ಮಾವಿನ ಹಣ್ಣಿಗೆ ಮೊಘಲ್ ರಾಣಿ ಹೆಸರು – ನೂರ್‌ಜಹಾನ್ ಮ್ಯಾಂಗೋಗೆ ಡಿಮ್ಯಾಂಡ್ ಯಾಕೆ?

ಮಾವಿನ ಹಣ್ಣುಗಳಲ್ಲಿ ಬೇಕಾದಷ್ಟು ವೆರೈಟಿ ಇದೆ. ಮಲ್ಲಿಕಾ, ಬಾದಾಮ್, ತೋತಾಪುರಿ, ಹೀಗೆ ಬೇರೆ ಬೇರೆ ಪ್ರಭೇದದ ಮಾವಿನ ಹಣ್ಣುಗಳ ಬಗ್ಗೆ ನಿಮಗೂ ಗೊತ್ತು. ಆದರೆ, ಮೊಘಲ್ ರಾಣಿಯ ಹೆಸರಲ್ಲಿರುವ ವಿಶೇಷ ಮಾವಿನ ಹಣ್ಣಿನ ಬಗ್ಗೆ ನಿಮಗೆ ಗೊತ್ತಾ?
ಇದನ್ನೂ ಓದಿ: ಕೆಸರಿನಲ್ಲಿ ಮರಿಯಾನೆಯ ಆಟ.. – ವೈರಲ್ ಆಯ್ತು ಮುದ್ದಾದ ವಿಡಿಯೋ!
ನೂರ್‌ಜಹಾನ್ ಮಾವು. ಅತ್ಯಂತ ಕಡಿಮೆ ಇಳುವರಿ ಇರುವ ತಳಿ. ತನ್ನದೇ ಆದ ಇತಿಹಾಸವನ್ನು ಈ ಮಾವಿನ ಹಣ್ಣು ಹೊಂದಿದೆ. ಮಧ್ಯಪ್ರದೇಶದ ಕತ್ತಿವಾಡಾದಲ್ಲಿ ಮಾತ್ರ ಇದನ್ನು ಬೆಳೆಯಲಾಗುತ್ತದೆ. ಮಾವಿನ ಹಣ್ಣಿಗೆ ಮೊಘಲ್ ರಾಣಿಯ ಹೆಸರು ಯಾಕೆ ಬಂತು ಅಂತಾ ನೋಡುವುದಾದರೆ, ಮೊಘಲ್ ರಾಣಿಗೆ ಮಲ್ಲಿಕಾ-ಎ-ಆಮ್ ಎಂಬ ಇನ್ನೊಂದು ಹೆಸರು ಇತ್ತಂತೆ. ಮಾವಿನ ರಾಣಿ ಎಂದೂ ಕರೆಯುತ್ತಿದ್ದರಂತೆ. ಈ ಮಾವಿನ ವಿಧವು ಅಫ್ಘಾನಿಸ್ತಾನದಿಂದ ಗುಜರಾತ್ ಮೂಲಕ ಭಾರತಕ್ಕೆ ಬಂದಿದೆ ಅಂತಾ ಹೇಳಲಾಗುತ್ತಿದೆ. ಈ ಮಾವಿನ ವಿಧವು ಜನವರಿ ಅಥವಾ ಫೆಬ್ರವರಿಯಲ್ಲಿ ಹೂ ಬಿಡಲು ಪ್ರಾರಂಭಿಸುತ್ತದೆ ಮತ್ತು ಜೂನ್ ವೇಳೆಗೆ ಕೊಯ್ಲಿಗೆ ಸಿದ್ಧವಾಗುತ್ತವೆ. ಮಾವಿನ ಹಣ್ಣಿನ ವಿಶಿಷ್ಟ ಲಕ್ಷಣವೆಂದರೆ ಅವುಗಳನ್ನು ದೇಶದಲ್ಲೇ ಅತಿ ದೊಡ್ಡದು ಎಂದು ಪರಿಗಣಿಸಲಾಗುತ್ತದೆ. ನೂರ್‌ಜಹಾನ್ ಮಾವಿನ ಹಣ್ಣುಗಳು ತನ್ನ ಬೃಹತ್ ಗಾತ್ರಕ್ಕೆ ಹೆಸರುವಾಸಿಯಾಗಿದೆ. ಈ ಹಣ್ಣು 3-3.5 ಕೆಜಿ ತೂಕವಿದ್ದು, ಒಂದು ಅಡಿ ಉದ್ದದವರೆಗೆ ಬೆಳೆಯುತ್ತದೆ.
ಕತ್ತಿವಾಡಾದಲ್ಲಿ ಈ ಮಾವಿನ ಹಣ್ಣಿಗೆ ಭಾರಿ ಬೇಡಿಕೆಯಿದೆ, ಕುತೂಹಲಕಾರಿ ಸಂಗತಿಯೆಂದರೆ ನೂರ್‌ಜಹಾನ್ ಮಾವಿನ ಮರವು ಗರಿಷ್ಠ 12 ಅಡಿ ಎತ್ತರಕ್ಕೆ ಬೆಳೆಯುತ್ತದೆ.