ಕರುಣ್ ಬೆನ್ನಿಗೆ‌ ನಿಂತ ಸನಯಾ.. ಪ್ರೀತಿಗಾಗಿ ಧರ್ಮ ಬದಲಿಸಿದ್ರಾ? – 10 ವರ್ಷದ ಲವ್‌.. ಒಂದಾಗಿದ್ದು ಹೇಗೆ?

ಕರುಣ್ ಬೆನ್ನಿಗೆ‌ ನಿಂತ ಸನಯಾ.. ಪ್ರೀತಿಗಾಗಿ ಧರ್ಮ ಬದಲಿಸಿದ್ರಾ? – 10 ವರ್ಷದ ಲವ್‌.. ಒಂದಾಗಿದ್ದು ಹೇಗೆ?

ಮುಂಬೈ ಇಂಡಿಯನ್ಸ್ ವಿರುದ್ಧ ಪಂದ್ಯದಲ್ಲಿ ಸಿಡಿಲಬ್ಬರದ ಬ್ಯಾಟಿಂಗ್ ಮೂಲಕ ಕರುಣ್ ನಾಯರ್ ಐಪಿಎಲ್ ನಲ್ಲಿ ತಮ್ಮ ಬಿಗ್‌ಕಂಬ್ಯಾಕ್ ಘೋಷಿಸಿದ್ದಾರೆ.  ಇದುವರೆಗಿದ್ದು ಒಂದು‌ ಲೆಕ್ಕ..‌ಇನ್ಮುಂದೆ ಒಂದು‌ ಲೆಕ್ಕ ಎಂಬಂತೆ ಬ್ಯಾಟ್ ಬೀಸಿದ್ರು..‌ಕರುಣ್ ಕಂಬ್ಯಾಕ್ ನೋಡಿ ಕ್ರಿಕೆಟ್ ಪ್ರೇಮಿಗಳಿಗೆ ಖುಷಿ ಪಟ್ಟಿದ್ರು.. ಆದ್ರೆ ಮೊನ್ನೆಯ ಮ್ಯಾಚ್‌ ನಲ್ಲಿ ಕರುಣ್‌ ಲಕ್‌ ಕೈಕೊಟ್ಟಿತ್ತು. ರನ್‌ ಔಟ್‌ ಆಗ್ತಿದ್ದಂತೆ ಡ್ರೆಸ್ಸಿಂಗ್‌ ರೂಮ್‌ ನಲ್ಲಿ ತನ್ನ ಕೋಪ ತಾಪಗಳನ್ನ ಹೊರ ಹಾಕಿದ್ರು. ಇದೀಗ ಕರುಣ್ ನಾಯರ್ ವೈಯಕ್ತಿಕ ವಿಚಾರ ಕೂಡ ಮುನ್ನಲೆಗೆ ಬಂದಿದೆ.  ಫ್ಯಾಮಿಲಿ ಬಗ್ಗೆಯೂ ಇಂಟ್ರೆಸ್ಟಿಂಗ್ ಮಾಹಿತಿ ಹೊರಬಿದ್ದಿದೆ. ಲವ್ ಮಾಡೋ ವೇಳೆ ಖುಷಿಯಾಗಿದ್ದ ಜೋಡಿ, ಮದುವೆಯಾದ ಮೇಲೆ ಎದುರಿಸಿದ ಸವಾಲು ಒಂದೆರಲ್ಲ.

ಇದನ್ನೂ ಓದಿ: ಉಕ್ರೇನ್ ಜತೆ ದ್ವಿಪಕ್ಷೀಯ ಮಾತುಕತೆಗೆ ಸಿದ್ಧ ಎಂದ ರಷ್ಯಾ – ಟ್ರಂಪ್ ಮಾತಿಗೆ ಮಣಿದ್ರಾ ಪುಟಿನ್

ಕನ್ನಡಿಗ ಕರುಣ್‌ ನಾಯರ್‌ ಸದ್ಯ ಡೆಲ್ಲಿ ಪಂದ್ಯದಲ್ಲಿ ಆಡ್ತಿದ್ದಾರೆ. ಮೊದಲ ನಾಲ್ಕು ಪಂದ್ಯಗಳಲ್ಲಿ ಬೆಂಚು ಕಾಯಿಸಲು ಸೀಮಿತವಾಗಿದ್ದ ಕರುಣ್‌ ಐದನೇ ಪಂದ್ಯದಲ್ಲಿ ಇಂಪ್ಯಾಕ್ಟ್‌ ಪ್ಲೇಯರ್‌ ಆಗಿ ಕಣಕ್ಕೆ ಇಳಿದಿದ್ರು. ಮೊದಲ ಪಂದ್ಯದಲ್ಲೇ 89  ರನ್ ಬಾರಿಸಿ ಮಿಂಚಿದ್ರು. ಆದ್ರೆ ನೆಕ್ಸ್ಟ್‌ ಮ್ಯಾಚ್‌ನಲ್ಲಿ ಕನ್ನಡಿಗನ ಬ್ಯಾಟ್‌ ಅಬ್ಬರಿಸಲಿಲ್ಲ. ರನ್ ಔಟ್‌ ಆಗಿ ಪೆವಿಲಿಯನ್‌ ಸೇರಿದ್ರು. ಪೆವಿಲಿಯನ್​ನತ್ತ ಬಂದ ಕರುಣ್  ನೇರವಾಗಿ ಡ್ರೆಸ್ಸಿಂಗ್​ಗೆ ರೂಮ್​ಗೆ ತೆರಳಿ ಅಲ್ಲಿ ತನ್ನ ಕೋಪ ತಾಪಗಳನ್ನ ಹೊರ ಹಾಕಿದ್ರು. ಇದ್ರ ಬೆನ್ನಲೇ ಅವರ ಅಭಿಮಾನಿಗಳು ಕರುಣ್‌ ವೈಯಕ್ತಿಕ ಜೀವನದ ಬಗ್ಗೆ ತಿಳಿದುಕೊಳ್ಳಲು ಉತ್ಸುಕರಾಗಿದ್ದಾರೆ. ಇದೇ ವೇಳೆ ಅವರ ಲವ್ ಸ್ಟೋರಿ ಕೂಡ ರಿವೀಲ್ ಆಗಿದೆ.

ಅಂದ್ಹಾಗೆ ಕರುಣ್‌ ನಾಯರ್‌ ಪತ್ನಿ ಹೆಸ್ರು ಸನಯಾ ಟಂಕರಿವಾಲಾ. ಈಕೆ ಮಾಧ್ಯಮದಲ್ಲಿ ಕೆಲಸ‌ಮಾಡ್ತಿದ್ದವರು. ಕರುಣ್‌ ಹಾಗೂ ಸನಯಾ ಕ್ಲೋಸ್‌ ಫ್ರೆಂಡ್ಸ್‌.. ಹಲವು ವರ್ಷಗಳ ಕಾಲ ಜೋಡಿಯಾಗಿಯೇ ಓಡಾಡ್ತಿದ್ದರು. ಬರುಬರುತ್ತಾ ಅವರಿಬ್ರ ಮಧ್ಯೆ ಪ್ರೀತಿ ಚಿಗುರಿದೆ. ಅಲ್ಲಿಂದ ಸನಾಯ ಹಾಗೂ ಕರುಣ್‌ ಎಲ್ಲಿಗೆ ಹೋದ್ರೂ ಒಟ್ಟಿಗೆ ಇರ್ತಾರೆ. ಎಷ್ಟರಮಟ್ಟಿಗೆ ಅಂದ್ರೆ ಮೊನ್ನೆ ಮುಂಬೈ ಇಂಡಿಯನ್ಸ್‌ ವಿರುದ್ಧ ಕರುಣ್‌ ಸ್ಫೋಟಕ ಬ್ಯಾಟಿಂಗ್‌ ಮಾಡಿದ್ಮೇಲೆ, ಸನಯಾ ಒಂದು ಪೋಸ್ಟ್‌ ಹಾಕಿದ್ದರು. ಅದರಲ್ಲಿ 2015ರಲ್ಲಿ ಆಗಿನ ಡೆಲ್ಲಿ ಡೇರ್‌ಡೆವಿಲ್ಸ್‌ ತಂಡಕ್ಕೆ ಕರುಣ್‌ ಆಡ್ತಿದ್ದಾಗ, ಅವರ ಜೊತೆ ಸನಯಾ ಕ್ಲಿಕ್ಕಿಸಿಕೊಂಡಿದ್ದ ಫೋಟೋ ಹಾಗೂ ಈಗ 2025ರಲ್ಲಿ ಇಬ್ಬರು ಮಕ್ಕಳ ಜೊತೆಗೆ ಕರುಣ್‌ ದಂಪತಿಯ ಫೋಟೋ ಶೇರ್‌ ಮಾಡಿದ್ದರು. ಅಂದ್ರೆ ಕರುಣ್‌ ನಾಯರ್‌ ಹಾಗೂ ಸನಯಾ 2020ರಲ್ಲಿ ಮದುವೆ ಆಗೋದಿಕ್ಕೂ ಮುಂಚಿತವಾಗಿ ಕನಿಷ್ಠ 5 ವರ್ಷಗಳಿಂದ ಡೇಟಿಂಗ್‌ ಮಾಡ್ತಿದ್ದರು..

ಹೌದು, ಎಂಗೇಜ್‌ಮೆಂಟ್‌ಗೂ ಮುಂಚಿತವಾಗಿ ಕರುಣ್‌ ನಾಯರ್‌ ತಮ್ಮ ಕೆನ್ನೆಗೆ ಸನಯಾ ಮುತ್ತಿಕ್ಕುವ ಫೋಟೋವನ್ನು ಇನ್‌ಸ್ಟಾಗ್ರಾಂನಲ್ಲಿ ಪೋಸ್ಟ್‌ ಮಾಡಿ, ಶೀ ಸೆಡ್‌ ಯೆಸ್‌ ಎಂದು ತಾವು ಮದುವೆಯಾಗ್ತಿರುವ ಸಂಗತಿಯನ್ನು ಬಿಚ್ಚಿಟ್ಟಿದ್ದರು. ಸನಯಾ ಕೂಡ ಅದೇ ಫೋಟೋವನ್ನು ಪೋಸ್ಟ್‌ ಮಾಡಿ, ನಾವಿಬ್ಬರೂ ಜೋಡಿಯಾಗ್ತಿದ್ದೇವೆ ಎಂದು ಘೋಷಿಸಿದ್ದರು.. 2020ರಲ್ಲಿ ರಾಜಸ್ಥಾನದ ಉದಯಪುರದಲ್ಲಿ ಪಾರ್ಸಿ ಸಂಪ್ರದಾಯದಂತೆ, ಈ ಜೋಡಿ ವಿವಾಹವಾಗಿದ್ದರು. ಕರುಣ್‌ ನಾಯರ್‌ ಮೊನ್ನೆ ಡೆಲ್ಲಿ ಪರವಾಗಿ ಅದ್ಭುತ ಬ್ಯಾಟಿಂಗ್‌ ಮಾಡಿದ್ಮೇಲೆ, ಪಾರ್ಸಿ ಧರ್ಮ ಬಿಟ್ಟು, ಸನಯಾ ಹಿಂದೂ ಧರ್ಮದ ಕರುಣ್‌ರನ್ನು ವಿವಾಹವಾಗಿದ್ದರು ಎಂದು ಬರೆದಿದ್ದರು.. ಆದ್ರೆ ನಿಜಕ್ಕೂ ಅವರ ವೆಡ್ಡಿಂಗ್‌ ಫೋಟೋ ನೋಡಿದ್ರೆ, ಆಕೆಯೇನೂ ಧರ್ಮ ಬಿಟ್ಟು ಬಂದ ರೀತಿಯಲ್ಲಿ ಕಾಣಲ್ಲ.. ಇಬ್ಬರೂ ತಮ್ಮ ತಮ್ಮ ಧರ್ಮಗಳನ್ನು ಪಾಲಿಸುತ್ತಲೇ, ಇಬ್ಬರೂ ಧಾರ್ಮಿಕ ನಂಬಿಕೆಯನ್ನು ಗೌರವಿಸುತ್ತಲೇ ಮದುವೆಯಾಗಿ ಸುಖವಾಗಿದ್ದಾರೆ. ಇನ್ನು ಸನಯಾ ತಮ್ಮ ವೃತ್ತಿ ಬದುಕಿನ ಬಗ್ಗೆ ಜಾಸ್ತಿ ಗುಟ್ಟು ಇದುವರೆಗೂ ಬಿಟ್ಟುಕೊಟ್ಟಿಲ್ಲ.. ಆದ್ರೆ ತಮ್ಮ ಮುದ್ದುಮಕ್ಕಳು ಹಾಗೂ ಗಂಡನ ಜೊತೆಗಿನ ಫೋಟೋಗಳನ್ನು ಆಗಾಗ್ಗೆ ಸೋಶಿಯಲ್‌ ಮೀಡಿಯಾದಲ್ಲಿ ಪೋಸ್ಟ್‌ ಮಾಡ್ತಾ ಇರುತ್ತಾರೆ.. ಇನ್ ಸ್ಟಾದಲ್ಲಿ ಸನಯಾಗೆ ಸಾವಿರಾರು ಫಾಲೋವರ್ಸ್‌ ಕೂಡ ಇದ್ದಾರೆ..

ಇನ್ನು ಸನಯಾ ಜೊತೆ ಡೇಟಿಂಗ್‌ ಮಾಡ್ತಿದ್ದಾಗ ಕರುಣ್‌ ಕ್ರಿಕೆಟ್‌ ಕರಿಯರ್‌ನ ಉತ್ತುಂಗದಲ್ಲಿದ್ದರು. ಆಗಲೇ ಅವರಿಗೆ ಭಾರತ ತಂಡದಲ್ಲಿ ಟೆಸ್ಟ್‌ ಆಡುವ ಚಾನ್ಸ್‌ ಸಿಕ್ಕಿತ್ತು. ಚೊಚ್ಚಲ ಪಂದ್ಯದಲ್ಲೇ ಅಜೇಯ ತ್ರಿಶತಕ ಸಿಡಿಸಿ, ದಾಖಲೆ ಬರೆದಿದ್ದರು. ಆದರೆ ನಂತರ ಅವರ ದುರಾದೃಷ್ಟವೋ, ಕ್ರಿಕೆಟ್‌ ಹಿಂದಿನ ರಾಜಕೀಯದ ಕಾರಣಕ್ಕೋ, ಅವಕಾಶಗಳು ಕಡಿಮೆಯಾಗ್ತಾ ಹೋದ್ವು.. ಅವರು ಮದುವೆಯಾಗುವ ಹೊತ್ತಿಗೆ ಕೊರೊನಾದಿಂದಾಗಿ ಕ್ರಿಕೆಟ್‌ ಆಟಗಳು ನಿಂತಿದ್ದವು. ನಂತರ ಕೊರೊನಾ ಹೋದ್ರೂ ಕರುಣ್‌ಗೆ ಕ್ರಿಕೆಟ್‌ನಲ್ಲಿ ಅವಕಾಶಗಳು ಕಡಿಮೆಯಾಗಿದ್ವು. ಹಾಗಾಗಿಯೇ 2022ರಲ್ಲಿ ಕರುಣ್‌ ನಾಯರ್‌, ಡಿಯರ್‌ ಕ್ರಿಕೆಟ್‌ ನನಗೆ ಇನ್ನೊಂದು ಚಾನ್ಸ್‌ ಕೊಡು ಅಂತ ಸೋಷಿಯಲ್‌ ಮೀಡಿಯಾದಲ್ಲಿ ಪೋಸ್ಟ್‌ ಹಾಕಿ ತಮ್ಮ ಅಂದಿನ ಪರಿಸ್ಥಿತಿಯನ್ನು ಬಿಚ್ಚಿಟ್ಟಿದ್ದರು. ಅಂತಹ ಕಠಿಣ ದಿನಗಳಲ್ಲಿ ಕರುಣ್ ಬೆನ್ನಿಗೆ ಗಟ್ಟಿಯಾಗಿ ನಿಂತವರು ಸನಯಾ. ಗಂಡನ ಕಷ್ಟದ ಪರಿಸ್ಥಿತಿಯಲ್ಲಿ ಹುರಿದುಂಬಿಸಿ ಕ್ರಿಕೆಟ್‌ ಕಡೆಗೆ ಹೆಚ್ಚು ಫೋಕಸ್‌ ಮಾಡುವಂತೆ ನೋಡಿಕೊಂಡಿದ್ದರು. ಇದ್ರಿಂದಾಗಿಯೇ ಕರುಣ್‌ ನಾಯರ್‌ ಮತ್ತೆ ಕ್ರಿಕೆಟ್‌ ಮೂಲಕವೇ ಸದ್ದು ಮಾಡುತ್ತಿದ್ದಾರೆ. ಅವರ ಬ್ಯಾಟಿಂದ ರನ್‌ ಮಳೆಯೇ ಶುರುವಾಗಿದೆ. ಜೊತೆಗೆ ಕರುಣ್‌ಗೆ ಸನಯಾ ಪ್ರೀತಿಯ ಹೂಮಳೆಗರೆಯುತ್ತಿದ್ದಾರೆ. ಈ ಜೋಡಿ ಹೀಗೆಯೇ ಖುಷಿಯಾಗಿರಲಿ ಅನ್ನೋದಷ್ಟೇ ಅಭಿಮಾನಿಗಳ ಹಾರೈಕೆ.

Shwetha M

Leave a Reply

Your email address will not be published. Required fields are marked *