ಖಾಸಗಿ ಶಾಲೆಗಳ ದಾಖಲಾತಿಗೆ ಹೊಸ ರೂಲ್ಸ್ – ಇನ್ನುಮುಂದೆ ಪೋಷಕರ ಸಂದರ್ಶನ ಇರಲ್ಲ.. ಮನಸೋ ಇಚ್ಛೆ ಫೀಸ್ ಕೇಳುವಂತಿಲ್ಲ!

ಸಿಲಿಕಾನ್ ಸಿಟಿ ಬೆಂಗಳೂರು ಸೇರಿದಂತೆ ರಾಜ್ಯದಲ್ಲಿ ಬೆಲೆ ಏರಿಕೆ ಪರ್ವ ಶುರುವಾಗಿದೆ. ಖಾಸಗಿ ಶಾಲೆಗಳು ಗುಟ್ಟಾಗಿ ಶುಲ್ಕ ಏರಿಕೆ ಮಾಡಿಕೊಂಡಿವೆ. ಮನಸಿಗೆ ಬಂದಹಾಗೆ ಶುಲ್ಕ ಏರಿಕೆ ಮಾಡಿದ್ರಿಂದ ಪೋಷಕರು ಸಂಕಷ್ಟಕ್ಕೆ ಒಳಗಾಗಿದ್ದಾರೆ. ಇದೀಗ ಶಿಕ್ಷಣ ಇಲಾಖೆ ಖಾಸಗಿ ಶಾಲಾ ಆಡಳಿತ ಮಂಡಳಿಗೆ ಶಾಕ್ ಕೊಟ್ಟಿದೆ. ಖಾಸಗಿ ಶಾಲೆಗಳ ದಾಖಲಾತಿಗಾಗಿ ಶಿಕ್ಷಣ ಇಲಾಖೆ ಹೊಸ ನಿಯಮಗಳನ್ನು ಬಿಡುಗಡೆ ಮಾಡಿದೆ. ಈ ಮೂಲಕ ಮೊದಲಿದ್ದ ಕೆಲವು ನಿಯಮಗಳಿಗೆ ಬ್ರೇಕ್ ಹಾಕಿದೆ.
ಇದನ್ನೂ ಓದಿ: ರಾಜಸ್ಥಾನ್ ವಿರುದ್ಧ ಡೆಲ್ಲಿಗೆ ಗೆಲುವು – ಸೂಪರ್ ಓವರ್ನಲ್ಲಿ ಪಂದ್ಯ ಗೆಲ್ಲಿಸಿಕೊಟ್ಟ ಕನ್ನಡಿಗ!
ಖಾಸಗಿ ಶಾಲೆಗಳಲ್ಲಿ ಮಕ್ಕಳ ದಾಖಲಾತಿಗೆ ಫೋಷಕರು ಕೂಡ ಪರೀಕ್ಷೆ ಬರೆಯಬೇಕು. ಪೋಷಕರು ಉತ್ತಮ ಅಂಕ ಗಳಿಸಿದ್ರೆ ಮಾತ್ರ ಮಕ್ಕಳ ದಾಖಲಾತಿ ಮಾಡಲಾಗುತ್ತಿತ್ತು. ಇದೀಗ ದಾಖಲಾತಿ ಹೆಸರಲ್ಲಿ ಮಕ್ಕಳು, ಪೋಷಕರಿಗೆ ಕೊಡುತ್ತಿದ್ದ ಕಿರುಕುಳ, ಮಕ್ಕಳನ್ನು ದಾಖಲಾತಿ ಮಾಡಿಕೊಳ್ಳಲು ಪೋಷಕರಿಗೆ ಎಕ್ಸಾಂ ಹಾಗೂ ಮನಸೋ ಇಚ್ಛೆ ಫೀಸ್ ಕೇಳುತ್ತಿದ್ದ ನಿಯಮಗಳಿಗೆ ಇದೀಗ ಶಿಕ್ಷಣ ಇಲಾಖೆ ಕಡಿವಾಣ ಹಾಕಿದೆ.
ಇನ್ಮುಂದೆ ಶಾಲೆಯವರು ಪೋಷಕರಿಗೆ ಸಂದರ್ಶನ ಮಾಡುವಂತಿಲ್ಲ. ಮನಸೋ ಇಚ್ಛೆ ಶುಲ್ಕ ನಿಗದಿ ಮಾಡುವಂತೆಯೂ ಇಲ್ಲ. ಫೀಸ್ ಫಿಕ್ಸ್ ಮಾಡೋದಕ್ಕೂ ಕೂಡ ಇದೀಗ ಸರ್ಕಾರ ಹೊಸ ನಿಯಮ ಘೋಷಣೆ ಮಾಡಿದ್ದು, ಕಡ್ಡಾಯವಾಗಿ ಖಾಸಗಿ ಶಾಲೆಗಳು ನಿಯಮವನ್ನು ಪಾಲನೆ ಮಾಡಬೇಕು ಎಂದು ಎಚ್ಚರಿಕೆ ನೀಡಿದೆ. ನಿಯಮ ಪಾಲನೆ ಮಾಡದಿದ್ದಲ್ಲಿ ಅಂತಹ ಶಾಲೆಗಳ ಮೇಲೆ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ವಾರ್ನಿಂಗ್ ನೀಡಿದೆ.
ಖಾಸಗಿ ಶಾಲೆಗಳಿಗೆ ರೂಲ್ಸ್ ಏನು?
- ಶಾಲಾ ಪ್ರವೇಶಕ್ಕಾಗಿ ವಿದ್ಯಾರ್ಥಿಯನ್ನಾಗಲಿ ಅಥವಾ ಅವರ ಪೋಷಕರನ್ನಾಗಲಿ ಪರೀಕ್ಷಿಸುವಂತಿಲ್ಲ
- ಪೋಷಕರು ಅಥವಾ ವಿದ್ಯಾರ್ಥಿಗಳಿಗೆ ಸಂದರ್ಶನ ಮಾಡುವಂತಿಲ್ಲ.
- ಶಾಲೆಗಳು ತಮ್ಮ ಶಾಲಾ ಶುಲ್ಕವನ್ನು ಕಡ್ಡಾಯವಾಗಿ ನೋಟಿಸ್, ಶಾಲಾ ಜಾಲತಾಣ, ಎಸ್‌ಎಟಿಎಸ್‌ನಲ್ಲಿ ಪ್ರಕಟಿಸಬೇಕು.
- ಶುಲ್ಕದ ಸಂಪೂರ್ಣ ಮಾಹಿತಿಯನ್ನು ಶಾಲೆಯ ಮಾಹಿತಿ ಪುಸ್ತಕದಲ್ಲಿ ಮುದ್ರಿಸಬೇಕು.
- ಶಾಲಾ ಆಡಳಿತ ಮಂಡಳಿಯೂ ತಾವು ಅಧಿಸೂಚಿಸಿದ ಶುಲ್ಕವನ್ನು ಹೊರತುಪಡಿಸಿ ವಿದ್ಯಾರ್ಥಿಗಳು ಅಥವಾ ಪೋಷಕರಿಂದ ಇತರೇ ಯಾವುದೇ ಶುಲ್ಕ ಪಡೆಯುವಂತೆ ಇಲ್ಲ.
- ಖಾಸಗಿ ಶಾಲೆಗಳು ಕಡ್ಡಾಯವಾಗಿ 25% ಆರ್‌ಟಿಇ ಸೀಟು ಮೀಸಲಿಡಬೇಕು.
- ಎಸ್‌ಸಿ-ಎಸ್‌ಟಿ ವರ್ಗದ ಆಡಳಿತ ಮಂಡಳಿಯ ಶಾಲೆಗಳಲ್ಲಿ ಕಡ್ಡಾಯ 50% ಎಸ್‌ಸಿ-ಎಸ್‌ಟಿ ವಿದ್ಯಾರ್ಥಿಗಳು ಇರಬೇಕು.
- ಸಹ ಶಿಕ್ಷಣ ಹೊಂದಿರುವ ಶಾಲೆಗಳಲ್ಲಿ ಕಡ್ಡಾಯವಾಗಿ ಮೀಸಲಾತಿ ಅನ್ವಯ ಒಟ್ಟು ಪ್ರದೇಶದಲ್ಲಿ 50% ಹೆಣ್ಣುಮಕ್ಕಳಿಗೆ ಕಡ್ಡಾಯವಾಗಿ ನೀಡಬೇಕು.