RCBಯಲ್ಲಿ ಕ್ಲಿಕ್ ಆಗ್ತಿಲ್ಲ ಲಿಯಾಮ್ – ₹8.75 ಕೋಟಿ ವೇತನ.. 83 ರನ್!
ಜೇಕಬ್ ಬೆಥೆಲ್ ಗೆ ಚಾನ್ಸ್ ಕೊಡ್ಬೇಕಿತ್ತಾ?

ಫಿಲ್ ಸಾಲ್ಟ್ ಪವರ್ ಪ್ಲೇ ಪವರ್ ಹಿಟ್ಟರ್. ವಿರಾಟ್ ಕೊಹ್ಲಿ ಕನ್ಸಿಸ್ಟೆನ್ಸ್ ಪ್ಲೇಯರ್. ಇನ್ನು ರಜತ್ ಪಾಟಿದಾರ್, ದೇವದತ್ ಪಡಿಕ್ಕಲ್, ಜಿತೇಶ್ ಶರ್ಮಾ ಮಿಡಲ್ ಆರ್ಡರ್ ಸ್ಟ್ರೆಂತ್.. ಟಿಮ್ ಡೇವಿಡ್ ಡೆತ್ ಓವರ್ ಸ್ಪೆಷಲಿಸ್ಟ್. ಉಳಿದಂತೆ ಯಶ್ ದಯಾಳ್ ಜೋಶ್ ಹ್ಯಾಜಲ್ ವುಡ್, ಕೃನಾಲ್ ಪಾಂಡ್ಯ, ಭುವನೇಶ್ವರ್ ಕುಮಾರ್ ಬೌಲಿಂಗ್ ನಲ್ಲಿ ಅಟ್ಯಾಕ್ ಮಾಡ್ತಿದ್ದಾರೆ. ಆದ್ರೆ ಇವ್ರೆಲ್ಲರ ಮುಂದೆ ಡಲ್ ಆಗಿ ಕಾಣಿಸ್ತಿರೋದು ಲಿಯಾಮ್ ಲಿವಿಂಗ್ಸ್ಟನ್. ಅವ್ರಿಗೆ ಕೊಟ್ಟಿರೋ ಹಣಕ್ಕೂ ಅವ್ರ ಪ್ರದರ್ಶನಕ್ಕೂ ಸಿಂಕೇ ಆಗ್ತಿಲ್ಲ. ಬ್ಯಾಟಿಂಗ್ನಲ್ಲೂ ನಿರೀಕ್ಷಿತ ಪ್ರದರ್ಶನ ಬರ್ತಿಲ್ಲ. ಬೌಲಿಂಗ್ನಲ್ಲೂ ಹೇಳಿಕೊಳ್ಳುವಂಂತ ಪರ್ಫಾಮೆನ್ಸ್ ನೀಡ್ತಿಲ್ಲ. ಸೋ ಹೀಗಾಗಿ ಬೆಟರ್ ಆಪ್ಶನ್ ಅಂದ್ರೆ ಲಿಯಾಮ್ರನ್ನ ಕೈಬಿಟ್ಟು ಬೇರೆಯವ್ರಿಗೆ ಅವಕಾಶ ಕೊಡಿ ಅಂತಿದ್ದಾರೆ ಅಭಿಮಾನಿಗಳು.
ಇದನ್ನೂ ಓದಿ : ಸಿರಾಜ್, KL ಆಯ್ತು.. ಈಗ ಚಹಲ್ – RCBಗೆ ಮಾಜಿ ಆಟಗಾರರೇ ವಿಲನ್
ಲಿಯಾಮ್ ಲಿವಿಂಗ್‌ಸ್ಟೋನ್ ಆರ್‌ಸಿಬಿ ತಂಡದ ದುಬಾರಿ ಆಟಗಾರ. ಆಲ್ ರೌಂಡಪ್ ಪ್ರದರ್ಶನಕ್ಕಾಗಿ ಇವ್ರ ಮೇಲೆ ಫ್ರಾಂಚೈಸಿ ಸಾಕಷ್ಟು ದುಡ್ಡು ಸುರಿದಿತ್ತು. ಬಟ್ ಪರ್ಫಾಮೆನ್ಸ್ ಮಾತ್ರ ಎಕ್ಸ್ಪೆಕ್ಟೇಷನ್ ಲೆವೆಲ್ ರೀಚ್ ಆಗಿಲ್ಲ. ಫಾರ್ಮ್ ಕಂಡುಕೊಳ್ಳೋಕೆ ಇನ್ನೂ ಒದ್ದಾಡ್ತಿದ್ದಾರೆ. ಐಪಿಎಲ್ ಮೆಗಾ ಹರಾಜಿನಲ್ಲಿ ಇವರಿಗೆ ಆರ್‌ಸಿಬಿ ಫ್ರಾಂಚೈಸಿ ಬರೋಬ್ಬರಿ 8.75 ಕೋಟಿ ರೂಪಾಯಿ ನೀಡಿ ಖರೀದಿ ಮಾಡಿದ.ಎ ಆದ್ರೆ 18ನೇ ಆವೃತ್ತಿಯ ಐಪಿಎಲ್‌ನಲ್ಲಿ ತಮ್ಮ ಸ್ಥಿರ ಪ್ರದರ್ಶನ ನೀಡುವಲ್ಲಿ ವಿಫಲರಾಗಿದ್ದಾರೆ. ಲಿಯಾಮ್ ಈ ಬಾರಿ ಆಡಿದ 6 ಪಂದ್ಯಗಳಲ್ಲಿ 83 ರನ್ ಬಾರಿಸಿದ್ದಾರೆ. ಅದ್ರಲ್ಲೂ ಗುಜರಾತ್ ಟೈಟನ್ಸ್ ವಿರುದ್ಧ 54 ರನ್ ಸಿಡಿಸಿದ್ದೇ ಇವ್ರ ಬೆಸ್ಟ್ ಪರ್ಫಾಮೆನ್ಸ್. ಆ ನಂತ್ರ ಯಾವುದೇ ಪಂದ್ಯದಲ್ಲೂ ಅಬ್ಬರಿಸಿಲ್ಲ. ಈ ಸೀಸನ್ನಲ್ಲಿ 20.75ರ ಸರಾಸರಿಯಲ್ಲಿ ರನ್ ಕಲೆ ಹಾಕಿದ್ದಾರೆ. ಅದೂ ಕೂಡ 133.87ರ ಸರಾಸರಿಯಲ್ಲಿ. ಇನ್ನು ಬೌಲಿಂಗ್‌ನಲ್ಲಿ ಆಡಿದ 6 ಪಂದ್ಯಗಳಲ್ಲಿ ಇವರು ಕೇವಲ 9 ಓವರ್ ಬೌಲಿಂಗ್ ಮಾಡಿದ್ದಾರೆ. ಈ ವೇಳೆ 8.44ರ ಸರಾಸರಿಯಲ್ಲಿ 76 ರನ್ ನೀಡಿದ್ದಾರೆ. 2 ವಿಕೆಟ್ ಮಾತ್ರ ಪಡೆದಿದ್ದಾರೆ.
ಅಷ್ಟಕ್ಕೂ ಈ ಲಿವಿಂಗ್ಸ್ಟನ್ ಇಂಗ್ಲೆಂಡ್‌ನ ಬಲಗೈ ಬ್ಯಾಟ್ಸ್‌ಮನ್ ಆಗಿದ್ದು, ಅವರು ಬಲಗೈ ಲೆಗ್ ಬ್ರೇಕ್ ಮತ್ತು ಆಫ್-ಸ್ಪಿನ್ ಬೌಲಿಂಗ್ ಮಾಡ್ತಾರೆ. 32 ವರ್ಷದ ಇವ್ರು T20 ಸ್ಪೆಷಲಿಸ್ಟ್ ಲಿಸ್ಟ್ನಲ್ಲಿ ಇದ್ದವ್ರು. 2015 ರಲ್ಲಿ ತಮ್ಮ ಕ್ಲಬ್ ತಂಡವಾದ ನಾಂಟ್ವಿಚ್ ಪರ 138 ಎಸೆತಗಳಲ್ಲಿ 350 ರನ್ ಗಳಿಸುವ ಮೂಲಕ ಸದ್ದು ಮಾಡಿದ್ದವ್ರು. ಲಿಯಾಮ್ ಲಿವಿಂಗ್ ಸ್ಟನ್ 2019 ರಲ್ಲಿ ರಾಜಸ್ಥಾನ್ ರಾಯಲ್ಸ್ ಪರ ಐಪಿಎಲ್‌ಗೆ ಪಾದಾರ್ಪಣೆ ಮಾಡಿದರು. ಆದ್ರೆ ಕಳಪೆ ಪ್ರದರ್ಶನದಿಂದಾಗಿ 2020 ರ ಸೀಸನ್ಗೂ ಮುಂಚೆಯೇ ರಿಲೀಸ್ ಮಾಡಿದ್ರು. ಬಟ್ 2021ರಲ್ಲಿ ಮತ್ತೆ ಆರ್ ಆರ್ ತಂಡವೇ 75 ಲಕ್ಷಕ್ಕೆ ಖರೀದಿ ಮಾಡಿತ್ತು. ಆ ನಂತ್ರ 2022ರಲ್ಲಿ ಪಂಜಾಬ್ ತಂಡ ಬರೋಬ್ಬರಿ 11.50 ಕೋಟಿ ರೂಪಾಯಿಗೆ ಖರೀದಿ ಮಾಡಿತ್ತು. ಅಲ್ಲಿಂದ ಮುಂದಿನ ಮೂರು ವರ್ಷಗಳ ಕಾಲ ಅಷ್ಟೇ ಬೆಲೆಗೆ ಉಳಿಸಿಕೊಂಡಿತ್ತು. ಆದ್ರೆ ಕಳೆದ ಸೀಸನ್ನಲ್ಲಿ 7 ಪಂದ್ಯಗಳಿಂದ ಬರೀ 111 ರನ್ ಕಲೆ ಹಾಕಿದ್ರು. 3 ವಿಕೆಟ್ ಅಷ್ಟೇ ಪಡೆದಿದ್ದು. ಹೀಗಾಗಿ ಮೆಗಾ ಹರಾಜಿಗೂ ಮುನ್ನ ಪಂಜಾಬ್ ತಂಡ ಅವ್ರನ್ನ ರಿಲೀಸ್ ಮಾಡಿತ್ತು. ಈ ವೇಳೆ ಆರ್‌ಸಿಬಿ ಫ್ರಾಂಚೈಸಿ 8.75 ಕೋಟಿ ರೂಪಾಯಿ ನೀಡಿ ಖರೀದಿ ಮಾಡಿತ್ತು. ಆದ್ರೀಗ ಅಷ್ಟೊಂದು ಹಣ ಕೊಟ್ಟಿದ್ದು ವ್ಯರ್ಥವಾಯ್ತಾ ಅನ್ನೋ ಪ್ರಶ್ನೆ ಮೂಡಿದೆ. ಬೌಲಿಂಗ್ ಮತ್ತು ಬ್ಯಾಟಿಂಗ್ ಎರಡ್ರಲ್ಲೂ ಇಂಪ್ರೆಸ್ಸಿವ್ ಇನ್ನಿಂಗ್ಸ್ ಬರ್ತಿಲ್ಲ. ಹಾಗಂತ ಈ ದುಬಾರಿ ಮೊತ್ತಕ್ಕೆ ಸೇಲ್ ಆದ ಆಟಗಾರರಲ್ಲಿ ಇವ್ರೊಬ್ರೇ ಫ್ಲಾಪ್ ಆಗಲ್ಲ.
ಈ ಬಾರಿಯ ಐಪಿಎಲ್‌ನಲ್ಲಿ ಕೋಟಿವೀರರೇ ಫ್ಲ್ಯಾಪ್ ಆಗ್ತಿರೋದು ಅಚ್ಚರಿ ಮೂಡಿಸಿದೆ. ಈ ಬಾರಿ 27 ಕೋಟಿ ರೂಪಾಯಿ ಪಡೆದ ರಿಷಭ್ ಪಂತ್ ಐಪಿಎಲ್ ಇತಿಹಾಸದ ದುಬಾರಿ ಆಟಗಾರ. ಆದ್ರೆ ಲಕ್ನೋ ಪರ ಆಡ್ತಿರುವ ಪಂತ್ ಪ್ರಸಕ್ತ ಐಪಿಎಲ್‌ನಲ್ಲಿ 103 ರನ್ ಸಿಡಿಸಿದ್ದಾರೆ. ಅದೂ ಕೂಡ 7 ಪಂದ್ಯಗಳಿಂದ. ಹಾಗೇ ಇಂಗ್ಲೆಂಡ್ ತಂಡದ ಸ್ಟಾರ್ ಆಟಗಾರ ಸ್ಯಾಮ್ ಕರನ್ ಗೆ ಚೆನ್ನೈ ಸೂಪರ್ ಕಿಂಗ್ಸ್ ತಂಡ 2.40 ಕೋಟಿ ನೀಡಿತ್ತು. ಚೆನ್ನೈ ಪರ ಈ ವರೆಗೆ ಎರಡು ಪಂದ್ಯಗಳಲ್ಲಿ ಆಡುವ ಅವಕಾಶ ಪಡೆದಿದ್ದು 12 ರನ್ ಅಷ್ಟೇ ಬಾರಿಸಿದ್ದಾರೆ. ಕಳೆದ ಆವೃತ್ತಿಯಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ತಂಡದ ಪರ ಆಡಿ ಸೈ ಎನಿಸಿಕೊಂಡಿದ್ದ ಜೆಕ್ ಫ್ರೇಸರ್ ಮೆಕ್‌ಗುರ್ಕ್ ರನ್ನ 9 ಕೋಟಿ ನೀಡಿ ತಂಡದಲ್ಲಿ ಉಳಿಸಿಕೊಂಡಿತ್ತು. ಆದ್ರೆ ಕಳಪೆ ಫಾರ್ಮ್ ನಲ್ಲಿರೋ ಇವ್ರು ಡೆಲ್ಲಿ ಪರ ಆರು ಪಂದ್ಯಗಳನ್ನು ಆಡಿದ್ದು ಜಸ್ಟ್ 55 ರನ್ ಸಿಡಿಸಿದ್ದಾರೆ. ಈ ವೇಳೆ ಇವರ ಸ್ಟ್ರೈಕ್ ರೇಟ್ ಸಹ 105ರ ಆಸು ಪಾಸಿನಲ್ಲಿದೆ. ಈ ವೇಳೆ ಇವರು ಎಸ್‌ಆರ್‌ಎಚ್ ವಿರುದ್ಧ 38 ರನ್ ಬಾರಿಸಿದ್ದು ಬಿಟ್ಟರೆ, ಉಳಿದಿದ್ದು ಎಲ್ಲ ಸಿಂಗಲ್ ಡಿಜಿಟ್. ಅಷ್ಟೇ ಅಲ್ದೇ ಡ್ವೆನ್ ಕಾನ್ವೆ ಹಾಗೂ ಮ್ಯಾಕ್ಸ್ ವೆಲ್ ಕೂಡ ಇವ್ರ ಲಿಸ್ಟ್ನಲ್ಲೇ ಇದ್ದಾರೆ.