ದಕ್ಷಿಣ ಭಾರತಲ್ಲೂ ನನ್ನ ಹೆಸರಿನಲ್ಲೊಂದು ದೇವಸ್ಥಾನ ಬೇಕು ಎಂದ ಊರ್ವಶಿ ರೌಟೇಲಾ! – ನಟಿ ಹಿಗ್ಗಾಮುಗ್ಗಾ ಟ್ರೋಲ್

ಬಾಲಿವುಡ್ ನಟಿ ಊರ್ವಶಿ ರೌಟೇಲಾ ಸದಾ ಒಂದಲ್ಲ ಒಂದು ವಿಚಾರವಾಗಿ ಸುದ್ದಿಯಲ್ಲಿರ್ತಾರೆ. ತಮ್ಮ ಮಾತಿನಿಂದಲೇ ಟೀಕೆಗೆ ಗುರಿಯಾಗ್ತಿದ್ದಾರೆ. ಇದೀಗ ಊರ್ವಶಿ ಮತ್ತೊಂದು ಹೇಳಿಕೆ ನೀಡಿ ಟ್ರೋಲರ್ಸ್ ಗೆ ಆಹಾರ ಆಗಿದ್ದಾರೆ. ಉತ್ತರಾಖಂಡದಲ್ಲಿ ನನ್ನ ಹೆಸರಿನಲ್ಲಿ ದೇವಸ್ಥಾನವಿದೆ. ಅದರಂತೆ ದಕ್ಷಿಣ ಭಾರತದಲ್ಲೂ ನನ್ನ ಹೆಸರಿನಲ್ಲಿ ಒಂದು ದೇವಸ್ಥಾನ ನಿರ್ಮಿಸಬೇಕು ಎಂದು ನಟಿ ಹೇಳಿದ್ದಾರೆ. ಊರ್ವಶಿಯ ಈ ಹೇಳಿಕೆ ಸಖತ್ ಟ್ರೋಲ್ ಆಗ್ತಿದೆ.
ಇದನ್ನೂ ಓದಿ: ಯುಪಿಐ ಬಳಕೆದಾರರಿಗೆ ಶಾಕ್ – ಇನ್ಮುಂದೆ ಟ್ರಾನ್ಸಾಕ್ಷನ್‌ಗೂ ಶುಲ್ಕ?
ಈ ಬಗ್ಗೆ ಸಂರ್ದಶನವೊಂದರಲ್ಲಿ ಮಾತನಾಡಿದ ಊರ್ವಶಿ, ಉತ್ತರಾಖಂಡದಲ್ಲಿ ನನ್ನ ಹೆಸರಿನಲ್ಲಿ ‘ಊರ್ವಶಿ’ ಎಂಬ ದೇವಾಲಯ ಈಗಾಗಲೇ ಇದೆ. ನೀವು ಬದರೀನಾಥ ದೇವಸ್ಥಾನಕ್ಕೆ ಭೇಟಿ ನೀಡಲು ಹೋದಾಗ, ಅದರ ಪಕ್ಕದಲ್ಲಿಯೇ ಒಂದು ದೇವಸ್ಥಾನವಿರುತ್ತದೆ. ಇದು ನನಗೆ ಸಮರ್ಪಿಸಲಾಗಿದೆ ಎಂದಿದ್ದಾರೆ. ದಕ್ಷಿಣ ಭಾರತದಲ್ಲೂ ನನ್ನ ಹೆಸರಿನಲ್ಲಿ ಒಂದು ದೇವಸ್ಥಾನ ಆಗಬೇಕು ಎಂದು ತಮ್ಮ ಆಸೆಯನ್ನು ವ್ಯಕ್ತಪಡಿಸಿದ್ದಾರೆ.
ಈ ವೇಳೆ ನಿರೂಪಕ, ಜನರು ದರ್ಶನ ಪಡೆಯಲು ನಿಮ್ಮ ದೇವಸ್ಥಾನಕ್ಕೆ ಹೋಗುತ್ತಾರೆಯೇ ಎಂದು ಕೇಳಾದ ಪ್ರಶ್ನೆಗೆ ಊರ್ವಶಿ ನಗುತ್ತಾ, ಈಗಾಗಲೇ ದೇವಸ್ಥಾನ ಇರೋದರಿಂದ ಜನರು ದೇವಾಲಯದಲ್ಲಿ ಪ್ರಾರ್ಥಿಸುತ್ತಾರೆ. ಅಷ್ಟೇ ಅಲ್ಲ, ದೆಹಲಿ ವಿಶ್ವವಿದ್ಯಾಲಯದ ವಿದ್ಯಾರ್ಥಿಗಳು ಸಹ ಅವರಿಗೆ ಪ್ರಾರ್ಥಿಸುತ್ತಾರೆ ಮತ್ತು ಅವರ ಫೋಟೋಗಳಿಗೆ ಹೂಮಾಲೆಗಳನ್ನು ಅರ್ಪಿಸುತ್ತಾರೆ ಎಂದು ಉತ್ತರಿಸಿದ್ದಾರೆ. ಈ ವೇಳೆ, ಅವರನ್ನು ಜನರು ‘ದಂದಮಾ ಮಾಯಿ’ ಕರೆಯುತ್ತಾರೆ ಎಂಬುದನ್ನು ವಿವರಿಸಿದ್ದಾರೆ. ಸದ್ಯ ದಕ್ಷಿಣ ಭಾರತದಲ್ಲೂ ನನ್ನ ಹೆಸರಲ್ಲಿ ದೇವಸ್ಥಾನ ಬೇಕು ಅವರು ನೀಡಿರುವ ಹೇಳಿಕೆಗೆ ನೆಟ್ಟಿಗರು ಕಾಲೆಳೆದಿದ್ದಾರೆ. ಅಯ್ಯೋ ಸಾಕಮ್ಮ ನಿನ್ನ ಮಾತು ಎಂದು ನೆಟ್ಟಿಗರು ಟೀಕಿಸಿದ್ದಾರೆ.