ಜಾರಿದ RCB.. ಮೇಲೇರಿದ MI.. ನೆಟ್ ರನ್ ರೇಟ್ ಚಾಲೆಂಜ್ ಆಗುತ್ತಾ? – ರೆಡ್ ಆರ್ಮಿಗೆ ಬೆಂಗಳೂರೇ ಟಾರ್ಗೆಟ್!

ಹೋಂ ಪಿಚ್ನಲ್ಲಿ ಮೊದಲ ಗೆಲುವಿಗೆ ತಡಕಾಡ್ತಿರೋ ಆರ್ಸಿಬಿ ಇವತ್ತು ರಾಜಸ್ತಾನ ರಾಯಲ್ಸ್ ವಿರುದ್ಧ ಚಿನ್ನಸ್ವಾಮಿ ಮೈದಾನದಲ್ಲಿ ಕಣಕ್ಕಿಳಿಯಲಿದೆ. ಈಗಾಗ್ಲೇ ತವರಲ್ಲೇ ಹ್ಯಾಟ್ರಿಕ್ ಸೋಲು ಕಂಡಿರೋ ಆರ್ಸಿಬಿಗೆ ಇಂದಿನ ಪಂದ್ಯ ತುಂಬಾನೇ ಇಂಪಾರ್ಟೆಂಟ್. ಯಾಕಂದ್ರೆ ಒಂದು ಸೋಲು ಪಾಯಿಂಟ್ಸ್ ಟೇಬಲ್ನ ಲೆಕ್ಕಾಚಾರವನ್ನೇ ಬುಡಮೇಲು ಮಾಡಲಿದೆ.
ಇದನ್ನೂ ಓದಿ: ಪಹಲ್ಗಾಮ್ ಉಗ್ರರ ದಾಳಿ – ಭಾರತದಲ್ಲಿ ಪಾಕ್‌ನ X ಖಾತೆ ಬಂದ್
ಈ ಸೀಸನ್ನಲ್ಲಿ ಆರ್ಸಿಬಿ ಟೀಂ 8 ಪಂದ್ಯಗಳನ್ನ ಆಡಿದ್ದು ಅದ್ರಲ್ಲಿ 5 ಮ್ಯಾಚ್ ವಿನ್ ಆಗಿದೆ. ಬಟ್ ಈ ಐದೂ ಗೆಲುವುಗಳೂ ಎದುರಾಳಿ ತಂಡಗಳ ತವರಲ್ಲೇ ಬಂದಿರೋದು. ಚಿನ್ನಸ್ವಾಮಿಯಲ್ಲಿ ಆಡಿದ ಮೂರಕ್ಕೆ ಮೂರೂ ಮ್ಯಾಚ್ ಸೋತಾಗಿದೆ. ಇದೀಗ ಆರ್ಆರ್ ವಿರುದ್ಧ ತವರಲ್ಲಿ ನಾಲ್ಕನೇ ಪಂದ್ಯಕ್ಕೆ ರೆಡಿಯಾಗಿದೆ. ಅತ್ತ ಈ ಸೀಸನ್ನಲ್ಲಿ ಕಂಪ್ಲೀಟ್ ಹಳ್ಳ ಹಿಡಿದಿರೋ ರಾಜಸ್ಥಾನ 8 ಪಂದ್ಯಗಳನ್ನ ಆಡಿ ಜಸ್ಟ್ 2 ಮ್ಯಾಚ್ ಅಷ್ಟೇ ವಿನ್ ಆಗಿದ್ದಾರೆ. ಸೋ ಇವತ್ತು ಗೆಲ್ಲಲೇಬೇಕಾದ ಪ್ರೆಶರ್ನಲ್ಲಿದ್ದಾರೆ. ಒಂದ್ ವೇಳೆ ರೆಡ್ ಆರ್ಮಿಗೆ ಹೋಂ ಗ್ರೌಂಡ್ ಬ್ಯಾಡ್ ಲಕ್ ಕಂಟಿನ್ಯೂ ಆದ್ರೆ ದೊಡ್ಡ ಆಘಾತವೇ ಎದುರಾಗಲಿದೆ.
ಅಂಕಗಳು ಒಂದೇ ಇದ್ರೂ ನೆಟ್ ರನ್ ರೇಟ್ ದೇ ಟ್ವಿಸ್ಟ್!
ಸದ್ಯ ಈ ಸೀಸನ್ ಐಪಿಎಲ್ನಲ್ಲಿ ಗುರಜಾತ್ ಟೈಟನ್ಸ್ ಮತ್ತು ಡೆಲ್ಲಿ ಕ್ಯಾಪಿಟಲ್ಸ್ ತಂಡಗಳು ಅದ್ಭುತ ಪ್ರದರ್ಶನದ ಮೂಲಕ ಟೇಬಲ್ ಟಾಪರ್ಸ್ ಆಗಿದ್ದಾರೆ. ಎರಡೂ ತಂಡಗಳು ಎಂಟೆಂಟು ಮ್ಯಾಚ್ಗಳಲ್ಲಿ ಆಡಿದ್ದು ಅದ್ರಲ್ಲಿ ಆರು ಪಂದ್ಯಗಳನ್ನ ಗೆದ್ಕೊಂಡಿದ್ದಾರೆ. ಉಳಿದ ಎರಡು ಪಂದ್ಯಗಳಲ್ಲಿ ಸೋಲನ್ನ ಕಂಡಿದ್ದಾರೆ. ಬಟ್ ನೆಟ್ ರನ್ ರೇಟ್ ಆಧಾರದ ಮೇಲೆ ಗುಜರಾತ್ ತಂಡವೇ ನಂಬರ್ 1 ಪ್ಲೇಸ್ನಲ್ಲಿದೆ. ಡೆಲ್ಲಿ ತಂಡದ ನೆಟ್ ರನ್ ರೇಟ್ ಸ್ವಲ್ಪ ಕಡಿಮೆ ಇರೋದ್ರಿಂದ ಸೆಕೆಂಡ್ ಪ್ಲೇಸ್ನಲ್ಲಿದ್ದಾರೆ. ಇಲ್ಲಿ ಆರ್ಸಿಬಿ ಮತ್ತು ಪಂಜಾಬ್ ತಲಾ ಐದೈದು ಮ್ಯಾಚ್ ಗೆದ್ದು ಮೂರು ಮೂರು ಪಂದ್ಯಗಳನ್ನ ಸೋತಿದ್ರೂ ಆರ್ಸಿಬಿ ಒಂದು ಕೈ ಮೇಲಿದೆ. ಅಂದ್ರೆ ಪಂಜಾಬ್ಗಿಂತ ಸ್ವಲ್ಪ ನೆಟ್ ರನ್ ರೇಟ್ ಜಾಸ್ತಿ ಇದೆ. ಬಟ್ ಮುಂದಿನ ದಿನಗಳಲ್ಲಿ ಈ ಟೇಬಲ್ ಹೀಗೇ ಇರುತ್ತೆ ಅಂತಾ ಹೇಳೋಕೆ ಆಗಲ್ಲ. ಒಂದು, ಎರಡು ಮ್ಯಾಚ್ಗಳ ಸೋಲು ಇಡೀ ಲೆಕ್ಕಾಚಾರವನ್ನೇ ಬುಡಮೇಲು ಮಾಡಿ ಬಿಡುತ್ತೆ. ಜಸ್ಟ್ ಪಾಯಿಂಟ್ 1 ಪರ್ಸೆಂಟ್ನಿಂದ ಪ್ಲೇಆಫ್ ಮಿಸ್ ಆದ್ರೂ ಅಚ್ಚರಿ ಪಡ್ಬೇಕಿಲ್ಲ. ಹೀಗಾಗಿ ಮ್ಯಾಚ್ ಗೆಲ್ಲೋದ್ರ ಜೊತೆಗೆ ನೆಟ್ ರನ್ ಜಾಸ್ತಿ ಮಾಡಿಕೊಳ್ಳಬೇಕಾದ ಅಗತ್ಯವೂ ಇದೆ.
ಹೋಂ ಪಿಚ್ ನಲ್ಲಿ ಬರ್ತಿಲ್ಲ ಹೈಸ್ಕೋರ್!
ಸದ್ಯ ಮೂರು ಪಂದ್ಯಗಳನ್ನ ಹೋಂ ಗ್ರೌಂಡ್ನಲ್ಲಿ ಆಡಿರೋ ಆರ್ಸಿಬಿ ಮೂರೂ ಸಲವೂ ಟಾಸ್ ಸೋತು ಫಸ್ಟ್ ಬ್ಯಾಟಿಂಗ್ ಮಾಡಿದೆ. ಈ ಮೂರು ಬಾರಿಯೂ ಹೈಸ್ಕೋರ್ ಬಂದಿಲ್ಲ. ಗುಜರಾತ್ ವಿರುದ್ಧದ ಮೊದಲ ಪಂದ್ಯದಲ್ಲಿ 8 ವಿಕೆಟ್ ನಷ್ಟಕ್ಕೆ 169 ರನ್ ಕಲೆ ಹಾಕಿದ್ರು. ಹಾಗೇ ಡೆಲ್ಲಿ ವಿರುದ್ಧದ ಎರಡನೇ ಪಂದ್ಯದಲ್ಲಿ 8 ವಿಕೆಟ್ ನಷ್ಟಕ್ಕೆ 163 ರನ್ ಗಳಿಸಿದ್ರು. ಇನ್ನು ಪಂಜಾಬ್ ವಿರುದ್ಧದ ಮೂರನೇ ಪಂದ್ಯದಲ್ಲಂತೂ ಮಳೆಯಿಂದಾಗಿ ಮ್ಯಾಚ್ ಲೇಟಾಗಿ ಆರಂಭವಾದಾಗ್ಲೂ ಅದೇ ಕಥೆ. ಫಸ್ಟ್ ಬ್ಯಾಟಿಂಗ್ ಮಾಡಿ 9 ವಿಕೆಟ್ ನಷ್ಟಕ್ಕೆ 95 ರನ್ ಅಷ್ಟೇ ಕಲೆ ಹಾಕಿದ್ರು. ಇನ್ನೊಂದು ಅಚ್ಚರಿಯ ವಿಚಾರ ಅಂದ್ರೆ ಅವೇ ಪಿಚ್ಗಳಲ್ಲಿ ಒಂದು ಓವರ್‌ಗೆ 9ರಿಂದ10 ರನ್‌ಗಳನ್ನು ಗಳಿಸಿದ್ದಾರೆ. ಆದ್ರೆ ಚಿನ್ನಸ್ವಾಮಿ ಮೈದಾನದಲ್ಲಿ ಪ್ರತಿ ಓವರ್‌ಗೆ 7-8 ರನ್‌ಗಳಷ್ಟೇ ಬರ್ತಿದೆ. ಹೀಗಾಗಿ ಇಂದಿನ ಪಂದ್ಯದಲ್ಲಿ ಈ ತಪ್ಪು ಮತ್ತೆ ರಿಪೀಟ್ ಆಗದಂತೆ ನೋಡಿಕೊಳ್ಬೇಕು. ಟಾಪ್ ಆರ್ಡರ್ ಬ್ಯಾಟರ್ಸ್ ಉತ್ತಮ ಪ್ರದರ್ಶನ ನೀಡ್ಬೇಕು. ಹಾಗೇ ನೆಟ್ ರನ್ ರೇಟ್ನೂ ಕಾಯ್ದುಕೊಳ್ಳಬೇಕಾಗುತ್ತೆ.