ಸಿರಾಜ್, KL ಆಯ್ತು.. ಈಗ ಚಹಲ್ – RCBಗೆ ಮಾಜಿ ಆಟಗಾರರೇ ವಿಲನ್
ಚಿನ್ನಸ್ವಾಮಿಯಲ್ಲಿ ಪಂಜಾಬ್ ಗಿದ್ಯಾ ಲಕ್?

ಸಿರಾಜ್, KL ಆಯ್ತು.. ಈಗ ಚಹಲ್ – RCBಗೆ ಮಾಜಿ ಆಟಗಾರರೇ ವಿಲನ್ಚಿನ್ನಸ್ವಾಮಿಯಲ್ಲಿ ಪಂಜಾಬ್ ಗಿದ್ಯಾ ಲಕ್?

18ನೇ ಸೀಸನ್​ ಐಪಿಎಲ್​ನಲ್ಲಿ 6 ಮ್ಯಾಚ್ ಆಡಿರೋ ಬೆಂಗಳೂರು ಟೀಂ 4ರಲ್ಲಿ ಗೆದ್ದಿದೆ. 2 ಮ್ಯಾಚ್ ಸೋತಿದೆ. ವಿಷ್ಯ ಅಂದ್ರೆ ಗೆದ್ದಿರೋದೆಲ್ಲಾ ಅವೇ ಪಿಚ್​ನಲ್ಲಿ. ಸೋತಿರೋದು ತಮ್ಮದೇ ಗ್ರೌಂಡ್​ನಲ್ಲಿ. ಎದುರಾಳಿಗಳ ಹೋಂ ಗ್ರೌಂಡ್​ನಲ್ಲಿ ಅಲ್ಲಿನ ಅಭಿಮಾನಿಗಳನ್ನ ಸೈಲೆಂಟ್ ಮಾಡಿಸ್ತಿರೋ ಬೆಂಗಳೂರು ಆಟಗಾರರು ತಮ್ಮದೇ ಸ್ಟೇಡಿಯಮ್​ನಲ್ಲಿ ತಾವೂ ಸೈಲೆಂಟ್ ಆಗ್ತಿದ್ದಾರೆ. ತಮ್ಮ ಅಭಿಮಾನಿಗಳನ್ನೂ ಸೈಲೆಂಟ್ ಮಾಡಿಸ್ತಿದ್ದಾರೆ. ಅದೆಲ್ಲಕ್ಕಿಂತ ಹೆಚ್ಚಾಗಿ ಆರ್​ಸಿಬಿ ಮಾಜಿ ಪ್ಲೇಯರ್ಸ್ ನಿಂತು ಮ್ಯಾಚ್ ವಿನ್ನರ್ಸ್ ಆಗ್ತಿದ್ದಾರೆ. ಇದೀಗ ಪಂಜಾಬ್ ವಿರುದ್ಧ ಪಂದ್ಯ ಆಡ್ಬೇಕಿರೋ ಆರ್​ಸಿಬಿಗೆ ಯುಜ್ವೇಂದ್ರ ಚಹಾಲ್ ಥ್ರೆಟ್ ಆಗೋ ಲಕ್ಷಣ ಕಾಣ್ತಿದೆ.

ಇದನ್ನೂ ಓದಿ : ರಾಜಸ್ಥಾನ್ ವಿರುದ್ಧ ಡೆಲ್ಲಿಗೆ ಗೆಲುವು – ಸೂಪರ್ ಓವರ್​ನಲ್ಲಿ ಪಂದ್ಯ ಗೆಲ್ಲಿಸಿಕೊಟ್ಟ ಕನ್ನಡಿಗ!

ಐಪಿಎಲ್​ನ ಮೋಸ್ಟ್ ಸಕ್ಸಸ್​ಫುಲ್ ಬೌಲರ್ ಯುಜ್ವೇಂದ್ರ ಚಹಾಲ್.. ಇಂಡಿಯನ್ ಪ್ರೀಮಿಯರ್ ಲೀಗ್ ಇತಿಹಾಸದಲ್ಲೇ ಹೈಯೆಸ್ಟ್ ವಿಕೆಟ್ ಟೇಕರ್. ಅದ್ರಲ್ಲೂ ಕೆಕೆಆರ್ ವಿರುದ್ಧದ ಮ್ಯಾಚಲ್ಲಿ ಅವ್ರ ಬೌಲಿಂಗ್ ಸ್ಕಿಲ್ ಅಲ್ಟಿಮೇಟ್ ಆಗಿತ್ತು. ಜಸ್ಟ್ 111 ರನ್​ಗಳನ್ನ ಡಿಫೆಂಡ್ ಮಾಡಿಕೊಳ್ಳೋಕೆ ಸಾಧ್ಯವಾಗಿದ್ದು ಕೂಡ ಇವ್ರಿಂದಲೇ. ಹೀಗೆ ಸ್ಟಾರ್ ಬ್ಯಾಟರ್​ಗಳನ್ನೇ ಕಾಡೋ ಚಹಾಲ್ ಆರ್​ಸಿಬಿ ಆಟಗಾರರಿಗೂ ಕಂಟಕವಾಗೋ ಆತಂಕ ಎದುರಾಗಿದೆ. 2014ರಿಂದ 2021ರವರೆಗೆ ಅಂದ್ರೆ 8 ಸೀಸನ್ ಆರ್​ಸಿಬಿ ಪರವೇ ಆಡಿದ್ದ ಚಹಾಲ್ 113 ಮ್ಯಾಚ್​ಗಳಿಂದ ಬರೋಬ್ಬರಿ 139 ವಿಕೆಟ್ ಪಡೆದಿದ್ದಾರೆ. ಈವರೆಗೂ ಆರ್​ಸಿಬಿ ಪರ ಹೈಯೆಸ್ಟ್ ವಿಕೆಟ್ ಕಿತ್ತಿರೋ ದಾಖಲೆ ಅವ್ರ ಹೆಸರಲ್ಲೇ ಇದೆ. ಬೆಂಗಳೂರು ತಂಡದ ಆಳ, ಅಗಲ ಚೆನ್ನಾಗೇ ಗೊತ್ತಿರೋ ಚಹಾಲ್ ಬೆಂಗಳೂರು ವಿರುದ್ಧ ಮತ್ತೊಮ್ಮೆ ಬೌಲಿಂಗ್ ನಲ್ಲಿ ದಾಳಿ ನಡೆಸಬಹುದು.

ಕೆಕೆಆರ್ ವಿರುದ್ಧದ ಪಂದ್ಯದಲ್ಲಿ 4 ವಿಕೆಟ್ ಬೇಟೆಯಾಡಿದ ಚಹಾಲ್ ಐಪಿಎಲ್ ಇತಿಹಾಸದಲ್ಲಿ ಹೊಸ ದಾಖಲೆ ಬರೆದಿದ್ದಾರೆ. ಇದು ಅವರ 8ನೇ ಬಾರಿಯ 4 ವಿಕೆಟ್ ಗೊಂಚಲು. ಈ ಮೂಲಕ ಚಹಲ್ ಅತೀ ಹೆಚ್ಚು ಬಾರಿ 4 ವಿಕೆಟ್ ಪಡೆದ ಆಟಗಾರ ಎನಿಸಿಕೊಂಡಿದ್ದಾರೆ. ಇದಕ್ಕೂ ಮೊದಲು ಈ ಸಾಧನೆಯನ್ನು ಸುನಿಲ್ ನರೈನ್ ಮಾಡಿದ್ದರು. ಅವರೂ ಕೂಡ 8 ಬಾರಿ ಈ ಸಾಧನೆ ಮಾಡಿದ್ದಾರೆ. ಉಳಿದಂತೆ ಶ್ರೀಲಂಕಾದ ಲಸಿತ್ ಮಾಲಿಂಗ 7 ಬಾರಿ, ಕಗಿಸೋ ರಬಾಡ 6, ಭಾರತದ ಅಮಿತ್ ಮಿಶ್ರಾ 5 ಬಾರಿ ಈ ಸಾಧನೆ ಮಾಡಿದ್ದಾರೆ.

ಅಷ್ಟಕ್ಕೂ ಇಲ್ಲಿ ಚಹಾಲ್ ಬಗ್ಗೆ ಇಷ್ಟೊಂದು ಮಾತಾಡೋಕೆ ಕಾರಣ ಕೂಡ ಇದೆ. ಬೆಂಗಳೂರಲ್ಲಿ 2 ಪಂದ್ಯಗಳಲ್ಲಿ ಆರ್​ಸಿಬಿ ಸೋಲೋಕೆ ಕಾರಣವೇ ಆರ್​ಸಿಯ ಮಾಜಿ ಪ್ಲೇಯರ್ಸ್. ಗುಜರಾತ್ ಟೈಟಾನ್ಸ್ ವಿರುದ್ಧದ ಪಂದ್ಯದಲ್ಲಿ ಮೊಹಮ್ಮದ್ ಸಿರಾಜ್ ವಿಲನ್ ಆಗಿ ಕಾಡಿದ್ರು. ಸತತ 7 ವರ್ಷಗಳ ಕಾಲ ಆರ್ ಸಿಬಿ ಪರ ಆಡಿದ್ದ ಸಿರಾಜ್ ಈ ವರ್ಷ ಗುಜರಾತ್ ಪಾಲಾಗಿದ್ದಾರೆ. ಏಪ್ರಿಲ್ 2ರಂದು ಚಿನ್ನಸ್ವಾಮಿಯಲ್ಲಿ ನಡೆದ ಬೆಂಗಳೂರು ವಿರುದ್ಧದ ಪಂದ್ಯದಲ್ಲಿ  4 ಓವರ್ ಬೌಲ್ ಮಾಡಿ ಜಸ್ಟ್ 19 ರನ್ ನೀಡಿದ್ರು. ಹಾಗೇ 3 ವಿಕೆಟ್ ಉರುಳಿಸಿದ್ರು. ಅದೂ ಕೂಡ ಫಿಲ್ ಸಾಲ್ಟ್, ದೇವದತ್ ಪಡಿಕ್ಕಲ್ ಹಾಗೇ ಲಿಯಾಮ್ ಲಿವಿಂಗ್​ಸ್ಟೋನ್ ವಿಕೆಟ್​ಗಳನ್ನ. ಇನ್ನು ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧದ ಮ್ಯಾಚಲ್ಲಿ ಆರ್ ಸಿಬಿ ಮಾಜಿ ಆಟಗಾರ ಅದ್ರಲ್ಲೂ ನಮ್ಮ ಕನ್ನಡಿಗ ಕೆಎಲ್ ರಾಹುಲ್ ಅವ್ರೇ ಆರ್ ಸಿಬಿ ಸೋಲಿಗೆ ಕಾರಣ ಆಗಿದ್ರು. 58 ರನ್​ಗಳಿಗೆ 4 ವಿಕೆಟ್ ಕಳ್ಕೊಂಡಿದ್ದ ಡಿಸಿ ಪರ ಕ್ರೀಸ್ ಕಚ್ಚಿ ನಿಂತಿದ್ದ ರಾಹುಲ್ ಕೊನೇವರೆಗೂ ಬ್ಯಾಟ್ ಬೀಸಿದ್ರು. 53 ಎಸೆತಗಳಲ್ಲೇ 93 ರನ್ ಸಿಡಿಸಿ ಅಜೇಯರಾಗಿ ಉಳಿದಿದ್ರು. ಮ್ಯಾಚ್ ವಿನ್ನರ್ ಆಗಿದ್ರು. ಇದೀಗ ಇಂಥದ್ದೇ ಭಯ ಚಹಾಲ್ ವಿಚಾರದಲ್ಲೂ ಶುರುವಾಗಿದೆ.

Shantha Kumari

Leave a Reply

Your email address will not be published. Required fields are marked *