ಜಾಹೀರಾತಿನಲ್ಲಿ ಆರ್ ಸಿಬಿ ಬಗ್ಗೆ ಅವಹೇಳನ – ಟ್ರಾವಿಸ್ ಹೆಡ್ ವಿರುದ್ಧ ಕೋರ್ಟ್ ಮೆಟ್ಟಿಲೇರಿದ ಫ್ರಾಂಚೈಸಿ!

ಐಪಿಎಲ್ ಆರಂಭಕ್ಕೂ ಮುನ್ನ ಹೈದ್ರಾಬಾದ್ ಫ್ರಾಂಚೈಸಿ ಬ್ಯಾಟಿಂಗ್ ಲೈನಪ್ ಸಿಕ್ಕಾಪಟ್ಟೆ ಸ್ಟ್ರಾಂಗ್ ಆಗಿ ಕಾಣ್ತಿತ್ತು. ಅದಕ್ಕೆ ತಕ್ಕಂತೆ ಫಸ್ಟ್ ಮ್ಯಾಚಲ್ಲೇ 260+ ರನ್ಸ್ ಸ್ಕೋರ್ ಮಾಡಿದ್ರು. ನಮ್ಮ ಟಾರ್ಗೆಟ್ ಏನಿದ್ರೂ 300+ ರನ್ಸ್ ಅಂತಾ ಬಿಲ್ಡಪ್ ಕೊಡೋಕೆ ಶುರು ಮಾಡಿದ್ರು. ಬಟ್ ಆವತ್ತೇ ಲಾಸ್ಟ್. ಪಂಜಾಬ್ ವಿರುದ್ಧ 245 ರನ್ಸ್ ಚೇಸ್ ಮಾಡಿದ್ದು ಬಿಟ್ರೆ ಗೆದ್ದಿದ್ದೇ ಇಲ್ಲ. 7 ಮ್ಯಾಚ್ಗಳನ್ನ ಆಡಿ 5 ರಲ್ಲಿ ಸೋತು ಪಾಯಿಂಟ್ಸ್ ಟೇಬಲ್ನಲ್ಲಿ 9ನೇ ಸ್ಥಾನದಲ್ಲಿದ್ದಾರೆ. ಆದ್ರೆ ಅದೇ ಹೈದ್ರಾಬಾದ್ ತಂಡದ ಸ್ಫೋಟಕ ಆಟಗಾರ ಟ್ರಾವಿಸ್ ಹೆಡ್ ಬೇಡದ ವಿವಾದವನ್ನ ಮೈಮೇಲೆ ಎಳೆದುಕೊಂಡಿದ್ದಾರೆ.
ಇದನ್ನೂ ಓದಿ : ದಕ್ಷಿಣ ಭಾರತಲ್ಲೂ ನನ್ನ ಹೆಸರಿನಲ್ಲೊಂದು ದೇವಸ್ಥಾನ ಬೇಕು ಎಂದ ಊರ್ವಶಿ ರೌಟೇಲಾ! – ನಟಿ ಹಿಗ್ಗಾಮುಗ್ಗಾ ಟ್ರೋಲ್
ವಿಷ್ಯ ಏನಪ್ಪಾ ಅಂದ್ರೆ ಉಬರ್‌ನ ಯುಟ್ಯೂಬ್ ಜಾಹೀರಾತಿಯಲ್ಲಿ ಟ್ರಾವಿಡ್ ಹೆಡ್ ಆರ್ ಸಿಬಿ ಬಗ್ಗೆ ಅವಹೇಳನ ಮಾಡಿದ್ದಾರೆ ಎಂಬ ಆರೋಪ ಕೇಳಿ ಬಂದಿದೆ. Uber Moto ನ Baddies in Bengaluru ಎಂಬ ಯೂಟ್ಯೂಬ್ ಜಾಹೀರಾತಿನಲ್ಲಿ ಕಾಣಿಸಿಕೊಂಡಿರುವ ಟ್ರಾವಿಸ್ ಹೆಡ್, ಕಳ್ಳ ಹೆಜ್ಜೆಯೊಂದಿಗೆ ಕ್ರೀಡಾಂಗಣಕ್ಕೆ ಎಂಟ್ರಿ ಕೊಡ್ತಾರೆ. ಆ ಬಳಿಕ ರಾಯಲ್ ಚಾಲೆಂಜರ್ಸ್ ಬೆಂಗಳೂರು ಹಾಗೂ ಹೈದರಾಬಾದ್ ತಂಡದ ನಡುವಿನ ಪಂದ್ಯದ ಬೋರ್ಡ್ನಲ್ಲಿ ಸ್ಪ್ರೇ ಪೇಯಿಂಟ್ ಬಳಸಿ ರಾಯಲಿ ಜಾಲೆಂಜ್ಡ್ ಬೆಂಗಳೂರು ಎಂದು ಬದಲಿಸುತ್ತಾರೆ. ಈ ವೇಳೆ ಭದ್ರತಾ ಸಿಬ್ಬಂದಿ ಬೆನ್ನಟ್ಟಿದ್ದಾಗ ಮೂರು ನಿಮಿಷಗಳಲ್ಲಿ ಉಬರ್ ವಾಹನ ಸೌಲಭ್ಯ ಪಡೆದು ಬೈಕ್‌ನಲ್ಲಿ ಹೆಡ್ ಎಸ್ಕೇಪ್ ಆಗ್ತಾರೆ. ಮೂರೇ ನಿಮಿಷಗಳಲ್ಲಿ ತನ್ನ ಸೇವೆ ಲಭ್ಯ ಎಂಬ ಜಾಹೀರಾತು ಇದು. ಬಟ್ ಇದೇ ಜಾಹೀರಾತಿಗಾಗಿ ಆರ್‌ಸಿಬಿ ತಂಡದ ಹೆಸರನ್ನು ಅವಹೇಳನ ಮಾಡಲಾಗಿದೆ. ಕಾನೂನಿನಲ್ಲಿ ಅದಕ್ಕೆ ಅವಕಾಶವಿಲ್ಲ ಎಂದು ಆರ್‌ಸಿಬಿ ಪರ ವಕೀಲರು ವಾದಿಸಿದ್ದಾರೆ. ಈ ಜಾಹೀರಾತು ಬೆಂಗಳೂರು ನಗರ ಮತ್ತು ತಂಡವನ್ನು ಅಣಕಿಸುತ್ತಿದೆ ಎಂದು ರಾಯಲ್ ಚಾಲೆಂಜರ್ಸ್ ಬೆಂಗಳೂರು ಆರೋಪಿಸಿದೆ.
ಅಷ್ಟಕ್ಕೂ ಇಲ್ಲಿ ಆರ್‌ಸಿಬಿ ಫ್ರಾಂಚೈಸಿ ಕೋರ್ಟ್ ಮೆಟ್ಟಿಲೇರೋಕೆ ಕಾರಣವೇ ಹೆಸರನ್ನ ಬದಲಾಯಿಸಿದ್ದು. ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಹೆಸರನ್ನು ಈ ಜಾಹೀರಾತಿನಲ್ಲಿ ರಾಯಲಿ ಚಾಲೆಂಜ್ಡ್ ಬೆಂಗಳೂರು ಎಂದು ಬರೆಯಲಾಗಿದೆ. ಅಂದ್ರೆ ಈಗಾಗ್ಲೇ ಸವಾಲು ಎಸೆದಾಗಿದೆ ಅನ್ನೋ ರೀತಿ ಬಿಂಬಿಸಲಾಗಿದೆ. ಆರ್‌ಸಿಬಿ ಹೆಸರನ್ನು ಬದಲಿಸಿದ್ದು, ಹಾಗೂ ಅಪಮಾನ ಮಾಡುವಂತೆ ಬದಲಿಸಿದ್ದು ಸರಿಯಲ್ಲ ಅನ್ನೋದು ಆರ್‌ಸಿಬಿ ವಾದ. ಉಬರ್ ಹಾಗೂ ಎಸ್‌ಆರ್‌ಹೆಚ್ ಹೈದರಾಬಾದ್ ತಂಡದ ಪ್ರಯೋಜಿತ ಜಾಹೀರಾತಿನಲ್ಲಿ ಆರ್‌ಸಿಬಿ ಟ್ರೇಡ್ ಮಾರ್ಕ್ ಬಳಸಿದ್ದು ಸರಿಯಲ್ಲ. ಹೀಗಾಗಿ ತಕ್ಷಣವೆ ಯೂಟ್ಯೂಬ್ ಹಾಗೂ ಇತರ ಪ್ಲಾಟ್‌ಫಾರ್ಮ್‌ನಿಂದ ಜಾಹೀರಾತು ತೆಗೆಯುವಂತೆ ಎಂದು ಆರ್‌ಸಿಬಿ ಕೋರ್ಟ್‌ನಲ್ಲಿ ಆಗ್ರಹಿಸಿದೆ. ಹಾಗೇ ವಿಡಿಯೋಗಳನ್ನ ಡಿಲೀಟ್ ಮಾಡುವಂತೆ ಬೆಂಗಳೂರು ಫ್ರಾಂಚೈಸಿ ದಿಲ್ಲಿ ಹೈಕೋರ್ಟ್ ಮೆಟ್ಟಿಲೇರಿದೆ. ಆರ್‌ಸಿಬಿಯ ಮಧ್ಯಂತರ ಅರ್ಜಿಯ ವಿಚಾರಣೆ ನಡೆಸಿದ ದಿಲ್ಲಿ ಹೈಕೋರ್ಟ್ ನ್ಯಾಯಾಧೀಶ ಸೌರಬ್ ಬ್ಯಾನರ್ಜಿ ಆದೇಶವನ್ನು ಕಾಯ್ದಿರಿಸಿದ್ದಾರೆ.