ವೀರಚಂದ್ರಹಾಸದಲ್ಲಿ ಶಿವಣ್ಣನ ಪಾತ್ರವೇನು? ಯಕ್ಷಗಾನದ ವೇಷದಲ್ಲಿ ಅಪ್ಪು, ಅಣ್ಣಾವ್ರು
ಶಿವಣ್ಣ ಯಕ್ಷಗಾನ ಕಲಿತ್ತಿದ್ದು ಎಲ್ಲಿ?

ವೀರಚಂದ್ರಹಾಸ ಸಿನಿಮಾದಲ್ಲಿ ಡಾ. ರಾಜ್‌ಕುಮಾರ್, ಶಿವರಾಜ್ ಕುಮಾರ್, ಪುನೀತ್‌ರಾಜ್ ಕುಮಾರ್ ಅವರು ಯಕ್ಷಗಾನದ ವೇಷದಲ್ಲಿ ಕಾಣಿಸುತ್ತಾರೆ. ಅದ್ರಲ್ಲೂ ಸಿನಿಮಾ ಆರಂಭದಲ್ಲೇ ಪುನೀತ್ ರಾಜ್ ಕುಮಾರ್ ಯಕ್ಷಗಾನದ ಡ್ರೇಸ್ ತೊಟ್ಟ ಬರುವ AI ರಚಿತ ವಿಡಿಯೋ ನಿಜಕ್ಕೂ ಅದ್ಫುತವಾಗಿ ಕಾಣಿಸುತ್ತೆ.. ನಿಜವಾಗಿಯೂ ಪುನೀತ್ ರಾಜ್‌ಕುಮಾರ್ ಅವರೇ ಎದ್ದು ಬಂದ್ರೇನು ಅನ್ಸುತ್ತೆ. ಇನ್ನೂ ರಾಜ್ ಕುಮಾರ್ ಅವರನ್ನೂ ಕೂಡ ಯಕ್ಷಗಾನದ ವೇಷದಲ್ಲಿ ರವಿಬಸ್ರೂರು ಅವರು ಬಹಳ ಸೊಗಸಾಗಿ ತೋರಿಸಿದ್ದಾರೆ.
ಅನಾರೋಗ್ಯದ ನಡುವೆ ಶಿವಣ್ಣ ಅಭಿನಯ
ಇನ್ನೂ ವೀರಚಂದ್ರಹಾಸ ಸಿನಿಮಾದಲ್ಲಿ ಶಿವಪುಟ್ಟಸ್ವಾಮಿ ಪಾತ್ರದಲ್ಲಿ ಶಿವರಾಜ್ ಕುಮಾರ್ ಅವರು ಸಖತ್ ಆಗಿ ನಟಿಸಿದ್ದಾರೆ. ಒಬ್ಬ ನುರಿತ ಯಕ್ಷಗಾನ ಕಲಾವಿದರಂತೆ ಅಭಿನಯ ಮಾಡಿದ್ದಾರೆ. ತನಗೆ ಕೊಟ್ಟ ಪಾತ್ರಕ್ಕೆ ಶಿವಣ್ಣ ಜೀವತುಂಬಿ ನೋಡುಗರನ್ನ ಸೆಳೆದಿದ್ದಾರೆ. ಚಿತ್ರದ ಆರಂಭದಲ್ಲಿ ಶಿವಣ್ಣನ ಎಂಟ್ರಿ ಆಗುತ್ತೆ. ನಾಯಕನ ಪಾತ್ರ ಪರಿಚಯಿಸುವ ಸಮಯದಲ್ಲಿ ಶಿವಣ್ಣನ ಪಾತ್ರ ಪರಿಚಯವೂ ಆಗುತ್ತದೆ. ಬಳಿಕ ಪ್ರೀ ಕ್ಲೈಮ್ಯಾಕ್ಸ್‌ನಲ್ಲಿ ಮತ್ತೆ ಬರ್ತಾರೆ. ಎರಡೂ ದೊಡ್ಡ ಸನ್ನಿವೇಶಗಳಲ್ಲಿ ಒಂದಷ್ಟು ಹೊತ್ತು ಶಿವಣ್ಣ ಚಿತ್ರದಲ್ಲಿ ಇರುತ್ತಾರೆ. ಇಲ್ಲಿ ಶಿವಣ್ಣ ನಿಜಕ್ಕೂ ಯಾಕೆ ಗ್ರೇಟ್ ಆಗ್ತಾರೆ ಗೊತ್ತ.. ಈ ಸಿನಿಮಾ ಚಿತ್ರಿಕರಣದ ವೇಳೆ ಶಿವಣ್ಣ ಅನಾರೋಗ್ಯದಿಂದ ಬಳಲುತ್ತಿದ್ದರು, ಇನ್ನೂ ಆಪರೇಷನ್ ಕೂಡ ಆಗಿರಲಿಲ್ಲ. ಆದ್ರೂ ಅಷ್ಟು ಭಾರವನ್ನ ಹೊತ್ತುಕೊಂಡು ಯಕ್ಷಗಾನದ ನಟನೆ ಮಾಡಿದ್ದಾರೆ.. ಯಕ್ಷಗಾನದ ಕಿರೀಟ, ಬಟ್ಟೆ , ಬಟ್ಟೆ ಮೇಲೆ ಹಾಕುವ ಒಡವೆಗಳು ತುಂಬಾ ಭಾರ ಇರುತ್ತೆ.. ಸುಮಾರು 20 -25 ಕೆ ಜೆ ಮೇಲೆ ಇರುತ್ತೆ.. ಅದ್ರ ಜೊತೆ ಮುಖಕ್ಕೆ ಮೇಕಪ್ ಕೂಡ ಜಾಸ್ತಿ.. ಹೀಗಾಗಿ ಅನಾರೋಗ್ಯದ ನಡುವೆ ಅಷ್ಟು ಭಾರವನ್ನ ಹೊತ್ತುಕೊಂಡು ಕೂಡ ಶಿವಣ್ಣ ಅದ್ಫುತವಾಗಿ ನಟನೆ ಮಾಡಿದ್ದಾರೆ. ಇದ್ರಲ್ಲೇ ಗೊತ್ತಾಗುತ್ತೆ ಶಿವಣ್ಣನಿಗೆ ನಟನೆ ಬಗ್ಗೆ ಎಷ್ಟು ಆಳವಾದ ಶ್ರದ್ಧೆ ಇದೆ ಅನ್ನೋದು.. ಶಿವಣ್ಣ ಕೂಡ ಸಾಕಷ್ಟು ತಯಾರಿ ನಡೆಸಿದ್ರಂತೆ.. ಬೆಳಗ್ಗೆ ಮೇಕಪ್, ಕಾಸ್ಟ್ಯೂಮ್ ಹಾಕಿಕೊಂಡರೆ ಸಂಜೆವರೆಗೂ ಅದೇ ರೀತಿ ಇರುತ್ತಿದ್ದರಂತೆ. ಊಟ ಕಮ್ಮಿ ಮಾಡಿ ಡಯೆಟ್ ಅಲ್ಲಿ ಇರುತ್ತಿದ್ದರಂತೆ. ಅಷ್ಟೇ ಅಲ್ಲ ಉದ್ದದ ಡೈಲಾಗ್‌ಗಳನ್ನು ಓದಿ ಅಭ್ಯಾಸ ಮಾಡಿದ್ದರಂತೆ. ಗೀತಾಕ್ಕ ಕೂಡ ಶಿವಣ್ಣನ ಲುಕ್ ನೋಡಿ ತುಂಬಾ ಇಷ್ಟ ಪಟ್ಟಿದ್ರಂತೆ. ಹಾಗೇ ರವಿಬಸ್ರೂರು ಕೂಡ ರಾಜ್ ಕುಮಾರ್ ಫ್ಯಾಮೀಲಿ ಮೇಲೆ ಇರೋ ಅಭಿಮಾನವನ್ನ ತೋರಿಸಿದ್ದಾರೆ. ಒಂದೇ ಸಿನಿಮಾದಲ್ಲಿ ಶಿವಣ್ಣ, ಅಪ್ಪು ಹಾಗೂ ಅಣ್ಣವ್ರನ್ನ ನೋಡಿ ಫ್ಯಾನ್ಸ್ ಫಿದಾ ಆಗಿದ್ದು ಮಾತ್ರ ಸುಳ್ಳಲ್ಲ..