ಸೌದಿಯಲ್ಲಿ ಪ್ರಧಾನಿ ಮೋದಿಗೆ ಭರ್ಜರಿ ಸ್ವಾಗತ – ಎಸ್ಕಾರ್ಟ್ ಮಾಡಿದ ಎಫ್-35 ಫೈಟರ್ ಜೆಟ್ಸ್

ಸೌದಿಯಲ್ಲಿ ಪ್ರಧಾನಿ ಮೋದಿಗೆ ಭರ್ಜರಿ ಸ್ವಾಗತ – ಎಸ್ಕಾರ್ಟ್ ಮಾಡಿದ ಎಫ್-35 ಫೈಟರ್ ಜೆಟ್ಸ್

ನರೇಂದ್ರ ಮೋದಿ ಅವರು ಸೌದಿ ಅರೇಬಿಯಾಗೆ ಎರಡು ದಿನದ ಪ್ರವಾಸ ಕೈಗೊಂಡಿದ್ದಾರೆ. ನಿನ್ನೆ ಅಮೆರಿಕ ಉಪಾಧ್ಯಕ್ಷ ಜೆ.ಡಿ. ವ್ಯಾನ್ಸ್ ಜೊತೆ ಮಹತ್ವದ ಮಾತುಕತೆಯಲ್ಲಿ ಪಾಲ್ಗೊಂಡು ಇವತ್ತು ಬೆಳಗ್ಗೆ ಅವರು ಸೌದಿಗೆ ಆಗಮಿಸಿದ್ದಾರೆ. ಸೌದಿ ಅರೇಬಿಯಾ ನಾಡಿಗೆ ಭೇಟಿ ನೀಡಿದ ನರೇಂದ್ರ ಮೋದಿಗೆ ಅಲ್ಲಿಯ ಯುದ್ಧ ವಿಮಾನಗಳು ಸ್ವಾಗತ ಮಾಡಿವೆ.

ಇದನ್ನೂ ಓದಿ: ಕರುಣ್ ಬೆನ್ನಿಗೆ‌ ನಿಂತ ಸನಯಾ.. ಪ್ರೀತಿಗಾಗಿ ಧರ್ಮ ಬದಲಿಸಿದ್ರಾ? – 10 ವರ್ಷದ ಲವ್‌.. ಒಂದಾಗಿದ್ದು ಹೇಗೆ?

ಸೌದಿ ಅರೇಬಿಯಾದಲ್ಲಿ ಭಾರತದ ಪ್ರಧಾನಿ ನರೇಂದ್ರ ಮೋದಿಗೆ ಪೂರ್ಣ ಪ್ರಮಾಣದಲ್ಲಿ ಗೌರವ ಮತ್ತು ಭದ್ರತೆ ನೀಡಲಾಗುತ್ತಿದೆ. ನರೇಂದ್ರ ಮೋದಿ ಪ್ರಯಾಣಿಸುತ್ತಿದ್ದ ವಿಮಾನವು ಜೆದ್ದಾ ಮೂಲಕ ಸೌದಿ ವಾಯುಭಾಗವನ್ನು ಪ್ರವೇಶಿಸುತ್ತಿದ್ದಂತೆಯೇ ಎಫ್-15 ಫೈಟರ್​​ಜೆಟ್​​ಗಳೂ ಜೊತೆಗೆ ಬಂದಿವೆ.

ಅಮೆರಿಕದ ಎಫ್-15 ಯುದ್ಧವಿಮಾನಗಳು ರಾಯಲ್ ಸೌದಿ ಏರ್​ ಫೋರ್ಸ್​​ನ ಭಾಗವಾಗಿವೆ. ಮೋದಿ ವಿಮಾನವನ್ನು ಈ ಫೈಟರ್ ಜೆಟ್​​ಗಳು ಎಸ್ಕಾರ್ಟ್ ಮಾಡಿರುವುದು ಅತಿಥಿ ಸತ್ಕಾರದ ಒಂದು ಭಾಗವಾಗಿರಬಹುದು.

2018ರಲ್ಲಿ ನರೇಂದ್ರ ಮೋದಿ ಅವರು ಪ್ಯಾಲೆಸ್ಟೀನ್​​ಗೆ ಹೋದಾಗ ಜೋರ್ಡಾನ್​​ನ ಹೆಲಿಕಾಪ್ಟರ್​​ನಲ್ಲಿ ತೆರಳಿದ್ದರು. ಆಗ ಇಸ್ರೇಲ್ ವಾಯುಪಡೆಗೆ ಸೇರಿದ್ದ ಹೆಲಿಕಾಪ್ಟರ್​​ಗಳು ಮೋದಿಗೆ ಜೊತೆಯಾಗಿ ಹಾರಿದ್ದವು.

ಈ ಹಿಂದೆಯೂ ಕೆಲ ಪ್ರಮುಖ ವಿಶ್ವ ಮುಖಂಡರು ಸೌದಿಗೆ ಭೇಟಿ ನೀಡಿದಾಗ ಅವರ ವಿಮಾನಗಳನ್ನು ಸೌದಿ ಫೈಟರ್ ಜೆಟ್​​ಗಳು ಎಸ್ಕಾರ್ಟ್ ಮಾಡಿದ ಉದಾಹರಣೆಗಳಿವೆ. 2022ರಲ್ಲಿ ಚೀನಾ ಅಧ್ಯಕ್ಷ ಕ್ಸಿ ಜಿನ್​​ಪಿಂಗ್ ಅವರು ಸೌದಿಗೆ ತೆರಳಿದಾಗ ಅವರ ನಾಲ್ಕು ಸೌದಿ ಫೈಟರ್ ಜೆಟ್​​ಗಳು ಜೊತೆಗೆ ಹೋಗಿದ್ದವು. 2024ರಲ್ಲಿ ಫ್ರಾನ್ಸ್ ಅಧ್ಯಕ್ಷ ಇಮ್ಯಾನುಯಲ್ ಮ್ಯಾಕ್ರೋನ್ ಅವರಿಗೂ ಇಂಥದ್ದೊಂದು ಸ್ವಾಗತ ನೀಡಲಾಗಿತ್ತು.

Shwetha M

Leave a Reply

Your email address will not be published. Required fields are marked *