RCBಗೆ ಬ್ಯಾಕ್ ಟು ಬ್ಯಾಕ್ ಮ್ಯಾಚ್ – 3 ದಿನ.. 2 ಪಂದ್ಯ.. ಏನಿದು ಲೆಕ್ಕಾಚಾರ?
ಟ್ರಾವೆಲ್.. ಪ್ರಾಕ್ಟೀಸ್.. ನಷ್ಟ ಯಾರಿಗೆ?

RCBಗೆ ಬ್ಯಾಕ್ ಟು ಬ್ಯಾಕ್ ಮ್ಯಾಚ್ – 3 ದಿನ.. 2 ಪಂದ್ಯ.. ಏನಿದು ಲೆಕ್ಕಾಚಾರ?ಟ್ರಾವೆಲ್.. ಪ್ರಾಕ್ಟೀಸ್.. ನಷ್ಟ ಯಾರಿಗೆ?

18ನೇ ಸೀಸನ್ ಐಪಿಎಲ್ ಸಖತ್ ಇಂಟ್ರೆಸ್ಟಿಂಗ್ ಆಗಿದೆ. ಐದೈದು ಟ್ರೋಫಿ ಗೆದ್ದಿರೋ ತಂಡಗಳು ಪಾಯಿಂಟ್ಸ್ ಟೇಬಲ್​ನ ಬಾಟಮ್​ನಲ್ಲಿದ್ರೆ ಗುಜರಾತ್ ಹೊರತುಪಡಿಸಿ ಚೊಚ್ಚಲ ಚಾಂಪಿಯನ್ ಶಿಪ್ ನಿರೀಕ್ಷೆಯಲ್ಲಿರೋ ಟೀಮ್ಸ್ ಟಾಪ್​ನಲ್ಲಿವೆ. ಡಿಸಿ ನಂಬರ್ 1 ಪ್ಲೇಸ್​ನಲ್ಲಿದ್ರೆ ಗುಜರಾತ್ ಸೆಕೆಂಡ್ ಪ್ಲೇಸ್​ನಲ್ಲಿದೆ. ಹಾಗೇ ಆರ್​ಸಿಬಿ ಮೂರನೇ ಸ್ಥಾನದಲ್ಲಿದ್ದು ಪಂಜಾಬ್ ಕಿಂಗ್ಸ್ ನಾಲ್ಕನೇ ಸ್ಥಾನದಲ್ಲಿದೆ. ಇದೀಗ ಆರ್​ಸಿಬಿ ಮತ್ತು ಪಂಜಾಬ್ ನಡುವೆ ಶುಕ್ರವಾರ ಮ್ಯಾಚ್ ನಡೆಯಲಿದೆ.

ಇದನ್ನೂ ಓದಿ : ಸಿರಾಜ್, KL ಆಯ್ತು.. ಈಗ ಚಹಲ್ – RCBಗೆ ಮಾಜಿ ಆಟಗಾರರೇ ವಿಲನ್

ಐಪಿಎಲ್​ನ 34ನೇ ಪಂದ್ಯದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ಹಾಗೂ ಪಂಜಾಬ್ ಕಿಂಗ್ಸ್ ತಂಡಗಳು ಮುಖಾಮುಖಿಯಾಗಲಿದೆ. ಏಪ್ರಿಲ್ 18 ರಂದು ನಡೆಯಲಿರುವ ಈ ಪಂದ್ಯಕ್ಕೆ ಬೆಂಗಳೂರಿನ ಚಿನ್ನಸ್ವಾಮಿ ಸ್ಟೇಡಿಯಂ ಆತಿಥ್ಯ ವಹಿಸಲಿದೆ. ವಿಷ್ಯ ಅಂದ್ರೆ ಈ ಮ್ಯಾಚ್ ಆದ ಒಂದು ದಿನದ ಬಳಿಕ ಅಂದ್ರೆ ಏಪ್ರಿಲ್ 20ರಂದು ಇದೇ ತಂಡಗಳ ನಡುವೆ ಎರಡನೇ ಮ್ಯಾಚ್ ನಡೆಯಲಿದೆ. ರಾಯಲ್ ಚಾಲೆಂಜರ್ಸ್ ಬೆಂಗಳೂರು ಹಾಗೂ ಪಂಜಾಬ್ ಕಿಂಗ್ಸ್ ತಂಡಗಳು ಬ್ಯಾಕ್ ಟು ಬ್ಯಾಕ್ ಎರಡು ಪಂದ್ಯಗಳಲ್ಲಿ ಮುಖಾಮುಖಿಯಾಗಲಿದೆ. ಮೊದಲ ಪಂದ್ಯವು ಏಫ್ರಿಲ್ 18 ರಂದು ಬೆಂಗಳೂರಿನ ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ನಡೆದರೆ, ಎರಡು ದಿನಗಳ ಬಳಿಕ ಉಭಯ ತಂಡಗಳು ಚಂಡೀಗಢ್​ನಲ್ಲಿ ಮತ್ತೆ ಕಣಕ್ಕಿಳಿಯಲಿದೆ.

ಇಂಟ್ರೆಸ್ಟಿಂಗ್ ಅಂದ್ರೆ ಪಂಜಾಬ್ ಮತ್ತು ಬೆಂಗಳೂರು ಟೀಮ್​ಗಳು ಬ್ಯಾಕ್ ಟು ಬ್ಯಾಕ್ ಎದುರು ಬದುರಾಗ್ತಿವೆ. ಸತತ ಪಂದ್ಯಗಳನ್ನು ಆಯೋಜಿಸಿದ್ರೂ ಕೂಡ ಉಭಯ ತಂಡಗಳಿಗೆ ನೀಡಿರುವುದು ಕೇವಲ ಒಂದು ದಿನದ ಗ್ಯಾಪ್ ಮಾತ್ರ. ಅಂದರೆ ಏಪ್ರಿಲ್ 18 ಮತ್ತು ಏಪ್ರಿಲ್ 20 ರಂದು ರಾಯಲ್ ಚಾಲೆಂಜರ್ಸ್ ಬೆಂಗಳೂರು ಹಾಗೂ ಪಂಜಾಬ್ ಕಿಂಗ್ಸ್ ತಂಡಗಳು ಮುಖಾಮುಖಿಯಾಗಲಿವೆ. ಇದರ ನಡುವೆ ಏಪ್ರಿಲ್ 19 ರಂದು ಮಾತ್ರ ಉಭಯ ತಂಡಗಳಿಗೆ ಬಿಡುವು ನೀಡಲಾಗಿದೆ. ಇನ್ನೂ ಒಂದು ಶಾಕಿಂಗ್ ವಿಚಾರ ಅಂದ್ರೆ ಏಪ್ರಿಲ್ 18ಕ್ಕೆ ರಾತ್ರಿ 7.30ಕ್ಕೆ ಮ್ಯಾಚ್ ಆಡಿದ್ರೆ ಏಪ್ರಿಲ್ 20ರಂದು ಮಧ್ಯಾಹ್ನದ ಶೆಡ್ಯೂಲ್​ನಲ್ಲಿ ಅಂದ್ರೆ ಮಧ್ಯಾಹ್ಮ 3.30ಕ್ಕೆ ಪಂದ್ಯ ಆರಂಭ ಆಗಲಿದೆ. ಹೀಗಾಗಿ ಶುಕ್ರವಾರ ಮ್ಯಾಚ್ ಮುಗಿಸ್ಕೊಂಡು ಶನಿವಾರ ಚಂಡೀಗಢ್​ನತ್ತ ಪ್ರಯಾಣ ಬೆಳೆಸಬೇಕು. ಮರುದಿನ ಮಧ್ಯಾಹ್ನದೊಳಗೆ ಮತ್ತೆ ಪಂದ್ಯವಾಡಲು ಸಜ್ಜಾಗಬೇಕಿದೆ. ಇದೇ ಪ್ರೆಶರ್ ಎರಡೂ ತಂಡಗಳ ಮೇಲೂ ಬೀಳಲಿದೆ. ಹಾಗೇ ಪಿಚ್ ಜಡ್ಜ್ ಮಾಡೋದು ಕಷ್ಟ ಆಗಲಿದೆ. ಇದು ಅಭಿಮಾನಿಗಳ ಆಕ್ರೋಶಕ್ಕೂ ಕಾರಣವಾಗಿದೆ.

ಇನ್ನು ಈ ಬಾರಿಯ ಟೂರ್ನಿಯಲ್ಲಿ ಬೆಂಗಳೂರು ಮತ್ತು ಪಂಜಾಬ್ ಆಟಗಾರರು ಸಖತ್ ಫಾರ್ಮ್​ನಲ್ಲಿದ್ದಾರೆ. ಆರ್‌ಸಿಬಿ ಆಡಿರುವ ಆರು ಪಂದ್ಯಗಳಲ್ಲಿ ನಾಲ್ಕನ್ನು ಗೆದ್ದಿದೆ. ಹಾಗೇ ಪಂದ್ಯಾವಳಿಯಲ್ಲಿ ಎರಡನೇ ಅತ್ಯುತ್ತಮ ಬ್ಯಾಟಿಂಗ್ ಸರಾಸರಿಯನ್ನು ಹೊಂದಿದೆ. ಮತ್ತೊಂದೆಡೆ, ಪಿಬಿಕೆಎಸ್ ಕೂಡ ತಮ್ಮ ಆರು ಪಂದ್ಯಗಳಲ್ಲಿ ನಾಲ್ಕನ್ನು ಗೆದ್ದಿದೆ. ಬಟ್ ನೆಟ್ ರನ್​ರೇಟ್​​ನಲ್ಲಿ ಆರ್‌ಸಿಬಿಗಿಂತ ಸ್ವಲ್ಪ ಹಿಂದಿದೆ. ಎರಡೂ ತಂಡಗಳು ತಮ್ಮ ಕೊನೆಯ ಪಂದ್ಯಗಳಲ್ಲಿ ಗೆಲುವು ಸಾಧಿಸಿವೆ. ಜೈಪುರದಲ್ಲಿ ಆರ್‌ಸಿಬಿ ರಾಜಸ್ಥಾನ ರಾಯಲ್ಸ್ ತಂಡವನ್ನು ಒಂಬತ್ತು ವಿಕೆಟ್‌ಗಳಿಂದ ಸೋಲಿಸಿದರೆ, ಪಿಬಿಕೆಎಸ್ ಮುಲ್ಲನ್‌ಪುರದಲ್ಲಿ ಕೋಲ್ಕತ್ತಾ ನೈಟ್ ರೈಡರ್ಸ್ ವಿರುದ್ಧ 111 ರನ್‌ಗಳನ್ನು ಡಿಫೆಂಡ್ ಮಾಡಿಕೊಳ್ಳೋ ಮೂಲಕ ಗೆದ್ದು ಬೀಗಿದೆ. ಇದು ಐಪಿಎಲ್ ಇತಿಹಾಸದಲ್ಲಿ ಇದುವರೆಗಿನ ಅತ್ಯಂತ ಕಡಿಮೆ ಡಿಫೆನ್ಸಿವವ್ ಮೊತ್ತವಾಗಿದೆ.

ಇನ್ನು ಹೊಸ ಕ್ಯಾಪ್ಟನ್​ಗಳ ಸಾರಥ್ಯದಲ್ಲಿ ಈ ಸೀಸನ್ ಆಡ್ತಿರೋ ಬೆಂಗಳುರು ಮತ್ತು ಪಂಜಾಬ್ ಬೊಂಬಾಟ್ ಬ್ಯಾಟಿಂಗ್ ಲೈನಪ್ ಹೊಂದಿದೆ. ಆರ್​ಸಿಬಿ ಪರ ವಿರಾಟ್ ಕೊಹ್ಲಿ, ಫಿಲ್ ಸಾಲ್ಟ್ ಮತ್ತು ರಜತ್ ಪಾಟಿದಾರ್ ಅದ್ಭುತ ಪ್ರದರ್ಶನ ನೀಡ್ತಿದ್ದಾರೆ. ಅದ್ರಲ್ಲೂ ಕೊಹ್ಲಿ ಮತ್ತು ಸಾಲ್ಟ್ ಸೆಟಲ್ ಆದ್ರೆ ಪವರ್ ಪ್ಲೇ ನೆಕ್ಸ್​ಟ್ ಲೆವೆಲ್​ನಲ್ಲಿರುತ್ತೆ. ನಾಲ್ಕನೇ ಕ್ರಮಾಂಕದಲ್ಲಿ ರಜತ್ ಪಾಟಿದಾರ್ ಅತ್ಯುತ್ತಮ ಸ್ಟ್ರೈಕ್ ರೇಟ್ ಹೊಂದಿದ್ದಾರೆ. ಇತ್ತ ಪಂಜಾಬ್​ನಲ್ಲೂ ಕೂಡ ಪವರ್ ಹಿಟ್ಟರ್ಸ್ ಇದ್ದಾರೆ. ಪ್ರಿಯಾಂಶ್ ಆರ್ಯ​, ಮೊದಲ ಬಾಲ್​ನಿಂದಲೇ ಬೌಲರ್​ಗಳ ಮೇಲೆ ಅಗ್ರೆಸ್ಸಿವ್ ಬ್ಯಾಟಿಂಗ್ ಇಂಟೆಂಟ್ ತೋರಿಸ್ತಾರೆ. ಪ್ರಭ್ ಸಿಮ್ರನ್ ಸಿಂಗ್ ಕೂಡ ಪವರ್​ ಪ್ಲೇನಲ್ಲಿ ಡೇಂಜರಸ್ ಬ್ಯಾಟರ್​. ಪೀಲ್ಡರ್ಸ್​​ 30 ಯಾರ್ಡ್​ ಸರ್ಕಲ್​ ಒಳಗಿದ್ದಾಗ ನಿರಾಯಾಸವಾಗಿ ಬೌಂಡರಿ ಬಾರಿಸೋ ತಾಕತ್ತು ಇವ್ರಲ್ಲಿದೆ. ಇನ್ನು ಕ್ಯಾಪ್ಟನ್​​ ಶ್ರೇಯಸ್ ಅಯ್ಯರ್ ಪಂಜಾಬ್​ ಕಿಂಗ್ಸ್​ನ ಮಿಡಲ್​​ ಆರ್ಡರ್​​ ಪವರ್​. ಓಪನರ್ಸ್ ಫೇಲಾದ್ರೂ 3ನೇ ಕ್ರಮಾಂಕದಲ್ಲಿ ಕಣಕ್ಕಿಳಿಯೋ ಶ್ರೇಯಸ್​ ಬೌಲರ್​ಗಳನ್ನ ಬೆಂಡೆತ್ತುತ್ತಾರೆ.  ಹೀಗಾಗಿ ಆರ್​ಸಿಬಿ ಬೌಲರ್ಸ್ ಈ ಮೂವರನ್ನ ಆದಷ್ಟು ಬೇಗ ಕಟ್ಟಿ ಹಾಕ್ಬೇಕಾಗುತ್ತೆ.

ಅವೇ ಪಿಚ್​​ನಲ್ಲಿ ನಾಲ್ಕೂ ಪಂದ್ಯ ಗೆದ್ದಿರೋ ಆರ್​ಸಿಬಿ ತವರಿನಲ್ಲಿ ಗೆಲುವಿನ ಖಾತೆ ತೆರೆಯಲೇ ಬೇಕಿದೆ. ಯಾಕಂದ್ರೆ ಈ ಸೀಸನ್​ನಲ್ಲಿ ಒಟ್ಟು 7 ಪಂದ್ಯಗಳನ್ನ ಆರ್​ಸಿಬಿ ಚಿನ್ನಸ್ವಾಮಿ ಮೈದಾನದಲ್ಲಿ ಆಡಲಿದೆ. ಈ ಪೈಕಿ ಹೋಂ ಗ್ರೌಂಡ್​ನಲ್ಲಿ ಎಷ್ಟು ಮ್ಯಾಚ್ ಗೆಲ್ಲುತ್ತೆ ಅನ್ನೋದ್ರ ಮೇಲೆ ಪ್ಲೇಆಫ್ ಕೂಡ ನಿರ್ಧಾರ ಆಗುತ್ತೆ. ಈಗಾಗ್ಲೇ 2 ಪಂದ್ಯಗಳನ್ನ ಕಳ್ಕೊಂಡಿದ್ರೂ ಈ ಮ್ಯಾಚ್ ಗೆಲ್ಲೋದು ಅನಿವಾರ್ಯ. ಇಲ್ದೇ ಇದ್ರೆ ಆರ್​ಸಿಬಿಗೆ ತವರಿನ ಮೈದಾನವೇ ವಿಲನ್ ಆಗ್ಬಹುದು. ಅದ್ರಲ್ಲೂ  ಚಿನ್ನಸ್ವಾಮಿಯಲ್ಲಿ ಟಾಸ್ ಗೆದ್ದವ್ರೇ ಆಲ್ಮೋಸ್ಟ್ ಮ್ಯಾಚ್ ವಿನ್ನರ್ಸ್ ಆಗಿದ್ದಾರೆ. ಹೀಗಾಗಿ ಟಾಸ್ ಯಾರ ಕಡೆ ಅನ್ನೋದು ಕೂಡ ಇಂಪಾರ್ಟೆಂಟ್.

Shantha Kumari

Leave a Reply

Your email address will not be published. Required fields are marked *