ವಿಶ್ವದ ದುಬಾರಿ ಐಸ್ ಕ್ರೀಂ ಬೆಲೆ ಕೇಳಿದ್ರೆ ಶಾಕ್ – ಒಂದಲ್ಲ, ಎರಡಲ್ಲ, 5 ಲಕ್ಷ ರೂಪಾಯಿಗೆ ಒಂದು ಐಸ್‌ಕ್ರೀಮ್

ಬೇಸಿಗೆಯೇ ಇರಲಿ, ಯಾವ ಟೈಮ್ ಇರಲಿ, ಅನೇಕರಿಗೆ ಐಸ್ ಕ್ರೀಂ ಆಲ್‌ಟೈಮ್ ಫೆವರೇಟ್. ರುಚಿಯಾದ ವೆರೈಟಿ ವೆರೈಟಿ ಐಸ್ ಕ್ರೀಂ ತಿನ್ನೋದು ಅನೇಕರಿಗೆ ಖುಷಿ ಕೊಡುತ್ತದೆ. ಆದರೆ, ಕೆಲವೊಂದು ಐಸ್ ಕ್ರೀಂಗೆ ದುಬಾರಿ ಬೆಲೆ ಇರುತ್ತದೆ. ಆದರೆ, ನೂರು, ಸಾವಿರ ಓಕೆ. ಇಲ್ಲೊಂದು ಕಡೆ ಐಸ್‌ಕ್ರೀಮ್ ಸಿಗುತ್ತೆ. ಇದನ್ನ ತಿಂದರೆ ಬಾಯಿ ತಂಪಾಗುತ್ತದೆ. ಆದರೆ, ನಿಮ್ಮ ಜೇಬು ಸುಡುತ್ತದೆ.
ಇದನ್ನೂ ಓದಿ: ಮೇ 1ರಿಂದ ಜಿಪಿಎಸ್ ಆಧಾರಿತ ಟೋಲ್ ಸಂಗ್ರಹ – GNSS ಎಂದರೇನು ? ಹೇಗೆ ಕೆಲಸ ಮಾಡುತ್ತೆ?
ವಿಶ್ವದ ದುಬಾರಿ ಐಸ್ ಕ್ರೀಂ ಜಪಾನ್ ನಲ್ಲಿ ಸಿಗುತ್ತದೆ. ಇದ್ರ ಹೆಸರು ಬ್ಯಾಕುಯಾ. ಇದನ್ನು ವಿಶ್ವದ ಅತ್ಯಂತ ದುಬಾರಿ ಐಸ್ ಕ್ರೀಂ ಎಂದೇ ಹೇಳಲಾಗುತ್ತದೆ. ಜಪಾನ್‌ನಲ್ಲಿ ಇದರ ಬೆಲೆ ಸುಮಾರು 880,000 ಯೆನ್ ಆಗಿದ್ದು, ಇದು 6,380 ಅಮೆರಿಕನ್ ಡಾಲರ್ಗಳಿಗೆ ಸಮ. ಭಾರತೀಯ ರೂಪಾಯಿಗಳಿಗೆ ಬದಲಿಸಿದ್ರೆ ಅದ್ರ ಬೆಲೆ 5,28,409.46 ರೂಪಾಯಿಗಳಾಗುತ್ತದೆ. ಐದು ಲಕ್ಷಕ್ಕೆ ಒಂದು ಐಸ್ ಕ್ರೀಂ ತಿನ್ನೊ ಬದಲು ಹತ್ತು ವರ್ಷಗಳ ಕಾಲ ರುಚಿಕರವಾದ ಐಸ್ ಕ್ರೀಮ್ಗಳನ್ನು ಈ ಬೆಲೆಯಲ್ಲಿ ತಿನ್ನಬಹುದು ಅಂತಿದ್ದಾರೆ ಜನ.
ಬ್ಯಾಕುಯಾ ಐಸ್ ಕ್ರೀಂ ಗಿನ್ನೀಸ್ ರೆಕಾರ್ಡ್ ಸೇರಿದೆ. ಗಿನ್ನೆಸ್ ಬುಕ್ ಆಫ್ ವರ್ಲ್ಡ್ ರೆಕಾರ್ಡ್ಸ್ನಲ್ಲಿ ಪ್ರಕಟವಾದ ವರದಿ ಪ್ರಕಾರ, ಐಸ್ ಕ್ರೀಂನ ಮೇಲ್ಭಾಗದಲ್ಲಿ ಚಿನ್ನದ ಎಲೆ ಇರುತ್ತೆ. ಈ ಐಸ್ ಕ್ರೀಮ್ ತಯಾರಿಸಲು ಎರಡು ರೀತಿಯ ಚೀಸ್ ಬಳಸಲಾಗುತ್ತದೆ. ಅದರಲ್ಲಿ ಒಂದು Sakekasu. ಇದು ತುಂಬಾ ವಿಶೇಷವಾಗಿದ್ದು, ಇದನ್ನು ತಯಾರಿಸಲು 1.5 ವರ್ಷಗಳು ಬೇಕಾಗುತ್ತದೆ. ನಿಮಗೆ ಒಂದು ಕಿಲೋ ಐಸ್ ಕ್ರೀಂ ಬೇಕು ಅಂದ್ರೆ 12 ಲಕ್ಷ ರೂಪಾಯಿಯನ್ನು ಪಾವತಿಸಬೇಕಾಗುತ್ತದೆ.
ಈ ಐಸ್ ಕ್ರೀಮನ್ನು ಜಪಾನಿನ ಐಸ್ ಕ್ರೀಮ್ ಬ್ರ್ಯಾಂಡ್ ಸೆಲಾಟೊ ತಯಾರಿಸಿದೆ. ತನ್ನ ವೆಬ್ಸೈಟ್ನಲ್ಲಿ, ಸೆಲಾಟೊ ಈ ಐಸ್ ಕ್ರೀಮ್ಗೆ ವೈಟ್ ನೈಟ್ ಎಂದು ಹೆಸರಿಸಿದೆ. ಈ ಐಸ್ ಕ್ರೀಮ್ ತಯಾರಿಸಲು ಜಪಾನೀಸ್ ಮತ್ತು ಯುರೋಪಿಯನ್ ಪದಾರ್ಥಗಳನ್ನು ಬಳಸಲಾಗಿದೆ. ಈ ಐಸ್ ಕ್ರೀಮ್ ರುಚಿ ದುಪ್ಪಟ್ಟು ಮಾಡಲು ಒಸಾಕಾ ಮೂಲದ ರಿವಿ ರೆಸ್ಟೋರೆಂಟ್ನ ಮುಖ್ಯ ಬಾಣಸಿಗ ತಡಯೋಶಿ ಯಮಡಾ ಅವರ ಸಹಾಯ ಪಡೆಯಲಾಗಿದೆ. ಪ್ರಸ್ತುತ ಈ ಐಸ್ ಕ್ರೀಮ್ ಜಪಾನ್ನಲ್ಲಿ ಮಾತ್ರ ಲಭ್ಯವಿದೆ.