27 ಓವರ್.. 78 ಡಾಟ್ ಬಾಲ್ಸ್ –  CSK ಸೋಲಿನಲ್ಲೂ ಗೆದ್ದ ಖಲೀಲ್
ಭುವಿ & ಜೋಶ್ ಬೌಲಿಂಗ್ ಹೇಗಿದೆ?

27 ಓವರ್.. 78 ಡಾಟ್ ಬಾಲ್ಸ್ –  CSK ಸೋಲಿನಲ್ಲೂ ಗೆದ್ದ ಖಲೀಲ್ಭುವಿ & ಜೋಶ್ ಬೌಲಿಂಗ್ ಹೇಗಿದೆ?

ಐಪಿಎಲ್​ನಲ್ಲಿ ಪ್ರತೀ ಡಾಟ್​ ಬಾಲ್​ಗೆ ಮರಗಳನ್ನ ನೆಡ್ತಿರೋದು ನಿಮ್ಗೆಲ್ಲಾ ಗೊತ್ತೇ ಇದೆ. ಯಾವುದೇ ರನ್ಸ್ ಬಂದಿಲ್ಲ ಅಂದ್ರೆ ಸ್ಕೋರ್​ ಬೋರ್ಡ್​ನಲ್ಲೂ ಮರದ ಸಿಂಬಲ್ ರೀತಿ ಗ್ರಾಫಿಕ್ಸ್ ಬರುತ್ತೆ. ಟಾಟಾ ಗ್ರೂಪ್ ಸಹಯೋಗದೊಂದಿಗೆ ಬಿಸಿಸಿಐನಿಂದ ಪ್ರತೀ ಡಾಟ್ ಬಾಲ್​ಗೆ 18 ಮರಗಳನ್ನ ನೆಡಲಾಗ್ತಿದೆ. ಇಂಟ್ರೆಸ್ಟಿಂಗ್ ಅಂದ್ರೆ ಈ ಬಾರಿ ಹೈಯೆಸ್ಟ್ ಡಾಟ್ ಬಾಲ್ ಆಡಿರೋದು ಸಿಎಸ್​ಕೆ ಟೀಂ.. ಹಾಗೇ ಹೈಯೆಸ್ಟ್ ಡಾಟ್ ಬಾಲ್ ಬೌಲ್ ಮಾಡಿರೋದು ಕೂಡ ಚೆನ್ನೈ ತಂಡದ ಆಟಗಾರನೇ ಆಗಿದ್ದಾರೆ.

ಇದನ್ನೂ ಓದಿ : RCBಗೆ ಬ್ಯಾಕ್ ಟು ಬ್ಯಾಕ್ ಮ್ಯಾಚ್ – 3 ದಿನ.. 2 ಪಂದ್ಯ.. ಏನಿದು ಲೆಕ್ಕಾಚಾರ?

ಡಾಟ್ ಬಾಲ್ಸ್ ವೀರರು!

ಬೌಲರ್                                   ತಂಡ                 ಪಂದ್ಯ                  ಡಾಟ್ ಬಾಲ್

ಖಲೀಲ್ ಅಹ್ಮದ್             ಚೆನ್ನೈ                    7                        78

ಮೊಹಮ್ಮದ್ ಸಿರಾಜ್           ಗುಜರಾತ್             6                       73

ವರುಣ್ ಚಕ್ರವರ್ತಿ              ಕೊಲ್ಕತ್ತಾ                 7                 70

ಪ್ರಸಿದ್ಧ್ ಕೃಷ್ಣ                    ಗುಜರಾತ್                 6                 65

ಹರ್ಷಿತ್ ರಾಣಾ                 ಕೊಲ್ಕತ್ತಾ                  7                 64

ಜೋಶ್ ಹ್ಯಾಜಲ್‌ವುಡ್         ಬೆಂಗಳೂರು                 6                62

ಕುಲದೀಪ್ ಯಾದವ್            ಡೆಲ್ಲಿ                        6                61

ದಿಗ್ವೇಶ್ ಸಿಂಗ್ ರಾಥಿ              ಲಕ್ನೋ                    7               60

ಜೋಫ್ರಾ ಆರ್ಚರ್                ರಾಜಸ್ಥಾನ                  7               66

ಅರ್ಶದೀಪ್ ಸಿಂಗ್                ಪಂಜಾಬ್                 6                56

ಇಂಡಿಯನ್ ಪ್ರೀಮಿಯರ್ ಲೀಗ್‌ನಲ್ಲಿ ಅತಿ ಹೆಚ್ಚು ಡಾಟ್ ಬಾಲ್‌ಗಳನ್ನು ಬೌಲ್ ಮಾಡಿದ ಪಟ್ಟಿಯಲ್ಲಿ ಭಾರತದ ಅನುಭವಿ ವೇಗಿ, ಪ್ರಸ್ತುರ ಆರ್​ಸಿಬಿಯ ಪ್ರಮುಖ ಬೌಲರ್ ಭುವನೇಶ್ವರ್ ಕುಮಾರ್ ಅಗ್ರಸ್ಥಾನದಲ್ಲಿದ್ದಾರೆ. 181 ಪಂದ್ಯಗಳಲ್ಲಿ 1720 ಡಾಟ್ ಬಾಲ್ ಹಾಕಿದ್ದಾರೆ. ಈ ಲಿಸ್ಟ್​ನಲ್ಲಿ ಸುನಿಲ್ ನರೈನ್ ಸೆಕೆಂಡ್ ಪ್ಲೇಸ್​ನಲ್ಲಿದ್ದಾರೆ.

Shantha Kumari

Leave a Reply

Your email address will not be published. Required fields are marked *