ಸಿಳ್ಳೆ ಹೊಡೆದ ಹಕ್ಕಿ – ದರ್ಮಕ್ಕೆ ಏಟು ತಿಂದ ವ್ಯಕ್ತಿ

ಸಿಳ್ಳೆ ಹೊಡೆದ ಹಕ್ಕಿ – ದರ್ಮಕ್ಕೆ ಏಟು ತಿಂದ ವ್ಯಕ್ತಿ

ಬೆಂಗಳೂರು: ಕೆಲವೊಮ್ಮೆ ತಪ್ಪು ಕಲ್ಪನೆಗಳಿಂದಾಗಿ ಅನಿರೀಕ್ಷಿತ ಘಟನೆಗಳು ನಡೆಯುತ್ತವೆ. ಅದಕ್ಕಾಗಿಯೇ ನಮ್ಮ ಹಿರಿಯರು ಪ್ರತ್ಯಕ್ಷವಾಗಿ ಕಂಡರೂ ಪ್ರಮಾಣಿಸಿ ನೋಡು ಎಂಬ ಮಾತನ್ನು ಹೇಳುತ್ತಾರೆ. ಇಂತಹ ಮಾತು ಬೆಂಗಳೂರಿನ ಹುಳಿಮಾವು ಠಾಣೆಯಲ್ಲಿ ನಡೆದ ಪ್ರಕರಣಕ್ಕೆ ಹೋಲಿಕೆಯಾಗುತ್ತಿದೆ.

ಬೆಂಗಳೂರಿನ ಹುಳಿಮಾವು ನಿವಾಸಿ ಬಾಬು ಎಂಬಾತ ಒಂದು ಜೋಡಿ ಕಾಕ್ಟೇಲ್ ಗಿಳಿಗಳನ್ನು ಸಾಕಿದ್ದರು. ಈ ಗಿಳಿಗಳು ಮನುಷ್ಯರಂತೆ ಸಿಳ್ಳೆ ಹೊಡೆಯುತ್ತಿದ್ದವು. ಆದರೆ ಪಕ್ಕದ ಮನೆಯ ಶಬರೀಷ ಎಂಬಾತ ಈ ಸಿಳ್ಳೆಯನ್ನು ಅಪಾರ್ಥ ಮಾಡಿಕೊಂಡಿದ್ದಾನೆ.

ಇದನ್ನೂ ಓದಿ:ಕೊಲ್ಲೂರು – ಕೊಡಚಾದ್ರಿಗೆ ಕೇಬಲ್ ಕಾರು -ಕೇಂದ್ರ ಸಾರಿಗೆ ಸಚಿವಾಲಯ ಗ್ರೀನ್ ಸಿಗ್ನಲ್ 

ಪ್ರತಿದಿನ ಗಿಳಿಗಳು ಸಿಳ್ಳೆ ಹಾಕುತ್ತಿದ್ದದ್ದನ್ನು ಕಂಡ ಶಬರೀಷನಿಗೆ, ಬಾಬು ತನ್ನ ಹೆಂಡತಿಗೆ ಕಾಳು ಹಾಕುತ್ತಿದ್ದಾನೆ ಎಂಬ ಅನುಮಾನ ಶುರುವಾಗಿದೆ. ಅಲ್ಲದೇ ಈ ಅನುಮಾನ ವಿಕೋಪಕ್ಕೆ ತಿರುಗಿ ಬಾಬು ಮೇಲೆ ಹಲ್ಲೆ ನಡೆಸಿದ್ದಾನೆ.

ಹಲ್ಲೆಗೊಳಗಾದ ಬಾಬು, ಶಬರೀಷನ ವಿರುದ್ಧ ಹುಳಿಮಾವು ಪೊಲೀಸ್ ಠಾಣೆಗೆ ದೂರು ನೀಡಿದ್ದು, ಪೊಲೀಸರು ಶಬರೀಷನನ್ನು ಬಂಧಿಸಿದ್ದಾರೆ. ತಪ್ಪಾಗಿ ಗ್ರಹಿಸಿದ್ದರಿಂದಾಗಿ ಈ ಘಟನೆ ನಡೆದಿದೆ ಎಂದು ಶಬರೀಷ ವಿಚಾರಣೆ ನಡೆಸಿದ ವೇಳೆ ಬಾಯ್ಬಿಟ್ಟಿದ್ದಾನೆ.

suddiyaana