ಮದರಂಗಿ ಕೈಗೆ ಅಂಟಿದ ಗಂಡನ ರಕ್ತ!! ಏಳೇ ದಿನಕ್ಕೆ ಕುಂಕುಮ ಅಳಿಸಿದ ಉ*ಗ್ರರು
ನವಜೋಡಿ ಬಾಳಲ್ಲಿ ವಿಧಿಯ ‘ಉಗ್ರ’ದಾಳಿ!!

ಮದರಂಗಿ ಕೈಗೆ ಅಂಟಿದ ಗಂಡನ ರಕ್ತ!!  ಏಳೇ ದಿನಕ್ಕೆ ಕುಂಕುಮ ಅಳಿಸಿದ ಉ*ಗ್ರರುನವಜೋಡಿ ಬಾಳಲ್ಲಿ ವಿಧಿಯ ‘ಉಗ್ರ’ದಾಳಿ!!

ಮದುವೆ ದಿನ ಮೈಗೆ ಹಚ್ಚಿದ ಅರಿಶಿಣ ಇನ್ನೂ ಹೋಗಿಲ್ಲ.. ಕೈಗೆ ಹಾಕಿದ್ದ ಬಳೆ ಇನ್ನೂ ಸದ್ದು ಮಾಡುತ್ತಿವೆ. . ಕೈಗೆ ಹಚ್ಚಿದ  ಮದರಂಗಿ ಜೊತೆ ಗಂಡನ ರಕ್ತವೂ ಕೈಗೆ ಅಂಟಿದೆ. 5 ದಿನಗಳ ಹಿಂದೆ ಮದುವೆಯ ರಂಗಿನಲ್ಲಿದ್ದವರು ಈಗ ರಕ್ತದಲ್ಲಿ ಮುಳುಗಿ ಹೋಗಿದ್ದಾರೆ. ಭಯೋತ್ಪಾದಕರ ಅಟ್ಟಹಾಸಕ್ಕೆ ಹಸಮಣೆ ಏರಿದ ಕೂಡಲೇ ಗಂಡನನ್ನ ಕಳೆದುಕೊಂಡು ಕಣ್ಣೀರು ಹಾಕುತ್ತಿದ್ದಾಳೆ ಹೆಣ್ಣುಮಗು.. ನಿಜ ಕ್ಕೂ ಜಮ್ಮ ಕಾಶ್ಮೀರ ಈ ಘಟನೆ ಒಂದೊಂದು ಭೀಕರತೆಯ ಜೊತೆ ಕಣ್ಣೀರನ ಕಥೆಯನ್ನ ತೆರೆದಿಡುತ್ತಿದೆ. ಅದ್ರಲ್ಲೂ  ಭಾರತೀಯ ನೌಕಾಪಡೆಯ ಅಧಿಕಾರಿ ಲೆಫ್ಟಿನೆಂಟ್ ವಿನಯ್ ನರ್ವಾಲ್  ಸಾವು ಉಗ್ರರ ಭೀಕರತೆ ಸಾಕ್ಷಿಯಾಗಿದೆ..

ನೀನು.. ದಲಿತನ.. ನೀನು ಒಕ್ಕಲಿಗನ..ನೀನು ಜನಿವಾರ ಹಾಕಿದ್ಯಾ? ನೀನು ಬ್ರಾಹ್ಮಣನ.. ನೀನು ಎಸಿನಾ.. ನೀನು ಎಸ್‌ಟಿನಾ.. ನೀನು ಯಾವ ಜಾತಿಯಂತ ಕೇಳಿಲ್ಲ.. ನೀನಗೆ  ಯಾವ್ ಜಾತಿ ಅಂತ ಕೇಳಿಲ್ಲ. ನಿನ್ನ ಅಮ್ಮನಿಗೆ ವಯಸ್ಸು ಆಗಿದ್ಯ? ನಿಮಗೆ ಹೊಸದಾಗಿ ಮದುವೆ ಆಗಿದ್ದು ಅಷ್ಟೇನಾ? ಅಂತ ಕೇಳಿಲ್ಲ.. ನೀಚರು ಕೇಳಿದ್ದು ಒಂದೇ ನಿನ್ನ ಧರ್ಮ ಯಾವುದು ಅಂತಾ.. ಹಿಂದೂ ಎನ್ನುತ್ತಿದ್ದಂತೆ ಹಿಂದೂಮುಂದು ನೋಡದೆ ಹಣೆಗೆ ಗುಂಡಿಕ್ಕಿದ್ರು.  ಹೆಂಡತಿ ಮಕ್ಕಳ ಆಕ್ರಂದನ ನೋಡಿ ಖುಷಿಯಲ್ಲಿ ತೇಲಿದ್ರು..ಮನುಷ್ಯರಂತಿದ್ದ ನರರಾಕ್ಷಸರ ಹರಿಸಿದ ನೆತ್ತರಿಗೆ ಹೊಸದಾಗಿ ಮದುವೆಯಾಗಿದ್ದ ಹೆಣ್ಣುಮಕ್ಕಳು ಕಣ್ಣೀರಿನಲ್ಲಿ ತೇಲುತ್ತಿದ್ದಾಳೆ. ಕಣ್ಣೀರಿನಲ್ಲಿ ತನ್ನ ಮೈಗೆ ಹಚ್ಚಿದ ಅರಿಶಿಣ ತೊಳೆದು ಹೋಗಿದೆ..

ಈ ಫೋಟೋ ನೋಡಿ.. ಈ ಒಂದು ಫೋಟೋ ಸಾಕು ಉಗ್ರರ ಅಟ್ಟಹಾಸಕ್ಕೆ ಹೇಗೆ ಹೊಸ ಜೋಡಿಯ ಜೀವನವೇ ಹಾಳಾಗಿದೆಯೆಂದು.. ಗಂಡ ಭಯೋತ್ಪಾದಕರ ಅಟ್ಟಹಾಸಕ್ಕೆ ಜೀವ  ಕಳೆದುಕೊಂಡು ಮಲಗಿದ್ರೆ, 6 ದಿನಗಳ ಹಿಂದಷ್ಟೇ ಮದುವೆಯಾದವಳು ಏನ್ ಮಾಡಬೇಕು ಹೇಳಿ.. ಮದುವೆ ಆಗಿ 7 ದಿನದಲ್ಲಿ ಕೊನೆಯವರೆಗೂ ಜೊತೆಯಲ್ಲಿ ಇರಬೇಕಾಗಿದ್ದ ಪತಿಯನ್ನ ಪತ್ನಿಯ ಕಣ್ಣೆದುರು ಗುಂಡಿಕ್ಕಿ ಕೊಲ್ಲುವುದನ್ನು ಯಾವ ಹೆಣ್ಣು ನೋಡಲು ಸಾಧ್ಯ. ಇಂತಹ ಸಂದರ್ಭ ಯಾವ ಹೆಣ್ಣಿಗೂ ಕೂಡ ಬರಬಾರದು. ಇಂತಹ ಕೃತ್ಯ ಎಸಗುವವರನ್ನು ಕಂಡ ಕಂಡಲ್ಲಿ ಗುಂಡು ಹಾರಿಸಿ ಕೊಲ್ಲಬೇಕು. ಹೀಗಂತ ಇಡೀ ದೇಶವೇ ಸಾರಿ ಸಾರಿ ಹೇಳುತ್ತಿದೆ. ನಮ್ಮ ದೇಶದ ಜನರ ಪ್ರಾಣವನ್ನು ತೆಗೆದವರ ಪ್ರಾಣವನ್ನು ನೀವು ತೆಗೆಯಿರಿ ಎಂದು ಇಡೀ ದೇಶವೇ ಕೂಗಿ ಹೇಳುತ್ತಿದೆ.  ಹರಿಯಾಣದ   26 ವರ್ಷದ ಭಾರತೀಯ ನೌಕಾಪಡೆಯ ಅಧಿಕಾರಿ ಲೆಫ್ಟಿನೆಂಟ್ ವಿನಯ್ ನರ್ವಾಲ್ ಸಾವು, ಗಂಡನ ಹೆಣದ ಮುಂದೆ ರೋಧಿಸುವ ಹೆಂಡತಿಯ ದೃಶ್ಯ ನಿಜಕ್ಕೂ ಕ್ರೂರತ್ವಕ್ಕೆ ಹಿಡಿದ ಕೈಗನ್ನಡಿಯಾಗಿದೆ.

ಕೊಚ್ಚಿಯಲ್ಲಿ ನಿಯೋಜನೆಗೊಂಡಿದ್ದ ವಿನಯ್ ಏಪ್ರಿಲ್ 16 ರಂದು ವಿವಾಹವಾಗಿದ್ದರು. ಈ ನವ ದಂಪತಿಗಳು ಪಹಲ್ಗಾಮ್‌ನಲ್ಲಿ ಹನಿಮೂನ್‌ಗೆ ತೆರಳಿದ್ದರು ಎನ್ನಲಾಗಿದೆ. ನರ್ವಾಲ್ ಕೇವಲ ಎರಡು ವರ್ಷಗಳ ಹಿಂದೆ ನೌಕಾಪಡೆಗೆ ಸೇರಿದ್ದರು ಮತ್ತು ಕೊಚ್ಚಿಯಲ್ಲಿ ನಿಯೋಜನೆಗೊಂಡಿದ್ದರು. ಬಿ.ಟೆಕ್ ಮಾಡಿದ ನಂತರ ಅವರು ಭಾರತೀಯ ನೌಕಾಪಡೆಗೆ ಸೇರಿದರು. 3 ವರ್ಷಗಳ ಹಿಂದೆ ಲೆಫ್ಟಿನೆಂಟ್ ಆಗಿ ನೌಕಾಪಡೆಗೆ ಸೇರಿದರು. ಕೊಚ್ಚಿಯಲ್ಲಿ ಅವರ ಕರ್ತವ್ಯವಿತ್ತು. ವಿನಯ್ ಅವರ ತಂದೆ ಪಾಣಿಪತ್‌ನ ಕಸ್ಟಮ್ಸ್ ಇಲಾಖೆಯಲ್ಲಿ ಸೂಪರಿಂಟೆಂಡೆಂಟ್ ಆಗಿ ನೇಮಕಗೊಂಡಿದ್ದಾರೆ. ಅಜ್ಜ ಹವಾ ಸಿಂಗ್ ಹರಿಯಾಣ ಪೊಲೀಸ್ ಆಗಿದ್ದಾರೆ.

ವಿನಯ್ ನರ್ವಾಲ್ ಕುಟುಂಬದಲ್ಲಿ ಬಹುತೇಕ ಎಲ್ಲರೂ ಕೂಡ ಒಂದೊಳ್ಳೆ ಹುದ್ದೆಯಲ್ಲಿ ಇದ್ದಾರೆ. ಹರಿಯಾಣದ ಲೆಫ್ಟಿನೆಂಟ್ ಅಧಿಕಾರಿಯಾದ ಬಳಿಕ ವಿನಯ್ ನರ್ವಾಲ್ ಅವರು ಏಪ್ರಿಲ್ 16 ರಂದು ಮದುವೆ ಮಾಡಿಕೊಂಡರು. ನಂತರ ಪತ್ನಿಯೊಂದಿಗೆ ಪಹಲ್ಗಾಮ್‌ಗೆ ತೆರಳಿದ್ದರು. ಈ ವೇಳೆ ಬಂದ ಉಗ್ರರು ಅವರ ಹೆಸರು ಕೇಳಿದ್ದಾರೆ. ಅವರು ಹಿಂದೂ ಎಂದು ಗೊತ್ತಾದ ಬಳಿಕ ಶೂಟ್ ಮಾಡಿ ಕಾಲ್ಕಿತ್ತಿದ್ದಾರೆ. ವಿನಯ್ ನರ್ವಾಲ್ ಅವರ ಪತ್ನಿ ಈ ಬಗ್ಗೆ ಹೇಳಿಕೊಂಡಿದ್ದಾರೆ. ‘ನಾನು ನನ್ನ ಪತಿಯೊಂದಿಗೆ ಭೇಲ್ಪುರಿ ತಿನ್ನುತ್ತಿದ್ದೆ, ಅಷ್ಟರಲ್ಲಿ ಒಬ್ಬ ವ್ಯಕ್ತಿ ಬಂದನು. ನೀವು ಮುಸ್ಲಿಂ ಅಥವಾ ಹಿಂದೂನಾ’ ಎಂದು ಹೇಳುತ್ತಿದ್ದಾರೆ. ನನ್ನ ಪತಿ ಮುಸ್ಲಿಂ ಅಲ್ಲ ಎಂದು ಹೇಳಿದರು. ನಂತರ ಅವನು ಪತಿಗೆ ಗುಂಡು ಹಾರಿಸಿದ ಎಂದು ಹೇಳಿದ್ದಾರೆ.ಒಟ್ನಲ್ಲಿ ಹೊಸದಾಗಿ ಮದುವೆಯಾಗಿ ಬಾಳಿ ಬದಕಬೇಕಿದ್ದ  ನವ ಜೋಡಿಯ ಜೀವನವನ್ನೇ ಒಂದು ಧರ್ಮ ಹಾಳು ಮಾಡಿದೆ. ನೀಚರ ಧರ್ಮದ ಅಮಲಿಗೆ ಒಂದು ಹೆಣ್ಣು ಗಂಡನನ್ನ ಕಳೆದುಕೊಂಡು ಕಣ್ಮೀರು ಹಾಕುತ್ತಿದ್ದಾಳೆ.. ನಿಜಕ್ಕೂ ಈ ಹೆಣ್ಣು ಮಗಳ ಕಣ್ಣೀರು ಧರ್ಮದ ಹೆಸರಲ್ಲಿ ರಕ್ತ ಹರಿಸುತ್ತಿರೋರನ್ನ ಸುಮ್ಮನೆ  ಬಿಡೋದಿಲ್ಲ.. ಆ ಭೋಯೋತ್ಪಾದರ ಸಂಹಾರವನ್ನೇ ಭಾರತ ಮಾಡೇ ಮಾಡುತ್ತೆ..

Kishor KV

Leave a Reply

Your email address will not be published. Required fields are marked *