೈ ಬಿಟ್ಟಿದ್ದಕ್ಕೆ DC ಪಶ್ಚಾತ್ತಾಪ!!
KING ಆರ್‌ಸಿಬಿ ಪಾಲಾದ ರಹಸ್ಯ

ನಾನು ಈಗ ಹೇಳೋಕೆ ಹೋಗ್ತಾ ಇರೋದು ಇವತ್ತಿನ ಕಥೆಯಲ್ಲ. 18 ವರ್ಷದ ಹಿಂದೆ ಅಂದ್ರೆ ಐಪಿಎಲ್ ಆರಂಭದ ವರ್ಷದ ಕತೆ.. ಕಿಂಗ್ ಕೊಹ್ಲಿ ಆರ್‌ಸಿಬಿಗೆ ಹೇಗೆ ಕಾಲಿಟ್ರು, ಡೆಲ್ಲಿ ಹೇಗೆಲ್ಲಾ ಎಡವಿತ್ತು ಅನ್ನೋದನ್ನ.. ಇದು ಬರೋಬ್ಬರಿ 18 ವರ್ಷಗಳ ಹಿಂದಿನ ಘಟನೆ. ಅದನ್ನು ಈಗ ನೆನಪಿಸಿಕೊಂಡಿದ್ದಾರೆ ಅಂದು ಡೆಲ್ಲಿ ಡೇರ್ ಡೆವಿಲ್ಸ್ ಫ್ರಾಂಚೈಸಿಯ ನಾಯನಾಗಿದ್ದ ಟೀಂ ಇಂಡಿಯಾದ ಮಾಜಿ ಡ್ಯಾಶಿಂಗ್ ಓಪನರ್ ವೀರೇಂದ್ರ ಸೆಹ್ವಾಗ್. ದಿಲ್ಲಿ ಫ್ರಾಂಚೈಸಿಯು ಮಧ್ಯಮ ವೇಗಿ ಪ್ರದೀಪ್ ಸಂಗ್ವಾನ್ ಅವರನ್ನು ತಂಡಕ್ಕೆ ಸೇರಿಸಿಕೊಳ್ಳಲು ನಿರ್ಧರಿಸಿದ್ದರಿಂದ ವಿರಾಟ್ ಕೊಹ್ಲಿ ಅವರು ಹರಾಜಿನಲ್ಲಿ 12 ಲಕ್ಷಕ್ಕೆ ಆರ್ ಸಿಬಿಗೆ ಮಾರಾಟ ಆದರು.
ಬೌಲರ್‌ಗಾಗಿ ಕೊಹ್ಲಿನ ಕೈ ಬಿಟ್ಟ ಡೆಲ್ಲಿ
2008ರ ಉದ್ಘಾಟನಾ ಐಪಿಎಲ್ ನಲ್ಲಿ ದಿಲ್ಲಿಯ ಐಕಾನ್ ಪ್ಲೇಯರ್ ಆಗಿದ್ದ ವೀರೇಂದ್ರ ಸೆಹ್ವಾಗ್ ಅವರು ತಂಡದ ನಾಯಕ ಸಹ ಆಗಿದ್ದರು. ಇವರು ಹೇಳಿರುವ ಪ್ರಕಾರ ಆ ಘಟನೆ ಒಂದು ಆಕಸ್ಮಿಕದಂತೆ ನಡೆದುಹೋಯ್ತಂತೆ. ದಿಲ್ಲಿ ಫ್ರಾಂಚೈಸಿಯ ತಂಡದಲ್ಲಿ ಬ್ಯಾಟರ್ ಗಳಿಗೆ ಕೊರತೆಯಿರಲಿಲ್ಲ. ಯಾಕೆಂದರೆ ಗೌತಮ್ ಗಂಭೀರ್, ಶಿಖರ್ ಧವನ್, ಎಬಿ ಡಿವಿಲಿಯರ್ಸ್ ಮೊದಲಾದ ಘಟನುಘಟಿಗಳೇ ಇದ್ದರು. ಆದರೆ ಬೌಲರ್ ಗಳ ಕೊರತೆ ಇತ್ತು. ಈ ಹಂತದಲ್ಲಿ ಡೆಲ್ಲಿ ಡೇರ್ ಡೆವಿಲ್ಸ್ ತಂಡ ಎಡಗೈ ವೇಗಿ ಪ್ರದೀಪ್ ಸಂಗ್ವಾನ್ ಅವರನ್ನು ತಂಡಕ್ಕೆ ಸೇರಿಸಿಕೊಂಡಿತ್ತು. ಅನಿವಾರ್ಯವಾಗಿ ವಿರಾಟ್ ಕೊಹ್ಲಿ ಅವರ ಹೆಸರನ್ನು ಡ್ರಾಪ್ ಮಾಡಿತು. ಇದು ಡೆಲ್ಲಿ ಎಡವಟ್ಟಿಗೆ ಕಾರಣವಾಯ್ತು. ಪ್ರದೀಪ್ ಸಂಗ್ವಾನ್ ಅವರನ್ನು ಯುವ ಪ್ರತಿಭೆಗಳಲ್ಲಿ ಒಬ್ಬರೆಂದು ಪರಿಗಣಿಸಲಾಗಿತ್ತು. ಆದರೆ ಭಾರತ ಪರ ಆಡುವ ಅವಕಾಶ ಮಾತ್ರ ಅವರಿಗೆ ದೊರಕಲಿಲ್ಲ. ಡೇರ್‌ಡೆವಿಲ್ಸ್ ನಲ್ಲಿ ಮೊದಲ ಮೂರು ವರ್ಷ ಅವರು 28 ಪಂದ್ಯಗಳನ್ನು ಆಡಿದರು ಮತ್ತು 29 ವಿಕೆಟ್‌ಗಳನ್ನು ಪಡೆದರು. ನಂತರ, ಕೋಲ್ಕತ್ತಾ ನೈಟ್ ರೈಡರ್ಸ್, ಗುಜರಾತ್ ಲಯನ್ಸ್, ಮುಂಬೈ ಇಂಡಿಯನ್ಸ್ ಮತ್ತು ಗುಜರಾತ್ ಟೈಟಾನ್ಸ್ ಪರವೂ ಆಡಿದರು. ಈ ಹಿನ್ನೆಲೆಯಲ್ಲಿ ದಿಲ್ಲಿ ಫ್ರಾಂಚೈಸಿಯು ಕೊಹ್ಲಿ ಅವರ ಹೆಸರನ್ನು ಕೈಬಿಟ್ಟಿತು.
ಕೊಹ್ಲಿ ಆರ್‌ಸಿಬಿ ಸೇರಿದ್ದು ಹೇಗೆ?
ಐಪಿಎಲ್‌ನ ಮೊದಲ ಸೀಸನ್ ಪ್ರಾರಂಭವಾಗುವ ಕೇವಲ 1 ತಿಂಗಳ ಹಿಂದಷ್ಟೇ ಕೊಹ್ಲಿ ಅವರು ಅಂಡರ್ 19 ವಿಶ್ವಕಪ್ ನಲ್ಲಿ ಭಾರತ ತಂಡವನ್ನು ಮುನ್ನಡೆಸಿದ್ದು ಮಾತ್ರವಲ್ಲದೆ ವಿಶ್ವವಿಜಯಿಯನ್ನಾಗಿ ಮಾಡಿದ್ದರು. ಆ ಹೊತ್ತಿಗೆ ಐಪಿಎಲ್ ಹರಾಜು ಪ್ರಕ್ರಿಯೆ ಪೂರ್ಣಗೊಂಡಿದ್ದರೂ, ಬಿಸಿಸಿಐ ಅಂಡರ್ 19 ತಂಡಕ್ಕಾಗಿ ವಿಶೇಷ ಅವಕಾಶ ಕಲ್ಪಿಸಲು ನಿರ್ಧರಿಸಿತು. ಅಂಡರ್ 19 ವಿಶ್ವವಿಜಯಿ ತಂಡದ ನಾಯಕನಾಗಿದ್ದ ವಿರಾಟ್ ಕೊಹ್ಲಿ ಅವರೇ ಆ ದಿನದ ಸ್ಟಾರ್ ಆಕರ್ಷಣೆಯಾಗಿದ್ದರು. ದಿಲ್ಲಿ ಮೂಲದ ಫ್ರಾಂಚೈಸಿಯು ಮೊದಲ ಆಟಗಾರನನ್ನು ಆಯ್ಕೆ ಮಾಡುವ ಅವಕಾಶವನ್ನೂ ಹೊಂದಿತ್ತು. ಕೊಹ್ಲಿ ಸ್ಥಳೀಯ ಆಟಗಾರನಾಗಿರುವುದರಿಂದ ಫ್ರಾಂಚೈಸಿ ಸಹ ಅವರಿಗೆ ಮಣೆ ಹಾಕಬಹುದು ಎಂದು ಎಲ್ಲರೂ ಭಾವಿಸಿದ್ದರು. ಆದರೆ ಡೇರ್‌ಡೆವಿಲ್ಸ್ ದಿಲ್ಲಿಯವರೇ ಆದ ವೇಗಿ ಪ್ರದೀಪ್ ಸಾಂಗ್ವಾನ್ ಅವರನ್ನು ಖರೀದಿಸಲು ನಿರ್ಧರಿಸಿತು. ರಾಯೆಲ್ ಚಾಲೆಂಜರ್ಸ್ ಎರಡನೇ ಆಯ್ಕೆ ಪಡೆದುಕೊಂಡಾಗ ಕೊಹ್ಲಿ 12 ಲಕ್ಷಕ್ಕೆ ಆರ್‌ಸಿಬಿ ಪಾಲಾದ್ರು. ಅಂದಿನಿಂದ ಇಂದಿನವರೆಗೂ ಕೊಹ್ಲಿ ಅವರು ಆರ್ ಸಿಬಿ ಭಾಗವಾಗಿದ್ದಾರೆ. ಆರ್‌ಸಿಬಿ ಅಂದ್ರೆ ಕೊಹ್ಲಿ,, ಕೊಹ್ಲಿ ಅಂದ್ರೆ ಆರ್‌ಸಿಬಿ ಎನ್ನುವಂತಾಗಿದೆ. ಆರ್‌ಸಿಬಿ ಒಂದೇ ಒಂದು ಕಪ್ ಗೆದ್ದಿಲ್ಲ ಅಂದ್ರೂ ಕೋಟಿ ಕೋಟಿ ಅಭಿಮಾನಿಗಳ ಹೃದಯದಲ್ಲಿ ಮನೆ ಮಾಡಿದೆ. ಅದ್ಕೆ ಕೊಹ್ಲಿ ಕೂಡ ಕಾರಣ ಅಂದ್ರೆ ತಪ್ಪಿಲ್ಲ.. ಆರ್‌ಸಿಬಿಯ ಬ್ಯಾಟಿಂಗ್ ಲೈನ್‌ಅಪ್‌ನಲ್ಲಿ ಕೊಹ್ಲಿಗೆ ಅವಕಾಶ ಸಿಕ್ಕಿತು. ನಂತರ ಕೊಹ್ಲಿಗೆ ಆರಂಭಿಕ ಸ್ಥಾನವು ದೊರೆಯಿತು. ಇದು ಅವರ ಪ್ರತಿಭೆಯನ್ನು ವಿಶಾಲವಾಗಿ ಪ್ರದರ್ಶಿಸಲು ವೇದಿಕೆಯಾಯಿತು. ಕೊಹ್ಲಿ ಐಪಿಎಲ್‌ನಲ್ಲಿ 261 ಪಂದ್ಯಗಳಲ್ಲಿ 8396 ರನ್‌ಗಳನ್ನು ಗಳಿಸಿದ್ದಾರೆ, ಇದು ಐಪಿಎಲ್ ಇತಿಹಾಸದ ಅತಿ ಹೆಚ್ಚು ರನ್‌ಗಳ ದಾಖಲೆಯಾಗಿದೆ. ಅವರು 18 ವರ್ಷಗಳಿಂದ ಆರ್‌ಸಿಬಿಯಲ್ಲಿದ್ದು, ಒಂದೇ ಫ್ರಾಂಚೈಸಿಯೊಂದಿಗೆ ಆಡುತ್ತಿರುವ ಏಕೈಕ ಆಟಗಾರರಾಗಿದ್ದಾರೆ.
ಇನ್ನು ಈ ಬಾರಿ ಆರ್‌ಸಿಬಿ ಆಡುತ್ತಿರುವುದದ್ದನ್ನ ನೋಡಿದ್ರೆ ಕಪ್ ಬರ ಕೂಡ ನೀಗುತ್ತೆ ಅನ್ಸುತ್ತೆ.. ಯಾಕಂದ್ರೆ ಈ ಸೀಸನ್ ಕೂಡ 18 ಕೊಹ್ಲಿ ನಂ ಕೂಡ 18 ಹೀಗಾಗಿ.. ಈ ಸಲ ಕಪ್ ಕೊಹ್ಲಿದ್ದೇ..