ತಂದೆ ಪಾದ ಪೂಜೆ ಮಾಡಿದ ಡ್ರೋನ್.. ಪ್ರತಾಪ್, ಗಗನಾ ಮದ್ವೆ ಆಗ್ತಾರಾ? – ಭರ್ಜರಿ ಬ್ಯಾಚುಲರ್ಸ್ನಲ್ಲಿ ಭಾವುಕ ಕ್ಷಣ

ಡ್ರೋನ್ ಪ್ರತಾಪ್.. ತಾನೊಬ್ಬ ದೊಡ್ಡ ಸೈಂಟಿಸ್ಟ್.. ಡ್ರೋನ್ ತಯಾರಿಸಿ ದೊಡ್ಡ ಸಾಧನೆ ಮಾಡಿದ್ದೀನಿ ಅಂತಾ ಸಕತ್ ಹವಾ ಸೃಷ್ಟಿಸಿದ್ದ ಯುವಕ. ಆದ್ರೆ ಕೆಲವೇ ಸಮಯದಲ್ಲಿ ಪ್ರತಾಪ್ ಬಂಡವಾಳ ಬಯಲಾಯ್ತು.. ಡ್ರೋನ್ ಪ್ರತಾಪ್ ಮಾಡಿದ್ದ ಮಹಾ ಮೋಸಕ್ಕೆ ಪೋಷಕರೂ ಮಾತು ಬಿಟ್ಟಿದ್ದರು. ಇದೆಲ್ಲದ್ರಿಂದ ಪ್ರತಾಪ್ ಡಿಪ್ರೆಶನ್ಗೂ ಹೋಗಿದ್ದರು. ನಂತರ ಪ್ರತಾಪ್ಗೆ ಪುನರ್ಜನ್ಮ ಕೊಟ್ಟಿದ್ದೇ ರಿಯಾಲಿಟಿ ಶೋ. ಬಿಗ್ ಬಾಸ್ ಮನೆಗೆ ಬಂದ್ಮೇಲೆ ಪ್ರತಾಪ್ ಮಾಡಿದ ತಪ್ಪನ್ನ ಅದೆಷ್ಟೋ ಮಂದಿ ಕ್ಷಮಿಸಿದ್ದಾರೆ. ಆ ಶೋ ಮೂಲಕವೇ ಡ್ರೋನ್ ಕನ್ನಡಿಗರ ಮನಗೆದ್ದಿದ್ರು. ಇದೀಗ ಭರ್ಜರಿ ಬ್ಯಾಚುಲರ್ಸ್ ನಲ್ಲಿ ಡ್ರೋನ್ ಸಖತ್ ಹವಾ ಸೃಷ್ಟಿಸಿದ್ದಾರೆ. ಭರ್ಜರಿ ಬ್ಯಾಚುಲರ್ಸ್ ನಲ್ಲಿ ಡ್ರೋನ್ ಹಾಗೂ ಆತನ ತಂದೆ ತಾಯಿ ಕಷ್ಟದ ದಿನಗಳನ್ನ ನೆನೆದು ಕಣ್ಣಿರು ಹಾಕಿದ್ದಾರೆ. ಅಷ್ಟೇ ಅಲ್ಲ ಗಗನಾ ಸೊಸೆ ಆದ್ರೆ ಬೆಸ್ಟ್ ಅಂತಾ ಡ್ರೋನ್ ಮನೆಯವರು ಹೇಳಿದ್ದಾರೆ.
ಇದನ್ನೂ ಓದಿ: ಬ್ಯಾಟಿಂಗ್ & ಕೀಪಿಂಗ್ ನಲ್ಲಿ ಬೆಸ್ಟ್ ಪರ್ಫಾಮೆನ್ಸ್ – ಜಿತೇಶ್ ಶರ್ಮಾ ಪರ್ಫೆಕ್ಟ್ ಪ್ಲೇಯರ್
ಡ್ರೋನ್ ಪ್ರತಾಪ್.. ಎರಡು ವರ್ಷಗಳ ಹಿಂದೆ ಡ್ರೋನ್ ಪ್ರತಾಪ್ ಸಕತ್ ಹವಾ ಸೃಷ್ಟಿ ಮಾಡಿದ್ದ ಯುವಕ. ವಿಶ್ವವಿದ್ಯಾಲಯಗಳಲ್ಲಿ, ಸೆಲೆಬ್ರಿಟಿಗಳ ಜೊತೆಯಲ್ಲಿ, ರಾಜಕಾರಣಿಗಳು ಹೀಗೆ ಎಲ್ಲರ ಎದುರೂ ಭಾಷಣ ಮಾಡುತ್ತಾ, ತಾನು ಪಟ್ಟಿರುವ ಕಷ್ಟಗಳನ್ನೆಲ್ಲಾ ಕಣ್ಣಿಗೆ ಕಟ್ಟುವಂತೆ ಹೇಳುತ್ತಾ ಎಲ್ಲರ ಪ್ರೀತಿ, ವಿಶ್ವಾಸ ಗಳಿಸಿದ್ರು.. ಆದರೆ, ಅದೊಂದು ದಿನ ಪ್ರತಾಪ್ ಗ್ರಹಗತಿಗಳೇ ಬದಲಾಗೋಯ್ತು. ಡ್ರೋನ್ ಮಾಡುವುದಾಗಿ ಹೇಳಿ ನಂಬಿಸಿದ್ದರಿಂದ ಹಿಡಿದು, ತಮ್ಮ ನೋವಿನ ಜೀವನದ ಬಗ್ಗೆ ಎಲ್ಲರ ಕಣ್ಣು ತೇವ ಮಾಡುವಂತೆ ಆಡಿದ ಮಾತುಗಳು ಎಲ್ಲವೂ ಹಸಿಹಸಿ ಸುಳ್ಳು ಎಂದು ಸುದ್ದಿಯಾಯಿತು. ಅಲ್ಲಿಂದ ಡ್ರೋನ್ ಪ್ರತಾಪ್ ವಿರುದ್ಧ ಗಂಭೀರ ಆರೋಪಗಳೇ ಹರಿದು ಬಂದವು. ಎಷ್ಟೋ ಮಂದಿ ಸುಳ್ಳು ಹೇಳಿ ತಮ್ಮಿಂದ ಹಣ ವಸೂಲಿ ಮಾಡಿದ್ದಾನೆ ಎನ್ನುವ ಆರೋಪ ಮಾಡಲು ಶುರು ಮಾಡಿದರು. ಕೊನೆಗೆ ದೂರು ದಾಖಲಾಗಿ, ಜೈಲು ಶಿಕ್ಷೆಯೂ ಆಯಿತು. ಅಪ್ಪ ಅಮ್ಮ ಮಗನೊಂದಿಗೆ ಮಾತು ಬಿಟ್ರು.. ಎಲ್ಲೂ ತಲೆ ಎತ್ತಿ ಓಡಾಡದ ಪರಿಸ್ಥಿತಿ.. ಇದ್ರಿಂದಾಗಿ ಪ್ರತಾಪ್ ಡಿಪ್ರೆಷನ್ ಗೆ ಹೋಗಿದ್ರು.. ಮಾನಸಿಕವಾಗಿ ಕುಗ್ಗಿ ಹೋಗಿದ್ದ ಪ್ರತಾಪ್ ಗೆ ಮರುಜೀವ ಸಿಕ್ಕಿದ್ದು ಬಿಗ್ ಬಾಸ್ ಕನ್ನಡದಿಂದ. ಬಿಗ್ ಬಾಸ್ ಮನೆಗೆ ಬಂದ ಮೇಲೆ ದೊಡ್ಡ ಸೆಲೆಬ್ರಿಟಿಯೇ ಆಗಿದ್ದಾರೆ ಪ್ರತಾಪ್. ಇದೀಗ ಭರ್ಜರಿ ಬ್ಯಾಚುಲರ್ಸ್ ಷೋನಲ್ಲಿ ಡ್ರೋನ್ ಪ್ರತಾಪ್ ಮಿಂಚುತ್ತಿದ್ದಾರೆ. ಗಗನಾ ಜೊತೆ ವೀಕ್ಷಕರಿಗೆ ಮನರಂಜನೆ ನೀಡ್ತಿದ್ದಾರೆ. ಇದೀಗ ಭರ್ಜರಿ ಬ್ಯಾಚುಲರ್ಸ್ ನಲ್ಲಿ ಕಷ್ಟದ ದಿನಗಳನ್ನ ಹೇಳಿಕೊಂಡಿದ್ದಾರೆ. ಅಷ್ಟೇ ಅಲ್ಲ ತಂದೆ ತಾಯಿ ಪಟ್ಟ ಕಷ್ಟವನ್ನು ಎಳೆ ಎಳೆಯಾಗಿ ಬಿಚ್ಚಿಟ್ಟು ಕಣ್ಣೀರು ಹಾಕಿದ್ದಾರೆ.
ಭರ್ಜರಿ ಬ್ಯಾಚುಲರ್ಸ್ ನಲ್ಲಿ ಈ ವಾರ, ಬ್ಯಾಚುಲರ್ಸ್ ಫ್ಯಾಮಿಲಿ ರೌಂಡ್ ಇತ್ತು. ಎಲ್ಲಾ ಬ್ಯಾಚುಲರ್ಸ್ಗಳ ಫ್ಯಾಮಿಲಿನ ವೇದಿಕೆಗೆ ಕರೆಸಲಾಗಿತ್ತು. ತಮ್ಮ ಕುಟುಂಬದ ಏಳು ಬೀಳುಗಳ ಬಗ್ಗೆ ಮಾತನಾಡಿದ್ದು, ಭರ್ಜರಿ ಬ್ಯಾಚುಲರ್ಸ್ ವೇದಿಕೆ ಮನಮಿಡಿಯೋ ಸನ್ನಿವೇಶಗಳಿಗೆ ಸಾಕ್ಷಿಯಾಗಿತ್ತು. ಇದೇ ವೇದಿಕೆಗೆ ಡ್ರೋನ್ ಪ್ರತಾಪ್ ತಂದೆ ತಾಯಿ ಆಗಮಿಸಿದ್ದರು. ಈ ವೇಳೆ ಡ್ರೋನ್ ಪ್ರತಾಪ್ ಮನಬಿಚ್ಚಿ ಮಾತನಾಡಿದ್ದಾರೆ. ಊಟ ಮಾಡುವಾಗ ಮಗನಿಗೆ ಅನ್ನದಲ್ಲಿ ವಿಷ ಹಾಕಿ ಅನ್ನೋ ಮಾತು ಬಂದಿತ್ತು ಅಂದಿದ್ದಾರೆ. ಆಗ ಡ್ರೋನ್ ಅಮ್ಮ ಆ ಜಗತ್ತು ಬೇಡ ಅಂತಾ ಹೇಳಿ ಕಣ್ಣೀರು ಹಾಕಿದ್ದಾರೆ. ನಮ್ಮ ಅಪ್ಪ ಒಂದು ಮಾತು ಅಂದಿಲ್ಲ.. ಅವರ ಪಾದ ಪೂಜೆ ಮಾಡ್ಬೇಕು ಅಂದಿದ್ದಾರೆ. ಅವರ ಮಾತು ಕೇಳಿ ಎಲ್ಲರೂ ಕಣ್ಣೀರು ಹಾಕಿದ್ದಾರೆ.
ಇನ್ನು ಡ್ರೋನ್ ಅವರ ಅಜ್ಜಿ ವೇದಿಕೆಯಲ್ಲೇ ಗಗನಾಗೆ ಶಾಕ್ ಕೊಟ್ಟಿದ್ದಾರೆ. ವೇದಿಕೆಗೆ ಬರ್ತಿದ್ದಂತೆ ಗಗನಾ ಅಜ್ಜಿ ಬಳಿ ಪ್ರಶ್ನೆಯೊಂದನ್ನು ಕೇಳಿದ್ದಾರೆ. ಡ್ರೋನ್ ಪ್ರತಾಪ್ ಲವ್ ಮ್ಯಾರೇಜ್ ಆಗ್ಬೇಕಾ? ಅರೇಂಜ್ಡ್ ಆಗ್ಬೇಕಾ ಅಂತ ಹೇಳಿದ್ದಾರೆ. ಅದಕ್ಕೆ ಅಜ್ಜಿ ನಿಮ್ಮನ್ನೇ ಆಗಬೇಕು ಅಂತ ಹೇಳಿದ್ದಾರೆ. ಈ ಮಾತನ್ನು ಕೇಳಿಸಿಕೊಳ್ಳುತ್ತಿದ್ದಂತೆ ಎಲ್ಲರೂ ಶಾಕ್ ಆಗಿದ್ದಾರೆ. ಅದಕ್ಕೆ ಡ್ರೋನ್ ಪ್ರತಾಪ್ ಬಿದ್ದಿ ಬಿದ್ದು ನಕ್ಕಿದ್ದಾರೆ.

ನೋಡಿರಿ

