ರಾಥಿ ಬಗ್ಗೆ ಜನ ತಪ್ಪು ತಿಳ್ಕೊಂಡ್ರಾ? ಈತ ದುರಂಹಕಾರಿಯಲ್ಲ ಬೆಸ್ಟ್ ಬೌಲರ್
ದಿಗ್ವೇಶ್ ಗೆ ಟೀಂ ಇಂಡಿಯಾದಲ್ಲಿ ಚಾನ್ಸ್?

ರಾಥಿ ಬಗ್ಗೆ ಜನ ತಪ್ಪು ತಿಳ್ಕೊಂಡ್ರಾ? ಈತ ದುರಂಹಕಾರಿಯಲ್ಲ ಬೆಸ್ಟ್ ಬೌಲರ್ದಿಗ್ವೇಶ್ ಗೆ ಟೀಂ ಇಂಡಿಯಾದಲ್ಲಿ ಚಾನ್ಸ್?

ದಿಗ್ವೇಶ್ ರಾಥಿ  ಲಕ್ನೋ ಸೂಪರ್ ಜೈಂಟ್ಸ್‌ಗಾಗಿ ಆಡುತ್ತಿದ್ದಾರೆ. ಆರಂಭದಲ್ಲಿ ಇವನ ಬಗ್ಗೆ ಜನಕ್ಕೆ ಒಳ್ಳೆಯ ಅಭಿಪ್ರಾಯ ಇರಲಿಲ್ಲ.  ಒಮ್ಮೆ ಅವರು ವಿಕೆಟ್‌ ಕಬಳಿಸಿ ಸೈನ್ ಹಾಕೋ ರೀತಿಯಲ್ಲಿ ಸೆಲೆಬ್ರೇಷನ್‌ ಮಾಡಿದ್ದರು. ಕೆಲವರು ಇದನ್ನು ಅತಿಯಾದ ಮನೋಭಾವ ಎಂದು ಭಾವಿಸಿದರು. ಈ ಕಾರಣದಿಂದ ಅವನಿಗೆ ಒಂದು ಪಂದ್ಯದ ಶುಲ್ಕದಲ್ಲಿ ಕಡಿತವಾಯಿತು. 2ನೇ ಬಾರಿ ಕೂಡ ಅದೇ ತಪ್ಪು ಮಾಡಿದ್ರು.  ಜನರು ಅವನನ್ನು ರಿಯಾನ್ ಪರಾಗ್‌ನಂತೆ ತಪ್ಪಾಗಿ ತಿಳಿದರು. ಆದರೆ, ದಿಗ್ವೇಶ್‌ನ ವರ್ತನೆಯಲ್ಲಿ ತಮಾಷೆ ಮತ್ತು ಆತ್ಮವಿಶ್ವಾಸವಿತ್ತು, ದುರಹಂಕಾರವಿರಲಿಲ್ಲ.

ಈ ಸೀಸನ್‌ನಲ್ಲಿ ದಿಗ್ವೇಶ್ ರಾಥಿ ತಮ್ಮ ಬೌಲಿಂಗ್‌ನಿಂದ ಎಲ್ಲರನ್ನೂ ಆಕರ್ಷಿಸಿದ್ದಾರೆ. ಇವರು 7 ಪಂದ್ಯಗಳಲ್ಲಿ 28 ಓವರ್‌ಗಳನ್ನು ಬೌಲ್ ಮಾಡಿದ್ದಾರೆ. ಇದರಲ್ಲಿ 9 ವಿಕೆಟ್‌ಗಳನ್ನು ತೆಗೆದಿದ್ದಾರೆ. ಇವರ ಎಕಾನಮಿ ಕೇವಲ 7.43. ಇದು ಒಬ್ಬ ಯುವ ಬೌಲರ್‌ಗೆ ದೊಡ್ಡ ಸಾಧನೆ. ದಿಗ್ವೇಶ್ ಕೇವಲ 30 ಲಕ್ಷ ರೂ.ಗೆ ತಂಡಕ್ಕೆ ಸೇರಿದ್ದರು. ಈ ಮೊತ್ತಕ್ಕೆ ಇಂತಹ ಪ್ರದರ್ಶನ ನಿಜಕ್ಕೂ ಗ್ರೇಟ್ .

ದಿಗ್ವೇಶ್ ಆರಂಭದಲ್ಲಿ ಅತಿಯಾಗಿ ವರ್ತಿಸಿದರೂ, ಇವನ ಆಟದಲ್ಲಿ ಗಂಭೀರತೆ ಇದೆ. ಇವನ ಬೌಲಿಂಗ್‌ನಲ್ಲಿ ವೇಗ, ನಿಯಂತ್ರಣ, ಮತ್ತು ಚಾಣಾಕ್ಷತನ ಇದೆ. ಒತ್ತಡದ ಸಂದರ್ಭದಲ್ಲಿ ಕೂಡ ಶಾಂತವಾಗಿ ಆಡುತ್ತಾನೆ. ಕೆಲವು ಪಂದ್ಯಗಳಲ್ಲಿ ದೊಡ್ಡ ಆಟಗಾರರ ವಿಕೆಟ್ ತೆಗೆದಿದ್ದಾನೆ. ಅವನ ತಮಾಷೆಯ ವರ್ತನೆಯ ಹಿಂದೆ ಒಂದು ಆತ್ಮವಿಶ್ವಾಸ ಇದೆ. ಇದು ಆಟಗಾರನಿಗೆ ಸಹಜ.

ಲಕ್ನೋ ಸೂಪರ್ ಜೈಂಟ್ಸ್ ಈ ಸೀಸನ್‌ಲಲ್ಿ ಒಳ್ಳೆಯ ಆಟ ಆಡುತ್ತಿದೆ. ಒಟ್ಟು 7 ಪಂದ್ಯಗಳಲ್ಲಿ 4 ಗೆಲುವು ಮತ್ತು 3 ಸೋಲುಗಳೊಂದಿಗೆ 8 ಅಂಕ ಗಳಿಸಿದೆ. ಲೀಗ್ ಪಟ್ಟಿಯಲ್ಲಿ ತಂಡ 4ನೇ ಸ್ಥಾನದಲ್ಲಿದೆ. ದಿಗ್ವೇಶ್ ರಾಥಿಯ ಬೌಲಿಂಗ್ ತಂಡಕ್ಕೆ ದೊಡ್ಡ ಶಕ್ತಿಯಾಗಿದೆ. ಅವನ ಜೊತೆಗೆ ರವಿ ಬಿಷ್ಣೋಯ್ ಮತ್ತು ಶಿವಂ ಮಾವಿ ಕೂಡ ಚೆನ್ನಾಗಿ ಬೌಲಿಂಗ್ ಮಾಡುತ್ತಿದ್ದಾರೆ.

ದಿಗ್ವೇಶ್ ರಾಥಿಯ ಆಟವನ್ನು ನೋಡಿದರೆ, ಇವರಿಗೆ ದೊಡ್ಡ ಭವಿಷ್ಯ ಇದೆ. ಒಂದು ವೇಳೆ ಈ ಐಪಿಎಲ್‌ಸೀಸನ್‌ನಲ್ಲಿ  ಳಿದ ಪಂದ್ಯಗಳಲ್ಲಿ ಇದೇ ರೀತಿ ಆಡಿದರೆ, ಭಾರತ ತಂಡಕ್ಕೆ ಸೇರ್ಪಡೆಯಾಗಬಹುದು. ಇವರ ಆತ್ಮವಿಶ್ವಾಸ, ಕೌಶಲ್ಯ, ಮತ್ತು ಒತ್ತಡದಲ್ಲಿ ಆಡುವ ಸಾಮರ್ಥ್ಯ ಇದಕ್ಕೆ ಕಾರಣ. ಆರಂಭದ ಟೀಕೆಯನ್ನು ಮೀರಿ, ಈಗ ಜನ ಅವನನ್ನು ಒಬ್ಬ ಉಗಮದ ತಾರೆ ಎಂದು ಗುರುತಿಸುತ್ತಿದ್ದಾರೆ.

ಈಗಿನ ಪೀಳಿಗೆಯ ಕ್ರಿಕೆಟಿಗರು ತಮ್ಮ ಆಟದ ಜೊತೆಗೆ ವರ್ತನೆಯಿಂದಲೂ ಗಮನ ಸೆಳೆಯುತ್ತಾರೆ. ಕೆಲವೊಮ್ಮೆ ಇದನ್ನು ಜನ ತಪ್ಪಾಗಿ ತಿಳಿಯುತ್ತಾರೆ. ಆದರೆ, ದಿಗ್ವೇಶ್‌ನಂತಹ ಆಟಗಾರರು ತಮ್ಮ ಕೌಶಲ್ಯದಿಂದ ಟೀಕೆಗೆ ಉತ್ತರ ಕೊಡುತ್ತಾರೆ. ಒಬ್ಬ ಆಟಗಾರನ ಆತ್ಮವಿಶ್ವಾಸ ಆಟದಲ್ಲಿ ದೊಡ್ಡ ಬದಲಾವಣೆ ತರುತ್ತದೆ. ದಿಗ್ವೇಶ್ ಇದಕ್ಕೆ ಬೆಸ್ಟ್ ಎಕ್ಸಾಂಪಲ್‌..

Kishor KV

Leave a Reply

Your email address will not be published. Required fields are marked *