ವೀರಚಂದ್ರಹಾಸ ಸಿನಿಮಾ ಹೇಗಿದೆ? ಶಿವಣ್ಣನ ಅಭಿನಯಕ್ಕೆ ಫ್ಯಾನ್ಸ್ ಏನ್ ಅಂದ್ರು?
ವೀರಚಂದ್ರಹಾಸ ಸಿನಿಮಾದ ಫಸ್ಟ್ ರಿವ್ಯೂ

ವೀರಚಂದ್ರಹಾಸ ಸಿನಿಮಾ ಹೇಗಿದೆ? ಶಿವಣ್ಣನ ಅಭಿನಯಕ್ಕೆ ಫ್ಯಾನ್ಸ್ ಏನ್ ಅಂದ್ರು?ವೀರಚಂದ್ರಹಾಸ ಸಿನಿಮಾದ ಫಸ್ಟ್ ರಿವ್ಯೂ

ಸ್ಯಾಂಡಲ್‌ವುಡ್‌ನಲ್ಲಿ ಈಗ ಹೊಸ ಹೊಸ ಪ್ರಯೋಗ ಆಗ್ತಿದೆ. ಜನ ಎಷ್ಟ ಅಪ್‌ಡೇಟ್ ಆದ್ರೂ,  ತಂತ್ರಜ್ಞಾನಗಳ ಬಳಕೆ ಎಷ್ಟೇ ಹೆಚ್ಚಾದ್ರೂ, ನಮ್ಮ ಕಲೆ, ಸಂಪ್ರದಾಯ ಉಳಿಸುವ ಕೆಲಸ ಆಗುತ್ತಲೇ ಇದೆ.. ಕನ್ನಡದಲ್ಲಿ ನಮ್ಮ ಸಂಸ್ಕೃತಿಯನ್ನ ಸಾರುವ ಸಿನಿಮಾ ಬರ್ತಿದೆ. ಕಾಂತಾರ ಸಿನಿಮಾ ಯಾವ ಮಟ್ಟಿಗೆ ಹಿಟ್ ಆಗಿ ಕನ್ನಡ ಇಂಡಸ್ಟ್ರಿ ಮಾತ್ರವಲ್ಲ ಇಡೀ ಭಾರತದಲ್ಲಿ ಹೇಗೆ ಹಿಟ್ ಆಯ್ತು ಅನ್ನೋದು ಗೊತ್ತಿದೆ. ಈಗ ಈ ಸಾಲಿಗೆ ವೀರಚಂದ್ರಹಾಸ ಸಿನಿಮಾ ಸೇರೋದು ಪಕ್ಕಾ.

ಯಕ್ಷಗಾನ.. ನಮ್ಗೆಲ್ಲ ಯಕ್ಷಗಾನ ಅಂದ್ರೆ ನೆನಪಿಗೆ ಬರೋದು.. ರಂಗಸ್ಥಳ.. ರಂಗಸ್ಥಳದ  ಹಿಂದೆ ಕಲಾವಿದರು ರೆಡಿಯೋಗುವ ಚೌಕಿ.. ಚಂಡೆ, ಮದ್ದಳೆ,ಕಲಾವಿದರ ವೇಷಭೂಷಣ. ರಾತ್ರಿ ಶುರುವಾಗೋ ಯಕ್ಷಗಾನವನ್ನ ಬೆಳಗ್ಗೆ ತನಕ ನೋಡಿದ ನೆನೆಪು.    ದಕ್ಷಿಣ ಕನ್ನಡ , ಉಡುಪಿ , ಉತ್ತರ ಕನ್ನಡ , ಶಿವಮೊಗ್ಗ ಮತ್ತು ಚಿಕ್ಕಮಗಳೂರು ಜಿಲ್ಲೆಗಳ ಪಶ್ಚಿಮ ಭಾಗಗಳಲ್ಲಿ ಯಕ್ಷಗಾನ ನೋಡೋಕೆ ಕಾಣ ಸಿಗುತ್ತೆ.. ಆದ್ರೆ ಈಗ ಇಡೀ ದೇಶ ಯಾಕೆ ವಿಶ್ವವೇ ಯಕ್ಷಗಾನವನ್ನ ನೋಡಬಹುದು.. ಹೇಗೆ ಕಾಂತಾರ ಸಿನಿಮಾದಿಂದ ಭೂತರಾಧನೆಯನ್ನ ರಿಷಭ್ ಇಡೀ ಪ್ರಪಂಚಕ್ಕೆ ಪರಿಚಯಿಸಿದ್ರೋ ಹಾಗೇ ಯಕ್ಷಗಾನವನ್ನ ಅದೇ ರೀತಿಯಲ್ಲಿ ಪರಿಚಯ ಮಾಡೋಕೆ ರವಿ ಬಸ್ರೂರು ಮುಂದಾಗಿದ್ದಾರೆ.. ಈ ಸಿನಿಮಾ ವೀರಚಂದ್ರಹಾಸ ಎಂಬ ರಾಜನ ಶೌರ್ಯದ ಕಥೆ ಯಕ್ಷಗಾನ ರೂಪದಲ್ಲಿ  ತೆೆರೆ ಮೇಲೆ ತೆರೆದುಕೊಳ್ಳುತ್ತೆ.. ಈ ಕಥೆ ನಿಮ್ಮನ್ನ ಅತ್ತ ಇತ್ತ ನೋಡದಂತೆ ಮಾಡದೆ,  ಸ್ಕ್ರೀನ್ ಮಾತ್ರ ನೋಡಬೇಕು ಹಾಗೇ ಮಾಡುತ್ತೆ. ಅದ್ರಲ್ಲೂ ನಿಮ್ಗೆ ಚಂಡೆ ಮದ್ದಳೆ ಸೌಂಡ್‌, ಹಾಗೇ ಮಧ್ಯೆ ರವಿ ಬಸರೂರು ಅವರ ಮ್ಯೂಸಿಕ್ ಕಥೆಗೆ ಧಮ್ ನೀಡುತ್ತೆ. ಅದ್ರರಲ್ಲೂ ನಿಮ್ಗೆ ಭಾಗವತಿಕೆ ಅಂದ್ರೆ ಹಾಡುಗಳು ಇಡೀ ಸಿನಿಮಾವನ್ನ ಹಿಡಿದಿಟ್ಟುಕೊಳ್ಳುತ್ತೆ. 16 ಹಾಡುಗಳು ಈ ಸಿನಿಮಾದ ಬ್ಯಾಕ್‌ಗ್ರೌಂಡ್‌ನಲ್ಲಿ ಬಂದು ಹೋಗುತ್ತೆ.  ಪ್ರತಿಯೊಬ್ಬ ಪಾತ್ರಧಾರಿಯೂ ತನಗೆ ಕೊಟ್ಟ ಪಾತ್ರವನ್ನ ಅಟ್ಟುಕಟ್ಟಾಗಿ ನಿರ್ವಹಿಸಿದ್ದಾರೆ.. ಅದರಲ್ಲೂ ವೀರಚಂದ್ರಹಾಸನ ಪಾರ್ಟ್ ಮಾಡಿದವರು ಬಹಳ ಸೊಗಸಾಗಿ ನಟಿಸಿದ್ದಾರೆ.. ದುಷ್ಟಬುದ್ಧಿ ಪಾತ್ರಮಾಡಿವರು ನಿಮ್ಮನ್ನ ಎದ್ದು ಹೋಗದಂತೆ ಹಿಡಿದಿಟ್ಟುಕೊಳ್ಳುತ್ತಾರೆ.. ಹಾಗೇ ನಿಮ್ಗೆ ಹಾಸ್ಯ ಕೂಡ ಉಂಟು. ಹೇಗೆ ಯಕ್ಷಗಾನದಲ್ಲಿ ಹಾಸ್ಯಗಾರ ಬಂದು ನಗಿಸುತ್ತಾರೋ,  ಹಾಗೇ ಇಲ್ಲೂ ಕೂಡ ಇಬ್ಬರು ಹಾಸ್ಯಗಾರರು ನಕ್ಕು ನಗಿಸುತ್ತಾರೆ. ರವೀಂದ್ರ ದೇವಾಡಿಗ ಹಾಗೂ ಶ್ರೀಧರ್ ಭಟ್ ನಿಮ್ಮನ್ನ ನಗಿಸುತ್ತಾರೆ..  ಶಿವರಾಜಕುಮಾರ್, ಗರುಡ ರಾಮ್, ಚಂದನ್ ಶೆಟ್ಟಿ, ಪುನೀತ್ ರುದ್ರನಾಗ್ ಸೇರಿ ಮೇಳದ ಕಲಾವಿದರು ಸೇರಿ 400ಕ್ಕೂ ಹೆಚ್ಚು ಯಕ್ಷಗಾನ ಕಲಾವಿದರು ನಟಿಸಿದ್ದಾರೆ.. ಸಂಪೂರ್ಣವಾಗಿ ಪಂಜಿನ ಬೆಳಕಿನಲ್ಲೇ, ರಾತ್ರಿ ಸಮಯದಲ್ಲಿ ಚಿತ್ರೀಕರಣ ನಡೆಸಲಾಗಿದೆ. ಎಲ್ಲೂ ಕೂಡ ಬೆಳಕಲ್ಲಿ ಈ ಸಿನಿಮಾ ತೆಗೆದಿಲ್ಲ. ಯಾಕಂದ್ರೆ ಯಕ್ಷಗಾನ ನಡೆಯೋದು ಕತ್ತಲಲ್ಲಿ ಅಲ್ವಾ ಹಾಗಾಗಿ.. ನಾವು ಮೇಳದ ಯಕ್ಷಗಾನ ರಂಗಸ್ಥಳದಲ್ಲಿ ನೋಡಿ ಇರ್ತಿವಿ.. ಆ ಒಂದೇ ಜಾಗದಲ್ಲೇ ಅರಮನೆ, ದೇವಸ್ಥಾನ, ಆಸ್ಥಾನ , ಯುದ್ಧ ಭೂಮಿಯನ್ನ ತೋರ್ಸಾರೆ. ಆದ್ರೆ ಈ ವೀರಚಂದ್ರಹಾಸ ಸಿನಿಮಾದಲ್ಲಿ ಅರಮನೆ ಅಂದಾಗ ಅರಮನೆ ಸೆಟ್ಟು, ಕುದುರೆ ಅಂದಾಗ ನಿಜವಾದ ಕುದುರೆ ಹತ್ತಿ ಹೋಗ್ತಾರೆ, ಯುದ್ಧ ಅಂದಾಗ ಯುದ್ಧ ಭೂಮಿಯನ್ನ ತೋರಿಸಿದ್ದಾರೆ. ಆದ್ರೆ ಎಲ್ಲರೂ ಕೂಡ ಯಕ್ಷಗಾನದ ವೇಷಭೂಷಣದಲ್ಲೇ ಇರ್ತಾರೆ. ಅರಮನೆಗಳನ್ನ ಕೂಡ ಯಕ್ಷಗಾನದ ಕಿರೀಟಕ್ಕೆ ಹೋಲಿಕೆ ಮಾಡಿ ಸೆಟ್ ಹಾಕಿದ್ದಾರೆ. ಕೈಮ್ಯಾಕ್ಸ್ ಮಾತ್ರ ಸೂಪರ್‌.ಕಾಂತಾರದ ಅನುಭವವನ್ನ ನಮ್ಗೆ ನೀಡುತ್ತೆ.. ಮೈರೋಮಗಳು ಕೂಡ ಎದ್ದು ನಿಲ್ಲುವಂತೆ ಮಾಡುತ್ತೆ.. ಯಕ್ಷಗಾನವನ್ನ ಅದ್ಫುತ, ಅತ್ಯದ್ಭುತವಾಗಿ ನಿರ್ದೇಶಕ ರವಿ ಬಸರೂರು ಅವರು ತೆರೆ ಮೇಲೆ ತಂದಿದ್ದಾರೆ.

ಇನ್ನೂ ಶಿವಪುಟ್ಟಸ್ವಾಮಿ ಪಾತ್ರದಲ್ಲಿ  ಶಿವರಾಜ್ ಕುಮಾರ್ ಅವರು ಸಖತ್ ಆಗಿ ನಟಿಸಿದ್ದಾರೆ. ಒಬ್ಬ ನುರಿತ ಯಕ್ಷಗಾನ ಕಲಾವಿದರಂತೆ ಅಭಿನಯ ಮಾಡಿದ್ದಾರೆ. ತನಗೆ ಕೊಟ್ಟ ಪಾತ್ರಕ್ಕೆ ಶಿವಣ್ಣ ಜೀವತುಂಬಿ ನೋಡುಗರನ್ನ ಸೆಳೆದಿದ್ದಾರೆ. ಕೇವಲ ಶಿವಣ್ಣ ಮಾತ್ರ ಕಾಣೋದಿಲ್ಲ, ಪುನೀತ್ ರಾಜ್ ಕುಮಾರ್ ಹಾಗೂ ರಾಜ್ ಕುಮಾರ್ ಅವರನ್ನು ಯಕ್ಷಗಾನದ ವೇಷದಲ್ಲಿ ರವಿ ಬಸ್ರೂರ್ ಅವರು ಬೆಳ್ಳಿ ಪರದೇ ಮೇಲೆ ತಂದಿದ್ದಾರೆ. ಪುನೀತ್ ರಾಜ್ ಕುಮಾರ್ ಅವರನ್ನ AIಯಲ್ಲಿ ರಚಿಸಿದ್ದು, ನಿಜವಾಗಿಯೂ ಅವರೇ ಎದ್ದು ಬಂದಂತೆ ಕಾಣ್ತಾರೆ..ಯಾಕೆ ಈ ಸಿನಿಮಾವನ್ನ ನೋಡಬೇಕು ಗೊತ್ತಾ..

ಇತಿಹಾಸದಲ್ಲೇ ಪ್ರಥಮ ಬಾರಿಗೆ ಕರಾವಳಿ ಕರ್ನಾಟಕದ ಸಮೃದ್ಧ ಸಾಂಸ್ಕೃತಿಕ ಪರಂಪರೆಯ ಪ್ರತೀಕವಾದ ಯಕ್ಷಗಾನವನ್ನು ಬೆಳ್ಳಿ ಪರದೆಯ ಮೇಲೆ ಪರಿಚಯಿಸಲಾಗುತ್ತಿದೆ. ಈ ವೃತ್ತಿಕಲೆ ಇಲ್ಲಿ ತನಕ  ಒಂದು ನಿರ್ದಿಷ್ಟ ಪ್ರದೇಶಕ್ಕೆ ಸೀಮಿತವಾಗಿತ್ತು. ಆದ್ರೆ ಈ ಸಿನಿಮಾದ ಮೂಲಕ ಇಡೀ ದೇಶಕ್ಕೆ ನಮ್ಮ ನಾಡಿನ ಕಲೆ ಪರಿಚಯ ಆಗುತ್ತೆ.. ಆಧುನಿಕ ಯಗದಲ್ಲಿ ಕಳೆದು ಹೋದ ಮಕ್ಕಳು ,  ವಯಸ್ಸು ಆದವರು, ಮೊಬೈನ್‌ನಲ್ಲಿ ಮುಳುಗಿ ಹೋಗಿರೋ ಯುವಕ , ಯುವತಿಯರು ಈ ಸಿನಿಮಾ ನೋಡಬೇಕು.. ಆಗ ನಮ್ಮ ಯಕ್ಷಗಾನ ಕಲೆ ಎಷ್ಟು ಶ್ರೀಮಂತವಾಗಿದೆ ಅನ್ನೋದು ಗೊತ್ತಾಗುತ್ತೆ..  ಇನ್ನೂ ಯಕ್ಷಗಾನವು ಕೇವಲ ಒಂದು ಕಲೆಯಷ್ಟೇ ಅಲ್ಲ ಅದು ಕರ್ನಾಟಕದ ಸಂಸ್ಕೃತಿ, 4. ಪರಂಪರೆ, ಭಕ್ತಿ ಹಾಗೂ ಶೌರ್ಯವನ್ನು ಪ್ರತಿಬಿಂಬಿಸುವ ಅದ್ಭುತ ಕಲಾತ್ಮಕ ಮಾಧ್ಯಮ.  ಅನೇಕ ಪೀಳಿಗೆಗಳ ಕಲಾಸಕ್ತರಿಗೆ ಇದು ಪ್ರೇರಣೆ. ನಮ್ಮ ಕಲೆಯ ಸಾರವನ್ನ ಇಡೀ ಪ್ರಪಂಚಕ್ಕೆ ಸಾರಬೇಕು ನಮ್ಮ ನಾಡಿನ ಗತ್ತು ಇಡೀ ವಿಶ್ವಕ್ಕೆ ಗೊತ್ತಾಗಬೇಕು ಅಂತ ರವಿ ಬಸ್ರೂರು ಅವರು ಬಹಳ ಶ್ರಮಪಟ್ಟು, ಈ ಯಕ್ಷಗಾವನ್ನ ತೆರೆ ಮೇಲೆ ತಂದಿದ್ದಾರೆ. ಹೀಗಾಗಿ ಕಾಂತಾರದಂತೆ ಈ ಸಿನಿಮಾವನ್ನ ಬೆಳಸಬೇಕಾಗಿರುವುದು ಕನ್ನಡಿಗರಾದ ನಮ್ಮನಿಮ್ಮೆಲ್ಲರ ಕರ್ತವ್ಯ.. ಕನ್ನಡ ಹೋರಾಟ ಅಂತ ಬಾಯಿ ಮಾತಿಗೆ ಹೇಳದೆ ಇಂತಹ ಕನ್ನಡ ಸಿನಿಮಾವನ್ನ ನೋಡಿ ಬೆಳೆಸಿದ್ರೆ ಕನ್ನಡ ತಾನಾಗಿಯೇ ಬೆಳೆಯುತ್ತೆ ಅನ್ನೋದು ನನ್ನ ಅಭಿಪ್ರಾಯ. 1500ಕ್ಕೂ ಹೆಚ್ಚು ವರ್ಷಗಳ ಇತಿಹಾಸವಿರುವ ಈ ಕಲೆಯನ್ನು ವಿಜೃಂಭಣೆಯಿಂದ ವಿಶ್ವದಾದ್ಯಂತ ಮೆರೆಸಬೇಕಿರುವುದು ನಮ್ಮೆಲ್ಲರ ಕರ್ತವ್ಯ. ಇದು ಕೇವಲ ಮನರಂಜನೆಯ ತಯಾರಿಕೆಯಾಗಿಯೇ ಅಲ್ಲ, ಭವಿಷ್ಯದ ಅನೇಕ ಚಿತ್ರಗಳಿಗೆ ದಾರಿ ತೋರುವ, ಪರಂಪರೆಯನ್ನು ಉಳಿಸುವ ಹಾಗೂ ಭವಿಷ್ಯದ ಪೀಳಿಗೆಗೆ ನಮ್ಮ ಕಲೆಯನ್ನು ಪರಿಚಯಿಸುವ ಒಂದು ಹೊಸ ಯುಗ ಪ್ರಾರಂಭವಾಗಿದೆ. ಯಕ್ಷಗಾನಂ ಗೆಲ್ಲೆ. ಯಕ್ಷಗಾನಂ ಬಾಳ್ಗೆ..

 

 

Kishor KV

Leave a Reply

Your email address will not be published. Required fields are marked *