RCB ಬೆಸ್ಟ್ ಪಿಕ್ ಟಿಮ್ ಡೇವಿಡ್ – ವಿಲ್ ಜಾಕ್ಸ್ ರನ್ನೇ ಸೈಡ್ ಹೊಡೆದ್ರಾ?

RCB ಬೆಸ್ಟ್ ಪಿಕ್ ಟಿಮ್ ಡೇವಿಡ್ – ವಿಲ್ ಜಾಕ್ಸ್ ರನ್ನೇ ಸೈಡ್ ಹೊಡೆದ್ರಾ?

ಕ್ರಿಕೆಟ್​ನಲ್ಲಿ ಡೆತ್ ಓವರ್ ಅನ್ನೋದು ಮೋಸ್ಟ್ ಇಂಪಾರ್ಟೆಂಟ್. ಬೌಲಿಂಗ್ ಇರ್ಲಿ ಅಥವಾ ಬ್ಯಾಟಿಂಗ್ ಇರ್ಲಿ. ಕೊನೇ ಓವರ್​ಗಳಲ್ಲಿ ಬರೋ ವಿಕೆಟ್ಸ್ ಮತ್ತು ರನ್ಸ್ ಕ್ರೂಶಿಯಲ್ ಆಗುತ್ತೆ. ಹಾಗೇ ಗೇಮ್ ಚೇಂಜಿಂಗ್ ಇಂಪ್ಯಾಕ್ಟ್ ಮಾಡುತ್ತೆ. ಸದ್ಯ ಆರ್​ಸಿಬಿಯಲ್ಲಿ ಇಂಥಾದ್ದೊಂದು ಎಫೆಕ್ಟಿವ್ ಪರ್ಫಾಮೆನ್ಸ್ ಕೊಡ್ತಿರೋದು ಟಿಮ್ ಡೇವಿಡ್. ಆಸ್ಟ್ರೇಲಿಯಾ ಮೂಲದ ಪವರ್ ಹಿಟ್ಟರ್ ಟಿಮ್ ಡೇವಿಡ್ ಡೆತ್ ಓವರ್​ ಸ್ಪೆಷಲಿಸ್ಟ್ ಅಂದ್ರೂ ತಪ್ಪಾಗಲ್ಲ. ಲಾಸ್ಟ್ ಮೂಮೆಂಟ್​ನಲ್ಲಿ ಬ್ಯಾಟಿಂಗ್​ಗೆ ಬಂದ್ರೂ ಎಫೆಕ್ಟಿವ್ ಬ್ಯಾಟಿಂಗ್ ಮಾಡ್ತಾರೆ. ಇದೇ ಕಾರಣಕ್ಕೆ ಆರ್​ಸಿಬಿ ಫ್ಯಾನ್ಸ್ ಎಲ್ರೂ ಟಿಮ್ ಡೇವಿಡ್ ಆಟಕ್ಕೆ ಫಿದಾ ಆಗಿದ್ದಾರೆ.

ಇದನ್ನೂ ಓದಿ : RCB Vs PBKS.. ಪ್ಲಸ್ & ಮೈನಸ್ – ಟಾಸ್ ಗೆದ್ದವ್ರಿಗೇನಾ ಚಿನ್ನಸ್ವಾಮಿ ಗೆಲುವು?

ಕಳೆದ ನವೆಂಬರ್​ನಲ್ಲಿ ನಡೆದಿದ್ದ  ಐಪಿಎಲ್ ಮೆಗಾ ಹರಾಜಿನಲ್ಲಿ ಆರ್​ಸಿಬಿಯಲ್ಲಿದ್ದ ವಿಲ್ ಜಾಕ್ಸ್​ರನ್ನ ಮುಂಬೈ ಇಂಡಿಯನ್ಸ್ ಖರೀದಿ ಮಾಡಿತ್ತು. ಇಂಗ್ಲೆಂಡ್ ಆಲ್‌ರೌಂಡರ್ ವಿಲ್ ಜ್ಯಾಕ್ಸ್ ಅವರನ್ನು ₹5.25 ಕೋಟಿಗೆ ಖರೀದಿ ಮಾಡಿತ್ತು. ಬಟ್ ಈ ಟೈಮಲ್ಲಿ ಆರ್​ಸಿಬಿ ಬಳಿ ಆರ್ ಟಿಎಂ ಅಂದ್ರೆ ರೈಟ್ ಟು ಮ್ಯಾಚ್ ಕಾರ್ಡ್ ಇದ್ರೂ ಬಳಸಿರಲಿಲ್ಲ. ಜಾಕ್ಸ್​ರನ್ನ ಈಸಿಯಾಗಿ ಬಿಟ್ಟುಕೊಟ್ಟಿತ್ತು. ಈ ವೇಳೆ ಖುಷಿಯಾಗಿದ್ದ ಮುಂಬೈ ಫ್ರಾಂಚೈಸಿ ಮಾಲೀಕರು ಆರ್​​ಸಿಬಿ ಫ್ರಾಂಚೈಸಿ ಪೋಡಿಯಂ ಬಳಿ ಬಂದು ಆರ್​ಟಿಎಂ ಕಾರ್ಡ್ ಬಳಕೆ ಮಾಡದೇ ಇದ್ದಿದ್ದಕ್ಕೆ ಕೈ ಕುಲುಕಿ ಥ್ಯಾಂಕ್ಸ್ ಅಂತಾ ಹೇಳಿದ್ರು. ಹಾಗೇ ಅದೇ ಹರಾಜಿನಲ್ಲೇ  ರಾಯಲ್ ಚಾಲೆಂಜರ್ಸ್ ಬೆಂಗಳೂರು ಮಾಲೀಕರು ಟಿಮ್ ಡೇವಿಡ್ ಅವರನ್ನು ₹3 ಕೋಟಿಗೆ ತಂಡಕ್ಕೆ ರೀ ಜಾಯ್ನ್ ಮಾಡಿಸಿಕೊಂಡಿದ್ರು. ಅಲ್ಲಿಗೆ ಆರ್​ಸಿಬಿಯಲ್ಲಿ ಜಾಕ್ಸ್ ಮುಂಬೈ ಸೇರಿದ್ರು. ಮುಂಬೈನಲ್ಲಿದ್ದ ಟಿಮ್ ಡೇವಿಡ್ ಆರ್​ಸಿಬಿ ಪಾಲಾದ್ರು. ಸೋ ಇದೊಂಥರಾ ಎಕ್ಸ್​ಚೇಂಜ್ ಆಕ್ಷನ್ ನಂತಿತ್ತು. ಇದೀಗ ಇದೇ ಇಬ್ಬರು ಆಟಗಾರರಲ್ಲಿ ಯಾರು ಬೆಸ್ಟ್ ಅನ್ನೋ ಚರ್ಚೆ ನಡೀತಿದೆ.

ವಿಶ್ವದ ಅತ್ಯಂತ ಬೇಡಿಕೆಯ T20 ಫಿನಿಷರ್‌ಗಳಲ್ಲಿ ಒಬ್ಬರೆಂದು ಖ್ಯಾತಿ ಪಡೆದಿರೋ ಡೇವಿಡ್ 2021 ರಲ್ಲಿ  ಆರ್​ಸಿಬಿ ಮೂಲಕವೇ ಐಪಿಎಲ್​ಗೆ ಪದಾರ್ಪಣೆ ಮಾಡಿದ್ರು. ಬಟ್ ಮುಂಬೈ ಇಂಡಿಯನ್ಸ್ 2022 ರ ಮೆಗಾ ಹರಾಜಿನಲ್ಲಿ 8.25 ಕೋಟಿ ಕೊಟ್ಟು ತಂಡಕ್ಕೆ ಖರೀದಿ ಮಾಡಿದ್ರು. ಯಾಕಂದ್ರೆ ಮೊದಲ ಸೀಸನ್​ನಲ್ಲೇ ಟಿಮ್ ಡೇವಿಡ್ 200 ಕ್ಕಿಂತ ಹೆಚ್ಚು ಸ್ಟ್ರೈಕ್ ರೇಟ್ ಹೊಂದಿದ್ದರು. ಅದ್ರಲ್ಲೂ ಸನ್ ರೈಸರ್ಸ್ ಹೈದರಾಬಾದ್ ವಿರುದ್ಧ 18 ಎಸೆತಗಳಲ್ಲಿ 46 ರನ್ ಗಳಿಸಿ ಪಂದ್ಯವನ್ನು ಗೆಲ್ಲುವ ಮೂಲಕ ಅತ್ಯುತ್ತಮ ಪ್ರದರ್ಶನ ನೀಡಿದ್ದರು. ಇನ್ನು ವಿಲ್ ಜಾಕ್ಸ್ 2024ರಲ್ಲಿ ಆರ್​ಸಿಬಿ ಪರ ಅಧ್ಭುತ ಪ್ರದರ್ಶನ ನೀಡಿದ್ರು. ಗುಜರಾತ್ ಟೈಟಾನ್ಸ್ ವಿರುದ್ಧ 41 ಎಸೆತಗಳಲ್ಲೇ ಶತಕ ಸಿಡಿಸಿ ಮಿಂಚಿದ್ರು. ಹಾಗೇ 8 ಪಂದ್ಯಗಳನ್ನ ಆಡಿ 32.86 ಸರಾಸರಿಯಲ್ಲಿ 230 ರನ್ ಗಳಿಸಿದರು. ಆದ್ರೆ ಫ್ರಾಂಚೈಸಿ ಅವ್ರನ್ನ ಬಿಟ್ಟುಕೊಟ್ಟಿತ್ತು. ಇದೀಗ 2025ರ ಸೀಸನ್​ನಲ್ಲಿ ಈ ಇಬ್ಬರೂ ಆಟಗಾರರು ತಮ್ಮ ತಮ್ಮ ತಂಡಗಳ ಪರ ಕಣಕ್ಕಿಳಿಯುತ್ತಿದ್ದಾರೆ.

ಆರ್ ಸಿಬಿ ಪರ ಈ ಸೀಸನ್​ನಲ್ಲಿ ಸಾಲಿಡ್ ಪರ್ಫಾಮೆನ್ಸ್ ಕೊಡ್ತಿರೋ ಟಿಮ್ ಡೇವಿಡ್ ಕೊನೇ ಓವರ್​ಗಳಲ್ಲಿ ಹೆಚ್ಚೆಚ್ಚು ಸ್ಕೋರ್ ಮಾಡ್ತಿದ್ದಾರೆ. ಕೆಕೆಆರ್ ವಿರುದ್ಧದ ಮ್ಯಾಚಲ್ಲಿ ಬ್ಯಾಟಿಂಗ್ ಮಾಡಿರಲಿಲ್ಲ. ಆ ಬಳಿಕ ಸಿಎಸ್​ಕೆ ವಿರುದ್ಧದ ಮ್ಯಾಚಲ್ಲಿ 8 ಎಸೆತಗಳಲ್ಲೇ 22 ರನ್ ಬಾರಿಸಿದ್ರು. ಇನ್ನು ಗುಜರಾತ್ ವಿರುದ್ಧ 18 ಎಸೆತಗಳಲ್ಲಿ 32 ರನ್ ಸಿಡಿಸಿದ್ರು. ಇನ್ನು ಮುಂಬೈ ವಿರುದ್ಧ 1 ರನ್ ಗಳಿಸಿ ಅಜೇಯರಾಗಿದ್ರು. ಹಾಗೇ ಡೆಲ್ಲಿ ವಿರುದ್ಧದ ಮ್ಯಾಚಲ್ಲಿ 20 ಎಸೆತಗಳಲ್ಲೇ 37 ರನ್ ಚಚ್ಚಿದ್ರು. ಆರ್​ಆರ್ ವಿರುದ್ಧದ ಪಂದ್ಯದಲ್ಲಿ ಬ್ಯಾಟಿಂಗ್ ಮಾಡಿರಲಿಲ್ಲ. ಸೋ ಇಲ್ಲಿ ಆಡಿರುವಂತ 4 ಪಂದ್ಯಗಳಲ್ಲೇ 195.74ರ ಸ್ಟ್ರೈಕ್ ರೇಟ್​ನಲ್ಲಿ 92 ರನ್ ಬಾರಿಸಿದ್ದಾರೆ. ಈ ರನ್ಸ್ ಎಲ್ಲಾ ಕ್ರೂಶಿಯಲ್ ಟೈಮಲ್ಲೇ ಬಂದಿರೋದು ಅನ್ನೋದೇ ಮೋಸ್ಟ್ ಇಂಪಾರ್ಟೆಂಟ್.

ಇನ್ನು ಮುಂಬೈ ಇಂಡಿಯನ್ಸ್ ಪರ ಆಡ್ತಿರೋ ವಿಲ್ ಜಾಕ್ಸ್ ಅಷ್ಟೇನು ಸೌಂಡ್ ಮಾಡ್ತಿಲ್ಲ. ಆಡಿರುವಂಥ 5 ಪಂದ್ಯಗಳಿಂದ 55 ರನ್ ಅಷ್ಟೇ ಗಳಿಸಿದ್ದಾರೆ. ಅದೂ ಕೂಡ 110ರ ಸ್ಟ್ರೈಕ್​ರೇಟ್ ನಲ್ಲಿ. ಆರ್ ಸಿಬಿ ವಿರುದ್ಧ 18 ಎಸೆತಗಳಲ್ಲೇ 22 ರನ್ ಬಾರಿಸಿರೋದೇ ಹೈಯೆಸ್ಟ್ ಸ್ಕೋರ್. ಹೀಗಾಗಿ ವಿಲ್ ಜಾಕ್ಸ್ ಪರ್ಫಾಮೆನ್ಸ್ ನೋಡ್ತಿದ್ರೆ ಟಿಮ್ ಡೇವಿಡ್​ಗಿಂತ ಇಂಪ್ರೆಸ್ಸಿವ್ ಸ್ಕೋರ್ ಏನು ಮಾಡಿಲ್ಲ. ಸೋ ಜಾಕ್ಸ್​ಗಿಂತ ಟಿಮ್ ಡೇವಿಡ್ ಬೆಟರ್ ಅನ್ನಿಸ್ತಿದೆ. ಹೀಗಾಗಿ ಐಪಿಎಲ್ ಹರಾಜಿನಲ್ಲಿ ಮಿಸ್ ಮಾಡಿಕೊಂಡ್ವಿ ಅನ್ಕೊಂಡಿದ್ದ ಸಾಕಷ್ಟು ಫ್ಯಾನ್ಸ್ ಈಗ ನಿರಾಳರಾಗಿದ್ದಾರೆ.

Shantha Kumari

Leave a Reply

Your email address will not be published. Required fields are marked *