ಕೂದಲು ಹೋಯ್ತು.. ಈಗ ಉಗುರು ಉದುರುವ ಸಮಸ್ಯೆ! – ಮಹಾರಾಷ್ಟ್ರದಲ್ಲಿ ಭಯಾನಕ ಖಾಯಿಲೆ ಪತ್ತೆ!

ಕೊರೋನಾ ವೈರಸ್ ಇಡೀ ವಿಶ್ವವನ್ನೇ ಆಳಿತ್ತು. ಕೋಟ್ಯಾಂತರ ಜನರು ಈ ವೈರಸ್ ಗೆ ತುತ್ತಾಗಿದ್ರು. ಲಕ್ಷಾಂತರ ಮಂದಿ ಜೀವ ಕಳೆದುಕೊಂಡಿದ್ರು. ಇದೀಗ ಭಾರತದಲ್ಲಿ ಮತ್ತೊಂದು ವಿಚಿತ್ರ ಖಾಯಿಲೆ ಪತ್ತೆಯಾಗಿದೆ. ಮಹಾರಾಷ್ಟ್ರದಲ್ಲಿ ವಿಚಿತ್ರ ಮತ್ತು ಭಯಾನಕ ಖಾಯಿಲೆಯೊಂದು ಹರಡಿದ್ದು ಜನ ಬೆಚ್ಚಿಬಿದ್ದಿದ್ದಾರೆ.
ಇದನ್ನೂ ಓದಿ: ತವರಿನಲ್ಲಿ ಆರ್‌ಸಿಬಿಗೆ ಹೀನಾಯ ಸೋಲು – ಪಂಜಾಬ್ ಕಿಂಗ್ಸ್ ಗೆ 5 ವಿಕೆಟ್ ಗಳ ಭರ್ಜರಿ ಜಯ
ಈ ವಿಚಿತ್ರ ಖಾಯಿಲೆ ಪತ್ತೆಯಾಗಿದ್ದು, ಮಹಾರಾಷ್ಟ್ರದ ಬುಲ್ದಾನಾ ಜಿಲ್ಲೆ ಬಾಂಡ್‌ಗಾಂವ್ ಎಂಬಲ್ಲಿ. ಕಳೆದ ಒಂದೆರಡು ತಿಂಗಳಿನಿಂದ ಅಲ್ಲಿನ ಜನರು ಕೂದಲು ಉದುರುವಿಕೆಯ ಸಮಸ್ಯೆಗೆ ತುತ್ತಾಗಿದ್ರು. ಇದೀಗ ಉಗುರು ಉದುರೋ ಸಮಸ್ಯೆಯಿಂದ ಅಲ್ಲಿನ ಜನ ಹೈರಾಣಗಿದ್ದಾರೆ.
ಕಳೆದ ಒಂದೆರಡು ತಿಂಗಳ ಹಿಂದೆಯಷ್ಟೆ ಈ ಊರಿನ ಜನಕ್ಕೆ ಕೂದಲು ಉದುರುತ್ತಿದೆ ಅನ್ನೋ ಆತಂಕ ಕಾಡಿತ್ತು.. ಈ ಆತಂಕ ಮಾಸುವ ಮುಂಚೆನೇ ಮತ್ತೊಂದು ವಿಚಿತ್ರ ಕಾಯಿಲೆ ಎದುರಾಗಿದೆ. ಬಾಂಡ್‌ಗಾಂವ್ ಭಾಗದ ಜನರಲ್ಲಿ ಬೆರಳಿನಿಂದ ಉಗುರುಗಳು ಕಿತ್ತು ಬರ್ತಿವೆ.. ಒಬ್ಬರಲ್ಲ ಇಬ್ಬರಲ್ಲ ಸುಮಾರು 46 ಜನರಿಗೆ ಉಗುರು ಉದುರುವ ಖಾಯಿಲೆ ಪತ್ತೆಯಾಗಿದೆ. ಕಳೆದ 6 ದಿನದಲ್ಲಿ ಶೇಗಾಂವ್ ತಾಲೂಕಿನ 5 ಹಳ್ಳಿಗಳಲ್ಲಿ ಈ ರೋಗಲಕ್ಷಣ ಕಂಡುಬಂದಿದೆ.
ಬಾಂಡ್‌ಗಾಂವ್ ಗ್ರಾಮದಲ್ಲಿ 14 ಜನರಿಗೆ ಉಗುರು ಉದುರುವಿಕೆ ಸಮಸ್ಯೆ ಕಾಡ್ತಿದ್ರೆ, ಕಲ್ವಾಡ್ ಗ್ರಾಮದಲ್ಲಿ 13 ಜನ, ಕಥೋರಾ ಗ್ರಾಮದಲ್ಲಿ 10 ಮಂದಿಗೆ ವಿಚಿತ್ರ ರೋಗ ಕಾಣಿಸಿದೆ. ಮಚ್ಚಿಂದ್ರಖೇಡ್ ಗ್ರಾಮದಲ್ಲಿ 07 ಜನರಲ್ಲಿ ಉಗುರು ಹೋಗ್ತಿದೆ.. ಘುಯಿ ಗ್ರಾಮದಲ್ಲಿ ಇಬ್ಬರು ರೋಗಿಗಳು ಪತ್ತೆಯಾಗಿದ್ದಾರೆ.
ಈ ಘಟನೆಯ ಬಗ್ಗೆ ಮಾಹಿತಿ ಬಂದ ತಕ್ಷಣ ಗ್ರಾಮಗಳಲ್ಲಿ ಆರೋಗ್ಯ ಇಲಾಖೆ ತಕ್ಷಣವೇ ಸಮೀಕ್ಷೆ ಪ್ರಾರಂಭಿಸಿದೆ. ಚರ್ಮರೋಗ ತಜ್ಞ ಡಾ. ಬಾಲಾಜಿ ಅದ್ರಾರ್ ರೋಗಿಗಳ ವೈದ್ಯಕೀಯ ಪರೀಕ್ಷೆ ನಡೆಸಿದ್ದಾರೆ. ಸಚಿವ ಪ್ರತಾಪ್‌ರಾವ್ ಜಾಧವ್ ಅಗತ್ಯ ಕ್ರಮಗಳನ್ನು ತೆಗೆದುಕೊಳ್ಳುವುದಾಗಿ ಭರವಸೆ ನೀಡಿದ್ದಾರೆ. ಪರಿಸರ ಮಾಲಿನ್ಯ. ಕಲುಷಿತ ನೀರು ಸೇವನೆ. ಕಾರಣ ಇರಬಹುದು ಅನ್ನೋದು ತಜ್ಞರ ಶಂಕೆ. ಈ ಹಿಂದೆ ಸರ್ಕಾರ ವಿತರಿಸಿದ ಗೋಧಿ ತಿಂದು 18 ಗ್ರಾಮದಲ್ಲಿ 50ಕ್ಕೂ ಹೆಚ್ಚು ಜನ ಕೂದಲು ಕಳೆದ್ಕೊಂಡಿದ್ರು.ಅದ್ಹೇನೆ ಇರಲಿ, ಉಗುರು ಉದುರುತ್ತಿರೋದು ಮಾತ್ರ ಗ್ರಾಮಗಳಲ್ಲಿ ಆತಂಕ ಹೆಚ್ಚಿಸಿದೆ.