RCB Vs PBKS.. ಪ್ಲಸ್ & ಮೈನಸ್ – ಟಾಸ್ ಗೆದ್ದವ್ರಿಗೇನಾ ಚಿನ್ನಸ್ವಾಮಿ ಗೆಲುವು?

RCB Vs PBKS.. ಪ್ಲಸ್ & ಮೈನಸ್ – ಟಾಸ್ ಗೆದ್ದವ್ರಿಗೇನಾ ಚಿನ್ನಸ್ವಾಮಿ ಗೆಲುವು?

ಪಂಜಾಬ್ ಟೀಂ ಈ ಸಲ ಸಾಲಿಡ್ ಆಗಿದೆ. ಏಪ್ರಿಲ್ 12ರಂದು ಹೈದ್ರಾಬಾದ್ ವಿರುದ್ಧ 245 ರನ್ ಹೊಡೆದ್ರೂ ಅದನ್ನ ಡಿಫೆನ್ಸ್ ಮಾಡಿಕೊಳ್ಳೋಕೆ ಆಗಿರಲಿಲ್ಲ. ಇನ್ನೂ 9 ಬಾಲ್ ಇರುವಾಗ್ಲೇ ಸೋತಿದ್ರು. ಆದ್ರೀಗ ಅದೇ ಪಂಜಾಬ್ ಬರೀ 111 ರನ್ ಸ್ಕೋರ್ ಮಾಡಿ ಅದನ್ನ ಡಿಫೆನ್ಸ್ ಮಾಡ್ಕೊಂಡಿದ್ದಾರೆ. ಅದೂ ಹೆಂಗೆ ಚಾಂಪಿಯನ್ ಟೀಂ ಕೆಕೆಆರ್​ನ ಜಸ್ಟ್ 95 ರನ್​​ಗಳಿಗೆ ಆಲೌಟ್ ಮಾಡೋ ಮೂಲಕ. ಸೋ ಪಂಜಾಬ್​ನಲ್ಲಿ ಬ್ಯಾಟಿಂಗ್ ಮಾಡೋಕೂ ಬರುತ್ತೆ. ಕಡಿಮೆ ಸ್ಕೋರ್​ನ ಡಿಫೆನ್ಸ್ ಮಾಡಿಕೊಳ್ಳೋಕೂ ಆಗುತ್ತೆ ಅನ್ನೋದನ್ನ ತೋರಿಸಿಕೊಟ್ಟಿದ್ದಾರೆ. ಅದೇ ಕಾನ್ಫಿಡೆನ್ಸ್​ನಲ್ಲೇ ಆರ್​ಸಿಬಿ ವಿರುದ್ಧ ಕಣಕ್ಕಿಳಿಯೋಕೆ ಕಾಯ್ತಿದ್ದಾರೆ. ಸೋ ಪಂಜಾಬ್​ನ ಕಟ್ಟಿ ಹಾಕ್ಬೇಕು ಅಂದ್ರೆ ರೆಡ್ ಆರ್ಮಿಯಲ್ಲಿ ಒಂದಷ್ಟು ತಪ್ಪುಗಳನ್ನ ತಿದ್ದಿಕೊಳ್ಬೇಕು.

ಇದನ್ನೂ ಓದಿ :  ಚಹಲ್‌ ಚಮತ್ಕಾರ – ಪಂಜಾಬ್‌ಗೆ ರೋಚಕ 16 ರನ್‌ಗಳ ಜಯ

ಯೆಸ್. ಫಸ್ಟ್ ಬ್ಯಾಟಿಂಗ್ ಇರ್ಲಿ ಅಥವಾ ಚೇಸಿಂಜ್ ಇರ್ಲಿ ಒಂದು ಮ್ಯಾಚಲ್ಲಿ ಮ್ಯಾಟ್ರ್ ಆಗೋದೇ ಓಪನಿಂಗ್ ಬ್ಯಾಟರ್ಸ್ ಹಾಗೇ ಪವರ್ ಪ್ಲೇ ಸ್ಕೋರ್. ಪವರ್ ಪ್ಲೇನಲ್ಲಿ ಯಾವುದೇ ವಿಕೆಟ್ ಬೀಳದೆ 80+ ರನ್ಸ್ ಬಂತಂದ್ರೆ ನೆಕ್ಸ್​ಟ್ ಬರೋ ಬ್ಯಾಟರ್ಸ್​ಗೆ ಕಂಟಿನ್ಯೂ ಮಾಡೋದು ಈಸಿ ಆಗುತ್ತೆ. ಹಾಗೇ ಫ್ರೆಶರ್ ಇರೋದಿಲ್ಲ.   ಚಿನ್ನಸ್ವಾಮಿ ಮೈದಾನದಲ್ಲಿ ಈ ಕೆಲ್ಸವನ್ನ ಮಾಡ್ಬೇಕಿರೋದು ಫಿಲ್ ಸಾಲ್ಟ್ ಮತ್ತು ವಿರಾಟ್ ಕೊಹ್ಲಿ ಜೋಡಿ. ಈ ಜೋಡಿ ತವರಿನ ಹೊರಗೆ ಬೌಲರ್​ಗಳನ್ನ ಚೆಂಡಾಡಿದ್ದಾರೆ. ಕೊಲ್ಕತ್ತಾ, ರಾಜಸ್ಥಾನದಲ್ಲಿ ಫಿಲ್ ಸಾಲ್ಟ್ ಹಾಗೂ ವಿರಾಟ್ ಬ್ಯಾಟ್​ನಿಂದ ಅರ್ಧಶತಕಗಳು ಸಿಡಿದಿವೆ. ಜೊತೆಗೆ ದೇವದತ್ ಪಡಿಕ್ಕಲ್, ರಜತ್ ಪಟಿದಾರ್ ಅದೇ ಫಾರ್ಮ್​ನಲ್ಲೇ ಕಂಟಿನ್ಯೂ ಮಾಡ್ಬೇಕು. ಬಟ್ ವಿಪರ್ಯಾಸ ಅಂದ್ರೆ ಇವ್ರೆಲ್ಲಾ ಹೊರಗಿನ ಪಿಚ್​​ನಲ್ಲಿ ಪರ್ಫಾಮ್ ಮಾಡ್ತಿದ್ರೂ ಬೆಂಗಳೂರಲ್ಲಿ ಎಡವುತ್ತಿದ್ದಾರೆ. ಆರಂಭದಲ್ಲೇ ಎರಡು ವಿಕೆಟ್ ಬಿದ್ರೆ ನೆಕ್ಸ್​ಟ್ ಬಂದವ್ರೆಲ್ಲಾ ಪರದಾಡ್ತಿದ್ದಾರೆ. ಸೋ ಚಿನ್ನಸ್ವಾಮಿಯಲ್ಲಿ ಫಸ್ಟ್ ಬ್ಯಾಟಿಂಗ್ ಮಾಡಿದ್ರೆ 200+ ಸ್ಕೋರ್ ಮಾಡ್ಲೇಬೇಕಾಗುತ್ತೆ.

ಆರ್​ಸಿಬಿ ಮೇನ್ ಎಡವುತ್ತಾ ಇರೋದೇ ಯಂಗ್​ಸ್ಟರ್ಸ್​ಗೆ ಅವಕಾಶ ಕೊಡದೆ. ಲಿಯಾಮ್ ಲಿವಿಂಗ್ಸ್​ಟನ್ ಒಂದು ಮ್ಯಾಚಲ್ಲಿ ಅರ್ಧಶತಕ ಸಿಡಿಸಿದ್ದು ಬಿಟ್ರೆ ಮತ್ತೆಲ್ಲೂ ಉತ್ತಮ ಪ್ರದರ್ಶನ ನೀಡಿಲ್ಲ. ಸೋ ಇವ್ರ ಬದ್ಲಿಗೆ ಜೇಕಬ್ ಬೆಥೆಲ್ ಅಥವಾ ರೊಮಾರಿಯೋ ಶೆಫರ್ಡ್​​ಗೆ ಚಾನ್ಸ್ ಕೊಡ್ಬೇದು. ಹಾಗೇ ಒಂದು ಪಂದ್ಯದಲ್ಲಾದ್ರೂ ಪಡಿಕ್ಕಲ್​​ನ ಹೊರಗಿಟ್ಟು ಕನ್ನಡಿಗ ಮನೋಜ್ ಬಾಂಡಗೆಗೆ ಅವಕಾಶ ನೀಡೋದು ಒಂದು ರೀತಿ ಬೆಸ್ಟ್ ಚಾಯ್ಸ್. ಬಿಗ್ ಹಿಟ್ಟರ್ ಆಗಿರುವ ಮನೋಜ್​ಗೆ ಸಿಕ್ಸರ್​​ಗಳನ್ನು ಸಿಡಿಸೋ ತಾಕತ್ತಿದೆ. ಬ್ಯಾಟಿಂಗ್​ನಲ್ಲಿ ಗೇಮ್ ಚೇಂಜರ್ ಆಗಬಲ್ಲರು. ಜೊತೆಗೆ ಬೌಲಿಂಗ್​ನಲ್ಲೂ ನೆರವಾಗಬಲ್ಲರು. ಚಿನ್ನಸ್ವಾಮಿ ಮೈದಾನದ ಆಳ-ಅಗಲ ಗೊತ್ತಿರೋ ಮನೋಜ್​ ಪರ್ಫಾಪ್ಟ್​ ಇಂಪ್ಯಾಂಕ್ಟ್​ ಮೂಡಿಸಬಲ್ಲರು. ಹಾಗೇ ಟಿಮ್ ಡೇವಿಡ್ ಗೆ ಕೃನಾಲ್​ಗಿಂತ ಮೊದ್ಲು ಬ್ಯಾಟ್ ಬೀಸೋಕೆ ಅವಕಾಶ ಕೊಡ್ಬೇಕು.

ಜೋಶ್ ಹೇಜಲ್​ವುಡ್ ಆರ್​ಸಿಬಿ ಪರ ಅದ್ಭುತ ಬೌಲಿಂಗ್ ಪ್ರದರ್ಶನ ನೀಡ್ತಿದ್ದಾರೆ ನಿಜ. ಬಟ್ ಅದು ಹೊರಗಿನ ಪಿಚ್​ಗಳಲ್ಲಿ. ಬಟ್ ಚಿನ್ನಸ್ವಾಮಿಯಲ್ಲಿ ದಾರಾಳವಾಗಿ ರನ್ಸ್ ಬಿಟ್ಟುಕೊಡ್ತಿದ್ದಾರೆ. ಬೆಂಗಳೂರಲ್ಲಿ 2 ಮ್ಯಾಚ್​ಗಳಿಂದ 6.5 ಓವರ್ ಬೌಲ್ ಮಾಡಿದ್ದು ಬರೋಬ್ಬರಿ 83 ರನ್ ಬಿಟ್ಟು ಕೊಟ್ಟಿದ್ದಾರೆ. ಒಂದು ವಿಕೆಟ್ ಮಾತ್ರ ಪಡೆದಿದ್ದಾರೆ. ಲೈನ್​ ಅಂಡ್ ಲೆಂಥ್​ ನಲ್ಲಿ ಫೇಲ್ಯೂರ್ ಆಗ್ತಿರೋ ಹೇಜಲ್​ವುಡ್ ಬದಲಿಗೆ ಲಂಕಾದ ವೇಗಿ ನುವಾನ್ ತುಷಾರಗೆ ಬೆಂಗಳೂರಿನ ಪಂದ್ಯಕ್ಕೆ ಚಾನ್ಸ್​ ನೀಡಿ ಪ್ರಯೋಗ ನಡೆಸಬಹುದು. ಥೇಟ್​ ಲಸಿತ್​ ಮಲಿಂಗರಂತೆ ಬೌಲಿಂಗ್​ ಮಾಡೋ ತುಷಾರಾ ಪವರ್ ಪ್ಲೇ ಹಾಗೂ ಡೆತ್ ಓವರ್​ಗಳಲ್ಲಿ ಎಫೆಕ್ಟಿವ್ ಆಗ್ತಾರೆ.

ಚಿನ್ನಸ್ವಾಮಿ ಮ್ಯಾಚ್ ಅಂದ್ರೆ ಒನ್ಸ್​​ ಅಗೇನ್​ ಕಿಂಗ್​ ಕೊಹ್ಲಿಯ ಮೇಲೆ ನಿರೀಕ್ಷೆಗಳು ಜಾಸ್ತಿ ಇವೆ. ಅದ್ರಲ್ಲೂ ಪಂಜಾಬ್ ವಿರುದ್ಧ ಕೊಹ್ಲಿ ರೆಕಾರ್ಡ್ಸ್ ಸಖತ್ತಾಗಿವೆ. ಪಂಜಾಬ್​ ಕಿಂಗ್ಸ್​ ವಿರುದ್ಧ ಈವರೆಗೆ 32 ಇನ್ನಿಂಗ್ಸ್​ಗಳಲ್ಲಿ ಬ್ಯಾಟ್​ ಬೀಸಿರುವ ವಿರಾಟ್​ ಕೊಹ್ಲಿ 1030 ರನ್​ಗಳಿಸಿದ್ದಾರೆ. 133.76ರ ಸ್ಟ್ರೈಕ್​ನಲ್ಲಿ ಅಬ್ಬರಿಸಿರೋ ಕೊಹ್ಲಿ 108 ಬೌಂಡರಿ, 32 ಸಿಕ್ಸರ್​ ಸಿಡಿಸಿದ್ದಾರೆ. 1 ಶತಕ ಹಾಗೂ 5 ಅರ್ಧಶತಕ ಸಿಡಿಸಿದ್ದಾರೆ. ಹೀಗಾಗಿ ಈ ಮ್ಯಾಚಲ್ಲೂ ಒಳ್ಳೆ ಸ್ಕೋರ್ ಕಲೆ ಹಾಕೋ ನಿರೀಕ್ಷೆ ಇದೆ. ಇನ್ನು ಪಂಜಾಬ್ ಟೀಂ ಈ ವರ್ಷ ಸಖತ್ತಾಗಿದೆ. ಶ್ರೇಯಸ್ ಅಯ್ಯರ್ ಒಳ್ಳೇ ಸ್ಕೋರ್ ಮಾಡ್ತಿದ್ದಾರೆ. ಹೈದ್ರಾಬಾದ್ ವಿರುದ್ಧದ ಮ್ಯಾಚಲ್ಲಿ 245 ರನ್ ಹೊಡೆದಿದ್ರು. ಪ್ರಿಯಾನ್ಶ್ ಆರ್ಯ, ಪ್ರಭ್ ಸಿಮ್ರಾನ್ ಸಿಂಗ್, ಶ್ರೇಯಸ್ ಅಯ್ಯರ್, ಶಶಾಂಕ್ ಸಿಂಗ್ ಸಾಲಿಡ್ ಫಾರ್ಮ್​ನಲ್ಲಿದ್ದಾರೆ. ಹಾಗೇ ಬೌಲಿಂಗ್ ಟೀಂ ಕೂಡ ಎಷ್ಟು ಸ್ಟ್ರಾಂಗ್ ಅನ್ನೋದು ಕೆಕೆಆರ್ ವಿರುದ್ಧದ ಮ್ಯಾಚಲ್ಲಿ ಪ್ರೂವ್ ಆಗಿದೆ. ಕಡಿಮೆ ಸ್ಕೋರ್ ಅಂತಾ ಆರ್​ಸಿಬಿ ನೆಗ್ಲೆಕ್ಟ್ ಮಾಡಿದ್ರೆ ಹೊಡೆತ ತಿನ್ನೋದು ಪಕ್ಕಾ. ಆರ್​ಸಿಬಿಯ ಆಳ, ಅಗಲ ತಿಳ್ಕೊಂಡಿರೋ ಯುಜ್ವೇಂದ್ರ ಚಹಾಲ್ ಪಂಜಾಬ್​ನ ಶಕ್ತಿಯಾಗ್ತಾರೆ. ವರ್ಷಗಳ ಕಾಲ ಆರ್​ಸಿಬಿಯಲ್ಲೇ ಇದ್ದ ಚಹಾಲ್ ಈಗ ವಿಲನ್ ಆಗಿ ಕಾಡ್ಬೋದು. 7 ವರ್ಷಗಳ ಕಾಲ ಆರ್​ಸಿಬಿಯಲ್ಲಿದ್ದ ಮೊಹಮ್ಮದ್ ಸಿರಾಜ್ ಗುಜರಾತ್ ಪರ ಮ್ಯಾಚ್ ವಿನ್ನಿಂಗ್ ಪರ್ಫಾಮೆನ್ಸ್ ಕೊಟ್ಟಿದ್ರು. ಸೋ ಈ ಮ್ಯಾಚಲ್ಲಿ ಈ ಕೆಲಸವನ್ನ ಚಹಾಲ್ ಮಾಡ್ಬೋದು. ಹಾಗೆ ಅರ್ಶದೀಪ್ ಸಿಂಗ್, ಮಾರ್ಕೊ ಜಾನ್ಸೆನ್ ಕೂಡ ಬೌಲಿಂಗ್ ದಾಳಿ ಮಾಡ್ತಾರೆ. ಇನ್ನು ಬೆಂಗಳೂರಿನ ಮಾಜಿ ಆಟಗಾರ ಗ್ಲೆನ್ ಮ್ಯಾಕ್ಸ್​ವೆಲ್ ಯಾವುದೇ ಕ್ಷಣದಲ್ಲಾದ್ರೂ ಸಿಡಿಯಬಲ್ಲರು. ಸೋ ಈ ಎಲ್ಲಾ ಲೆಕ್ಕಾಚಾರಗಳನ್ನ ಹಾಕಿಕೊಂಡೇ ಆರ್ಸಿಬಿ ಆಡ್ಬೇಕಾಗುತ್ತೆ.

 

Shantha Kumari

Leave a Reply

Your email address will not be published. Required fields are marked *