ವಿಶ್ವನ ಬಳಿ ಬಂದ ಜಾಹ್ನವಿ.. ಅಜ್ಜಿಯಿಂದಲೇ ಜಾನು ಬಚಾವ್! – ಜಯಂತ್ ಮುಖವಾಡ ರಿವೀಲ್

ಜಯಂತ್ ಸೈಕೋ ವರ್ತನೆಯಿಂದ ಬೇಸತ್ತ ಜಾಹ್ನವಿ ಆತನಿಂದ ಈಗ ದೂರ ಆಗಿದ್ದಾಳೆ. ಬದುಕಿದ್ರೂ ಆಕೆ ಮನೆಯವರ ಮುಂದೆ ಕಾಣಿಸಿಕೊಳ್ಳೋಕೆ ರೆಡಿಯಿಲ್ಲ. ಆದ್ರೆ ಜಯಂತ್ ಮಾತ್ರ ಆಕೆ ಬದುಕಿದ್ದಾಳೆ.. ಚಿನ್ನುಮರಿ ಬಂದೇ ಬರ್ತಾಳೆ. ಅವಳ ಜೊತೆ ಮಾತಾಡ್ಬೇಕು ಅಂತಾ ಹೊರಟಿದ್ದಾನೆ. ಹೀಗಾಗಿ ದಿನೇ ದಿನೇ ಆತ ಸೈಕೋ ಆಗಿ ಬದಲಾಗ್ತಿದ್ದಾನೆ. ಆದ್ರೀಗ ಜಯಂತ್ ಗೆ ಚಿನ್ನುಮರಿ ಬದುಕಿರೋ ಕ್ಲೂ ಸಿಕ್ಕಿದೆ. ಮತ್ತೊಂದ್ಕಡೆ ಜಾಹ್ನವಿ ಅಜ್ಜಿಗೂ ಎಚ್ಚರ ಆಗಿದೆ.
ಇದನ್ನೂ ಓದಿ: ರಾಥಿ ಬಗ್ಗೆ ಜನ ತಪ್ಪು ತಿಳ್ಕೊಂಡ್ರಾ? ಈತ ದುರಂಹಕಾರಿಯಲ್ಲ ಬೆಸ್ಟ್ ಬೌಲರ್
ಲಕ್ಷ್ಮೀ ಬಾರಮ್ಮ ಸೀರಿಯಲ್ ಸ್ಟೋರಿ ಟ್ವಿಸ್ಟ್ ಆಂಡ್ ಟರ್ನ್‌ನಿಂದ ಕೂಡಿದೆ. ಜಾಹ್ನವಿ ಸತ್ತಿದ್ದಾಳೆ ಅಂತಾ ಎಲ್ಲರೂ ಅಂದ್ಕೊಂಡಿದ್ದಾರೆ. ಆದ್ರೆ ಆಕೆ ತನ್ನ ತವರು ಮನೆಗೂ ಬಂದು ಹೋಗಿದ್ದಾಳೆ. ತನ್ನ ಅಜ್ಜಿ ಜೊತೆಯೂ ಮಾತಾಡಿದಾಳೆ. ಅಷ್ಟೇ ಅಲ್ಲ ತನ್ನ ತಾಯಿ ಮುಂದೆಯೂ ಹೋಗಿ ನಿಂತುಕೊಂಡಿದ್ಲು. ಇದನ್ನ ಶ್ರೀನಿವಾಸ್ ಗೆ ಹೇಳೀದಾಗ ಕನಸು ಬಿದ್ದಿರ್ಬೇಕು ಅಂತಾ ಆತ ಹೇಳಿದ್ದ. ಇತ್ತ ಹೆಂಡ್ತಿಯನ್ನ ಕಳ್ಕೊಂಡಿರೋ ಜಯಂತ್ ಈಗ ಸೈಕೋ ಆಗಿದ್ದಾನೆ. ಚಿನ್ನುಮರಿ ಜೊತೆ ಮಾತಾಡ್ಬೇಕು ಅಂತಾ ಲಕ್ಷ್ಮೀ ಮನೆಗೆ ಬಂದಿದ್ದಾನೆ. ಆದ್ರೀಗ ಜಾನು ಬದುಕಿರುವ ಬಗ್ಗೆ ಜಯಂತ್ ಗೆ ದೊಡ್ಡ ಸುಳಿವು ಸಿಕ್ಕಿದೆ.
ಜಾಹ್ನವಿಗೆ ಹಾಲು ತುಪ್ಪ ಕಾರ್ಯ ಮಾಡಿದ್ರು. ಆದ್ರೆ ಜಯಂತ್ ಗೆ ಇದು ಇಷ್ಟ ಇರ್ಲಿಲ್ಲ. ಚಿನ್ನುಮರಿ ಸತ್ತಿಲ್ಲ.. ತನ್ನ ಸುತ್ತಮುತ್ತವೇ ಆಕೆ ಇದ್ದಾಳೆ ಅನ್ನೋದು ಜಯಂತ್ ಬಲವಾದ ನಂಬಿಕೆಯಾಗಿದೆ. ಹೀಗಾಗಿ ಜಾನು ಜೊತೆ ಮಾತಾಡ್ಬೇಕು. ತನ್ನನ್ನ ಬಿಟ್ಟು ಯಾಕೆ ಹೋದ್ರಿ ಅಂತಾ ಕೇಳ್ಬೇಕು ಅಂತಾ ಶಾಂತಮ್ಮನ್ನ ಕರ್ಕೊಂಡು ಮಧ್ಯರಾತ್ರಿ ಲಕ್ಷ್ಮೀ ಮನೆಗೆ ಬಂದಿದ್ದಾನೆ. ಲಕ್ಷ್ಮೀ ಮನೆಗೆ ಬರ್ತಿದ್ದಂತೆ ಚಿನ್ನುಮರಿ ಇರುವಿಕೆಯ ಅನುಭವ ಜಯಂತ್‌ಗೆ ಆಗಿದೆ. ಹಾಲು-ತುಪ್ಪ ಕಾರ್ಯಕ್ರಮದ ಎಡೆಯಲ್ಲಿನ ಆಹಾರ ಖಾಲಿಯಾಗಿರೋದು ಜಯಂತ್ ಅನುಮಾನಕ್ಕೆ ಕಾರಣವಾಗಿತ್ತು.
ಇನ್ನು ಮನೆಗೆ ಬಂದಿದ್ದ ಜಾಹ್ನವಿ ತಂದೆ ತಾಯಿಯನ್ನ ನೋಡಿದ್ದಳು. ನಂತರ ಅಜ್ಜಿಯನ್ನು ಭೇಟಿಯಾಗಿ ತನ್ನೆಲ್ಲಾ ಕಥೆಯನ್ನು ಹೇಳಿಕೊಂಡು ಅಲ್ಲಿಂದ ಹೋಗಿದ್ದಳು. ಅಜ್ಜಿಯೂ ಸಹ ತನಗೆ ಪ್ರಜ್ಞೆ ಬಂದರೂ ಜಯಂತ್ ಭಯದಿಂದ ನಾಟಕ ಮಾಡುತ್ತಿದ್ದೇನೆ. ಆದ್ರೆ ತಾನು ಹುಷಾರು ಆಗಿಲ್ಲ ಅಂತ ಮಗ ತುಂಬಾ ಹಣ ಖರ್ಚು ಮಾಡುತ್ತಿದ್ದಾನೆ. ಅದನ್ನು ನೋಡಿ ನನಗೆ ನೋವು ಆಗುತ್ತಿದೆ ಎಂದು ಅಜ್ಜಿ ಕಣ್ಣೀರು ಹಾಕಿದ್ದಾಳೆ. ಇದಕ್ಕೆ ಏನಾದ್ರೂ ಒಂದು ವ್ಯವಸ್ಥೆ ಮಾಡೋಣ. ನಮ್ಮ ಸುರಕ್ಷತೆಯಲ್ಲಿ ನಾವಿರಬೇಕು. ಜಯಂತ್ ಎಲ್ಲೆಲ್ಲಿ ಕ್ಯಾಮೆರಾ ಇರಿಸುತ್ತಾರೆ ಎಂದು ಗೊತ್ತಿರಲ್ಲ. ನಾನು ಹೇಳುವರೆಗೂ ಪ್ರಜ್ಞೆ ಇಲ್ಲದಂತೆ ಆಕ್ಟ್ ಮಾಡು ಅಂತಾ ಜಾನು ಹೇಳಿದ್ದಾಳೆ.
ಮತ್ತೊಂದ್ಕಡೆ ಲಕ್ಷ್ಮೀ ಮನೆಗೆ ಬಂದಿರೋ ಜಯಂತ್ ಮನೆ ತುಂಬಾ ಓಡಾಡಿದ್ದಾನೆ. ಚಿನ್ನುಮರಿ ಬಂದಿರೋ ಬಗ್ಗೆ ಏನಾದ್ರೂ ಕ್ಲೂ ಸಿಗುತ್ತಾ ಅಂತಾ ಹುಡುಕಿದ್ದಾನೆ. ಅಜ್ಜಿ ರೂಮ್ ಗೆ ಬಂದು ನೋಡಿದಾಗ ಆತನಿಗೆ ಜಾನು ಕಾಲ್ಗೆಜ್ಜೆ ಸಿಕ್ಕಿದೆ. ತನ್ನ ಚಿನ್ನುಮರಿ ಸತ್ತಿಲ್ಲ ಎಂದು ಖಚಿತಪಡಿಸಿಕೊಂಡಿದ್ದಾನೆ. ಹೀಗಾಗಿ ಆತ ಮಾವನ ಮನೆಯಲ್ಲೇ ಉಳ್ಕೊಂಡಿದ್ದ. ಬೆಳಗ್ಗೆ ಹೊರಡುವಾಗ ಪಕ್ಕದ್ಮನೆ ಹುಡುಗ, ಜಯಂತ್ ಅಂಕಲ್… ಜಾನು ಅಕ್ಕ ಎಲ್ಲಿ ಎಂದು ಕೇಳುತ್ತಾನೆ. ಇದಕ್ಕೆ ದುಃಖದಿಂದ ಜಾನು ತನ್ನೊಂದಿಗೆ ಇಲ್ಲ ಎಂಬ ವಿಷಯವನ್ನು ಹೇಳಿದ್ದಾನೆ. ಜಯಂತ್ ಮಾತಿಗೆ ಆ ಹುಡುಗ ನಗುತ್ತಾ, ನಾನು ನಿನ್ನೆ ರಾತ್ರಿಯಷ್ಟೇ ಜಾನು ಅಕ್ಕಳನ್ನ ನೋಡಿದ್ದೆ. ನನಗೆ ಚಾಕ್ಲೆಟ್ ನೀಡಿ ಚೆನ್ನಾಗಿ ಓದಬೇಕು ಎಂದು ಹೇಳಿದ್ದಾಳೆ. ಸುಳ್ಳು ಹೇಳಬೇಡಿ ಎಂದು ಹೇಳುತ್ತಾನೆ. ಈ ಮಾತನ್ನು ಕೇಳಿದ ಜಯಂತ್, ಚಿನ್ನುಮರಿ ಬದುಕಿರೋದನ್ನು ಖಚಿತಪಡಿಸಿಕೊಂಡಿದ್ದಾನೆ. ಇತ್ತ ಆ ಹುಡುಗನ ಮಾತು ಕೇಳಿ ಕಾರ್‌ನಲ್ಲಿ ಕುಳಿತಿದ್ದ ಶಾಂತಮ್ಮ ಕಂಗಾಲು ಆಗಿದ್ದಾಳೆ. ಇದೀಗ ಜಾಹ್ನವಿ ಈಗ ಹೊರಟಿದ್ದು ಎಲ್ಲಿಗೆ? ಮುಂದೇನು ಮಾಡ್ತಾಳೆ ಅನ್ನೋ ಕುತೂಹಲ ವೀಕ್ಷಕರನ್ನ ಕಾಡ್ತಿದೆ.
ಜಾಹ್ನವಿ ಈಗ ವಿಶ್ವನ ಸಹಾಯ ಪಡೆದು ಜಯಂತ್ ಒಂದೊಂದೇ ಕೃತ್ಯವನ್ನ ಬಯಲು ಮಾಡ್ಬೋದು. ಆತನಿಗೆ ಸರಿಯಾಗಿ ಬುದ್ದಿ ಕಲಿಸಬಹುದು. ಜಯಂತ್ ನ ಪಂಜರದಿಂದ ಬಿಡಿಸಿಕೊಂಡು ಬರಲು ಅಜ್ಜಿಯೇ ಆಕೆಗೆ ಸಹಾಯ ಮಾಡ್ಬೋದು. ಅಂತಾ ವೀಕ್ಷಕರು ಕಾಮೆಂಟ್ ಮಾಡ್ತಿದ್ದಾರೆ.