ಪ್ರೀತಿಗಾಗಿ‌ ಕಂಠಿ ನಾನಾ ಅವತಾರ.. ಹೃದಯದ ಮಾತಿಗೆ ಒಪ್ಪಿಕೊಂಡ ಸ್ನೇಹ

ಪ್ರೀತಿಗಾಗಿ‌ ಕಂಠಿ ನಾನಾ ಅವತಾರ.. ಹೃದಯದ ಮಾತಿಗೆ ಒಪ್ಪಿಕೊಂಡ ಸ್ನೇಹ

ಪುಟ್ಟಕ್ಕನ ಮಕ್ಕಳು ಸೀರಿಯಲ್‌ ಈಗ ಮತ್ತೆ ಟ್ರ್ಯಾಕ್‌ ಗೆ ಬಂದಂತೆ ಕಾಣ್ತಿದೆ. ಡಿಸಿ ಸ್ನೇಹ ಸಾವು.. ಪುಟ್ಟಕ್ಕನ ಗೋಳಾಟ.. ನೋಡಿ ವೀಕ್ಷಕರು ಕೂಡ ಬೇಸತ್ತು ಹೋಗಿದ್ರು. ಇದೀಗ ಸೀರಿಯಲ್‌ ನಲ್ಲಿ ನಲ್ಮೆಯ ಹಾಡು ಮತ್ತೆ ಶುರುವಾಗಿದೆ. ಕಂಠಿ ಮತ್ತೆ ಪ್ರೀತಿಯಲ್ಲಿ ಬಿದ್ದಿದ್ದಾನೆ. ಮುದ್ದಿನ ಅಳಿಯನಿಗಾಗಿ ಪುಟ್ಟಕ್ಕ ಲವ್‌ ಗುರು ಆಗಿದ್ದಾಳೆ.

ಇದನ್ನೂ ಓದಿ: ಖಾಸಗಿ ಶಾಲೆಗಳ ದಾಖಲಾತಿಗೆ ಹೊಸ ರೂಲ್ಸ್ – ಇನ್ನುಮುಂದೆ ಪೋಷಕರ ಸಂದರ್ಶನ ಇರಲ್ಲ..  ಮನಸೋ ಇಚ್ಛೆ ಫೀಸ್‌ ಕೇಳುವಂತಿಲ್ಲ!

ಕನ್ನಡದ ಪ್ರಮುಖ ಧಾರಾವಾಹಿಗಳಲ್ಲಿ ಪುಟ್ಟಕ್ಕನ ಮಕ್ಕಳು ಸೀರಿಯಲ್‌ ಕೂಡ ಒಂದು. ಸೀರಿಯಲ್‌ ಸ್ಟೋರಿ ಬದಲಾಗುತ್ತಿದ್ದಂತೆ ಪ್ರಮುಖ ಪಾತ್ರಗಳ ಬದಲಾವಣೆ ಕೂಡ ಮಾಡಲಾಗಿತ್ತು. ಡಿಸಿ ಸ್ನೇಹ ಸಾಯ್ತಿದ್ದಂತೆ ಸೀರಿಯಲ್‌ ಫುಲ್‌ ಡಲ್‌ ಆಗಿತ್ತು. ಸೀರಿಯಲ್‌ ಪ್ರೇಮಿಗಳು ಕೂಡ ನಿರ್ದೇಶಕರ ವಿರುದ್ಧ ಜನ ಗರಂ ಆಗಿದ್ದರು. ಆದ್ರೀಗ ಸೀರಿಯಲ್‌ ಸ್ಟೋರಿ ಮತ್ತೆ ಟ್ರ್ಯಾಕ್‌ ಗೆ ಬಂದಂತೆ ಕಾಣ್ತಿದೆ. ಸಾಕು ಸೀರಿಯಲ್ ನಿಲ್ಲಿಸಿ.. ನೋಡೋಕೆ ಆಗ್ತಿಲ್ಲ ಎನ್ನುತ್ತಿದ್ದ ಪ್ರೇಕ್ಷಕರು ಇದೀಗ ಮತ್ತೆ ನೋಡಲು ಪ್ರಾರಂಭಿಸಿದ್ದಾರೆ. ಇದೀಗ ಕಂಠಿಗೆ ಸ್ನೇಹ ಮೇಲೆ ಲವ್‌ ಆಗಿದೆ. ಎರಡನೇ ಮದುವೆಗೆ ರೆಡಿಯಾಗಿದ್ದಾನೆ. ಆದ್ರೆ ಸ್ನೇಹ ಅವನ ಪ್ರೀತಿಯನ್ನ ಒಪ್ಪಿಕೊಳ್ಳಲು ರೆಡಿಯಿಲ್ಲ. ಹೀಗಾಗಿ ಕಂಠಿ ಸ್ನೇಹಗಾಗಿ ನಾನಾ ಅವತಾರ ತಾಳಿದ್ದಾನೆ.

ಡಿಸಿ ಸ್ನೇಹ ಹೃದಯ ಕಸಿ ಮಾಡಿದ್ದು ಪುಟ್ಟಕ್ಕನ ಮನೆಯಲ್ಲಿರೋ ಮತ್ತೊಬ್ಬಳು ಸ್ನೇಹಗೆ ಅಂತಾ ಗೊತ್ತಾಗಿದೆ. ಹೀಗಾಗಿ ಕಂಠಿ ಸ್ನೇಹ ಹಿಂದೆ ಬಿದ್ದಿದ್ದಾನೆ. ಆಕೆಗೆ ಪ್ರಪೋಸ್‌ ಕೂಡ ಮಾಡಿದ್ದಾನೆ. ಹೃದಯದ ಬಗ್ಗೆ ಕೂಡ ಆತ ಹೇಳಿಕೊಂಡಿದ್ದಾನೆ. ಈ ವಿಚಾರ ಗೊತ್ತಾಗ್ತಿದ್ದಂತೆ, ಸ್ನೇಹ ಡಿಸಿ ಸ್ನೇಹ ಸಮಾಧಿ ಮುಂದೆ ಕಣ್ಣೀರು ಹಾಕಿದ್ದಾಳೆ. ನಿನ್ನ ಸ್ಥಾನ ತುಂಬೋ ಯೋಗ್ಯತೆ ಇಲ್ಲ. ಕಂಠಿ ಸಾಹೇಬ್ರು ಕೇಳೋದ್ರಲ್ಲಿ ತಪ್ಪಿಲ್ಲ. ನಾನು ಧರ್ಮ ಸಂಕಟದಲ್ಲಿ ಸಿಕಾಕೊಂಡಿದ್ದೀನಿ ಅಂತಾ ಅತ್ತಿದ್ದಾಳೆ. ಇದೀಗ ಕಂಠಿ ಮೇಲೆ ಸ್ನೇಹಗೆ ಒಳ್ಳೆ ಅಭಿಪ್ರಾಯ ಬರುವಂತೆ ಪುಟ್ಟಕ್ಕ ಹಾಗೂ ಆಕೆಯ ಮಕ್ಕಳು ಮಾಡ್ತಿದ್ದಾರೆ. ಅಷ್ಟೇ ಅಲ್ಲ ಕಂಠಿ ನಾನಾ ವೇಷದ ಮೂಲಕ ಸ್ನೇಹ ಮುಂದೆ ಬಂದು ಪ್ರೀತಿ ಒಪ್ಪಿಕೋ ಅಂತ ಹೇಳ್ತಿದ್ದಾನೆ. ಅವನ ಸ್ನೇಹಿತರು ಕೂಡ ಅಣ್ಣನ ಒಪ್ಪಿಕೊಳ್ಳಿ ಅತ್ತಿಗೆ ಅಂತ ಹೇಳಿದ್ದಾರೆ. ಇದ್ರಿಂದಾಗಿ ಸ್ನೇಹ ಶಾಕ್‌ ಆಗಿದ್ದಾಳೆ. ಇದು ನಿಜಾನಾ ಭ್ರಮೆನಾ ಅಂತಾ ಗೊತ್ತಾಗದೆ ಕಿರುಚಾಡಿದ್ದಾಳೆ. ಆದ್ರೀಗ ಬಂಗಾರಮ್ಮ ಮಾತ್ರ ಫುಲ್‌ ಕೋಪಗೊಂಡಿದ್ದಾಳೆ. ಮದುವೆ ನಿಲ್ಲಿಸಲು ರೆಡಿಯಾಗಿದ್ದಾಳೆ.

ಹೌದು, ಸ್ನೇಹ ಕಂಠಿಯನ್ನ ಮದುವೆ ಆಗ್ಬಾರ್ದು. ತನ್ನನ್ನೇ ಮದುವೆ ಆಗ್ಬೇಕು ಅಂತಾ ರಾಧಾ ಪ್ಲ್ಯಾನ್‌ ಮಾಡಿದ್ದಾಳೆ. ಬಂಗಾರಮ್ಮ ಮಗ ಒಪ್ಪಿದವಳನ್ನೇ ಸೊಸೆ ಮಾಡಿಕೊಳ್ಳಲು ರೆಡಿ ಆಗಿದ್ಲು. ಆದ್ರೆ ರಾಧಾ ಸ್ನೇಹ ಮೇಲೆ ಕೆಟ್ಟ ಅಭಿಪ್ರಾಯ ಬರುವಂತೆ ಮಾಡ್ತಿದ್ದಾಳೆ. ಕಂಠಿಯನ್ನ ಮದುವೆ ಆಗ್ಬೇಕು.. ಈ ಮನೆ ಸೊಸೆ ಆಗ್ಬೇಕು ಅಂತಾ ಸ್ನೇಹ ಹೃದಯ ತನಗೆ ಜೋಡಿಸಲಾಗಿದೆ ಎಂದು ಸುಳ್ಳು ಹೇಳ್ತಿದ್ದಾಳೆ ಅಂದಿದ್ದಾಳೆ. ರಾಧಾ ಮಾತನ್ನ ಬಂಗಾರಮ್ಮ ನಂಬಿದ್ದಾಳೆ. ಹೀಗಾಗಿ ಈ ಮದುವೆ ಆಗೋಕೆ ತಾನು ಬಿಡಲ್ಲ.  ನೀನೇ ನನ್ನ ಸೊಸೆ ಅಂತಾ ಬಂಗಾರಮ್ಮ ಹೇಳಿದ್ದಾಳೆ. ಇದೀಗ ಕಂಠಿ ಸ್ನೇಹ ಮದುವೆಗೆ ಬಂಗಾರಮ್ಮಳೇ ಅಡ್ಡಿ ಆಗೋದು ಫಿಕ್ಸ್‌ ಆಗಿದೆ.

Shwetha M

Leave a Reply

Your email address will not be published. Required fields are marked *