RCBಗೆ ಅಯ್ಯರ್ ಬರದಿದ್ದೇ ಅದೃಷ್ಟ -₹23.50 ಕೋಟಿ ವೇಸ್ಟ್ ಆಗುತ್ತಿತ್ತಾ?
ವೆಂಕಟೇಶ್ ನಂಬಿ ಕೆಟ್ಟ KKR

RCBಗೆ ಅಯ್ಯರ್ ಬರದಿದ್ದೇ ಅದೃಷ್ಟ -₹23.50 ಕೋಟಿ ವೇಸ್ಟ್ ಆಗುತ್ತಿತ್ತಾ?ವೆಂಕಟೇಶ್ ನಂಬಿ ಕೆಟ್ಟ KKR

ಮೆಗಾ ಹರಾಜಿನಲ್ಲಿ ಸಂಭಾವನೆ ಮೂಲಕ ಹೆಚ್ಚು ಸೌಂಡ್ ಮಾಡಿದ್ದು ರಿಷಭ್ ಪಂತ್ ಮತ್ತು ಶ್ರೇಯಸ್ ಅಯ್ಯರ್. ಪಂತ್​ರನ್ನ ಲಕ್ನೋ ಸೂಪರ್ ಜೇಂಟ್ಸ್ 27 ಕೋಟಿ ರೂಪಾಯಿಗೆ ಖರೀದಿ ಮಾಡಿದ್ರೆ ಶ್ರೇಯಸ್ ಮೇಲೆ ಪಂಜಾಬ್ ಕಿಂಗ್ಸ್ ತಂಡ 26.75 ಕೋಟಿ ಬಿಡ್ ಮಾಡಿತ್ತು. ಇವ್ರ ಬಳಿಕ ವೆಂಕಟೇಶ್ ಅಯ್ಯರ್ ಕೂಡ ಸಾಕಷ್ಟು ಸುದ್ದಿಯಲ್ಲಿದ್ರು. ಯಾಕಂದ್ರೆ ವೆಂಕಿ ಮೇಲೆ ಕೆಕೆಆರ್ 23.75 ಕೋಟಿ ರೂಪಾಯಿ ಕೊಟ್ಟು ಖರೀದಿ ಮಾಡಿತ್ತು. ವಿಷ್ಯ ಅಂದ್ರೆ ಇದೇ ವೆಂಕಿ ಮೇಲೆ ಆರ್​ಸಿಬಿ ಕೂಡ ಜಿದ್ದಿಗೆ ಬಿದ್ದು ಬಿಡ್ ಕೂಗಿತ್ತು. 23.50 ಕೋಟಿವರೆಗೂ ಹರಾಜು ಕೂಗಿತ್ತು. ಆದ್ರೆ ಅಂತಿಮವಾಗಿ ಕೆಕೆಆರ್ ತಂಡವೇ ಮೇಲುಗೈ ಸಾಧಿಸಿತ್ತು. ಹೀಗೆ ಹೆಚ್ಚು ಮೊತ್ತ ಪಡೆದು ಕೊಲ್ಕತ್ತಾ ಸೇರಿರೋ ವೆಂಕಿ ಕಂಪ್ಲೀಟ್ ಫ್ಲ್ಯಾಪ್ ಆಗಿದ್ದಾರೆ.

ಇದನ್ನೂ ಓದಿ : 6 ಮ್ಯಾಚ್.. ಬೆಂಗಳೂರಲ್ಲೇ 4 ಫೈಟ್.. RCB ತವರಲ್ಲಿ ಗೆದ್ರಷ್ಟೇ ಪ್ಲೇಆಫ್ – ಟಾಸ್.. ಚೇಸಿಂಗ್.. ಸವಾಲುಗಳೇನು?

ಯೆಸ್. ಮೆಗಾ ಹರಾಜಿಗೂ ಮುನ್ನ ಕೆಕೆಆರ್ ತಮ್ಮ ಚಾಂಪಿಯನ್ ನಾಯಕ ಶ್ರೇಯಸ್ ಅಯ್ಯರ್​ರನ್ನ ರಿಲೀಸ್ ಮಾಡಿ ಶಾಕ್ ಕೊಟ್ಟಿತ್ತು. ಹಾಗೇ ಹರಾಜಿನಲ್ಲೂ ಮತ್ತೆ ಖರೀದಿಯೂ ಮಾಡಲಿಲ್ಲ. ಆದ್ರೆ ತಮ್ಮ ತಂಡದಲ್ಲೇ ಇದ್ದ ವೆಂಕಟೇಶ್ ಅಯ್ಯರ್ ಮೇಲೆ ಮಾತ್ರ ಕೋಟಿ ಕೋಟಿ ಸುರಿದಿತ್ತು. 23.75 ಕೋಟಿ ರೂಪಾಯಿ ಕೊಟ್ಟು ಮರಳಿ ತಂಡಕ್ಕೆ ಕರೆಸಿಕೊಂಡಿತ್ತು. ಆದ್ರೆ ಇಷ್ಟೊಂದು ಹಣ ಪಡೆದ್ರೂ ವೆಂಕಟೇಶ್ ಅಯ್ಯರ್ ಈ ಸೀಸನ್​ನಲ್ಲಿ ಅಟ್ಟರ್ ಫ್ಲ್ಯಾಪ್ ಆಗಿದ್ದಾರೆ. ಸತತ ವೈಫಲ್ಯಗಳನ್ನ ಅನುಭವಿಸ್ತಾ ಇದ್ದಾರೆ. ವೆಂಕಟೇಶ್ ಅಯ್ಯರ್ ಆಡಿರುವ ಎಂಟು ಪಂದ್ಯಗಳಲ್ಲಿ 22.50 ಸರಾಸರಿಯಲ್ಲಿ ಕೇವಲ 135 ರನ್ ಗಳಿಸಿದ್ದಾರೆ. 60 ರನ್‌ ಅವರ ಅತ್ಯಧಿಕ ಸ್ಕೋರ್ ಆಗಿದೆ. ಬಟ್ ಕೆಕೆಆರ್ ಬಿಟ್ಟು ಪಂಜಾಬ್ ಸೇರಿದ ಶ್ರೇಯಸ್ ಅಯ್ಯರ್ ಎಂಟು ಪಂದ್ಯಗಳಲ್ಲಿ 43.83 ಸರಾಸರಿಯಲ್ಲಿ ಮೂರು ಅರ್ಧಶತಕಗಳನ್ನು ಒಳಗೊಂಡಂತೆ 263 ರನ್ ಗಳಿಸಿದ್ದಾರೆ. ಸೋ ಶ್ರೇಯಸ್ ಅಯ್ಯರ್​ರನ್ನ ಬಿಟ್ಟು ವೆಂಕಿ ಮೇಲೆ ಅಷ್ಟೊಂದು ಹಣ ಸುರಿದಿದ್ದಕ್ಕೆ ಫ್ಯಾನ್ಸ್ ಸಿಕ್ಕಾಪಟ್ಟೆ ಸಿಟ್ಟಾಗಿದ್ದಾರೆ. ಕೆಕೆಆರ್ ಫ್ರಾಂಚೈಸಿ ಟಿವಿಯನ್ನ ಮಾರಿ ರಿಮೋಟ್ ಖರೀದಿ ಮಾಡಿದೆ ಅಂತಾ ಟ್ರೋಲ್ ಮಾಡ್ತಿದ್ದಾರೆ.

ಇಲ್ಲಿ ಇನ್ನೊಂದು ಶಾಕಿಂಗ್ ವಿಚಾರ ಅಂದ್ರೆ ಆರ್​ಸಿಬಿ ಫ್ರಾಂಚೈಸಿ ಇದೇ ವೆಂಕಿ ಮೇಲೆ ಬರೋಬ್ಬರಿ 23.50 ಕೋಟಿ ರೂಪಾಯಿವರೆಗೂ ಬಿಡ್ ಮಾಡಿತ್ತು. ವೆಂಕಟೇಶ್ ಅಯ್ಯರ್ ಹೆಸರು ಹರಾಜಿಗೆ ಕರೆದಾಗ ಆರ್​ಸಿಬಿ ಫ್ರಾಂಚೈಸಿಯು ಸಖತ್ ಪೈಪೋಟಿ ನೀಡಿತ್ತು. 23.50 ಕೋಟಿ ರೂಪಾಯಿಗಳವರೆಗೆ ಹರಾಜು ಕರೆದಿತ್ತು. ಈ ಹರಾಜಿನಲ್ಲಿ ಆರ್​ಸಿಬಿ ಹಾಗೂ ಕೋಲ್ಕತ್ತಾ ನಡುವೆ ಭಾರೀ ಬಿಡ್​ ನಡೆದಿತ್ತು.  ಆರ್ ಸಿಬಿ ಕರೆದ ಬಿಡ್ ಮೇಲೆ ಕೆಕೆಆರ್​ ಇನ್ನು 25 ಲಕ್ಷ ಹೆಚ್ಚು ಮಾಡಿ ಹರಾಜು ಕರೆಯಿತು. ಈ ವೇಳೆ ಆರ್​ಸಿಬಿ ಹಿಂದೆ ಸರಿದ ಕಾರಣ ವೆಂಕಟೇಶ್ ಅಯ್ಯರ್​​ಗೆ ಒಟ್ಟು 23.75 ಕೋಟಿ ರೂಪಾಯಿಗಳನ್ನು ನೀಡಿ ಕೋಲ್ಕತ್ತಾ ಖರೀದಿ ಮಾಡಿತು. ಇದರಿಂದ ವೆಂಕಟೇಶ್ ಅಯ್ಯರ್ ಮತ್ತೆ ತಮ್ಮ ತಂಡವನ್ನೇ ಸೇರಿಕೊಂಡಿದ್ರು. ಆದ್ರೆ ಇಷ್ಟೊಂದು ಹಣ ಪಡೆದ್ರೂ ಅವ್ರಿಂದ ಹೇಳಿಕೊಳ್ಳುವಂತ ಪರ್ಫಾಮೆನ್ಸ್ ಬರ್ತಿಲ್ಲ. ಕೆಕೆಆರ್ ಈ ಸೀಸನ್​ನಲ್ಲಿ 8 ಪಂದ್ಯಗಳನ್ನ ಆಡಿದ್ದು 3ರಲ್ಲಿ ಮಾತ್ರವೇ ಗೆಲುವು ಸಾಧಿಸಿದೆ. ಅಲ್ದೇ ಪಂಜಾಬ್ ವಿರುದ್ಧ 111ರನ್​ಗಳನ್ನ ಚೇಸ್ ಮಾಡೋಕೂ ಆಗದೆ 95 ರನ್​ಗಳಿಗೆ ಆಲೌಟ್ ಆಗಿತ್ತು. ಈ ಮೂಲಕ ಹಾಲಿ ಚಾಂಪಿಯನ್ ತಂಡ ಅಭಿಮಾನಿಗಳಿಗೆ ಸಾಕಷ್ಟು ನಿರಾಸೆ ಮೂಡಿಸ್ತಿದೆ.

2024ರ ಐಪಿಎಲ್​ನ ಚಾಂಪಿಯನ್ ತಂಡ ಕೆಕೆಆರ್ ಈ ಸಲ ಫ್ಲ್ಯಾಪ್ ಆಗಿದೆ. ಸುನಿಲ್ ನರೈನ್, ರಿಂಕು ಸಿಂಗ್, ಌಂಡ್ರೆ ರಸೆಲ್, ಡಿಕಾಕ್, ಗುರ್ಬಾಜ್, ರಹಾನೆಯಂಥ ಸ್ಟಾರ್ ಆಟಗಾರರ ದಂಡೇ ಇದ್ರೂ ಇಂಪ್ರೆಸ್ಸಿವ್ ಇನ್ನಿಂಗ್ಸ್ ಬರ್ತಿಲ್ಲ. ಅದ್ರಲ್ಲೂ ಕೆಕೆಆರ್ ತುಂಬಾನೇ ಹೋಪ್ಸ್ ಇಟ್ಟುಕೊಂಡಿದ್ದ ವೆಂಕಿ ಆಟಕ್ಕುಂಟು ಲೆಕ್ಕಕ್ಕಿಲ್ಲ ಎನ್ನುವಂತಾಗಿದ್ದಾರೆ. ಈ ಕಾಸ್ಟ್ಲಿ ಆಟಗಾರನ ಆಟ ನೋಡಿದ್ಮೇಲೆ ಆರ್​ಸಿಬಿ ಫ್ಯಾನ್ಸ್ ಅಂತೂ ನಿಟ್ಟುಸಿರು ಬಿಟ್ಟಿದ್ದಾರೆ. ನಮ್ಮ ಕೆಎಲ್ ರಾಹುಲ್​ಗೆ 10 ಕೋಟಿ ಮೇಲೆ ಬಿಡ್ ಮಾಡ್ಲಿಲ್ಲ. ವೆಂಕಿ ಮೇಲೆ ಇಷ್ಟೊಂದು ಹಣ ಕೊಡೋಕೆ ರೆಡಿಯಿದ್ದಾರೆ ಅಂತಾ ಆಗ್ಲೇ ಆಕ್ರೋಶ ಹೊರ ಹಾಕಿದ್ರು.

Shantha Kumari

Leave a Reply

Your email address will not be published. Required fields are marked *