ಉಕ್ರೇನ್ ಜತೆ ದ್ವಿಪಕ್ಷೀಯ ಮಾತುಕತೆಗೆ ಸಿದ್ಧ ಎಂದ ರಷ್ಯಾ – ಟ್ರಂಪ್ ಮಾತಿಗೆ ಮಣಿದ್ರಾ ಪುಟಿನ್

ಉಕ್ರೇನ್ ಜತೆ ದ್ವಿಪಕ್ಷೀಯ ಮಾತುಕತೆಗೆ ಸಿದ್ಧ ಎಂದ ರಷ್ಯಾ –  ಟ್ರಂಪ್ ಮಾತಿಗೆ ಮಣಿದ್ರಾ ಪುಟಿನ್

ಕಳೆದ 3 ವರ್ಷಗಳಿಂದ ನಡೆಯುತ್ತಿರುವ ರಷ್ಯಾ ಉಕ್ರೇನ್‌ ಯುದ್ಧ ಪ್ರಮುಖ ಘಟಕ್ಕೆ ಬಂದು ನಿಂತಿದೆ. ಉಕ್ರೇನ್‌ ಜತೆ  ಯುದ್ಧ ಮಾಡಿದ ನಂತರ ಇದೇ ಮೊದಲ ಬಾರಿಗೆ ರಷ್ಯಾ ಅಧ್ಯಕ್ಷ ವ್ಲಾದಿಮಿರ್‌ ಪುಟಿನ್‌ ಅವರು ಉಕ್ರೇನ್‌ ಜತೆ ದ್ವಿಪಕ್ಷೀಯ ಮಾತುಕತೆಗೆ ಸಿದ್ಧ ಎಂದು ಘೋಷಿಸಿದ್ದಾರೆ. ಶಾಂತಿ ಮಾತುಕತೆ ನಡೆಸದಿದ್ದರೆ ಮಧ್ಯಸ್ಥಿಕೆಯಿಂದ ಹೊರನಡೆಯುವುದಾಗಿ ಇತ್ತೀಚೆಗೆ ಅಮೆರಿಕ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ ಘೋಷಿಸಿದ್ದರು. ಇದರ ಬೆನ್ನಲ್ಲೇ ಒತ್ತಡದಲ್ಲಿರುವ ಪುಟಿನ್‌, ದ್ವಿಪಕ್ಷೀಯ ಚರ್ಚೆಯ ಆಫರ್‌ ನೀಡಿದ್ದಾರೆ.

ಅಮೆರಿಕ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ ಅವರ ಶಾಂತಿ ಮಾತುಕತೆಗೆ ರಷ್ಯಾ ಅಧ್ಯಕ್ಷ ವ್ಲಾಡಿಮಿರ್‌ ಪುಟಿನ್‌ ಅವರು ಒಪ್ಪಿ 30 ದಿನಗಳ ಭಾಗಶಃ ಕದನವಿರಾಮಕ್ಕೆ ಸಮ್ಮತಿ ಸೂಚಿಸಿದ್ದಾರೆ. ಈ ಅವಧಿಯಲ್ಲಿ ಉಭಯ ದೇಶಗಳ ಇಂಧನ, ವಿದ್ಯುತ್‌ ಶಕ್ತಿ ಕೇಂದ್ರಗಳ ಮೇಲೆ ದಾಳಿ ಮಾಡದಿರಲಿ ಎಂದು ರಷ್ಯಾ ಒಪ್ಪಿದೆ. ಜೊತೆಗೆ ಉಕ್ರೇನ್‌ಗೆ ಅಮೆರಿಕ ಮತ್ತು ಐರೋಪ್ಯ ದೇಶಗಳು ಪೂರೈಸುತ್ತಿರುವ ಶಸ್ತ್ರಾಸ್ತ್ರಗಳನ್ನು ಕೂಡಲೇ ನಿಲ್ಲಿಸುವಂತೆ ಖಡಕ್‌ ಸೂಚನೆ ನೀಡಿದ್ದರು.

ಟ್ರಂಪ್‌ ಮತ್ತು ಪುಟಿನ್‌ ಕದನವಿರಾಮ ಕುರಿತು ಸುದೀರ್ಘವಾದ ದೂರವಾಣಿ ಮಾತುಕತೆ ನಡೆಸಿದ್ದಾರೆ. ಇದರ ಫಲಶೃತಿಯಾಗಿ ರಷ್ಯಾ ಉಕ್ರೇನ್‌ನ ಇಂಧನ ಕೇಂದ್ರಗಳು, ವಿದ್ಯುತ್‌ ಘಟಕಗಳು ಮತ್ತು ಇನ್ನಿತರ ಶಕ್ತಿಕೇಂದ್ರಗಳ ಮೇಲೆ ದಾಳಿ ಮಾಡುವುದಿಲ್ಲ ಎಂದು ಒಪ್ಪಿದೆ. ಇದರ ಜೊತೆಗೆ ಕದನವಿರಾಮದ ಅವಧಿಯಲ್ಲಿ ಉಕ್ರೇನ್‌ ತನ್ನ ಶಕ್ತಿ ವೃದ್ಧಿಸಿಕೊಳ್ಳದಂತೆ, ಆಯುಧಗಳನ್ನು ಭರ್ತಿ ಮಾಡಿಕೊಳ್ಳದಂತೆ ಹಾಗೂ ಸೈನಿಕರ ಸಂಖ್ಯೆ ಹೆಚ್ಚಿಸಿಕೊಳ್ಳದಂತೆ, ಉಕ್ರೇನ್‌ಗೆ ಯಾವುದೇ ಗುಪ್ತಚರ ಮಾಹಿತಿ ಹಂಚಿಕೊಳ್ಳದಂತೆ ಅಮೆರಿಕಕ್ಕೆ ಪುಟಿನ್‌ ಒತ್ತಿ ಹೇಳಲಿದ್ದಾರೆ ಎಂದು ಕ್ರೆಮ್ಲಿನ್‌ ಹೇಳಿದ್ದಾರೆ.

 

 

Kishor KV

Leave a Reply

Your email address will not be published. Required fields are marked *