ಪಂಜಾಬ್ ವಿರುದ್ಧ ಆರ್ಸಿಬಿಗೆ ಭರ್ಜರಿ ಗೆಲುವು- ತವರಿನ ಸೇಡು ತೀರಿಸಿಕೊಂಡ ಬೆಂಗಳೂರು

ಐಪಿಎಲ್ 2025 ರ 37 ನೇ ಪಂದ್ಯ ಪಂಜಾಬ್ ಕಿಂಗ್ಸ್ ಮತ್ತು ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡಗಳ ನಡುವೆ ನಡೆದಿದ್ದು, ಆರ್ಸಿಬಿ ಭರ್ಜರಿ ಗೆಲುವು ದಾಖಲಿಸಿದೆ. ಮುಲ್ಲನ್ಪುರದ ಮಹಾರಾಜ ಯಾದವೀಂದ್ರ ಸಿಂಗ್ ಅಂತರಾಷ್ಟ್ರೀಯ ಕ್ರಿಕೆಟ್ ಕ್ರೀಡಾಂಗಣದಲ್ಲಿ ಉಭಯ ತಂಡಗಳ ನಡುವಿನ ಈ ಹಣಾಹಣಿ ನಡೆದಿದ್ದು, ಆರ್ಸಿಬಿ ತಂಡವು ಸುಲಭ ಗೆಲುವು ಸಾಧಿಸುವಲ್ಲಿ ಯಶಸ್ವಿಯಾಯಿತು. ಇದರೊಂದಿಗೆ ಆರ್ಸಿಬಿ ಕಳೆದ ಪಂದ್ಯದ ಸೋಲಿಗೆ ಪಂಜಾಬ್ ವಿರುದ್ಧ ಸೇಡು ತೀರಿಸಿಕೊಂಡಿತು. ಈ ಪಂದ್ಯದಲ್ಲಿ ಟಾಸ್ ಗೆದ್ದ ಬೆಂಗಳೂರು ತಂಡದ ನಾಯಕ ರಜತ್ ಪಟಿದಾರ್ ಮೊದಲು ಬೌಲಿಂಗ್ ಮಾಡಲು ನಿರ್ಧರಿಸಿದರು. ಮೊದಲು ಬ್ಯಾಟಿಂಗ್ ಮಾಡಿದ ಪಂಜಾಬ್ ತಂಡ 20 ಓವರ್ಗಳಲ್ಲಿ 6 ವಿಕೆಟ್ ನಷ್ಟಕ್ಕೆ 157 ರನ್ ಗಳಿಸಿತು. ಇದಕ್ಕೆ ಉತ್ತರವಾಗಿ ಬೆಂಗಳೂರು ತಂಡ 18.5 ಓವರ್ಗಳಲ್ಲಿ ಮೂರು ವಿಕೆಟ್ಗಳನ್ನು ಕಳೆದುಕೊಂಡು ಗುರಿ ತಲುಪಿತು.
ಆರ್ಸಿಬಿ ಈ ಸೀಸನ್ನ ತನ್ನ ಐದನೇ ಪಂದ್ಯವನ್ನು ಗೆದ್ದುಕೊಂಡಿದೆ. ಕೇವಲ 48 ಗಂಟೆಗಳಲ್ಲಿ ಬೆಂಗಳೂರು ತಂಡ ಪಂಜಾಬ್ ವಿರುದ್ಧದ ತನ್ನ ತವರು ಸೋಲಿಗೆ ಸೇಡು ತೀರಿಸಿಕೊಂಡಿದ್ದು, ತವರು ನೆಲವಾದ ಮುಲ್ಲನ್ಪುರದಲ್ಲಿ ಪಂಜಾಬ್ ತಂಡವನ್ನು 7 ವಿಕೆಟ್ಗಳಿಂದ ಸೋಲಿಸಿದೆ. ಜಿತೇಶ್ ಶರ್ಮಾ 19 ನೇ ಓವರ್ನ ಐದನೇ ಎಸೆತದಲ್ಲಿ ಸಿಕ್ಸರ್ ಬಾರಿಸಿ ತಂಡಕ್ಕೆ ಈ ಸ್ಮರಣೀಯ ಗೆಲುವು ತಂದುಕೊಟ್ಟರು. ಆರ್ಸಿಬಿ ಈ ಸೀಸನ್ನ ತನ್ನ ಐದನೇ ಪಂದ್ಯವನ್ನು ಗೆದ್ದುಕೊಂಡಿದೆ. ಕೇವಲ 48 ಗಂಟೆಗಳಲ್ಲಿ ಬೆಂಗಳೂರು ತಂಡ ಪಂಜಾಬ್ ವಿರುದ್ಧದ ತನ್ನ ತವರು ಸೋಲಿಗೆ ಸೇಡು ತೀರಿಸಿಕೊಂಡಿದ್ದು, ತವರು ನೆಲವಾದ ಮುಲ್ಲನ್ಪುರದಲ್ಲಿ ಪಂಜಾಬ್ ತಂಡವನ್ನು 7 ವಿಕೆಟ್ಗಳಿಂದ ಸೋಲಿಸಿದೆ. ಜಿತೇಶ್ ಶರ್ಮಾ 19 ನೇ ಓವರ್ನ ಐದನೇ ಎಸೆತದಲ್ಲಿ ಸಿಕ್ಸರ್ ಬಾರಿಸಿ ತಂಡಕ್ಕೆ ಈ ಸ್ಮರಣೀಯ ಗೆಲುವು ತಂದುಕೊಟ್ಟರು.