ಭಾರತಕ್ಕೆ 2 ಬುಲೆಟ್ ಟ್ರೈನ್ ಗಿಫ್ಟ್ ಜಪಾನ್ ಕೊಟ್ಟ ರೈಲಿನ ಸ್ಪೆಷಾಲಿಟಿಯೇನು?
ಗಂಟೆಗೆ 320 ಕಿ.ಮೀ ಸ್ಪೀಡ್.. ಹೇಗಿರುತ್ತೆ?

ಭಾರತಕ್ಕೆ 2 ಬುಲೆಟ್ ಟ್ರೈನ್ ಗಿಫ್ಟ್  ಜಪಾನ್ ಕೊಟ್ಟ ರೈಲಿನ ಸ್ಪೆಷಾಲಿಟಿಯೇನು?ಗಂಟೆಗೆ 320 ಕಿ.ಮೀ ಸ್ಪೀಡ್.. ಹೇಗಿರುತ್ತೆ?

ಭಾರತಕ್ಕೆ ಹೈಸ್ಪೀಡ್ ರೈಲು ಪರೀಕ್ಷಾರ್ಥವಾಗಿ ಜಪಾನ್  2 ಬುಲೆಟ್ ರೈಲುಗಳನ್ನು ಉಡುಗೊರೆಯಾಗಿ ನೀಡುತ್ತಿದೆ. ಜಪಾನ್ ನೀಡುತ್ತಿರುವ 2 ಬುಲೆಟ್ ರೈಲು ಭಾರತದ ಹೈಸ್ಪೀಡ್ ರೈಲು ಕಾರಿಡಾರ್ ಯೋಜನೆಗೆ ಮತ್ತಷ್ಟು ವೇಗ ನೀಡಿದೆ. ಜಪಾನ್ ಗಿಫ್ಟ್ 2026ರ ವೇಳೆಗೆ ಭಾರತಕ್ಕೆ ಆಗಮಿಸಲಿದೆ. ಆಪರೇಶನಲ್ ಡೇಟಾ, ಇನ್‌ಸ್ಪೆಕ್ಷನ್ ಟೂಲ್ ಸೇರಿದಂತೆ ಎಲ್ಲವನ್ನು ಕಾರ್ಯಗೊತಗಳಿಸಲು ಈ ಜಪಾನ್ ಬುಲೆಟ್ ರೈಲು ನೆರವಾಗಲಿದೆ. ಪ್ರಮುಖವಾಗಿ ಭಾರತದ ವಾತಾವರಣ, ಇಲ್ಲಿನ ಪರಿಸ್ಥಿತಿಗೆ ಅನುಗುಣವಾಗಿ ಬುಲೆಟ್ ರೈಲು ಹೇಗೆ ಕಾರ್ಯನಿರ್ವಹಲಿದೆ, ಪರಿಣಾಮಗಳ ಕುರಿತು ಅಧ್ಯಯನ ನಡೆಸಲು ಇದು ನೆರವಾಗಲಿದೆ. ಭಾರತದಲ್ಲಿನ ಅತೀವ ಉಷ್ಣಾಂಶ ವಾತಾವರಣ ಹಾಗೂ ಧೂಳು ಬುಲೆಟ್ ರೈಲು ಕಾರ್ಯಗತಗೊಳಿಸಲು ಸವಾಲು ಒಡ್ಡಲಿದೆ.

ಜಪಾನ್‌ನ ಅತ್ಯಾಧುನಿಕ ಶಿನ್‌ ಕಾನ್ಸೆನ್ E5 ಹಾಗೂ E3 ಮಾಡೆಲ್ ರೈಲನ್ನು ಭಾರತಕ್ಕೆ ಉಡುಗೊರೆಯಾಗಿ ನೀಡುತ್ತಿದೆ. ಈ ರೈಲನ್ನು ಜಪಾನ್ 2011ರಲ್ಲಿ ಅಭಿವೃದ್ಧಿಪಡಿಸಿದೆ. ಇದೀಗ ಹಲವು ಅತ್ಯಾಧುನಿಕ ತಂತ್ರಜ್ಞಾನ ಸೇರಿಸಲಾಗಿದೆ. ಈ ರೈಲು ಗಂಟೆಗೆ 320 ಕಿಲೋಮೀಟರ್ ವೇಗದಲ್ಲಿ ಸಂಚರಿಸಲಿದೆ.  ಇ3 ಹಾಗೂ ಇ5 ರೈಲುಗಳನ್ನು ಮುಂಬೈ-ಅಹಮ್ಮದಾಬಾದ್ ಹೈಸ್ಪೀಡ್ ರೈಲು ಕಾರಿಡಾರ್‌ನಲ್ಲಿ ಪರೀಕ್ಷಾರ್ಥ ಪ್ರಯೋಗ ನಡೆಯಲಿದೆ. ಸದ್ಯ ಮುಂಬೈ-ಅಹಮ್ಮದಾಬಾದ್ ಹೈಸ್ಪೀಡ್ ರೈಲು ಕಾರಿಡಾರ್ ಪ್ರಗತಿಯಲ್ಲಿದೆ. ಭಾರತ ಇದೇ ಮೊದಲ ಬಾರಿಗೆ ಹೈಸ್ಪೀಡ್ ರೈಲು ಓಡಿಸಲು ತಯಾರಿ ನಡೆಸುತ್ತಿದೆ. ಭಾರತದಲ್ಲಿ ಹೈಸ್ಪೀಡ್ ರೈಲು ಅತ್ಯಂತ ಸವಾಲು. ಇಲ್ಲಿನ ಭೌಗೋಳಿಕ ಪರಿಸರ, ಇಲ್ಲಿನ ವಾತಾವರಣ, ರೈಲು ಸಾಗುವ ಹಳಿ, ಸುರಕ್ಷತೆ ಎಲ್ಲವೂ ಸವಾಲಾಗಿದೆ. ಆದರೆ ಈ ಮಹತ್ವಾಂಕ್ಷಿ ಕಾರಿಡಾರ್ ಯೋಜನೆಯನ್ನು 2027ರಲ್ಲಿ ಉದ್ಘಾಟನೆ ಮಾಡಲು ಮುಂದಾಗಿದೆ. 2026ರಲ್ಲಿ ಜಪಾನ್ ರೈಲುಗಳು ಪರೀಕ್ಷಾರ್ಥ ಓಡಾಟ ಆರಂಭಸಲಿದೆ. ಆರಂಭಿಕ ಹಂತದಲ್ಲಿ ಪೂರ್ಣಗೊಂಡಿರುವ ಹೈಸ್ಪೀಡ್ ಕಾರಿಡಾರ್ ಮೂಲಕ ಪರೀಕ್ಷಾರ್ಥ ಪ್ರಯೋಗ ನಡೆಯಲಿದೆ.

ಈ ಪರೀಕ್ಷೆಯು ಜಪಾನ್‌ಗೆ 2030ರ ದಶಕದ ಆರಂಭದಲ್ಲಿ ಬಿಡುಗಡೆಯಾಗಲಿರುವ ಆತ್ಯಾಧುನಿಕ ಹಾಗೂ ಸುಧಾರಿತ ‘ಇ10 ಶಿಂಕಾನ್ಸೆನ್‌’ ಮಾದರಿಯ ವಿನ್ಯಾಸವನ್ನು ಪರಿಷ್ಕರಿಸಲು ಸಹಾಯ ಮಾಡಲಿದೆ ಎಂದು ಜಪಾನ್‌ ಮಾಧ್ಯಮಗಳು ವರದಿ ಮಾಡಿವೆ. ಬುಲೆಟ್ ರೈಲು ಯೋಜನೆಯು ಜಪಾನ್ ಅಂತರರಾಷ್ಟ್ರೀಯ ಸಹಕಾರ ಸಂಸ್ಥೆ ಯಿಂದ ಪಡೆಯುವ ಕಡಿಮೆ ಬಡ್ಡಿಯ ಸಾಲದಲ್ಲಿ ಸಾಕಾರವಾಗಲಿದೆ. ಒಟ್ಟು ಯೋಜನೆಯ ಮೊತ್ತದಲ್ಲಿ ಶೇ. 80ರಷ್ಟನ್ನು ಇದು ಭರಿಸಲಿದೆ. 50 ವರ್ಷಗಳ ಅವಧಿಯಲ್ಲಿ ಇದನ್ನು ಮರುಪಾವತಿ ಮಾಡಬೇಕಾಗುತ್ತದೆ. ಒಟ್ನಲ್ಲಿ ಜಪಾನ್ ಭಾರತಕ್ಕೆ ಎರಡು ಬುಲೆಟ್ ಟ್ರೈನ್ ನೀಡಲಿದ್ದು, ಇದು ಭಾರತದ ಅಭಿವೃದ್ಧಿಗೆ ಸಹಕಾರಿಯಾಗಲಿದೆ.

Kishor KV

Leave a Reply

Your email address will not be published. Required fields are marked *