ಸಮಂತಾ ಬಾಳಲ್ಲಿ ಅರಳಿತು ಪ್ರೀತಿ!‌ – ಬಾಲಿವುಡ್ ನಿರ್ದೇಶಕ ಜೊತೆ ನಿಶ್ಚಿತಾರ್ಥ?
ಸ್ಯಾಮ್ ಮದುವೆ ಡೇಟ್ ಫಿಕ್ಸ್?

ಸಮಂತಾ ಬಾಳಲ್ಲಿ ಅರಳಿತು ಪ್ರೀತಿ!‌ – ಬಾಲಿವುಡ್ ನಿರ್ದೇಶಕ ಜೊತೆ ನಿಶ್ಚಿತಾರ್ಥ?ಸ್ಯಾಮ್ ಮದುವೆ ಡೇಟ್ ಫಿಕ್ಸ್?

ಸೌತ್ ಸಿನಿ ದುನಿಯಾದ ಮೋಸ್ಟ್ ಬ್ಯೂಟಿಫುಲ್ ನಟಿ ಸಮಂತಾ ರುತ್​ ಪ್ರಭು ಒಂದಲ್ಲ ಒಂದು ವಿಚಾರವಾಗಿ ಸುದ್ದಿಯಲ್ಲಿರೋದು ನಿಮ್ಗೆಲ್ಲಾ ಗೊತ್ತೇ ಇದೆ. ನಾಗಚೈತನ್ಯ ಅವರಿಂದ ವಿಚ್ಚೇದನ ಪಡೆದುಕೊಂಡ ಮೇಲೆ ಸ್ಯಾಮ್‌ ಒಂಟಿಯಾಗಿ ಜೀವನ ಕಳಿತಾ ಇದ್ರು. ಆದ್ರೆ ನಾಗಚೈತನ್ಯ ಶೋಭಿತಾ ಜೊತೆ ಮದುವೆ ಮಾಡಿಕೊಂಡಿದ್ದಾರೆ. ನಾಗಚೈತನ್ಯ ಎರಡನೇ ಮದುವೆ ಆಗ್ತಿದ್ದಂತೆ ಸಮಂತಾ  2ನೇ ಮದುವೆ ಬಗ್ಗೆ ಫ್ಯಾನ್ಸ್‌ ಗೆ ಸಾಕಷ್ಟು ಕುತೂಹಲ ಇತ್ತು. ಸ್ಯಾಮ್‌ ಪ್ರೀತಿಯಲ್ಲಿ ಬಿದ್ದಿದ್ದಾರಾ? ಯಾರ ಜೊತೆನಾದ್ರೂ ಡೇಟಿಂಗ್‌ ನಡೆಸ್ತಿದ್ದಾರಾ? ಎರಡನೇ ಮದ್ವೆ ಯಾವಾಗ ಅಂತಾ ಫ್ಯಾನ್ಸ್‌ ಹೇಳ್ತಾನೇ ಬಂದಿದ್ರು.. ಇದೀಗ ಇದೀಗ ಈ ವಿಚಾರದಲ್ಲಿ ಇನ್ನೊಂದು ಅಪ್ಡೇಟ್ ಸಿಕ್ಕಿದೆ. ಸ್ಯಾಮ್‌ ಬಾಲಿವುಡ್‌ ನಿರ್ದೇಶಕನ ಜೊತೆ ದಾಂಪತ್ಯ ಜೀವನಕ್ಕೆ ಕಾಲಿಡಲಿದ್ದಾರೆ ಎಂದು ಹೇಳಲಾಗ್ತಿದೆ.

ಇದನ್ನೂ ಓದಿ: ಕೊಹ್ಲಿ ಪವರ್, RCB ಟಾಪರ್ ತವರಿನ ಸೋಲಿಗೆ ಬಡ್ಡಿ ಸಮೇತ ವಸೂಲಿ

ಸಮಂತಾ ಬಾಲಿವುಡ್ ನಿರ್ದೇಶಕ, ನಿರ್ಮಾಪಕ ರಾಜ್ ನಿಡಿಮೊರು ಜೊತೆ ಡೇಟಿಂಗ್ ಮಾಡುತ್ತಿದ್ದಾರೆ ಎಂಬ ಗಾಸಿಪ್‌ ಕೆಲ ದಿನಗಳಿಂದ ಹರಿಡಾಡ್ತಿದೆ. ಈಗ ಆ ಬಗ್ಗೆ ಮತ್ತಷ್ಟು ಅಪ್ಡೇಟ್ ಸಿಕ್ಕಿದೆ. ಸಮಂತಾ ರುತ್ ಪ್ರಭು ಹಾಗೂ ರಾಜ್ ನಿಡಿಮೊರು ಮದುವೆ ಆಗಲಿದ್ದಾರೆ ಎಂದು ಹೇಳಲಾಗ್ತಿದೆ,. ಈಗಾಗ್ಲೇ ಎರಡೂ ಕುಟುಂಬ ಇವರ ಮದುವೆಗೆ ಸಮ್ಮತಿ ನೀಡಿದೆ. ಈ ಜೋಡಿ ಶೀಘ್ರವೇ ನಿಶ್ಚಿತಾರ್ಥ ಮಾಡಿಕೊಳ್ಳಲಿದ್ದಾರೆ ಎನ್ನುವ ವಿಚಾರ ರಿವೀಲ್ ಆಗಿದೆ. ಈಗಾಗ್ಲೇ ಎಂಗೇಜ್ಮೆಂಟ್ ಮಾತುಕತೆಯೂ ನಡೆದಿದೆಯಂತೆ. ಮುಂದಿನ ಎರಡು ತಿಂಗಳ ಒಳಗಾಗಿ ಸಮಂತಾ ಹಾಗೂ ರಾಜ್ ನಿಡಿಮೊರು ಎಂಗೇಜ್ಮೆಂಟ್ ನಡೆಯಲಿದೆ. ಐದು ತಿಂಗಳ ಬಳಿಕ ಅದ್ದೂರಿಯಾಗಿ ಮದುವೆ ಮಾಡಿಕೊಳ್ಳಲಿದ್ದಾರೆ ಎಂದು ಹೇಳಲಾಗ್ತಿದೆ. ಆದ್ರೆ  ನಿಶ್ಚಿತಾರ್ಥದ ವಿಚಾರವನ್ನು ಅಧಿಕೃತವಾಗಿ ಅನೌನ್ಸ್ ಮಾಡದೇ ಇದ್ರೂ, ಇದು ಖಚಿತ ಮಾಹಿತಿ ಅಂತಾ ಮೂಲಗಳು ಹೇಳ್ತಿವೆ. ಹೀಗಾಗಿ ಶೀಘ್ರ ಸಮಂತಾ ನಿಶ್ಚಿತಾರ್ಥ ಡೇಟ್‌ ಅನೌನ್ಸ್ ಮಾಡಿದರೂ ಮಾಡಬಹುದು ಎನ್ನಲಾಗಿದೆ.

ಅಂದ್ಹಾಗೆ ಸಮಂತಾ ಏಪ್ರಿಲ್ 19ಕ್ಕೆ ತಿರುಪತಿ ಬಾಲಾಜಿ ದೇವಸ್ಥಾನಕ್ಕೆ ಭೇಟಿ ನೀಡಿ ಆಶೀರ್ವಾದ ಪಡೆದರು. ನಿರ್ಮಾಪಕ ರಾಜ್ ನಿಡಿಮೋರು ಕೂಡ ಅವರೊಂದಿಗೆ ಇದ್ದರು. ಇದ್ರ ಫೋಟೋ ವಿಡಿಯೋ ಸೋಶಿಯಲ್‌ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ವೈರಲ್‌ ಆಗಿತ್ತು. ಅದರಲ್ಲಿ ಇಬ್ಬರೂ ದೇವಾಲಯದ ಆವರಣದಲ್ಲಿ ಸಾಂಪ್ರದಾಯಿಕ ಉಡುಪಿನಲ್ಲಿ ಕಾಣಿಸಿಕೊಂಡಿದ್ರು. ಅದಾದ್ಮೇಲೆ ರಾಜ್ ನಿಡಿಮೋರು ಅವರನ್ನು ಪ್ರೀತಿಸುತ್ತಿದ್ದಾರೆ ಎಂಬ ಗಾಸಿಪ್ ವೈರಲ್ ಆಗಿತ್ತು. ಸಮಂತಾ ಅಥವಾ ರಾಜ್ ನಿಡಿಮೋರು ತಮ್ಮ ಡೇಟಿಂಗ್ ವದಂತಿಗಳ ಬಗ್ಗೆ ಯಾವುದೇ ಅಧಿಕೃತ ಹೇಳಿಕೆ ನೀಡಿಲ್ಲ. ಆದ್ರೆ  ಅವರ ಅಭಿಮಾನಿಗಳು ಮಾತ್ರ ಈ ಬಗ್ಗೆ ಚರ್ಚೆ ನಡೆಸ್ತಿದ್ದಾರೆ.

Shwetha M

Leave a Reply

Your email address will not be published. Required fields are marked *