ಮಚ್ಚು ಹಿಡಿದು ರೀಲ್ಸ್‌ ಕೇಸ್‌.. ರಜತ್‌ ಮತ್ತೆ ಅರೆಸ್ಟ್‌ – ಬಂಧನದ ಭೀತಿಯಲ್ಲಿ ವಿನಯ್‌ ಗೌಡ

ಮಚ್ಚು ಹಿಡಿದು ರೀಲ್ಸ್‌ ಕೇಸ್‌.. ರಜತ್‌ ಮತ್ತೆ ಅರೆಸ್ಟ್‌ – ಬಂಧನದ ಭೀತಿಯಲ್ಲಿ ವಿನಯ್‌ ಗೌಡ

ಮಚ್ಚು ಹಿಡಿದು ರೀಲ್ಸ್‌ ಮಾಡಿದ್ದ ಪ್ರಕರಣದಲ್ಲಿ ಬಿಗ್‌ ಬಾಸ್‌ ಖ್ಯಾತಿಯ ರಜತ್‌ ಹಾಗೂ ವಿನಯ್‌ ಗೆ ಸಂಕಷ್ಟ ತಪ್ಪುವಂತೆ ಕಾಣುತ್ತಿಲ್ಲ. ಇದೀಗ ರಜತ್‌ ಅವರನ್ನ ಪೊಲೀಸರು ಮತ್ತೆ ಅರೆಸ್ಟ್‌ ಮಾಡಿದ್ದಾರೆ. ವಿನಯ್‌ ಗೂ ಬಂಧನ ಭೀತಿ ಎದುರಾಗಿದೆ.

ಇದನ್ನೂ ಓದಿ: ವಕ್ಫ್ ತಿದ್ದುಪಡಿ ಕಾಯ್ದೆಯ ಬಗ್ಗೆ ಪಾಕಿಸ್ತಾನದ ಟೀಕೆ ಖಂಡಿಸಿದ ಭಾರತ

ರೀಲ್ಸ್‌ ಪ್ರಕರಣಕ್ಕೆ ಸಂಬಂಧಿಸಿದಂತೆ ಅರೆಸ್ಟ್‌ ಆಗಿದ್ದ ವಿನಯ್‌ ಗೌಡ ಹಾಗೂ ರಜತ್‌ ಕಿಶನ್‌ ಜಾಮೀನು ಪಡೆದು ಹೊರ ಬಂದಿದ್ರು. ಆದ್ರೆ ಜಾಮೀನು ಷರತ್ತುಗಳನ್ನು ಉಲ್ಲಂಘಿಸಿದ ಆರೋಪದ ಮೇಲೆ ರಜತ್‌ ನನ್ನು ಮತ್ತೆ ಬಸವೇಶ್ವರನಗರ ಪೊಲೀಸರು ಬಂಧಿಸಿದ್ದಾರೆ.

ಮಚ್ಚು ಹಿಡಿದು ರೀಲ್ಸ್ ಮಾಡಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ವಿಚಾರಣೆಗೆ ಹಾಜರಾಗುವಂತೆ ರಜತ್‌ಗೆ ಪೊಲೀಸರು ನೋಟಿಸ್ ನೀಡಿದ್ದರು. ರೀಲ್ಸ್‌ಗೆ ಬಳಸಿದ್ದ ಮಚ್ಚು ಸಿಗದ ಹಿನ್ನೆಲೆ 2 ಬಾರಿ ನೋಟಿಸ್ ನೀಡಿದ್ದರು. ಆದರೆ ಪೊಲೀಸ್ ವಿಚಾರಣೆಗೆ ಗೈರಾಗಿದ್ದಕ್ಕೆ ಅಸಮಾಧಾನಗೊಂಡಿದ್ದ ಕೋರ್ಟ್ ಎನ್‌ಬಿಡಬ್ಲ್ಯೂ ಜಾರಿ ಮಾಡಿತ್ತು. ಕೋರ್ಟ್‌ ಸೂಚನೆ ಮೇರೆಗೆ ರಜತ್‌ನನ್ನ ಬಂಧಿಸಲಾಗಿದೆ. ರಜತ್ ಬಂಧನದ ಬೆನ್ನಲ್ಲೇ ವಿನಯ್ ಗೌಡ ಬಂಧನಕ್ಕೆ ಪೊಲೀಸರು ತೆರಳಿದ್ದಾರೆ. ಬಂಧಿಸಿದ ಬಳಿಕ ಇಂದೇ 24ನೇ ಎಸಿಎಂಎಂ ಕೋರ್ಟ್‌ಗೆ ಇಬ್ಬರನ್ನೂ ಪೊಲೀಸರು ಹಾಜರುಪಡಿಸಲಿದ್ದಾರೆ.

Shwetha M

Leave a Reply

Your email address will not be published. Required fields are marked *