6 ಮ್ಯಾಚ್.. ಬೆಂಗಳೂರಲ್ಲೇ 4 ಫೈಟ್.. RCB ತವರಲ್ಲಿ ಗೆದ್ರಷ್ಟೇ ಪ್ಲೇಆಫ್ – ಟಾಸ್.. ಚೇಸಿಂಗ್.. ಸವಾಲುಗಳೇನು?

6 ಮ್ಯಾಚ್.. ಬೆಂಗಳೂರಲ್ಲೇ 4 ಫೈಟ್.. RCB ತವರಲ್ಲಿ ಗೆದ್ರಷ್ಟೇ ಪ್ಲೇಆಫ್ – ಟಾಸ್.. ಚೇಸಿಂಗ್.. ಸವಾಲುಗಳೇನು?

ಆರ್​ಸಿಬಿ ಟೀಂ ಈ ಸಲ ಸೂಪರ್ ಸ್ಟ್ರಾಂಗ್ ಆಗಿದ್ರೂ ಕೂಡ ಹೋಂ ಗ್ರೌಂಡ್​ನಲ್ಲೇ ಗೆಲ್ಲೋದೇ ಸವಾಲಾಗಿದೆ. ಮೂರಕ್ಕೆ ಮೂರೂ ಮ್ಯಾಚ್​ಗಳನ್ನ ಸೋತಿದ್ದಾರೆ. ಬಟ್ ರಿಯಲ್ ಚಾಲೆಂಜ್ ಮುಂದಿನ ದಿನಗಳಲ್ಲಿ ಶುರುವಾಗುತ್ತೆ. ಆಡಬೇಕಿರೋ 6 ಮ್ಯಾಚ್​ಗಳಲ್ಲಿ 4 ಪಂದ್ಯಗಳು ಚಿನ್ನಸ್ವಾಮಿ ಸ್ಟೇಡಿಯಮ್​ನಲ್ಲೇ ನಡೆಯಲಿವೆ. ಸೋ ಈ ತವರಿನಲ್ಲಿ ಗೆದ್ರಷ್ಟೇ ಪ್ಲೇಆಫ್​ಗೆ ಏರೋಕೆ ಸಾಧ್ಯವಾಗೋದು.

ಇದನ್ನೂ ಓದಿ: No ಪಿಜ್ಜಾ.. No ಮಟನ್.. ಓನ್ಲಿ ಕ್ರಿಕೆಟ್- ಸೂರ್ಯವಂಶಿ ಯಶಸ್ಸಿನ ಗುಟ್ಟೇನು?

ರಜತ್ ಪಾಟಿದಾರ್ ನೇತೃತ್ವದ ರೆಡ್ ಆರ್ಮಿ ಈ ಸಲ ಸಕ್ಸಸ್​​ಫುಲ್ ಆಗಿ ಸಾಗ್ತಿದೆ. ಚಿನ್ನಸ್ವಾಮಿ ಅಂಗಳದಲ್ಲಿ ಗೆಲುವಿನ ಖಾತೆ ತೆರೆಯೋಕೆ ಆಗದೇ ಇದ್ರೂ ಅವೇ ಪಿಚ್​ನಲ್ಲಿ ಸೋಲನ್ನೇ ಕಾಣದೆ ಮುನ್ನುಗ್ತಾ ಇದೆ. ಬಟ್ ಪ್ಲೇಆಫ್ ಗೆ ಹೋಗ್ಬೇಕು ಅಂದ್ರೆ ಹೋಂ ಪಿಚ್ ವಿಕ್ಟರಿಗಳೇ ಇಂಪಾರ್ಟೆಂಟ್. ಅದೆಲ್ಲಕ್ಕಿಂತ ಚಾಲೆಂಜಿಂಗ್ ಅಂದ್ರೆ ಉಳಿದಿರೋ ಆರು ಮ್ಯಾಚ್​ಗಳಲ್ಲಿ ಚಿನ್ನಸ್ವಾಮಿ ಮೈದಾನದಲ್ಲೇ ಮುಂದೆ ನಾಲ್ಕು ಪಂದ್ಯಗಳನ್ನ ಆಡ್ಬೇಕಿದೆ.

ಚಿನ್ನಸ್ವಾಮಿ ಚಾಲೆಂಜ್! 

ಏಪ್ರಿಲ್ 24ಕ್ಕೆ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ರಾಜಸ್ಥಾನ ರಾಯಲ್ಸ್ ವಿರುದ್ಧ ಆರ್​ಸಿಬಿ ಪೈಪೋಟಿ ನಡೆಸಲಿದೆ. ಈ ಸೀಸನ್​ನಲ್ಲಿ ಉಭಯ ತಂಡಗಳು ಈಗಾಗ್ಲೇ ಒಂದು ಸಲ ಮುಖಾಮುಖಿಯಾಗಿದ್ದು ಈ ಮ್ಯಾಚ್​ನಲ್ಲಿ ಆರ್ಸಿಬಿ ವಿನ್ ಆಗಿತ್ತು. ಐಪಿಎಲ್ ಇತಿಹಾಸದಲ್ಲಿ ಇದುವರೆಗೆ ಉಭಯ ತಂಡಗಳು 33 ಪಂದ್ಯಗಳನ್ನ ಆಡಿದ್ದು ಆರ್ ಸಿಬಿ 16 ಪಂದ್ಯಗಳಲ್ಲಿ ಗೆದ್ದಿದೆ. 14 ಮ್ಯಾಚ್ ಆರ್ ಆರ್ ಗೆದ್ದಿದೆ. 3 ಮ್ಯಾಚ್ ಗಳಲ್ಲಿ ಯಾವುದೇ ರಿಸಲ್ಟ್ ಬಂದಿಲ್ಲ. ಕಳೆದ ಐದು ಪಂದ್ಯಗಳ ರಿಸಲ್ಟ್ ನೋಡಿದ್ರೆ ಆರ್ ಸಿಬಿ 3 ಮ್ಯಾಚ್ ಗೆದ್ದಿದೆ.. ಆ ಬಳಿಕ ಏಪ್ರಿಲ್ 27ಕ್ಕೆ ಅರುಣ್ ಜೇಟ್ಲಿ ಮೈದಾನದಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧ  ಕಣಕ್ಕಿಳಿಯಲಿದೆ. ಈಗ ಆಲ್ರೆಡಿ ಡೆಲ್ಲಿ ಟೀಂ ಚಿನ್ನಸ್ವಾಮಿಯಲ್ಲೇ ಬೆಂಗಳೂರು ತಂಡವನ್ನ ಸೋಲಿಸಿತ್ತು. ಸೋ ಡೆಲ್ಲಿಯಲ್ಲಿ ರಿವೇಂಜ್ ತಗೊಳ್ಬೇಕಿದೆ. ಐಪಿಎಲ್‌ನಲ್ಲಿ ಆರ್‌ಸಿಬಿ ಮತ್ತು ಡಿಸಿ ತಂಡಗಳು ಈವರೆಗೆ 32 ಪಂದ್ಯಗಳಲ್ಲಿ ಪರಸ್ಪರ ಮುಖಾಮುಖಿಯಾಗಿವೆ. ಈ 32 ಪಂದ್ಯಗಳಲ್ಲಿ ಆರ್‌ಸಿಬಿ 19 ಪಂದ್ಯಗಳಲ್ಲಿ ಗೆದ್ದಿದ್ದರೆ, ಡಿಸಿ 12 ಬಾರಿ ಜಯಗಳಿಸಿದೆ. 1 ಪಂದ್ಯ ಫಲಿತಾಂಶವಿಲ್ಲದೆ ಕೊನೆಗೊಂಡಿದೆ. ಕಳೆದ 5 ಪಂದ್ಯಗಳ ರೆಕಾರ್ಡ್ಸ್ ನೋಡಿದ್ರೆ ಆರ್ ಸಿಬಿ 3 ಹಾಗೇ ಡಿಸಿ 2 ಮ್ಯಾಚ್ ಗೆದ್ದಿದೆ. ಆ ಬಳಿಕ ಮೇ 3ಕ್ಕೆ ಚಿನ್ನಸ್ವಾಮಿ ಮೈದಾನದಲ್ಲಿ ಸಿಎಸ್ ಕೆ ವಿರುದ್ಧ ಹೈವೋಲ್ಟೇಜ್ ಫೈಟ್ ನಡೆಯಲಿದೆ. ಈ ಸೀಸನ್​ನ ಎರಡನೇ ಪಂದ್ಯದಲ್ಲಿ ರೆಡ್ ಆರ್ಮಿ ಬಾಯ್ಸ್ 17 ವರ್ಷಗಳ ಬಳಿಕ ಚೆಪಾಕ್​ನಲ್ಲಿ ಸಿಎಸ್​ಕೆ ತಂಡವನ್ನ ಸೋಲಿಸಿ ದಾಖಲೆ ಬರೆದಿದ್ರು. ಸೋ ಚಿನ್ನಸ್ವಾಮಿಯಲ್ಲೂ ಮತ್ತೊಮ್ಮೆ ಸೋಲಿನ ರುಚಿ ತೋರಿಸಬೇಕಿದೆ. ಐಪಿಎಲ್‌ನಲ್ಲಿ ಆರ್‌ಸಿಬಿ ಮತ್ತು ಸಿಎಸ್‌ಕೆ ತಂಡಗಳು 34 ಪಂದ್ಯಗಳಲ್ಲಿ ಮುಖಾಮುಖಿಯಾಗಿವೆ. ಈ 34 ಪಂದ್ಯಗಳಲ್ಲಿ ಆರ್‌ಸಿಬಿ 12 ಪಂದ್ಯಗಳಲ್ಲಿ ಗೆದ್ದಿದ್ದರೆ, ಸಿಎಸ್‌ಕೆ 21 ಬಾರಿ ಜಯಗಳಿಸಿದೆ. 1 ಪಂದ್ಯ ಫಲಿತಾಂಶವಿಲ್ಲದೆ ಕೊನೆಗೊಂಡಿದೆ. ಕಳೆದ 5 ಪಂದ್ಯಗಳಲ್ಲಿ ಆರ್ ಸಿಬಿ 2 ಮ್ಯಾಚ್ ಗೆದ್ದಿದೆ. ಇದಾದ ಬಳಿಕ ಮೇ9ಕ್ಕೆ ಲಕ್ನೋ ಸೂಪರ್ ಜೇಂಟ್ಸ್ ವಿರುದ್ಧ ಆರ್ ಸಿಬಿ ಕಣಕ್ಕಿಳಿಯಲಿದೆ. ವಿಷ್ಯ ಅಂದ್ರೆ ಈ ಸೀಸನ್​ನಲ್ಲಿ ಉಭಯ ತಂಡಗಳು ಕೇವಲ ಒಂದು ಬಾರಿ ಮಾತ್ರ ಮುಖಾಮುಖಿಯಾಗಲಿವೆ. ಲಕ್ನೋದ ಅಟಲ್ ಬಿಹಾರಿ ವಾಜಪೇಯಿ ಏಕನಾ ಸ್ಟೇಡಿಯಂ ಈ ಪಂದ್ಯಕ್ಕೆ ಸಾಕ್ಷಿಯಾಗಲಿದೆ. ಐಪಿಎಲ್‌ನಲ್ಲಿ ಆರ್‌ಸಿಬಿ ಮತ್ತು ಎಲ್‌ಎಸ್‌ಜಿ ತಂಡಗಳು 5 ಪಂದ್ಯಗಳಲ್ಲಿ ಮಾತ್ರ ಮುಖಾಮುಖಿಯಾಗಿವೆ. ಈ 5 ಪಂದ್ಯಗಳಲ್ಲಿ ಆರ್‌ಸಿಬಿ 3 ಪಂದ್ಯಗಳಲ್ಲಿ ಗೆದ್ದಿದ್ದರೆ, ಎಲ್‌ಎಸ್‌ಜಿ 2 ಬಾರಿ ಜಯಗಳಿಸಿದೆ. ಇನ್ನು ಈ ಸೀಸನ್​ನ ಮತ್ತೊಂದು ರೋಚಕ ಪಂದ್ಯ ಅಂದ್ರೆ ಅದು ಬೆಂಗಳೂರು ಮತ್ತು ಹೈದ್ರಾಬಾದ್ ನಡುವಿನ ಮ್ಯಾಚ್. ಮೇ 13ಕ್ಕೆ ಚಿನ್ನಸ್ವಾಮಿ ಸ್ಟೇಡಿಯಂ ಸನ್ ರೈಸರ್ಸ್ ಹೈದ್ರಾಬಾದ್ ಎದುರಾಗಲಿದೆ. ಕಳೆದ ವರ್ಷ ಇದೇ ಚಿನ್ನಸ್ವಾಮಿಯಲ್ಲಿ ಆರ್​ಸಿಬಿ ವಿರುದ್ಧ ಐಪಿಎಲ್ ಇತಿಹಾಸದಲ್ಲೇ ಹೈಯೆಸ್ಟ್ ಸ್ಕೋರ್ ಮಾಡಿತ್ತು. ಬಟ್ ಈ ಸೀಸನ್​ನಲ್ಲಿ ಹೈದ್ರಾಬಾದ್ ಕಂಪ್ಲೀಟ್ ಥಂಡಾ ಹೊಡೆದಿದೆ. ಸೋ ಈ ಪಂದ್ಯದಲ್ಲಿ ಏನಾಗುತ್ತೆ ನೋಡ್ಬೇಕು. ಐಪಿಎಲ್‌ನಲ್ಲಿ ಆರ್‌ಸಿಬಿ ಮತ್ತು ಎಸ್‌ಆರ್‌ಹೆಚ್ 25 ಪಂದ್ಯಗಳಲ್ಲಿ ಪರಸ್ಪರ ಮುಖಾಮುಖಿಯಾಗಿವೆ. ಈ 25 ಪಂದ್ಯಗಳಲ್ಲಿ ಆರ್‌ಸಿಬಿ 11 ಪಂದ್ಯಗಳಲ್ಲಿ ಗೆದ್ದಿದ್ದರೆ, ಎಸ್‌ಆರ್‌ಹೆಚ್ 13 ಬಾರಿ ಜಯಗಳಿಸಿದೆ. 1 ಪಂದ್ಯ ಫಲಿತಾಂಶವಿಲ್ಲದೆ ಕೊನೆಗೊಂಡಿತು. ಕಳೆದ ಐದು ಪಂದ್ಯಗಳಲ್ಲಿ ಆರ್ ಸಿಬಿ 3 ಮ್ಯಾಚ್ ವಿನ್ ಆಗಿದೆ. ಆ ಬಳಿಕ ಲೀಗ್ ಹಂತದಲ್ಲಿ ಆರ್​ಸಿಬಿಯ ಕೊನೇ ಪಂದ್ಯಕ್ಕೆ ಕೆಕೆಆರ್ ಮುಖಾಮುಖಿ ಆಗಲಿದೆ. ಮೇ 17ಕ್ಕೆ ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ಈ ಪಂದ್ಯ ನಡೆಯಲಿದೆ. ಈ ಸೀಸನ್​ನ ಉದ್ಘಾಟನಾ ಮ್ಯಾಚಲ್ಲಿ ಈಡನ್ ಗಾರ್ಡನ್ಸ್​ನಲ್ಲಿ ಕೊಲ್ಕತ್ತಾವನ್ನ ಆರ್​ಸಿಬಿ ಸೋಲಿಸಿತ್ತು. ಸೋ ಈ ಸೇಡನ್ನ ತೀರಿಸಿಕೊಳ್ಳೋಕೆ ರಹಾನೆ ಬಳಗ ಕೂಡ ಕಾಯ್ತಾ ಇದೆ.ಸೋ ಐಪಿಎಲ್‌ನಲ್ಲಿ ಆರ್‌ಸಿಬಿ ಮತ್ತು ಕೆಕೆಆರ್ 35 ಪಂದ್ಯಗಳಲ್ಲಿ ಪರಸ್ಪರ ಮುಖಾಮುಖಿಯಾಗಿವೆ. ಈ 35 ಪಂದ್ಯಗಳಲ್ಲಿ ಆರ್‌ಸಿಬಿ 15 ಪಂದ್ಯಗಳಲ್ಲಿ ಗೆದ್ದಿದ್ದರೆ, ಕೆಕೆಆರ್ 20 ಬಾರಿ ಜಯಗಳಿಸಿದೆ. ಕಳೆದ 5 ಮ್ಯಾಚ್ ಗಳನ್ನ ನೋಡಿದ್ರೆ ಆರ್ ಸಿಬಿ ಒಂದು ಪಂದ್ಯದಲ್ಲಷ್ಟೇ ಗೆಲುವು ಸಾಧಿಸಿದೆ.

ಈ ಸೀಸನ್​ನಲ್ಲಿ ಆರ್​ಸಿಬಿ 8 ಮ್ಯಾಚ್ ಆಡಿದ್ದು ಅದ್ರಲ್ಲಿ ಐದರಲ್ಲಿ ಗೆಲುವು ಸಾಧಿಸಿದೆ. ಹಾಗೇ ಮೂರರಲ್ಲಿ ಸೋಲನ್ನ ಕಂಡಿದೆ. ಪ್ಲೇಆಫ್ ಪ್ರವೇಶ ಪಡೀಬೇಕು ಅಂದ್ರೆ ಅಟ್​ಲೀಸ್ಟ್ ಇನ್ನು 3 ಮ್ಯಾಚ್​ಗಳನ್ನ ಗೆಲ್ಲಲೇಬೇಕು. ಆಗ 18 ಅಂಕಗಳೊಂದಿಗೆ ಪ್ಲೇಆಫ್​ಗೆ ಲಗ್ಗೆ ಇಡುತ್ತೆ. ಬಟ್ ಈಗ ಆರ್​ಸಿಬಿ ಅವೇ ಪಿಚ್​ನಲ್ಲಿ ಉಳಿದಿರೋದೇ 2 ಪಂದ್ಯ. ಇನ್ನು ನಾಲ್ಕು ಮ್ಯಾಚ್ ಚಿನ್ನಸ್ವಾಮಿಯಲ್ಲಿ ನಡೆಯುತ್ತೆ. ರಾಜಸ್ಥಾನ, ಚೆನ್ನೈ, ಹೈದ್ರಾಬಾದ್ ಮತ್ತು ಕೊಲ್ಕತ್ತಾ ತಂಡವನ್ನ ಹೋಂ ಗ್ರೌಂಡ್​ನಲ್ಲೇ ಎದುರಿಸಬೇಕು. ಈ ನಾಲ್ಕಕ್ಕೆ ನಾಲ್ಕೂ ಪಂದ್ಯಗಳನ್ನ ಗೆದ್ಕೊಂಡ್ರೆ ನಾವೇ ಟೇಬಲ್ ಟಾಪರ್ಸ್. ಬಟ್ ಚಿನ್ನಸ್ವಾಮಿಯಲ್ಲಿ ಸಿಕ್ಕಾಪಟ್ಟೆ ಸ್ಟ್ರಗಲ್ ಪಡ್ತಿರೋ ರಜತ್ ಬಳಗ ಗೆಲುವಿನ ಖಾತೆ ತೆರೆಯಲೇಬೇಕಿದೆ. ಇದೀಗ ಏಪ್ರಿಲ್ 24ಕ್ಕೆ ರಾಜಸ್ತಾನ ವಿರುದ್ಧ ಮ್ಯಾಚ್ ಇದ್ದು ಹೋಂ ಗ್ರೌಂಡ್ ಫ್ಯಾನ್ಸ್​ಗೆ ಖುಷಿ ಕೊಡ್ತಾರಾ ಅನ್ನೋದನ್ನ ಕಾದು ನೋಡ್ಬೇಕು.

Shwetha M

Leave a Reply

Your email address will not be published. Required fields are marked *