ಕಿಂಗ್ ಕೊಹ್ಲಿ ಕಾರ್ ಕ್ರೇಜ್! – ಆಡಿ ಕಾರು ಅಷ್ಟೇಕೆ ಖರೀದಿಸಿದ್ರು?

ವಿಶ್ವ ಕ್ರಿಕೆಟ್ ನಲ್ಲಿ ವಿರಾಟ್ ಕೊಹ್ಲಿಯ ಕ್ರೇಜ್ ಹೇಗಿದೆ ಎನ್ನುವುದರ ಬಗ್ಗೆ ಹೇಳುವ ಅಗತ್ಯವಿಲ್ಲ. ಕ್ರಿಕೆಟ್ ನ ಕಿಂಗ್ ಎಂದೇ ಖ್ಯಾತರಾಗಿರುವ ವಿರಾಟ್ ಬ್ಯಾಟಿಂಗ್ ವಿಚಾರಕ್ಕೆ ಬಂದರೆ ಸಾವಿರ ಗಟ್ಟಲೆ ರನ್, ಫೀಲ್ಡಿಂಗ್ ನಲ್ಲಿ ಚಿರತೆಯ ವೇಗ. ಫಿಟ್ನೆಸ್ ವಿಚಾರದಲ್ಲಿ ವಿರಾಟ್ ಮೀರಿಸುವವರಿಲ್ಲ. ಅದಕ್ಕೇ ಎಲ್ಲರೂ ಕೊಹ್ಲಿಯನ್ನು ರನ್ ಮಷಿನ್, ಫಿಟ್ ನೆಸ್ ಕಾ ಬಾಪ್ ಎಂದೆಲ್ಲಾ ಕರೆಯುತ್ತಾರೆ. ಇದೀಗ ಕೊಹ್ಲಿ ಐಪಿಎಲ್ ನಲ್ಲೂ ಮಿಂಚುತ್ತಿದ್ದಾರೆ. ರನ್ ಮಳೆ ಸುರಿಸುತ್ತಿದ್ದಾರೆ. ಕಿಂಗ್ ಕೊಹ್ಲಿ ಕೇವಲ ಕ್ರಿಕೆಟ್ ನಲ್ಲಿ ಮಾತ್ರ ಗುರುತಿಸಿಕೊಂಡಿಲ್ಲ. ಬ್ಯುಸಿನೆಸ್, ಜಾಹೀರಾತು ಕ್ಷೇತ್ರದಲ್ಲೂ ಗುರುತಿಸಿಕೊಂಡಿದ್ದಾರೆ. ಕ್ರಿಕೆಟರ್ ಅಂದ್ಮೇಲೆ ಕಾರ್ ಕ್ರೇಜ್ ಇದ್ದೇ ಇರುತ್ತೆ ಅಲ್ವಾ? ನಮ್ಮ ಕಿಂಗ್ ಕೊಹ್ಲಿಗೂ ಕಾರ್ ಅಂದ್ರೆ ಸಿಕ್ಕಾಪಟ್ಟೆ ಇಷ್ಟ. ವಿರಾಟ್ ಕೊಹ್ಲಿ ಐಶರಾಮಿ ಕಾರ್ ಕಲೆಕ್ಷನ್ ಹಾಗೇ ಅದ್ರ ಬೆಲೆ ಕೇಳಿದ್ರೆ ನೀವು ಶಾಕ್ ಆಗೋದಂತೂ ಪಕ್ಕಾ.
ಇದನ್ನೂ ಓದಿ: ಜಾಹೀರಾತಿನಲ್ಲಿ ಆರ್ ಸಿಬಿ ಬಗ್ಗೆ ಅವಹೇಳನ – ಟ್ರಾವಿಸ್ ಹೆಡ್ ವಿರುದ್ಧ ಕೋರ್ಟ್ ಮೆಟ್ಟಿಲೇರಿದ ಫ್ರಾಂಚೈಸಿ!
ಬ್ಯಾಟ್ ಹಿಡಿದರೆ ಬೌಂಡರಿಗಳ ಸುರಿಮಳೆ ಸುರಿಸುವ ಕೊಹ್ಲಿ ಕ್ರಿಕೆಟ್ ಅಂಗಳದ ಕಿಂಗ್ ಆಗಿ ಮೆರೆಯುತ್ತಿದ್ದಾರೆ. ಕ್ರಿಕೆಟ್ ಅಂಗಳದಲ್ಲಿ ವಿರಾಟ ರೂಪ ತೋರಿಸುವ ಕೊಹ್ಲಿ ಎಂದೆಂದಿಗೂ ಅಭಿಮಾನಿಗಳ ಪಾಲಿಗೆ ಕಿಂಗ್. ಇನ್ನು ಆರ್‌ಸಿಬಿ ಮೇಲೆ ವಿರಾಟ್ ಇಟ್ಟಿರೋ ಪ್ರೀತಿ ಬಗ್ಗೆ ಹೇಳ್ಬೇಕಂತಿಲ್ಲ.. ಕೋಟಿ ಕೋಟಿ ದುಡ್ಡು ಆಫರ್ ಮಾಡಿದ್ರೂ ಆರ್‌ಸಿಬಿ ಬಿಟ್ಟು ಬೇರೆ ಟೀಮ್ ಗೆ ಹೋಗಿಲ್ಲ. ಹೀಗಾಗಿ ವಿರಾಟ್ ಆಡ್ತಾರೆ ಅಂತಾ ಸಾವಿರಾರು ಫ್ಯಾನ್ಸ್ ಸ್ಟೇಡಿಯಂ ಗೆ ಬರ್ತಾರೆ. ಅವ್ರ ಹೇರ್ ಸ್ಟೈಲ್, ಲುಕ್, ಡ್ರೆಸ್ ಸ್ಟೈಲ್, ಅವ್ರ ಬಳಿ ಇರೋ ದುಬಾರಿ ವಸ್ತುಗಳ ಬಗ್ಗೆಯೂ ಫ್ಯಾನ್ಸ್ ಚರ್ಚೆ ಮಾಡ್ತಿರ್ತಾರೆ. ಇನ್ನು ವಿರಾಟ್ ಕೊಹ್ಲಿ ಹೊಂದಿರುವ ದುಬಾರಿ ವಸ್ತುಗಳಲ್ಲಿ ಅವ್ರ ಕಾರ್ ಕಲೆಕ್ಷನ್ ಬಗ್ಗೆಯೂ ನೀವು ತಿಳ್ಕೊಳ್ಲೇ ಬೇಕು.
ಕಿಂಗ್ ಕೊಹ್ಲಿ ಕ್ರಿಕೆಟ್ ಮಾತ್ರವಲ್ಲ, ಕಾರು ಖರೀದಿಸೋದ್ರಲ್ಲೂ ಕೂಡ ಎತ್ತಿದ ಕೈ. ವಿರಾಟ್ ಬಳಿ ಹಲವು ಐಶಾರಾಮಿ ಕಾರುಗಳಿವೆ. ಕೊಹ್ಲಿ ತಮ್ಮ ಸ್ವಂತ ಹಣದಿಂದ ಖರೀದಿಸಿದ ಮೊದಲ ಕಾರು ಅಂದ್ರೆ ಅದು ಟಾಟಾ ಸಫಾರಿ. ಈ ಕಾರನ್ನ ಪರ್ಚೆಸ್ ಮಾಡಿರೋದಕ್ಕೆ ಏನ್ ಕಾರಣ ಅನ್ನೋದನ್ನ ಕೊಹ್ಲಿ ಕೆಲ ಸಂದರ್ಶನಗಳಲ್ಲಿ ಹೇಳಿಕೊಂಡಿದ್ದಾರೆ. ಈ ಕಾರ್ ನ ಫೀಚರ್ಸ್ ಮಾತ್ರವಲ್ಲದೆ ರಸ್ತೆಯಲ್ಲಿ ಓಡಿಸುವಾಗ ಜನರು ತಾವಾಗಿಯೇ ದಾರಿ ಬಿಟ್ಟುಕೊಡುತ್ತಾರೆ ಎಂಬ ಭಾವನೆಯಿಂದ ನಾನು ಈ ಕಾರನ್ನು ಖರೀದಿಸಿದ್ದೇನೆ ಎಂದು ಹೇಳಿಕೊಂಡಿದ್ದರು.. ಇನ್ನು ವಿರಾಟ್ ಕೊಹ್ಲಿ ಮುಂಚೆ ಸ್ಪೋಟ್ಸ್ ಕಾರುಗಳನ್ನು ಹೆಚ್ಚು ಇಷ್ಟಪಡ್ತಿದ್ರು. ಆದ್ರೀಗ ಕಿಂಗ್ ಕೊಹ್ಲಿ ಪಕ್ಕಾ ಫ್ಯಾಮಿಲ್ ಮ್ಯಾನ್. ಕೊಹ್ಲಿ ಮದುವೆ ಆದ್ಮೇಲೆ ಫ್ಯಾಮಿಲಿಗೆ ಸೂಟ್ ಆಗುವಂತಹ ಕಾರ್ ಖರೀದಿಸ್ತಾರೆ. ಕಾರಿನಲ್ಲಿ ಎಷ್ಟು ಸ್ಪೇಸ್ ಇದೆ. ಆ ಕಾರ್ ನಲ್ಲಿ ಆರಾಮವಾಗಿ ಓಡಾಡ್ಬೋದಾ ಅಂತಾ ಖಚಿತಪಡಿಸಿಕೊಳ್ಳುತ್ತಾರೆ. ಪ್ರಸ್ತುತ ಮುಂಬೈನಲ್ಲಿ ನೆಲೆಸಿರುವ ವಿರಾಟ್ ಐಷಾರಾಮಿ ಹಾಗೂ ದುಬಾರಿ ಕಾರುಗಳನ್ನು ಹೊಂದಿದ್ದಾರೆ.
ಕೊಹ್ಲಿ ಆಡಿ ಕಾರ್ ಕಂಪೆನಿಯ ರಾಯಭಾರಿ. ಹೀಗಾಗಿಯ ಕೊಹ್ಲಿಗೆ ಒಂದಷ್ಟು ದುಬಾರಿ ಕಾರುಗಳು ಉಡುಗೊರೆಯಾಗಿ ಸಿಕ್ಕರೆ, ಇನ್ನೊಂದಷ್ಟು ಕಾರುಗಳನ್ನು ಅವರೇ ಪರ್ಚೇಸ್ ಮಾಡಿದ್ದಾರೆ. ಆಡಿ R8 LMX ಎಂಬುದು ವಿರಾಟ್ ಕೊಹ್ಲಿ ಬಳಿ ಇರುವ ಕಾರು ಕಲೆಕ್ಷನ್ ಗಳಲ್ಲಿಯೇ ಅತ್ಯಂತ ವೇಗದ ಕಾರು. ಈ ಸೂಪರ್ ಕಾರ್ ನ ಎಂಜಿನ್ ಬಗ್ಗೆ ನೋಡುವುದಾದರೆ, 5.2 ಲೀಟರ್ V10 ಇಂಜಿನ್ ನೊಂದಿಗೆ ಬರುತ್ತದೆ. ಈ ಕಾರಿನ ಬೆಲೆ 3.35 ಕೋಟಿ ರೂಪಾಯಿ. ಇನ್ನು ವಿರಾಟ್ ಕೊಹ್ಲಿ ಬಳಿ ಇರುವ ಇನ್ನೊಂದು ಆಕರ್ಷಕ ಕಾರ್ ಎಂದರೆ ಅದು ಆಡಿ A8L W12. ಇದು 6.3 litre W12 ಎಂಜಿನ್ ಹೊಂದಿರಿರೋ ಕಾರು.. ಕೊಹ್ಲಿ ಹೆಚ್ಚಾಗಿ ಇದರಲ್ಲೇ ಓಡಾಡ್ತಾರೆ. ಈ ಕಾರಿನ ಬೆಲೆ 1.81 ಕೋಟಿ ರೂಪಾಯಿ. ವಿರಾಟ್ ಕೊಹ್ಲಿ ಬಳಿ ಇರುವ ಸ್ಪೋರ್ಟ್ ಕಾರುಗಳಲ್ಲಿ ಆಡಿ RS5 ಕೂಡ ಒಂದು. ಇದ್ರ ಬೆಲೆ 1. 02 ಕೋಟಿ ರೂಪಾಯಿ. ಇದು ಕೂಡ ಕೊಹ್ಲಿ ಫೇವರೇಟ್ ಕಾರು. ದೇಶದಲ್ಲೇ ಮೊದಲ ರೆಡ್ ಕಲರ್ ಆಡಿ RS5 ಕಾರನ್ನು ಪರ್ಚೇಸ್ ಮಾಡಿದ್ದು ಕೂಡ ಕೊಹ್ಲಿಯೇ.. ಇದ್ರ ಮೌಲ್ಯ ಸುಮಾರು 1.1 ಕೋಟಿ ರೂಪಾಯಿ. ಮತ್ತೊಂದು ಲಕ್ಷುರಿಯಸ್ ಕಾರೆಂದರೆ ಅದು ಆಡಿ ಕ್ಯೂ 7 ಆಗಿದ್ದು. ಇದು 3.0 ಲೀಟರ್ V6 ಡೀಸೆಲ್ ಎಂಜಿನ್ ಅನ್ನು ಹೊಂದಿದೆ. ಇನ್ನು ಆಡಿ ಎಸ್6 ವಿರಾಟ್ ಕೊಹ್ಲಿ ಬಳಿಯಿರುವ ಮತ್ತೊಂದು ಆಡಿ ಕಂಪೆನಿಯ ಕಾರು. ಹೀಗೆ ಆಡಿ ಕಂಪನಿಯ ಕಾರುಗಳನ್ನೆ ಹೆಚ್ಚಾಗಿ ಕಿಂಗ್ ಕೊಹ್ಲಿ ಖರೀದಿ ಮಾಡಿದ್ದಾರೆ. ಇದರ ಜೊತೆಗೆ ವಿರಾಟ್ ಕೊಹ್ಲಿ ಐಷಾರಾಮಿ ರೇಂಜ್ ರೋವರ್ ವೋಗ್ ಕಾರನ್ನ ಹೊಂದಿದ್ದಾರೆ. ಈ ಕಾರಿನ ಬೆಲೆ 2.26 ಕೋಟಿ ರೂಪಾಯಿ. ವಿರಾಟ್ ಗ್ಯಾರೇಜ್ನಲ್ಲಿರುವ ಮತ್ತೊಂದು ಐಷಾರಾಮಿ ಕಾರೆಂದರೆ ಬೆಂಟ್ಲಿ ಕಾಂಟಿನೆಂಟಲ್ GT, ಇದು ಕೂಡ ವಿರಾಟ್ ಕೊಹ್ಲಿಯ ಅಚ್ಚುಮೆಚ್ಚಿನ ಕಾರು. ಈ ಕಾರಿನಲ್ಲಿ ಕೊಹ್ಲಿ ಹೆಚ್ಚು ಓಡಾಡ್ತಾರೆ. ಇದ್ರ ಬೆಲೆ 3.56 ಕೋಟಿ ರೂಪಾಯಿ.
ಇನ್ನು ಅವರ ಬಳಿ ಬೆಂಟ್ಲಿ ಫ್ಲೈಯಿಂಗ್ ಸ್ಪರ್ v8 ಕಾರು ಇದೆ. ಕಾರಿನ ಬೆಲೆ 5.05 ರಿಂದ 6.35 ಕೋಟಿ ರೂಪಾಯಿ. ಈಐ ಷಾರಾಮಿ ಕಾರುಗಳ ಜೊತೆ, ಟೋಯೊಟಾ ಫಾರ್ಚೂನರ್, ಮತ್ತು ರೆನಾಲ್ಟ್ ಡಸ್ಟರ್ ಕಾರುಗಳು ಕೂಡ ಇವೆ. ಹೀಗೆ ಕಿಂಗ್ ಕೊಹ್ಲಿ ಕ್ರಿಕೆಟ್ ಜೊತೆಗೆ ಕಾರ್ ಮೇಲೂ ಹೆಚ್ಚು ಪ್ರೀತಿ ಹೊಂದಿದ್ದಾರೆ. ಹೀಗಾಗೇ ಅವ್ರ ಹತ್ರ ಇಷ್ಟೊಂದು ಕಾರ್‌ಗಳಿವೆ.