ಅಡುಗೆ ಬ್ಯುಸಿನೆಸ್, ಭಾಗ್ಯ ಕೊಟ್ಯಾಧಿಪತಿ.. ಕೆಲಸ ಕಳೆದುಕೊಂಡ ತಾಂಡವ್ – ಪ್ರೀತಿಗಿಂತ ಶ್ರೇಷ್ಠಾಗೆ ದುಡ್ಡೇ ಹೆಚ್ಚಾಯ್ತಾ?

ಕಷ್ಟದ ದಿನಗಳನ್ನ ಕಳಿತಾ ಇದ್ದ ಭಾಗ್ಯಗೆ ಈಗ ಭಾಗ್ಯದ ಬಾಗಿಲು ತೆರೆದಿದೆ. ದುಷ್ಟರು ತನ್ನ ವಿರುದ್ಧ ಎಷ್ಟೇ ಕುತಂತ್ರ ಮಾಡಿದ್ರು ಆಕೆಗೆ ಒಳ್ಳೆಯದ್ದಾಗ್ತಿದೆ. ಇದೀಗ ಭಾಗ್ಯ ಕೆಟ್ಟವರ ವಿರುದ್ಧ ರಿವೀಂಜ್ ತೆಗೆದುಕೊಳ್ಳಲು ಮುಂದಾಗಿದ್ದಾಳೆ. ಇದೀಗ ಭಾಗ್ಯ ಶ್ರೇಷ್ಠಾ ತಾಂಡವ್ ಆಫೀಸ್ ನಲ್ಲೇ ಕ್ಯಾಂಟಿನ್ ತೆರೆದಿದ್ದಾಳೆ. ಭಾಗ್ಯ ಆಫೀಸ್ ಗೆ ಕಾಲಿಡ್ತಿದ್ದಂತೆ ತಾಂಡವ್ ಶ್ರೇಷ್ಠಾ ಗ್ರಹಚಾರ ಕೆಟ್ಟಿದೆ. ಕುತಂತ್ರಿಗಳು ಈಗ ಕೆಲಸ ಕಳೆದುಕೊಂಡಿದ್ದಾರೆ.
ಇದನ್ನೂ ಓದಿ: ಡೆಲ್ಲಿ ವಿರುದ್ಧ ಸೇಡು ತೀರಿಸಿಕೊಂಡ ಆರ್‌ಸಿಬಿ.. 6 ವಿಕೆಟ್‌ಗಳ ಅಮೋಘ ಜಯ – ನಂ.1 ಪಟ್ಟಕ್ಕೇರಿದ ಬೆಂಗಳೂರು
ಭಾಗ್ಯಲಕ್ಷ್ಮೀ ಸೀರಿಯಲ್ ಈಗ ಟ್ವಿಸ್ಟ್ ಆಂಡ್ ಟರ್ನ್‌ನಿಂದ ಕೂಡಿದೆ. ಗಂಡನಿಂದ ದೂರ ಆದ್ರೂ ಭಾಗ್ಯಗೆ ತಾಂಡವ್ ಕಾಟ ತಪ್ತಿಲ್ಲ..ಶ್ರೇಷ್ಠಾ ಜೊತೆ ಸೇರ್ಕೊಂಡು ಆತ ಒಂದಾದ ಮೇಲೊಂದು ಕಷ್ಟ ಕೊಡ್ತಾ ಬಂದಿದ್ದಾನೆ. ಆದ್ರೆ ಆತ ಪ್ರತಿ ಹಂತದಲ್ಲೂ ಭಾಗ್ಯ ಮುಂದೆ ಸೋಲ್ತಾ ಬಂದಿದ್ದಾನೆ. ಇದೀಗ ಭಾಗ್ಯ ತನ್ನ ವಿರುದ್ಧ ನಿಂತವರ ಮೇಲೆ ಸೇಡಿ ತೀರಿಸಿಕೊಳ್ಳಲು ಮುಂದಾಗಿದ್ದಾಳೆ. ತನಗೆ ಕೆಡುಕು ಬಯಸಲು ಬಂದವರಿಗೆ ಸರಿಯಾಗಿ ತಿರುಗೇಟು ಕೊಡಲು ಮುಂದಾಗಿದ್ದಾಳೆ. ಅಷ್ಟೇ ಅಲ್ಲ ತನಗೆ ಬಂದ ಕಷ್ಟಗಳನ್ನೆಲ್ಲ ಭಾಗ್ಯ ಧೈರ್ಯದಿಂದ ಎದುರಿಸಿ ಗೆಲುವು ಕಂಡಿದ್ದಾಳೆ. ಇದೀಗ ತಾಂಡವ್ ಆಫೀಸ್ಗೆ ಹೋಗಿ ಕ್ಯಾಂಟೀನ್ ಶುರು ಮಾಡಿರುವುದಲ್ಲದೆ, ತಾಂಡವ್-ಶ್ರೇಷ್ಠಾ ಇಬ್ಬರನ್ನೂ ಕೆಲಸದಿಂದ ತೆಗೆಯುವಂತೆ ಮಾಡಿದ್ದಾಳೆ.
ಭಾಗ್ಯ ಕೈತುತ್ತು ಬ್ಯುಸಿನೆಸ್ ಒಂದು ಹಂತಕ್ಕೆ ಬರ್ತಿದ್ದಂತೆ ಹೊಸ ಹೆಜ್ಜೆ ಇಟ್ಟಿದ್ದಾಳೆ. ಇಷ್ಟು ದಿನ ಮನೆಯಲ್ಲೆ ಅಡುಗೆ ಮಾಡಿ ಕಳಿಸ್ತಿದ್ದ ಭಾಗ್ಯ, ಇದೀಗ ಕ್ಯಾಂಟಿನ್ ಶುರು ಮಾಡಿದ್ದಾಳೆ. ಅದೂ ಕೂಡ ತಾಂಡವ್, ಶ್ರೇಷ್ಠಾ ಆಫೀಸ್ ನಲ್ಲೇ. ತಾಂಡವ್ ಆಫೀಸ್ನಲ್ಲಿ ಕೈ ತುತ್ತು ಬ್ಯುಸಿನೆಸ್ ಅನ್ನ ದೊಡ್ಡದಾಗಿ ಶುರುಮಾಡಿದ್ದಾಳೆ ಭಾಗ್ಯ.
ಹೌದು, ತಾಂಡವ್ನ ಬಾಸ್ ಬಂದು ಭಾಗ್ಯಾಳನ್ನು ಗ್ರ್ಯಾಂಡ್ ಆಗಿ ವೆಲ್ಕಮ್ ಮಾಡಿ ಇವತ್ತಿಂದ ನಮ್ಮ ಕ್ಯಾಂಟೀನ್ನ ಎಲ್ಲ ಜವಾಬ್ದಾರಿ ಭಾಗ್ಯ ಮತ್ತು ತಂಡ ವಹಿಸಿಕೊಳ್ಳುತ್ತದೆ ಎಂದು ಹೇಳಿದ್ದಾರೆ. ಕಂಪನಿಯ ಬಾಸ್ ಮತ್ತು ಅವರ ಹೆಂಡತಿ ಮನಸಾರೆ ಭಾಗ್ಯಳನ್ನು ಹೊಗಳಿದ್ದಾರೆ. ಅಲ್ಲದೆ, ಉದ್ಯೋಗಿಗಳು ಕೂಡ ಭಾಗ್ಯ ಕ್ಯಾಂಟೀನ್ ತೆರೆದಿರುವುದನ್ನು ಕಂಡು ಸಂಭ್ರಮಿಸಿದ್ದಾರೆ. ಹೊಸ ಕ್ಯಾಂಟೀನ್ ಓಪನ್ ಮಾಡಿರುವ ಖುಷಿಯಲ್ಲಿ ಭಾಗ್ಯ ಎಲ್ಲರಿಗೂ ಸ್ವೀಟ್ ಕೊಡಲು ಹೋಗಿದ್ದಾಳೆ. ಆದರೆ ತಾಂಡವ್ ಅವಳು ಕೊಟ್ಟ ಸ್ವೀಟ್ ಅನ್ನು ದೂರಕ್ಕೆ ಎಸೆದಿದ್ದಾನೆ. ನಂತರ ಅವಳಿಗೆ ಎಲ್ಲರ ಮುಂದೆಯೇ ಬೈದು ಅವಮಾನ ಮಾಡಿದ್ದಾನೆ. ಇದಕ್ಕೆ ಶ್ರೇಷ್ಠಾ ಕೂಡ ಕೈಜೋಡಿಸಿದ್ದಾಳೆ. ನಾನು ಈ ಕಂಪನಿಯ ಮ್ಯಾನೇಜರ್, ನಿನ್ನನ್ನು ಏನು ಮಾಡಬೇಕು ಎಂದು ನನಗೆ ತಿಳಿದಿದೆ ಎಂದು ತಾಂಡವ್ ಧಮ್ಕಿ ಹಾಕುತ್ತಾನೆ. ಇದಾಗಿ ಕೆಲವೇ ಹೊತ್ತಲ್ಲಿ ತಾಂಡವ್-ಶ್ರೇಷ್ಠಾಗೆ ಆಫೀಸ್ನಿಂದ ಗೇಟ್ ಪಾಸ್ ಕೊಡಲಾಗಿದೆ.
ತಾಂಡವ್ ಮತ್ತು ಶ್ರೇಷ್ಠಾಳನ್ನು ಬಾಸ್ ಮತ್ತೆ ಕ್ಯಾಂಟೀನ್‌ಗೆ ಬರುವಂತೆ ಹೇಳಿದ್ದಾರೆ. ಅಲ್ಲಿ ಭಾಗ್ಯ ಮನೆಯವರು, ಆಫೀಸ್ ಸಿಬ್ಬಂದಿಗಳು ಇರುತ್ತಾರೆ. ಬಾಸ್ ಹೆಂಡತಿ ತಾಂಡವ್ ಮತ್ತು ಶ್ರೇಷ್ಠಾಳ ಕೈಗೆ ಕವರ್ ಒಂದನ್ನು ನೀಡುತ್ತಾರೆ. ಭಾಗ್ಯಳಿಗೆ ಕಿರುಕುಳ ಕೊಟ್ಟಿರುವುದಕ್ಕೆ ಇದು ನಿಮಗೆ ಉಡುಗೊರೆ ಎಂದು ಹೇಳುತ್ತಾರೆ. ಇಬ್ಬರೂ ಕವರ್ ತೆಗೆದು ನೋಡಿದಾಗ ಅದರಲ್ಲಿ ಕೆಲಸದಿಂದ ತೆಗೆದುಹಾಕಿರುವ ಟರ್ಮಿನೇಶನ್ ಲೆಟರ್ ಇರುತ್ತದೆ. ಇದನ್ನು ನೋಡಿ ಇಬ್ಬರೂ ಬೆಚ್ಚಿಬೀಳುತ್ತಾರೆ. ಸದ್ಯ ಭಾಗ್ಯಲಕ್ಷ್ಮೀ ಧಾರಾವಾಹಿಗೆ ದೊಡ್ಡ ಟರ್ನಿಂಗ್ ಪಾಯಿಂಟ್ ಸಿಕ್ಕಿದೆ. ತಾಂಡವ್-ಶ್ರೇಷ್ಠಾ ಇನ್ನಾದರೂ ಬದಲಾಗಿ ಬಾಸ್ ಹಾಗೂ ಭಾಗ್ಯ ಬಳಿ ಕ್ಷಮೆ ಕೇಳಿ ಮತ್ತೆ ಆಫೀಸ್ಗೆ ಸೇರುತ್ತಾರ ಅಥವಾ ಈ ಆಫೀಸ್ ಬೇಡ ಎಂದು ಮತ್ತೆ ಭಾಗ್ಯಾಳನ್ನು ಸೋಲಿಸಲು ಪ್ಲ್ಯಾನ್ ಮಾಡುತ್ತಾರಾ ಅನ್ನೋ ಕುತೂಹಲ ವೀಕ್ಷಕರಲ್ಲಿ ಮೂಡಿದೆ.
ಇದೀಗ ಸೀರಿಯಲ್ ಫ್ಯಾನ್ಸ್ ನಾನಾ ಕಾಮೆಂಟ್ ಮಾಡಿದ್ದಾರೆ. ಇದು ಇದು ಚನ್ನಾಗಿದೆ , ಅವ್ರ್ ಕಣ್ಣು ಮುಂದೇನೆ ಭಾಗ್ಯ ಬೆಳಿತಾ ಹೋಗ್ಬೇಕು ,ಅದನ್ನ ನೋಡಿ ತಾಂಡವ್, ಶ್ರೇಷ್ಠ ಉರ್ಕೊಂಡು ಸಾಯ್ಬೇಕು.. ತಾಂಡವ್ ಮತ್ತು ಶ್ರೇಷ್ಠಾಗೆ ಬಾಸ್ ಮುಂದೆ ಮಾತನಾಡಲು ಎಷ್ಟು ಧೈರ್ಯ?? ಕನಿಷ್ಠ ಸಾಮಾನ್ಯ ಜ್ಞಾನವಾದರೂ ಬೇಡ್ವಾ?? ಭಾಗ್ಯಳ ಹೋರಾಟಕ್ಕೆ ನಾವು ಕೃತಜ್ಞರಾಗಿದ್ದೇವೆ, ಎಲ್ಲಾ ಹೋರಾಟ ಮಾಡುತ್ತಿರುವ ಮಹಿಳೆಯರಿಗೆ ಪ್ರೇರಣೆ ಅಂತಾ ಕಾಮೆಂಟ್ ಮಾಡಿದ್ದಾರೆ. ಇನ್ನೂ ಕೆಲವರು, ಬಾಸ್ ಅವರಿಬ್ಬರನ್ನೂ ಕೆಲಸದಿಂದ ತೆಗೆಯುತ್ತಾರೆ.. ಆದ್ರೆ ಭಾಗ್ಯ ಬಾಸ್‌ಗೆ ಕೈಕಾಲು ಹಿಡ್ಕೊಂಡು ಮತ್ತೆ ಕೆಲಸಕ್ಕೆ ಸೇರಿಸುತ್ತಾಳೆ.. ಲಾಸ್ಟ್ ಗೆ ಇದೇ ಆಗೋದು ಅಂತಾ ಕಾಮೆಂಟ್ ಮಾಡಿದ್ದಾರೆ.