ಶಿವಣ್ಣ ಡ್ಯಾನ್ಸ್.. ಅದೇ ಜೋಶ್, ಅದೇ ಎನರ್ಜಿ.. – ಸರ್ಜರಿ ಬಳಿಕ ಸೆಂಚುರಿ ಸ್ಟಾರ್ ಫುಲ್ ಫಿಟ್

ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್.. ಸಿನಿಮಾ ನಿರ್ಮಾಪಕರ ಫೇವರೆಟ್ ಹೀರೋ.. ಅಭಿಮಾನಿಗಳ ಕರುನಾಡ ಚಕ್ರವರ್ತಿ ಡಾ. ಶಿವರಾಜ್ ಕುಮಾರ್ ಇಂದಿಗೂ ಎಂದೆಂದಿಗೂ ಎವರ್ಗ್ರೀನ್ ಸ್ಟಾರ್. ವಯಸ್ಸು ಅರವತ್ತೆರಡಾದ್ರೂ ಯುವ ನಟರೂ ನಾಚುವಂತ ಫಿಟ್ನೆಸ್.. ಸ್ಯಾಂಡಲ್‌ವುಡ್‌ನಲ್ಲಿ ಎನರ್ಜಿಗೆ ಇನ್ನೊಂದು ಹೆಸರೇ ಶಿವಣ್ಣ. ಕೆಲ ಸಮಯದ ಹಿಂದೆ ಶಿವಣ್ಣ ಅನಾರೋಗ್ಯಕ್ಕೆ ತುತ್ತಾಗಿದ್ರು. ಇದು ಅಭಿಮಾನಿಗಳ ಆತಂಕಕ್ಕೂ ಕಾರಣವಾಗಿತ್ತು. ತೆರೆ ಮೇಲೆ ಶಿವಣ್ಣನ್ನ ಅದೆಷ್ಟೋ ಫ್ಯಾನ್ಸ್ ಮಿಸ್ ಮಾಡಿಕೊಂಡಿದ್ರು. ಇದೀಗ ಮತ್ತೆ ಶಿವಣ್ಣ ಅದೇ ಎನರ್ಜಿ, ಅದೇ ಜೋಷ್‌ನಲ್ಲಿ ಎಂಟ್ರಿಕೊಟ್ಟಿದ್ದಾರೆ. ಜೀಕನ್ನಡದ ಜನಪ್ರೀಯ ರಿಯಾಲಿಟಿ ಶೋ ಸರಿಗಮಪದಲ್ಲಿ ಹ್ಯಾಟ್ರಿಕ್ ಹೀರೋ ಭರ್ಜರಿ ಡ್ಯಾನ್ಸ್.. ಹಾಡು ಹಾಡೋ ಮೂಲಕ ಮನರಂಜನೆ ನೀಡಿದ್ದಾರೆ. ಅಷ್ಟೇ ಅಲ್ಲ ಗೀತಕ್ಕನಿಗೂ ಪ್ರಪೋಸ್ ಮಾಡಿದ್ದಾರೆ.
ಇದನ್ನೂ ಓದಿ: ಮೇ 1ರಿಂದ ಜಿಪಿಎಸ್ ಆಧಾರಿತ ಟೋಲ್ ಸಂಗ್ರಹ – GNSS ಎಂದರೇನು ? ಹೇಗೆ ಕೆಲಸ ಮಾಡುತ್ತೆ?
ಕ್ಯಾನ್ಸರ್ ಗೆದ್ದ ಶಿವಣ್ಣ ಈಗ ಫಿಟ್ ಆಂಡ್ ಫೈನ್ ಆಗಿದ್ದಾರೆ. ಅಮೆರಿಕದಲ್ಲಿ ಚಿಕಿತ್ಸೆ ಪಡೆದುಕೊಂಡ ಬಳಿಕ ಬೆಂಗಳೂರಿಗೆ ಬಂದಿದ್ರು. ಕೆಲವು ದಿನಗಳ ಕಾಲ ವಿಶ್ರಾಂತಿ ಪಡೆದಿದ್ದರು. ಹೀಗಾಗಿ ಸಿನಿಮಾ ಹಾಗೂ ರಿಯಾಲಿಟಿ ಶೋಗಳಿಂದ ದೂರ ಉಳಿದಿದ್ದರು. ಶಿವಣ್ಣನನ್ನ ತೆರೆಮೇಲೆ ಅದೆಷ್ಟೋ ಫ್ಯಾನ್ಸ್ ಮಿಸ್ ಮಾಡಿಕೊಂಡಿದ್ರು. ಇದೀಗ ಮತ್ತೆ ಎಂದಿನಂತೆ ಅವರು ವೃತ್ತಿ ಬದುಕಿನ ಕಡೆಗೆ ಮರಳುತ್ತಿದ್ದಾರೆ. ಗ್ರೀನ್ ಸಿಗ್ನಲ್ ಕೊಟ್ಟಿದ್ದ ಸಿನಿಮಾಗಳಲ್ಲಿ ನಟಿಸುವುದಕ್ಕೆ ಆರಂಭಿಸಿದ್ದಾರೆ. ಈ ಮಧ್ಯೆ ಜೀಕನ್ನಡದ ರಿಯಾಲಿಟಿ ಶೋ ಸರಿಗಮಪಗೆ ಶಿವಣ್ಣ ಎಂಟ್ರಿಕೊಟ್ಟಿದ್ದಾರೆ. ಮತ್ತೆ ಅದೇ ಜೋಷ್, ಎನರ್ಜಿಯೊಂದಿಗೆ ಅಭಿಮಾನಿಗಳ ಮುಂದೆ ಕಾಣಿಸಿಕೊಂಡಿದ್ದಾರೆ. ಸರಿಗಮಪ ವೇದಿಕೆ ಮೇಲೆ ಭರ್ಜರಿಯಾಗಿ ಡ್ಯಾನ್ಸ್ ಮಾಡಿದ್ದಾರೆ. ಮುಗಿಲೆತ್ತರಕ್ಕೆ ಜಿಗಿದು ಶಾಕ್ ಕೊಟ್ಟಿದ್ದಾರೆ. ಜೀ ಕನ್ನಡದ ಶಿವಣ್ಣನ ಪ್ರೋಮೊ ರಿಲೀಸ್ ಮಾಡಿದ್ದು, ಫ್ಯಾನ್ಸ್ ಫುಲ್ ಕಳೆದು ಹೋಗಿದ್ದಾರೆ.
ಸರಿಗಮಪ ಶೋನಲ್ಲಿ ಈ ವಾರ ಶಿವರಾಜ್‌ಕುಮಾರ್ ಅವರು ಆಗಮಿಸಿದ್ದಾರೆ. ಪತ್ನಿ ಗೀತಾ ಶಿವರಾಜ್‌ಕುಮಾರ್ ಮತ್ತು ಮಗಳು ನಿವೇದಿತಾ ಕೂಡ ಸರಿಗಮಪ ವೇದಿಕೆಯಲ್ಲಿ ಕಾಣಿಸಿಕೊಂಡಿದ್ದಾರೆ. ವಿಶೇಷವೆಂದರೆ, ಈ ವಾರದ ಸಂಚಿಕೆಯಲ್ಲಿ ಶಿವಣ್ಣ ಅವರ ಹಿಟ್ ಹಾಡುಗಳನ್ನೇ ಸ್ಪರ್ಧಿಗಳು ಹಾಡಿದ್ದಾರೆ. ಶಿವರಾಜ್‌ಕುಮಾರ್ ‘ಸರಿಗಮಪ’ ಶೋನಲ್ಲಿ ‘ಟಗರು ಬಂತು ಟಗರು’, ‘ವಜ್ರಕಾಯ’ ಹಾಡುಗಳಿಗೆ ಶಿವಣ್ಣ ಭರ್ಜರಿಯಾಗಿ ಡ್ಯಾನ್ಸ್ ಮಾಡಿದ್ದಾರೆ. ಕರುನಾಡ ಚಕ್ರವರ್ತಿಯನ್ನು ಗಾಯಕ ರಾಜೇಶ್ ಕೃಷ್ಣನ್ ಅವರು ‘ಸಮಯ ಚಕ್ರವರ್ತಿ’ ಅಂತ ಕರೆದಿದ್ದಾರೆ. ಇನ್ನು ಡ್ಯಾನ್ಸ್ ಜೊತೆಗೆ ಶಿವರಾಜ್ ಕುಮಾರ್ ಹಾಡು ಕೂಡ ಹಾಡಿದ್ದಾರೆ. ಜನುಮದ ಜೋಡಿ ಸಿನಿಮಾದ “ಕನಕ.. ಕನಕ” ಸಾಂಗ್ ಅನ್ನು ಅದೇ ಗೆಟಪ್‌ನಲ್ಲಿ ಹಾಡಿದ್ದಾರೆ. ಎತ್ತಿನಗಾಡಿಯ ಮೇಲೆ ಕುಳಿತು ಸರಿಗಮಪ ಸ್ಪರ್ಧಿ ಜೊತೆಗೂಡಿ ಹಾಡಿ, ಕಾರ್ಯಕ್ರಮದ ರಂಗನ್ನು ಹೆಚ್ಚಿಸಿದ್ದಾರೆ.
ಇನ್ನು ಶಿವಣ್ಣ ವೇದಿಕೆ ಮೇಲೆ ಪತ್ನಿ ಗೀತಾ ಶಿವರಾಜ್‌ಕುಮಾರ್‌ಗೆ ಪ್ರಪೋಸ್ ಮಾಡಿದ್ದಾರೆ. ಗೀತಕ್ಕನ ಮುಂದೆ ಕೂತು ಶಿವಣ್ಣ ‘ಐ ಲವ್ ಯೂ’ ಎಂದಿದ್ದಾರೆ. ಈ ವೀಕೆಂಡ್‌ನಲ್ಲಿ ಪ್ರಸಾರ ಆಗುವ ಸರಿಗಮಪ ಶೋನಲ್ಲಿ ಇದೇ ಹೈಲೈಟ್. ಇನ್ನು ಬರೀ ಶಿವಣ್ಣ ಅಷ್ಟೇ ಅಲ್ಲ. ಗೀತಕ್ಕ ಕೂಡ ಶಿವಣ್ಣನಿಗೆ ಐ ಲವ್ ಯೂ ಎಂದಿದ್ದಾರೆ.
ಇನ್ನು ಶಿವರಾಜ್‌ಕುಮಾರ್ ಅವರು ಅನಾರೋಗ್ಯದಿಂದ ಗುಣವಾಗಿ, ಪುನಃ ಎಂದಿನಂತೆ ಅದೇ ಚಾರ್ಮ್, ಅದೇ ಎನರ್ಜಿ, ಅದೇ ಜೋಶ್‌ನಲ್ಲಿ ಸರಿಗಮಪ ಸೆಟ್‌ಗೆ ಆಗಮಿಸಿದ್ದು, ಎಲ್ಲರನ್ನೂ ಭಾವುಕರನ್ನಾಗಿಸಿತ್ತು. ಅರ್ಜುನ್ ಜನ್ಯ ಶಿವಣ್ಣನಿಗೆ ಸಿಹಿಮುತ್ತು ನೀಡಿ, ಭಾವುಕರಾದ್ರೆ, ಬಂಗಾರ ಸನ್ ಆಫ್ ಬಂಗಾರದ ಮನುಷ್ಯ ಸಿನಿಮಾದ ಹಾಡನ್ನು ವಿಜಯ್ ಪ್ರಕಾಶ್ ಶಿವರಾಜ್‌ಕುಮಾರ್ ಅವರಿಗಾಗಿಯೇ ವಿಶೇಷವಾಗಿ ಹಾಡಿದರು. ಇದೆಲ್ಲವನ್ನು ಕಂಡು ಭಾವುಕರಾದ ಶಿವಣ್ಣ, “ಇಷ್ಟೊಂದು ಜನ ನನ್ನನ್ನು ಪ್ರೀತಿ ಮಾಡ್ತಾರಲ್ವಾ? ಇಷ್ಟು ಸಾಕು.. ಪುಣ್ಯ ಮಾಡಿರಬೇಕು ನಾನು” ಎಂದು ಹೇಳಿದ್ದಾರೆ.
ಇದೀಗ ಶಿವಣ್ಣ ಪಾರ್ಫಾಮೆನ್ಸ್ ನೋಡಿ ಅಭಿಮಾನಿಗಳು ಫುಲ್ ಖುಷಿಯಾಗಿದ್ದಾರೆ. ‘ಶಿವಣ್ಣ ಈಸ್ ಬ್ಯಾಕ್..’, ಶಿವಣ್ಣ ಎನರ್ಜಿಗೆ ಒಂದು ದೊಡ್ಡ ಸೆಲ್ಯೂಟ್’, ‘ಶಿವಣ್ಣ ಇದ್ದಲ್ಲಿ ಎಂಟರ್‌ಟೇನ್‌ಮೆಂಟ್‌ಗೆ ಕೊರತೆ ಎಲ್ಲಿ’, ‘ಶಿವಣ್ಣ ನಮ್ ಆಯಸ್ಸು ನಿಮಗೆ ಇರಲಿ’, ‘ನಮ್ಮ ಸಿಂಹದ ಮರಿ ಶಿವಣ್ಣ.. ಹೀಗೆ ಅಭಿಮಾನಿಗಳು ಶಿವಣ್ಣನ ಎನರ್ಜಿಯನ್ನ ಕೊಂಡಾಡಿದ್ದಾರೆ.