ಜಯಂತ್‌ ಗೆ ಸಿಕ್ಕೇ ಬಿಟ್ಲು ಚಿನ್ನುಮರಿ.. ಸೈಕೋನಿಂದ ತಪ್ಪಿಸಿಕೊಳ್ತಾಳಾ ಜಾನು? – ಜಾಹ್ನವಿ ರಕ್ಷಣೆಗೆ ಬರ್ತಾನಾ ವಿಶ್ವ?

ಜಯಂತ್‌ ಗೆ ಸಿಕ್ಕೇ ಬಿಟ್ಲು ಚಿನ್ನುಮರಿ.. ಸೈಕೋನಿಂದ ತಪ್ಪಿಸಿಕೊಳ್ತಾಳಾ ಜಾನು? – ಜಾಹ್ನವಿ ರಕ್ಷಣೆಗೆ ಬರ್ತಾನಾ ವಿಶ್ವ?

ಜಾಹ್ನವಿ ದೂರವಾದ ಬಳಿಕ ಜಯಂತ್‌ ಸೈಕೋ ಆಗಿದ್ದಾನೆ. ಆಕೆ ಬದುಕಿದ್ದಾಳೆ ಅಂತಾ ಆತನ ಮನಸ್ಸು ಪದೇ ಪದೆ ಹೇಳ್ತಿದೆ. ಜಾನು ಬದುಕಿರೋ ಬಗ್ಗೆ ಆತನಿಗೆ ಈಗಾಗ್ಲೇ ಸುಳಿವು ಸಿಕ್ಕಿತ್ತು. ಇದೀಗ ಕಡೆಗೂ ಜಯಂತ್‌ ಜಾನು ಮುಖಾಮುಖಿಯಾಗಿದ್ದಾರೆ. ಜಾಹ್ನವಿ ಇರುವ ಕಡೆಗೆ ಸೈಕೋಪತಿ ಬಂದಿದ್ದಾನೆ.

ಇದನ್ನೂ ಓದಿ: ಉಗ್ರರ ಗುಂಡಿಗೆ ಬಲಿಯಾದ ಭರತ್‌ ಭೂಷಣ್‌ ಅಂತಿಮ ದರ್ಶನ – ಮಗು ಮುಖ ನೋಡಿ ಸಿಎಂ ಭಾವುಕ

ಲಕ್ಷ್ಮೀನಿವಾಸ ಸೀರಿಯಲ್‌ ಸದ್ಯ ರೋಚಕ ತಿರುವು ಪಡೆದುಕೊಂಡಿದೆ. ಜಯಂತ್‌ ಗೋಮುಖ ವ್ಯಾಘ್ರ ಅಂತ ಗೊತ್ತಾಗ್ತಿದ್ದಂತೆ ಜಾಹ್ನವಿ ಆತನ ವಿರುದ್ಧ ಸಮರ ಸಾರಿದ್ಲು.. ಪ್ರೀತಿಯೆಂಬ ಪಂಜರದಿಂದ ಬಿಡಿಸಿಕೊಂಡು ಶ್ರೀಲಂಕಾದ ಸಮುದ್ರಕ್ಕೆ ಹಾರಿದ್ಲು. ಚಿನ್ನುಮರಿ ಸಮುದ್ರಕ್ಕೆ ಹಾರ್ತಿದ್ದಂತೆ ಆಕೆ ಸತ್ತು ಹೋದ್ಲು ಅಂತಾ ಜಯಂತ್‌ ಆಕೆಯ ಮನೆಯಲ್ಲಿ ಹೇಳಿದ್ದ. ಆದ್ರೆ ಚಿನ್ನುಮರಿ ಬದುಕಿದ್ದಾಳೆ ಅನ್ನೋದು ಜಯಂತ್‌ ನ ಬಲವಾದ ನಂಬಿಕೆ. ಹೀಗಾಗಿ ಆಕೆಯ ಕಾರ್ಯ ಮಾಡೋದು ಆತನಿಗೆ ಇಷ್ಟ ಇಲ್ಲ. ಆದ್ರೆ ದಿನಗಳೆದಂತೆ ಜಾಹ್ನವಿ ಬದುಕಿರೋ ಬಗ್ಗೆ ಒಂದೊಂದೇ ಸುಳಿವು ಸಿಕ್ತಾ ಬಂದಿತ್ತು. ಕಡೆಗೂ ಚಿನ್ನುಮರಿಯನ್ನ ಪತ್ತೆ ಹಚ್ಚಿದ್ದಾನೆ ಜಯಂತ್..‌ ಜಾಹ್ನವಿ ಸೈಕೋಪತಿ ಮುಖಾಮುಖಿಯಾಗಿದ್ದಾರೆ.

ಹೌದು, ಜಯಂತ್‌ ನರಸಿಂಹನ ಮನೆಗೆ ಬ್ಯುಸಿನೆಸ್‌ ವಿಚಾರ ಮಾತನಾಡಲು ಬಂದಿದ್ದ. ಆಗ ಜಾಹ್ನವಿ ಆತನಿಗೆ ಕಾಫಿ ಕೊಡಲು ಬಂದಿದ್ಲು. ಆಗ ಜಯಂತ್‌ ಗೆ ಚಿನ್ನುಮರಿ ಇಲ್ಲೇ ಇದ್ದಾಳೆ ಅಂತ ಅನ್ನಿಸಲು ಶುರುವಾಗಿತ್ತು. ಆದ್ರೆ ಜಯಂತ್‌ ನ ನೋಡ್ತಿದ್ದಂತೆ ಜಾನು ತನ್ವಿ ಕೈಯಲ್ಲಿ ಕಾಫಿ ಕೊಟ್ಟು ಕಳ್ಸಿದ್ಲು. ಆದ್ರೆ ಜಯಂತ ಮನೆಗೆ ವಾಪಸ್ ಹೋದ ಬಳಿಕ ಅವನಿಗೆ ಚಿನ್ನುಮರಿಯದ್ದೇ ಚಿಂತೆಯಾಗಿದೆ. ಅವನು ನರಸಿಂಹನ ಮನೆಯಲ್ಲಿ ಕಾಫಿ ಕುಡಿದ ಬಳಿಕ ಚಿನ್ನುಮರಿಯೇ ಕಾಫಿ ಮಾಡಿರಬಹುದು ಎಂದು ಬಲವಾದ ಸಂಶಯ ಉಂಟಾಗಿದೆ. ಇದನ್ನ ಶಾಂತಮ್ಮ ಬಳಿ ಹೇಳಿದ್ದಾನೆ. ಹೀಗೆ ಕಾಫಿ ಮಾಡಲು ಜಾಹ್ನವಿಗೆ ಮಾತ್ರ ಸಾಧ್ಯ. ಅವಳು ಇಲ್ಲದೆ ಬೇರೆ ಯಾರಿಂದಲೂ ಅಷ್ಟು ರುಚಿಯಾಗಿ ಕಾಫಿ ಮಾಡಲು ಸಾಧ್ಯವಿಲ್ಲ ಎಂದು ಹೇಳಿದ್ದಾನೆ. ಅವರು, ನಿನಗೆ ದಿನಪೂರ್ತಿ ಅವಳದೇ ಯೋಚನೆ ಅಲ್ಲವೇ, ಹೀಗಾಗಿ ಅವಳದೇ ನೆನಪಾಗಿರುತ್ತದೆ ಎಂದು ಹೇಳುತ್ತಾರೆ. ಆದರೂ ಜಯಂತನ ಮನಸ್ಸಿನಲ್ಲಿ ಸಂಶಯ ಕಡಿಮೆಯಾಗಿಲ್ಲ. ಜಯಂತ ಹೇಗಾದರೂ ಸರಿ, ಜಾಹ್ನವಿಯನ್ನು ಪತ್ತೆ ಮಾಡಿಯೇ ಸಿದ್ದ ಎಂದು ನರಸಿಂಹನ ಮನೆಗೆ ಬಂದಿದ್ದಾನೆ.

ಹೌದು, ನರಸಿಂಹನ ಮನೆಗೆ ಬಂದ ಜಯಂತ್‌ ಕಾಲಿಂಗ್ ಬೆಲ್‌ ಪ್ರೆಸ್‌ ಮಾಡಿದ್ದಾನೆ. ಕಾಲಿಂಗ್‌ ಬೆಲ್‌ ಸೌಂಡ್‌ ಆಗ್ತಿದ್ದಂತೆ ಜಾಹ್ನವಿ ಬಂದು ಬಾಗಿಲು ತೆಗೆದಿದ್ದಾಳೆ. ನಂತರ ಹೊರಗಡೆ ಬಂದು ನೋಡಿದ್ದಾಳೆ. ಆಗ ಜಯಂತ ಅಲ್ಲಿಗೆ ಬಂದು ಚಿನ್ನುಮರೀ.. ಎಂದು ಕರೆದಿದ್ದಾನೆ. ಜಯಂತ್‌ ನನ್ನ ನೋಡಿ ಜಾಹ್ನವಿ ಬೆಚ್ಚಿಬಿದ್ದಿದ್ದಾಳೆ. ಇದೀಗ ಜಯಂತ್‌ ಕೈಗೆ ಸಿಕ್ಕ ಜಾಹ್ನವಿ ಏನ್‌ ಮಾಡ್ತಾಳೆ? ಆಕೆ ಅಲ್ಲಿಂದ ಎಸ್ಕೇಪ್‌ ಆಗ್ತಾಳಾ? ಅಥವಾ ವಿಶ್ವ ಅಲ್ಲಿಗೆ ಬಂದು ಜಾಹ್ನವಿಯನ್ನ ಕಾಪಾಡ್ತಾನಾ ಅನ್ನೋ ಕ್ಯೂರಿಯಾಸಿಟಿ ಮೂಡಿದೆ. ಇದೀಗ ಸೀರಿಯಲ್‌ ಪ್ರೇಮಿಗಳು ಇದು ನಿಜ ಅಲ್ಲ ಕನಸು.. ಜಯಂತ್‌ಗೆ ಚಿನ್ನುಮರಿ ಇಷ್ಟು ಬೇಗ ಸಿಗ್ಲಿಕ್ಕೆ ಇಲ್ಲ.. ಒಂದ್ವೇಳೆ ಆತನಿಗೆ ಜಾನು ಸಿಕ್ಕಿದ್ರೂ ಆಕೆ ಜಯಂತ್‌ ಜೊತೆ ಬರ್ಲಿಕ್ಕೆ ಇಲ್ಲ ಅಂತಾ ಕಾಮೆಂಟ್‌ ಮಾಡಿದ್ದಾರೆ.

Shwetha M

Leave a Reply

Your email address will not be published. Required fields are marked *