3 ಮ್ಯಾಚ್.. NOT OUT ವಿರಾಟ್ – ಬೆನ್ನಟ್ಟಿ ಗೆಲ್ಲೋದ್ರಲ್ಲಿ ಇವ್ರೇ KING!

3 ಮ್ಯಾಚ್.. NOT OUT ವಿರಾಟ್ – ಬೆನ್ನಟ್ಟಿ ಗೆಲ್ಲೋದ್ರಲ್ಲಿ ಇವ್ರೇ KING!

2025ರ ಐಪಿಎಲ್​ನಲ್ಲಿ 8 ಮ್ಯಾಚ್​ಗಳನ್ನ ಆಡಿರುವ ಆರ್​ಸಿಬಿ 5 ಪಂದ್ಯಗಳನ್ನ ಗೆದ್ದಿದೆ. ಇನ್ನು ಮೂರು ಮ್ಯಾಚ್​ಗಳನ್ನ ಕಳ್ಕೊಂಡಿದೆ. ಸೋತಿರೋ ಪಂದ್ಯಗಳೆಲ್ಲಾ ಬೆಂಗಳೂರನ ಚಿನ್ನಸ್ವಾಮಿ ಮೈದಾನದಲ್ಲೇ. ವಿಷ್ಯ ಅಂದ್ರೆ ಈಗ ಆಡಿರುವಂತ 8 ಮ್ಯಾಚ್​ಗಳಲ್ಲಿ ಆರ್​ಸಿಬಿ 3 ಮೂರು ಸಲ ಫಸ್ಟ್ ಬೌಲಿಂಗ್ ಮಾಡಿ ಆನಂತ್ರ ಚೇಸಿಂಗ್​ಗೆ ಇಳಿದಿದೆ. ಈ ಮೂರೂ ಪಂದ್ಯಗಳನ್ನೂ ಗೆದ್ಕೊಂಡಿದೆ. ಸ್ಪೆಷಾಲಿಟಿ ಅಂದ್ರೆ ಈ ಮೂರೂ ಚೇಸಿಂಗ್ ಮ್ಯಾಚ್​ಗಳಲ್ಲೂ ಕಿಂಗ್ ಕೊಹ್ಲಿ ಅಜೇಯರಾಗಿ ಉಳಿದು ಮ್ಯಾಚ್ ವಿನ್ನಿಂಗ್ ಪರ್ಫಾಮೆನ್ಸ್ ಕೊಟ್ಟಿದ್ದಾರೆ.

ಇದನ್ನೂ ಓದಿ : ಫಸ್ಟ್ ಮ್ಯಾಚ್‌ನಲ್ಲೇ ಆಯುಷ್ ಅಬ್ಬರ ಚೆನ್ನೈ ಭವಿಷ್ಯದ ಪ್ಲ್ಯಾನ್ ಸಕ್ಸಸ್

ಚೇಸಿಂಗ್ ಮಾಸ್ಟರ್ ಅಂತಾ ಕಿಂಗ್ ಕೊಹ್ಲಿಯನ್ನ ಸುಮ್ನೇ ಕರೆಯಲ್ಲ. ಅದು ಐಪಿಎಲ್ ಆದ್ರೂ ಅಷ್ಟೇ. ಟೀಂ ಇಂಡಿಯಾ ಪರ ಮ್ಯಾಚ್​ಗಳಾದ್ರೂ ಅಷ್ಟೇ. ಟಾರ್ಗೆಟ್ ಫಿಕ್ಸ್ ಮಾಡಿ ಫೀಲ್ಡಿಗೆ ಇಳ್ಸಿದ್ರೆ ಕೊಹ್ಲಿಯನ್ನ ತಡೆಯೋರೇ ಇರಲ್ಲ. ಸದ್ಯ ಆರ್​ಸಿಬಿ ಈ ಸೀಸನ್ ಐಪಿಎಲ್​ನಲ್ಲಿ 8 ಮ್ಯಾಚ್​ಗಳನ್ನ ಆಡಿದೆ. ಈ ಪೈಕಿ 5 ಮ್ಯಾಚ್​ಗಳಲ್ಲಿ ಫಸ್ಟ್ ಬ್ಯಾಟಿಂಗ್ ಮಾಡೋ ಅವಕಾಶ ಸಿಕ್ಕಿದೆ. ಮೂರು ಸಲ ಚೇಸಿಂಗ್ ಮಾಡಿದೆ. ಮೂರೂ ಸಲವೂ ಕೊಹ್ಲಿ ಸಖತ್ ಪರ್ಪಾಮೆನ್ಸ್ ಕೊಟ್ಟಿದ್ದಾರೆ.

ಚೇಸಿಂಗ್ ಮಾಸ್ಟರ್ ಕೊಹ್ಲಿ!  

ಎದುರಾಳಿ                       ವಿಧಾನ                           ರನ್ಸ್

ಕೆಕೆಆರ್                          ಚೇಸಿಂಗ್                    59*

ಸಿಎಸ್ ಕೆ                        ಬ್ಯಾಟಿಂಗ್                      31

ಜಿಟಿ                             ಬ್ಯಾಟಿಂಗ್                       07

ಎಂಐ                           ಬ್ಯಾಟಿಂಗ್                       67

ಡಿಸಿ                             ಬ್ಯಾಟಿಂಗ್                      22

ಆರ್ ಆರ್                     ಚೇಸಿಂಗ್                      62*

ಪಿಬಿಕೆಎಸ್                    ಬ್ಯಾಟಿಂಗ್                     01

ಪಿಬಿಕೆಎಸ್                     ಚೇಸಿಂಗ್                     73*

ನೋಡಿ ಇಲ್ಲಿ 8 ಮ್ಯಾಚ್​ಗಳನ್ನ ಆಡಿರೋ ಆರ್​ಸಿಬಿ ಮೂರು ಸಲ ಚೇಸಿಂಗ್ ಮಾಡಿದೆ. ಸೋ ಈ ಮೂರೂ ಬಾರಿಯೂ ಕಿಂಗ್ ಕೊಹ್ಲಿ ನಾಟೌಟ್ ಆಗಿಯೇ ಉಳಿದಿದ್ದಾರೆ. ಹಾಗೇ 50+ ರನ್ಸ್ ಬಂದಿದೆ. ಮುಂಬೈ ವಿರುದ್ಧ ಫಸ್ಟ್ ಬ್ಯಾಟಿಂಗ್​ನಲ್ಲಿ 60+ ರನ್ಸ್ ಬಂದಿದ್ದು ಬಿಟ್ರೆ ಉಳಿದ ನಾಲ್ಕು ಪಂದ್ಯಗಳಲ್ಲಿ ನಿರಾಸೆ ಮೂಡಿಸಿದ್ದಾರೆ. ಸೋ ಈ ನಂಬರ್ಸ್ ನೋಡಿದ್ರೇನೇ ಗೊತ್ತಾಗುತ್ತೆ ಕೊಹ್ಲಿ ದಿ ರಿಯಲ್ ಚೇಸ್ ಮಾಸ್ಟರ್ ಅಂತಾ.

Shantha Kumari

Leave a Reply

Your email address will not be published. Required fields are marked *